ಬ್ಯಾಂಕಿಗೆ ಸಂಬಂಧಿಸಿ ಜುಲೈ ತಿಂಗಳ ರಜಾಪಟ್ಟಿಯನ್ನು ಆರ್ ಬಿಐ ಬಿಡುಗಡೆ ಮಾಡಿದೆ. ಜುಲೈನಲ್ಲಿ ನೀವು ಬ್ಯಾಂಕಿಗೆ ಭೇಟಿ ನೀಡುವ ಮುನ್ನ ಈ ರಜಾಪಟ್ಟಿಯನ್ನೊಮ್ಮೆ ಪರಿಶೀಲಿಸೋದು ಉತ್ತಮ.ಇದ್ರಿಂದ ರಜಾದಿನದಂದು ಬ್ಯಾಂಕಿಗೆ ಭೇಟಿ ನೀಡೋದು ತಪ್ಪುತ್ತದೆ. ಅಲ್ಲದೆ, ಜುಲೈ ತಿಂಗಳಿಗೆ ಸಂಬಂಧಿಸಿ ನಿಮ್ಮ ಕೆಲಸ ಕಾರ್ಯಗಳ ವೇಳಾಪಟ್ಟಿ ಸಿದ್ಧಪಡಿಸಲು ಕೂಡ ಈ ರಜಾಪಟ್ಟಿ ನೆರವು ನೀಡುತ್ತದೆ.
ನವದೆಹಲಿ (ಜೂ. 22): ಜೂನ್ ತಿಂಗಳು ಮುಗಿಯಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಿರೋವಾಗ ಮುಂದೆ ಬರಲಿರುವ ಜುಲೈ ತಿಂಗಳಿನಲ್ಲಿ ಯಾವೆಲ್ಲ ಕೆಲಸಗಳನ್ನು ಮಾಡಿ ಮುಗಿಸಬೇಕಿದೆ ಎಂಬ ಬಗ್ಗೆ ಈಗಲೇ ವೇಳಾಪಟ್ಟಿ ಸಿದ್ಧಪಡಿಸೋದು ಉತ್ತಮ. ಅದರಲ್ಲೂ ಬ್ಯಾಂಕಿಗೆ ಸಂಬಂಧಿಸಿದ ಕೆಲಸಗಳಿದ್ರೆ ಜುಲೈಯಲ್ಲಿ ಯಾವೆಲ್ಲ ದಿನ ಬ್ಯಾಂಕುಗಳು ಕಾರ್ಯನಿರ್ವಹಿಸೋದಿಲ್ಲ ಎಂಬ ಮಾಹಿತಿಯನ್ನು ಮೊದಲು ಹೊಂದಿರಬೇಕು. ಭಾರತೀಯ ರಿಸರ್ವ್ ಬ್ಯಾಂಕ್ (RBI) ಜುಲೈ ತಿಂಗಳಿಗೆ ಸಂಬಂಧಿಸಿ ರಜಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಒಟ್ಟು 16 ದಿನಗಳು ಬ್ಯಾಂಕ್ ಕಾರ್ಯನಿರ್ವಹಿಸೋದಿಲ್ಲ.
ಬ್ಯಾಂಕುಗಳಿಗೆ ಸಂಬಂಧಿಸಿ ಆರ್ ಬಿಐ ಪ್ರತಿ ತಿಂಗಳು ಹಾಲಿ ಡೇ ಲಿಸ್ಟ್ ಅನ್ನು ಬಿಡುಗಡೆ ಮಾಡುತ್ತದೆ. ಬ್ಯಾಂಕುಗಳಿಗೆ ರಜೆಯಿದ್ರೂ ಆನ್ ಲೈನ್ ಬ್ಯಾಂಕಿಂಗ್ (Online Banking) ವ್ಯವಹಾರಗಳಿಗೆ ಯಾವುದೇ ತೊಂದರೆಯಿಲ್ಲ.ಹೀಗಾಗಿ ಇ-ಬ್ಯಾಂಕಿಂಗ್ (e-banking) ಹಾಗೂ ಎಟಿಎಂ (ATM) ಸೇವೆಗಳನ್ನು ಬಳಸಿಕೊಳ್ಳಬಹುದು. ಆದ್ರೆ ಬ್ಯಾಂಕ್ (Bank) ಶಾಖೆಗೆ ಭೇಟಿ ನೀಡಿಯೇ ಮಾಡಬೇಕಿರುವ ಕೆಲಸಗಳೇನಾದ್ರೂ ಇದ್ರೆ ಮಾತ್ರ ರಜಾದಿನಗಳನ್ನು (Holidays) ಗಮನಿಸಿಕೊಂಡು ಉಳಿದ ದಿನಗಳಲ್ಲಿ ಹೋಗೋದು ಉತ್ತಮ. ಇಲ್ಲವಾದರೆ ಸುಮ್ಮನೆ ಸಮಯ ವ್ಯರ್ಥವಾಗುತ್ತದೆ. ಅಂದ ಹಾಗೇ ಎಲ್ಲ ಹಬ್ಬಗಳಿಗೆ ನೀಡುವ ರಜೆಗಳು ಎಲ್ಲ ರಾಜ್ಯಗಳು ಅಥವಾ ಪ್ರದೇಶಗಳಲ್ಲಿರುವ ಬ್ಯಾಂಕುಗಳಿಗೆ ಅನ್ವಯಿಸೋದಿಲ್ಲ. ಆಯಾ ರಾಜ್ಯ ಅಥವಾ ಪ್ರದೇಶಕ್ಕೆ ಸಂಬಂಧಿಸಿದ ಹಬ್ಬ (Festival) ಹಾಗೂ ಆಚರಣೆಗಳನ್ನು (Celebratons) ಪರಿಗಣಿಸಿ ರಜೆ ನೀಡಲಾಗುತ್ತದೆ. ಸಾರ್ವಜನಿಕ (Pulic) ಹಾಗೂ ಗೆಜೆಟೆಡ್ ರಜೆಗಳು (Gazetted holidays) ಮಾತ್ರ ದೇಶವ್ಯಾಪ್ತಿ ಎಲ್ಲ ಬ್ಯಾಂಕುಗಳಿಗೂ ಅನ್ವಯಿಸುತ್ತವೆ. ಭಾನುವಾರ (Sunday) ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರ (Saturday) ದೇಶಾದ್ಯಂತ ಎಲ್ಲ ಬ್ಯಾಂಕುಗಳಿಗೆ ರಜೆಯಿರುತ್ತದೆ.
New TDS Rule:ಜುಲೈ 1ರಿಂದ ವೈದ್ಯರಿಗೆ ಹೊಸ ಟಿಡಿಎಸ್ ನಿಯಮ; ಫ್ರೀ ಸ್ಯಾಂಪಲ್ ಗೂ ಬೀಳಲಿದೆ ಟ್ಯಾಕ್ಸ್
ಬ್ಯಾಂಕ್ ರಜೆಗಳನ್ನು ಆರ್ ಬಿಐ (RBI) ಮೂರು ವರ್ಗಗಳನ್ನಾಗಿ ವಿಂಗಡಿಸಿದೆ. 1.ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, 2. ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ರಜೆಗಳು ಹಾಗೂ 3.ಅಕೌಂಟ್ಸ್ ಕ್ಲೋಸಿಂಗ್ ರಜೆಗಳು. ಆರ್ ಬಿಐ (RBI) ರಜಾಪಟ್ಟಿಯಲ್ಲಿರೋ ರಜೆಗಳು ಸಾರ್ವಜನಿಕ ವಲಯ, ಖಾಸಗಿ ವಲಯ, ವಿದೇಶಿ ಬ್ಯಾಂಕುಗಳು, ಕೋಆಪರೇಟಿವ್ ಬ್ಯಾಂಕುಗಳು ಹಾಗೂ ಪ್ರಾದೇಶಿಕ ಬ್ಯಾಂಕುಗಳಿಗೆ ಅನ್ವಯಿಸಲಿವೆ.
ಜುಲೈ ತಿಂಗಳ ರಜಾಪಟ್ಟಿ ಹೀಗಿದೆ:
ಜುಲೈ 1: ರಥಯಾತ್ರೆ ಹಿನ್ನೆಲೆಯಲ್ಲಿ ಒಡಿಶಾದಲ್ಲಿ ಬ್ಯಾಂಕ್ ಮುಚ್ಚಿರುತ್ತದೆ.
ಜುಲೈ 3: ಭಾನುವಾರ
ಜುಲೈ 5: ಗುರು ಹರ್ಗೋಬಿಂದ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಬ್ಯಾಂಕುಗಳು ಮುಚ್ಚಿರುತ್ತವೆ.
ಜುಲೈ 6: ಎಂಎಚ್ ಐಪಿ (MHIP) ದಿನದ ಹಿನ್ನೆಲೆಯಲ್ಲಿ ಮಿಜೋರಾಂನಲ್ಲಿ ಬ್ಯಾಂಕ್ ಕ್ಲೋಸ್ ಆಗಿರುತ್ತದೆ.
ಜುಲೈ 7: ಖರ್ಚಿ ಪೂಜೆಯ ಹಿನ್ನೆಲೆಯಲ್ಲಿ ತ್ರಿಪುರದಲ್ಲಿ ಬ್ಯಾಂಕುಗಳು ಮುಚ್ಚಲ್ಪಟ್ಟಿರುತ್ತವೆ.
ಜುಲೈ 9: ಈದ್ -ಉಲ್-ಅಧಾ (ಬಕ್ರೀದ್) ಹಾಗೂ ಎರಡನೇ ಶನಿವಾರ. ಎಲ್ಲ ರಾಜ್ಯಗಳಲ್ಲೂ ಬ್ಯಾಂಕಿಗೆ ರಜೆ.
ಜುಲೈ 10: ಭಾನುವಾರ
ಜುಲೈ 11: ಈದ್ -ಉಲ್-ಅಝಾ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳಲ್ಲಿಯೂ ಬ್ಯಾಂಕ್ ಬಂದ್.
ಜುಲೈ 13: ಹುತ್ಮಾತರ ದಿನ. ಜಮ್ಮು ಮತ್ತು ಕಾಶ್ಮೀರದಲ್ಲಿ ಮಾತ್ರ.
SBI ATM Rules:ಎಸ್ ಬಿಐ ಎಟಿಎಂನಲ್ಲಿ ತಿಂಗಳಿಗೆ ಎಷ್ಟು ಬಾರಿ ಉಚಿತವಾಗಿ ನಗದು ವಿತ್ ಡ್ರಾ ಮಾಡಬಹುದು?
ಜುಲೈ 13: ಭಾನು ಜಯಂತಿ, ಸಿಕ್ಕಿಂನಲ್ಲಿ ರಜೆ.
ಜುಲೈ 14: ದಿಯೆಂಖ್ಲಾಮ್ ಕಾರಣಕ್ಕೆ ಮೇಘಾಲಯದಲ್ಲಿ ಬ್ಯಾಂಕುಗಳು ಬಂದ್
ಜುಲೈ 16: ಹರೇಲಾ ಹಿನ್ನೆಲೆಯಲ್ಲಿ ಉತ್ತರಾಖಂಡ್ ನಲ್ಲಿ ರಜೆ.
ಜುಲೈ 17: ಭಾನುವಾರ
ಜುಲೈ 23: ನಾಲ್ಕನೇ ಶನಿವಾರ
ಜುಲೈ 24: ಭಾನುವಾರ
ಜುಲೈ 26: ಕೆರ್ ಪೂಜೆ ಕಾರಣಕ್ಕೆ ತ್ರಿಪುರಾದಲ್ಲಿ ಬ್ಯಾಂಕ್ ಬಂದ್.
ಜುಲೈ 31: ಭಾನುವಾರ