ಹೊಸ ವರ್ಷಕ್ಕೆ ಕಾಲಿಡಲು ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಿರುವಾಗ 2024ನೇ ಸಾಲಿನ ಜನವರಿ ತಿಂಗಳಲ್ಲಿ ಬ್ಯಾಂಕುಗಳು ಒಟ್ಟು 16 ದಿನಗಳ ಕಾಲ ಕಾರ್ಯನಿರ್ವಹಿಸೋದಿಲ್ಲ.
Business Desk:ಪ್ರತಿ ಹೊಸ ತಿಂಗಳು ಪ್ರಾರಂಭವಾಗುವ ಮುನ್ನ ಆರ್ ಬಿಐ ಬ್ಯಾಂಕ್ ಗಳ ರಜಾಪಟ್ಟಿ ಬಿಡುಗಡೆ ಮಾಡುತ್ತದೆ. ಅದರಂತೆ ಡಿಸೆಂಬರ್ ತಿಂಗಳು ಮುಕ್ತಾಯವಾಗಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಜನವರಿ ತಿಂಗಳ ರಜಾಪಟ್ಟಿಯನ್ನು ಆರ್ ಬಿಐ ಬಿಡುಗಡೆ ಮಾಡಿದೆ. ಗಣರಾಜ್ಯೋತ್ಸವ ಸೇರಿದಂತೆ ಹೊಸ ವರ್ಷದ (2024ನೇ ಸಾಲಿನ) ಮೊದಲ ತಿಂಗಳಲ್ಲಿ ಬ್ಯಾಂಕುಗಳಿಗೆ ಒಟ್ಟು 16 ದಿನಗಳ ಕಾಲ ರಜೆಯಿದೆ. 2024ನೇ ಸಾಲಿನ ಹಣಕಾಸು ಯೋಜನೆಗಳನ್ನು ಕೆಲವರು ಈಗಾಗಲೇ ರೂಪಿಸಿರುತ್ತಾರೆ. ಹೀಗಾಗಿ ವರ್ಷದ ಮೊದಲ ತಿಂಗಳು ಬ್ಯಾಂಕ್ ಸಂಬಂಧಿ ಕೆಲಸಗಳು ಇರುತ್ತವೆ. ಉದಾಹರಣೆಗೆ 2024ನೇ ಸಾಲಿನಲ್ಲಿ ಮನೆ, ಕಾರು ಖರೀದಿಗೆ ಪ್ಲ್ಯಾನ್ ಮಾಡಿದ್ದರೆ, ಬ್ಯಾಂಕ್ ಸಾಲ ಪಡೆಯುವ ಸಂಬಂಧ ಜನವರಿ ತಿಂಗಳಲ್ಲಿ ಬ್ಯಾಂಕಿಗೆ ಭೇಟಿ ನೀಡಬೇಕಾಗಬಹುದು. ಹೀಗಾಗಿ ಜನವರಿ ತಿಂಗಳ ರಜಾಪಟ್ಟಿಯನ್ನು ನೋಡಿಕೊಂಡು ಪ್ಲ್ಯಾನ್ ಮಾಡೋದು ಉತ್ತಮ.
ಆಯಾ ಪ್ರಾದೇಶಿಕ ಆಚರಣೆಗಳು ಹಾಗೂ ಹಬ್ಬಗಳಿಗೆ ಅನುಗುಣವಾಗಿ ರಜೆಗಳನ್ನು ನೀಡಲಾಗುತ್ತದೆ. ಆದರೆ, ಸಾರ್ವಜನಿಕ ಹಾಗೂ ಗೆಜೆಟೆಡ್ ರಜೆಗಳು ಮಾತ್ರ ದೇಶವ್ಯಾಪ್ತಿ ಎಲ್ಲ ಬ್ಯಾಂಕುಗಳಿಗೂ ಅನ್ವಯಿಸುತ್ತವೆ. ಇನ್ನು ಎಲ್ಲ ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರ ದೇಶಾದ್ಯಂತ ಎಲ್ಲ ಬ್ಯಾಂಕುಗಳಿಗೆ ರಜೆಯಿರುತ್ತದೆ. ರಜಾ ದಿನಗಳಂದು ಆನ್ ಲೈನ್ ವಹಿವಾಟುಗಳಿಗೆ ಯಾವುದೇ ಸಮಸ್ಯೆಯಿಲ್ಲ. ಆದರೆ, ಬ್ಯಾಂಕಿಗೆ ಭೇಟಿ ನೀಡಿ ಮಾಡುವ ಕೆಲಸವಿದ್ರೆ ರಜಾಪಟ್ಟಿ ನೋಡಿಕೊಂಡು ಹೋಗೋದು ಉತ್ತಮ.
ಬ್ಯಾಂಕುಗಳಲ್ಲಿ ಕಾರ್ಡ್ ಟೋಕನೈಸೇಷನ್ ಪರಿಚಯಿಸಿದ RBI
ಬ್ಯಾಂಕ್ (Bank) ರಜೆಗಳನ್ನು (Holidays) ಆರ್ ಬಿಐ (RBI) ಮೂರು ವರ್ಗಗಳನ್ನಾಗಿ ವಿಂಗಡಿಸಿದೆ.1.ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, 2. ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ರಜೆಗಳು ಹಾಗೂ 3.ಅಕೌಂಟ್ಸ್ ಕ್ಲೋಸಿಂಗ್ ರಜೆಗಳು (Accounts Closing Holidays). ಆರ್ ಬಿಐ (RBI) ರಜಾಪಟ್ಟಿಯಲ್ಲಿರೋ ರಜೆಗಳು ಸಾರ್ವಜನಿಕ ವಲಯ (Public sector), ಖಾಸಗಿ ವಲಯ (Private sector), ವಿದೇಶಿ ಬ್ಯಾಂಕುಗಳು (Foreign banks),ಕೋ-ಆಪರೇಟಿವ್ ಬ್ಯಾಂಕುಗಳು (Co-operative banks) ಹಾಗೂ ಪ್ರಾದೇಶಿಕ ಬ್ಯಾಂಕುಗಳಿಗೆ (Regional banks) ಅನ್ವಯಿಸಲಿವೆ.
ಈ ಆ್ಯಪ್ ಮೂಲಕ ಉದ್ಯೋಗಿ ಅಕೌಂಟ್‌ನಿಂದ 18 ಲಕ್ಷಕ್ಕೂ ಹೆಚ್ಚು ಹಣ ಎಗರಿಸಿದ ವಂಚಕರು!
ಜನವರಿ ತಿಂಗಳ ಆರ್ ಬಿಐ ರಜಾಪಟ್ಟಿ ಹೀಗಿದೆ:
ಜನವರಿ 1: ಹೊಸ ವರ್ಷದ ಮೊದಲ ದಿನ
ಜನವರಿ 7: ಭಾನುವಾರ
ಜನವರಿ 11: ಮಿಷನರಿ ಡೇ (ಮಿಜೋರಾಂ)
ಜನವರಿ 12: ಸ್ವಾಮಿ ವಿವೇಕಾನಂದ ಜಯಂತಿ (ಪಶ್ಚಿಮ ಬಂಗಾಳ)
ಜನವರಿ 13: ಎರಡನೇ ಶನಿವಾರ
ಜನವರಿ 14: ಭಾನುವಾರ
ಜನವರಿ 15: ಪೊಂಗಲ್ / ತಿರುವಲ್ಲುರ್ ಡೇ (ತಮಿಳುನಾಡು ಹಾಗೂ ಆಂಧ್ರ ಪ್ರದೇಶ)
ಜನವರಿ 16: ಟುಸು ಪೂಜ (ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ)
ಜನವರಿ 17: ಗುರು ಗೋವಿಂದ್ ಸಿಂಗ್ ಜಯಂತಿ
ಜನವರಿ 21: ಭಾನುವಾರ
ಜನವರಿ 23: ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ
ಜನವರಿ 25: ಸ್ಟೇಟ್ ಡೇ (ಹಿಮಾಚಲ ಪ್ರದೇಶ)
ಜನವರಿ 26: ಗಣರಾಜ್ಯೋತ್ಸವ
ಜನವರಿ 27: ನಾಲ್ಕನೇ ಶನಿವಾರ
ಜನವರಿ 28: ಭಾನುವಾರ
ಜನವರಿ 31: ಮಿ-ಡ್ಯಾಮ್-ಮಿ-ಫಿ (ಅಸ್ಸಾಂ)
ಹೊಸ ವರ್ಷದ ರೆಸಲ್ಯೂಷನ್ಸ್ ಮಾಡಿಕೊಂಡಿರೋರು ಅದನ್ನು ಜನವರಿ ತಿಂಗಳಿಂದಲೇ ಅನುಷ್ಠಾನಗೊಳಿಸಲು ಪ್ರಾರಂಭಿಸಬೇಕಾಗುತ್ತದೆ. ಹೀಗಾಗಿ 2024ನೇ ಸಾಲಿನಲ್ಲಿ ನೀವು ಕೈಗೊಂಡಿರುವ ಹಣಕಾಸಿನ ರೆಸಲ್ಯೂಷನ್ ಗಳನ್ನು ಜಾರಿಗೆ ತರಲು ಜನವರಿ ತಿಂಗಳಲ್ಲಿ ಬ್ಯಾಂಕಿಗೆ ಭೇಟಿ ನೀಡಬೇಕಾದ ಅನಿವಾರ್ಯತೆ ಎದುರಾದರೆ ತಪ್ಪದೆ ರಜಾಪಟ್ಟಿ ನೋಡಿಕೊಂಡು ಹೋಗಿ.