Bank Holiday:ಏಪ್ರಿಲ್ ನಲ್ಲಿ 15 ದಿನ ಬ್ಯಾಂಕಿಗೆ ರಜೆ; ಇಲ್ಲಿದೆ ಆರ್ ಬಿಐ ಹಾಲಿಡೇ ಲಿಸ್ಟ್

Published : Apr 01, 2022, 07:36 PM IST
Bank Holiday:ಏಪ್ರಿಲ್ ನಲ್ಲಿ 15 ದಿನ ಬ್ಯಾಂಕಿಗೆ ರಜೆ; ಇಲ್ಲಿದೆ ಆರ್ ಬಿಐ ಹಾಲಿಡೇ ಲಿಸ್ಟ್

ಸಾರಾಂಶ

*ಏಪ್ರಿಲ್ ತಿಂಗಳ ರಜಾಪಟ್ಟಿ ಬಿಡುಗಡೆ ಮಾಡಿರೋ ಆರ್ ಬಿಐ *ಎಲ್ಲ ರಜೆಗಳು ಎಲ್ಲ ರಾಜ್ಯಗಳಿಗೂ ಅನ್ವಯಿಸೋದಿಲ್ಲ *ಸಾರ್ವಜನಿಕ ಹಾಗೂ ಗೆಜೆಟೆಡ್ ರಜೆಗಳು ಮಾತ್ರ ದೇಶವ್ಯಾಪ್ತಿ ಎಲ್ಲ ಬ್ಯಾಂಕುಗಳಿಗೂ ಅನ್ವಯ

Business Desk:ಏಪ್ರಿಲ್ ತಿಂಗಳಿಗೆ ಕಾಲಿಟ್ಟಿದ್ದೇವೆ, ಹೀಗಿರೋವಾಗ ಈ ತಿಂಗಳು ಯಾವೆಲ್ಲ ದಿನ ಬ್ಯಾಂಕಿಗೆ (Bank) ರಜೆಯಿದೆ ಎಂದು ತಿಳಿದುಕೊಳ್ಳೋದು ಉತ್ತಮ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಏಪ್ರಿಲ್ ತಿಂಗಳ ರಜಾ ಪಟ್ಟಿಯನ್ನು (Holiday list)ಬಿಡುಗಡೆ ಮಾಡಿದೆ. ಅದರ ಅನ್ವಯ ಈ ತಿಂಗಳು ವಾರದ ಹಾಗೂ ಹಬ್ಬಗಳ ರಜೆಗಳನ್ನು ಸೇರಿಸಿದ್ರೆ ಒಟ್ಟು 15 ದಿನಗಳ ಕಾಲ ಬ್ಯಾಂಕುಗಳು ಕಾರ್ಯನಿರ್ವಹಿಸೋದಿಲ್ಲ. 

ಆರ್ ಬಿಐ ಪ್ರತಿ ತಿಂಗಳು ಬ್ಯಾಂಕುಗಳಿಗೆ ಸಂಬಂಧಿಸಿ ರಜಾಪಟ್ಟಿ ಬಿಡುಗಡೆ ಮಾಡುತ್ತದೆ. ಆದ್ರೆ ಈ ಎಲ್ಲ ರಜೆಗಳು ಎಲ್ಲ ರಾಜ್ಯಗಳಿಗೂ ಅನ್ವಯಿಸೋದಿಲ್ಲ. ಹೀಗಾಗಿ ಆಯಾ ರಾಜ್ಯಕ್ಕೆ ಸಂಬಂಧಿಸಿದ ರಜೆಗಳನ್ನು ಮಾತ್ರ ಪರಿಗಣಿಸಬೇಕಾಗುತ್ತದೆ. ಆದ್ರೆ  ಸಾರ್ವಜನಿಕ ಹಾಗೂ ಗೆಜೆಟೆಡ್ ರಜೆಗಳು ಮಾತ್ರ ದೇಶವ್ಯಾಪ್ತಿ ಎಲ್ಲ ಬ್ಯಾಂಕುಗಳಿಗೂ ಅನ್ವಯಿಸುತ್ತವೆ. ಎಲ್ಲ ಭಾನುವಾರ (Sunday),ಎರಡನೇ ಹಾಗೂ ನಾಲ್ಕನೇ ಶನಿವಾರ (Saturday) ದೇಶಾದ್ಯಂತ ಎಲ್ಲ ಬ್ಯಾಂಕುಗಳಿಗೆ ರಜೆಯಿರುತ್ತದೆ.

Price Hike ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯಲ್ಲಿ 250 ರೂಪಾಯಿ ಏರಿಕೆ, ಒಂದು ಸಿಲಿಂಡರ್ ಬೆಲೆ 2250 ರೂಪಾಯಿ!

ಆರ್ ಬಿಐ (RBI) ರಜಾದಿನಗಳನ್ನು ಮೂರು ವರ್ಗಗಳನ್ನಾಗಿ ವಿಂಗಡಿಸಿದೆ.1.ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, 2. ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ರಜೆಗಳು ಹಾಗೂ 3.ಅಕೌಂಟ್ಸ್​ ಕ್ಲೋಸಿಂಗ್ ರಜೆಗಳು. ಏಪ್ರಿಲ್ 1ರಂದು 'ಬ್ಯಾಂಕ್ ಕ್ಲೋಸಿಂಗ್ ಆಫ್ ಹಾಲಿಡೇ' ಇರುತ್ತದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಬಹುತೇಕ ಬ್ಯಾಂಕುಗಳಿಗೆ ರಜೆಯಿರುತ್ತದೆ. ಈ ರಜೆ ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ಬರುತ್ತದೆ. ಇನ್ನು ನಿಗದಿತ ಪ್ರದೇಶಕ್ಕೆ ಮೀಸಲಾದ ರಜೆಗಳನ್ನು ಗಮನಿಸಿದ್ರೆ ಈ ತಿಂಗಳು ಹೈದರಾಬಾದ್ ನಲ್ಲಿ ಬ್ಯಾಂಕುಗಳು  ಅತ್ಯಧಿಕ ದಿನ ರಜೆಗಳನ್ನು ಹೊಂದಿರುತ್ತವೆ. ಹಾಗೆಯೇ ಶಿಮ್ಲಾದಲ್ಲಿ ಅತೀ ಕಡಿಮೆ ಬ್ಯಾಂಕ್ ರಜೆಗಳಿವೆ. ಆರ್ ಬಿಐ ರಜಾಪಟ್ಟಿಯಲ್ಲಿರೋ ರಜೆಗಳು ಸಾರ್ವಜನಿಕ ವಲಯ, ಖಾಸಗಿ ವಲಯ, ವಿದೇಶಿ ಬ್ಯಾಂಕುಗಳು, ಕೋಆಪರೇಟಿವ್ ಬ್ಯಾಂಕುಗಳು ಹಾಗೂ ಪ್ರಾದೇಶಿಕ ಬ್ಯಾಂಕುಗಳಿಗೆ ಅನ್ವಯಿಸಲಿದೆ. 

ಬ್ಯಾಂಕುಗಳಿಗೆ ರಜೆಯಿದ್ರು ಕೂಡ ಇಂಟರ್ನೆಟ್ ಬ್ಯಾಂಕಿಂಗ್  (Internet Banking), ಎಟಿಎಂ (ATM) ಸೇವೆಗಳು ಲಭ್ಯವಿರಲಿವೆ.  ಹೀಗಾಗಿ ಆನ್ ಲೈನ್ ಬ್ಯಾಂಕಿಂಗ್ (Online Banking) ಸೇವೆ ಹೊಂದಿರೋರಿಗೆ ಯಾವುದೇ ತೊಂದರೆ ಎದುರಾಗೋದಿಲ್ಲ. ಆದ್ರೆ ಬ್ಯಾಂಕಿಗೇ ಹೋಗಿ ಮಾಡಬೇಕಾದ ಕೆಲಸಗಳಿದ್ರೆ ಅದನ್ನು ಮುಂದೂಡೋದು ಒಳ್ಳೆಯದು.  ಏಪ್ರಿಲ್ ನಲ್ಲಿ ಅನೇಕ ಹಬ್ಬಗಳು ಸರದಿ ಸಾಲಿನಲ್ಲಿ ಬಂದಿವೆ. ಹೀಗಾಗಿ ಸುದೀರ್ಘವಾದ ವೀಕೆಂಡ್ ರಜೆಗಳಿವೆ. ಅಂಬೇಡ್ಕರ್ ಜಯಂತಿ, ಗುಡ್ ಫ್ರೈಡೇ, ಬೊಹಾಗ್ ಬಿಹು ಹಾಗೂ ವಾರಂತ್ಯದ ರಜೆಗಳು ಸೇರಿದ್ರೆ ಭಾರತದ ಕೆಲವು ಭಾಗಗಳಲ್ಲಿ ಬ್ಯಾಂಕುಗಳಿಗೆ ನಿರಂತರ ನಾಲ್ಕು ದಿನಗಳ ಕಾಲ ರಜೆಯಿದೆ.

ರಜಾಪಟ್ಟಿ ಹೀಗಿದೆ
ಏಪ್ರಿಲ್ 1: ವಾರ್ಷಿಕ ಬ್ಯಾಂಕ್ ಖಾತೆ ಕ್ಲೋಸಿಂಗ್ ಹಿನ್ನೆಲೆಯಲ್ಲಿ ದೇಶಾದ್ಯಂತ ಬ್ಯಾಂಕುಗಳಿಗೆ ರಜೆ( ಐಜ್ವಾಲ್, ಚಂಡೀಘಢ, ಶಿಲ್ಲಾಂಗ್ ಹಾಗೂ ಶಿಮ್ಲಾ ಹೊರತುಪಡಿಸಿ)
ಏಪ್ರಿಲ್ 2: ಗುಡಿ ಪಡ್ವ/ಯುಗಾದಿ/ಮೊದಲ ನವರಾತ್ರಿ/ತೆಲುಗು ಹೊಸ ವರ್ಷ/ಸಜಿಬು ನೊಂಗ್ಮಪಂಬ (ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ತೆಲಂಗಣ, ಮಣಿಪುರ, ಜಮ್ಮು, ಗೋವಾ ಹಾಗೂ ಜಮ್ಮು ಮತ್ತು ಕಾಶ್ಮೀರ)
ಏಪ್ರಿಲ್ 3: ಭಾನುವಾರ
ಏಪ್ರಿಲ್ 4: ಸರ್ಹುಲ್ (ಜಾರ್ಖಂಡ)
ಏಪ್ರಿಲ್ 5: ಬಾಬು ಜಗಜ್ಜೀವನ್ ರಾಮ್ ಹುಟ್ಟುಹಬ್ಬ (ತೆಲಂಗಣ)
ಏಪ್ರಿಲ್ 9: ಎರಡನೇ ಶನಿವಾರ
ಏಪ್ರಿಲ್ 10: ಭಾನುವಾರ
ಏಪ್ರಿಲ್ 14: ಅಂಬೇಡ್ಕರ್ ಜಯಂತಿ /ಮಹಾವೀರ್ ಜಯಂತಿ/ಬೈಸಾಕಿ/ವೈಶಾಖಿ/ತಮಿಳು ಹೊಸ ವರ್ಸ/ಬಿಜು ಹಬ್ಬ/ಬೊಹಾಗ್ (ಮೇಘಾಲಯ ಹಾಗೂ ಹಿಮಾಚಲ ಪ್ರದೇಶ ಹೊರತುಪಡಿಸಿ ದೇಶಾದ್ಯಂತ)
ಏಪ್ರಿಲ್ 15: ಗುಡ್ ಫ್ರೈಡೇ/ಬೆಂಗಾಲಿ ಹೊಸ ವರ್ಷ/ಹಿಮಾಚಲ ಡೇ/ವಿಶು/ಬೊಹಗ್ ಬಿಹು (ರಾಜಸ್ಥಾನ, ಜಮ್ಮು ಮತ್ತು ಶ್ರೀನಗರ ಹೊರತುಪಡಿಸಿ ದೇಶದ ಉಳಿದ ಭಾಗಗಳಲ್ಲಿ) 
ಏಪ್ರಿಲ್ 16: ಬೊಹಾಗ್ ಬಿಹು (ಅಸ್ಸಾಂ)

PAN Aadhaar Link: ಮಾರ್ಚ್ 31, 2023ರ ತನಕ ಗಡುವು ವಿಸ್ತರಣೆ; ಇಂದಿನಿಂದ ಈ ಕೆಲ್ಸ ಉಚಿತವಲ್ಲ, ದಂಡ ಖಚಿತ!

ಏಪ್ರಿಲ್ 17: ಭಾನುವಾರ
ಏಪ್ರಿಲ್ 21: ಗರಿಯಾ ಪೂಜಾ (ತ್ರಿಪುರ)
ಏಪ್ರಿಲ್ 23: ನಾಲ್ಕನೇ ಶನಿವಾರ 
ಏಪ್ರಿಲ್ 24: ಭಾನುವಾರ
ಏಪ್ರಿಲ್ 29: ಶಹಬ್ -ಐ-ಕ್ವಡರ್/ಜುಮತ್-ಉಲ್-ವಿದ (ಜಮ್ಮು ಮತ್ತು ಕಾಶ್ಮೀರ)

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌