Bank Holidays:ಏಪ್ರಿಲ್ ತಿಂಗಳಲ್ಲಿ 15 ದಿನ ಬ್ಯಾಂಕ್ ರಜೆ; ಆರ್ ಬಿಐ ಹಾಲಿಡೇ ಲಿಸ್ಟ್ ಹೀಗಿದೆ ನೋಡಿ

Published : Mar 27, 2023, 11:39 AM ISTUpdated : Mar 27, 2023, 11:41 AM IST
Bank Holidays:ಏಪ್ರಿಲ್ ತಿಂಗಳಲ್ಲಿ 15 ದಿನ ಬ್ಯಾಂಕ್ ರಜೆ; ಆರ್ ಬಿಐ ಹಾಲಿಡೇ ಲಿಸ್ಟ್ ಹೀಗಿದೆ ನೋಡಿ

ಸಾರಾಂಶ

ಏಪ್ರಿಲ್ ತಿಂಗಳ ಪ್ರಾರಂಭಕ್ಕೆ ಬೆರಳೆಣಿಕೆ ದಿನಗಳಷ್ಟೇ ಬಾಕಿ ಉಳಿದಿವೆ. ಹೊಸ ಆರ್ಥಿಕ ಸಾಲಿನ ಮೊದಲ ತಿಂಗಳಲ್ಲಿ ಬ್ಯಾಂಕ್ ಗಳಿಗೆ ಎಷ್ಟು ದಿನಗಳ ಕಾಲ ರಜೆಯಿದೆ ಎಂಬುದನ್ನು ತಿಳಿದುಕೊಳ್ಳೋದು ಅಗತ್ಯ. ಆರ್ ಬಿಐ ಕೂಡ ಏಪ್ರಿಲ್ ತಿಂಗಳ ಬ್ಯಾಂಕ್ ರಜಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರ ಅನ್ವಯ ಏಪ್ರಿಲ್ ತಿಂಗಳಲ್ಲಿ ಬ್ಯಾಂಕ್ ಗಳು ಒಟ್ಟು 15 ದಿನಗಳ ಕಾಲ ಕಾರ್ಯನಿರ್ವಹಿಸೋದಿಲ್ಲ. 

ನವದೆಹಲಿ (ಮಾ.27): ಮಾರ್ಚ್ ತಿಂಗಳ ಅಂತ್ಯಕ್ಕೆ ನಾಲ್ಕು ದಿನಗಳಷ್ಟೇ ಬಾಕಿ ಉಳಿದಿವೆ. ಪ್ರತಿ ಹೊಸ ತಿಂಗಳು ಪ್ರಾರಂಭವಾಗುವ ಮುನ್ನ ಆರ್ ಬಿಐ ರಜಾಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಅದರಂತೆ ಏಪ್ರಿಲ್ ತಿಂಗಳ ರಜಾಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದೆ. ಏಪ್ರಿಲ್ ತಿಂಗಳಲ್ಲಿ ವಾರದ ರಜೆಗಳು ಸೇರಿದಂತೆ ಬ್ಯಾಂಕ್ ಗಳು ಒಟ್ಟು 15 ದಿನಗಳ ಕಾಲ ಕಾರ್ಯನಿರ್ವಹಿಸೋದಿಲ್ಲ. ವಾರ್ಷಿಕ ಖಾತೆಗಳ ಕ್ಲೋಸಿಂಗ್, ಮಹಾವೀರ್ ಜಯಂತಿ, ಬಾಬು ಜಗಜ್ಜೀವನ್ ರಾಮ್ ಹುಟ್ಟುಹಬ್ಬ, ಗುಡ್ ಫ್ರೈಡೇ, ಅಂಬೇಡ್ಕರ್ ಜಯಂತಿ ಮುಂತಾದ ವಿಶೇಷ ದಿನಗಳ ಹಿನ್ನೆಲೆಯಲ್ಲಿ ಬ್ಯಾಂಕ್ ಗಳಿಗೆ ರಜೆಯಿದೆ. ಹೀಗಾಗಿ ಏಪ್ರಿಲ್ ತಿಂಗಳಲ್ಲಿ ಬ್ಯಾಂಕಿಗೆ ಭೇಟಿ ನೀಡುವ ಗ್ರಾಹಕರು ಈ ರಜಾದಿನಗಳ ಪಟ್ಟಿಯನ್ನು ಒಮ್ಮೆ ಪರಿಶೀಲಿಸೋದು ಉತ್ತಮ. ಇನ್ನು ಆರ್ ಬಿಐ ರಜಾಪಟ್ಟಿಯಲ್ಲಿರುವ ಎಲ್ಲ ರಜೆಗಳು ಎಲ್ಲ ರಾಜ್ಯಗಳಿಗೂ ಅನ್ವಯಿಸೋದಿಲ್ಲ. ಆಯಾ ಪ್ರಾದೇಶಿಕ ಆಚರಣೆ ಹಾಗೂ ಹಬ್ಬಗಳಿಗೆ ಅನುಗುಣವಾಗಿ ರಜೆಗಳನ್ನು ನೀಡಲಾಗುತ್ತದೆ. ಆದರೆ, ಸಾರ್ವಜನಿಕ  ಹಾಗೂ ಗೆಜೆಟೆಡ್ ರಜೆಗಳು  ಮಾತ್ರ ದೇಶವ್ಯಾಪ್ತಿ ಎಲ್ಲ ಬ್ಯಾಂಕುಗಳಿಗೂ ಅನ್ವಯಿಸುತ್ತವೆ.  ಇನ್ನು ಎಲ್ಲ ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರ  ದೇಶಾದ್ಯಂತ ಎಲ್ಲ ಬ್ಯಾಂಕುಗಳಿಗೆ ರಜೆಯಿರುತ್ತದೆ. 

ಬ್ಯಾಂಕ್ (Bank) ರಜೆಗಳನ್ನು (Holidays) ಆರ್ ಬಿಐ (RBI) ಮೂರು ವರ್ಗಗಳನ್ನಾಗಿ ವಿಂಗಡಿಸಿದೆ. 1.ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, 2. ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ರಜೆಗಳು ಹಾಗೂ 3.ಅಕೌಂಟ್ಸ್​ ಕ್ಲೋಸಿಂಗ್ ರಜೆಗಳು. ಆರ್ ಬಿಐ (RBI) ರಜಾಪಟ್ಟಿಯಲ್ಲಿರೋ ರಜೆಗಳು ಸಾರ್ವಜನಿಕ ವಲಯ (Public sector), ಖಾಸಗಿ ವಲಯ (Private sector), ವಿದೇಶಿ ಬ್ಯಾಂಕುಗಳು (Foreign banks), ಕೋಆಪರೇಟಿವ್ ಬ್ಯಾಂಕುಗಳು (Co-operative banks) ಹಾಗೂ ಪ್ರಾದೇಶಿಕ ಬ್ಯಾಂಕುಗಳಿಗೆ  (Regional banks) ಅನ್ವಯಿಸಲಿವೆ. 

Social Media Influencers :ಭಾರತದ ಕಂಪನಿಗಳಿಗೆ ಮೂನ್ ಲೈಟ್ ಬಳಿಕ ಹೊಸ ಸವಾಲು?

ಬ್ಯಾಂಕುಗಳಿಗೆ (Banks) ರಜೆಯಿರುವ ದಿನ ಆನ್ ಲೈನ್ ವಹಿವಾಟಿಗೆ (Online transaction) ಹಾಗೂ ಎಟಿಎಂ ವ್ಯವಹಾರಗಳಿಗೆ (ATM transaction) ಯಾವುದೇ ತೊಂದರೆಯಾಗೋದಿಲ್ಲ. ಆದರೆ, ಬ್ಯಾಂಕಿಗೆ (Bank) ಹೋಗಿಯೇ ಮಾಡಬೇಕಾದ ಯಾವುದಾದ್ರೂ ಕೆಲಸವಿದ್ರೆ ಮಾತ್ರ ಮುಂದೂಡುವುದು ಉತ್ತಮ.  ಕೆಲವೊಮ್ಮೆ ಮನೆ (Home) ಅಥವಾ ನಿವೇಶನ , ಕಾರ್ (Car) ಖರೀದಿಗೆ  ಏನಾದ್ರೂ ಪ್ಲ್ಯಾನ್ ಮಾಡಿದ್ರೆ ಸಾಲ ಪ್ರಕ್ರಿಯೆಗೆ ಸಂಬಂಧಿಸಿ ಬ್ಯಾಂಕಿಗೆ ಭೇಟಿ ನೀಡಬೇಕಾದ ಅನಿವಾರ್ಯತೆ ಇರುತ್ತದೆ. ಹಾಗೆಯೇ ಬ್ಯಾಂಕ್ ಗಳಲ್ಲಿ ಎಫ್ ಡಿ (FD) ಮಾಡಿಸಲು ಅಥವಾ ಇನ್ಯಾವುದೋ ಹೂಡಿಕೆ (Investment) ಯೋಜನೆಗಳಲ್ಲಿ ಹಣ ತೊಡಗಿಸುವ ಯೋಚನೆ ಮಾಡಿದ್ರು ಕೂಡ ಬ್ಯಾಂಕಿಗೆ ಹೋಗಬೇಕಾದ ಸಂದರ್ಭ ಎದುರಾಗುತ್ತದೆ. ಹೀಗಾಗಿ ಯಾವೆಲ್ಲ ದಿನ ರಜೆಯಿರುತ್ತದೆ ಎಂಬುದನ್ನು ಮೊದಲೇ ಗಮನಿಸಿ ಆ ಬಳಿಕ ಭೇಟಿ ನೀಡುವ ಪ್ಲ್ಯಾನ್ (Plan) ಮಾಡೋದು ಉತ್ತಮ.

ಏಪ್ರಿಲ್ ತಿಂಗಳ ಬ್ಯಾಂಕ್ ರಜಾಪಟ್ಟಿ ಹೀಗಿದೆ:
ಏಪ್ರಿಲ್ 1: ಬ್ಯಾಂಕ್ ಗಳ ವಾರ್ಷಿಕ ಕ್ಲೋಸಿಂಗ್ ಹಿನ್ನೆಲೆಯಲ್ಲಿ ರಜೆ (ಐಜ್ವಾಲ್, ಶಿಲ್ಲಾಂಗ್, ಶಿಮ್ಲಾ ಹಾಗೂ ಚಂಡೀಗಢನಲ್ಲಿ ಬ್ಯಾಂಕ್ ಗಳು ತೆರೆದಿರುತ್ತವೆ).
ಏಪ್ರಿಲ್ 2: ಭಾನುವಾರ
ಏಪ್ರಿಲ್ 4: ಮಹಾವೀರ ಜಯಂತಿ (ಅಹಮದಾಬಾದ್, ಐಜ್ವಾಲ್, ಬೆಲ್ಪುರ್, ಬೆಂಗಳೂರು, ಭೋಪಾಲ್, ಚಂಡೀಗಢ, ಚೆನ್ನೈ, ಜೈಪುರ, ಕಾನ್ಪುರ, ಕೋಲ್ಕತ್ತ, ಲಖ್ನೋ, ಮುಂಬೈ, ನಾಗ್ಪುರ, ನವದೆಹಲಿ, ರಾಯ್ಪುರ ಹಾಗೂ ರಾಂಚಿ)
ಏಪ್ರಿಲ್ 5: ಜಗಜ್ಜೀವನ ರಾಮ್ ಜಯಂತಿ (ಹೈದರಾಬಾದ್ ನಲ್ಲಿ ಬ್ಯಾಂಕ್ ಮುಚ್ಚಿರುತ್ತದೆ)
ಏಪ್ರಿಲ್ 7: ಗುಡ್ ಫ್ರೈಡೇ (ಅಗರ್ತಲಾ, ಅಹ್ಮದಾಬಾದ್, ಗುವಹಟಿ, ಜೈಪುರ, ಜಮ್ಮು, ಶಿಮ್ಲಾ ಹಾಗೂ ಶ್ರೀನಗರ ಹೊರತುಪಡಿಸಿ ಭಾರತದಾದ್ಯಂತ ಬ್ಯಾಂಕ್ ಗಳು ಮುಚ್ಚಿರುತ್ತವೆ.)
ಏಪ್ರಿಲ್ 8: ಎರಡನೇ ಶನಿವಾರ
ಏಪ್ರಿಲ್ 9: ಭಾನುವಾರ
ಏಪ್ರಿಲ್ 14: ಅಂಬೇಡ್ಕರ್ ಜಯಂತಿ (ಭೋಪಾಲ್, ನವದೆಹಲಿ, ರಾಯ್ಪುರ, ಶಿಲ್ಲಾಂಗ್ ಹಾಗೂ ಶಿಮ್ಲಾ ಹೊರತುಪಡಿಸಿ ದೇಶಾದ್ಯಂತ ಬ್ಯಾಂಕ್ ಗಳು ಮುಚ್ಚಿರುತ್ತವೆ.)
ಏಪ್ರಿಲ್ 15: ವಿಶು, ಬೊಹಗ್, ಬಿಹು, ಹಿಮಾಚಲ ಪ್ರದೇಶ, ಬೆಂಗಾಲಿ ಹೊಸ ವರ್ಷ (ಅಗರ್ತಾಲ್, ಗುವಹಟಿ, ಕೊಚ್ಚಿ, ಕೋಲ್ಕತ್ತ, ಶಿಮ್ಲಾ ಹಾಗೂ ತಿರುವನಂತಪುರಂ)
ಏಪ್ರಿಲ್ 16: ಭಾನುವಾರ
ಏಪ್ರಿಲ್ 18: ಶಾಬ್-ಇ-ಕ್ವಾದರ್ (ಜಮ್ಮು ಮತ್ತು ಕಾಶ್ಮೀರದಲ್ಲಿ ಬ್ಯಾಂಕ್ ಶಾಖೆಗಳು ಮುಚ್ಚಿರುತ್ತವೆ

ಆಧಾರ್‌, ಪಾನ್‌ ಜೋಡಣೆಗೆ ಕೇವಲ 6 ದಿನ ಬಾಕಿ; ತಪ್ಪಿದರೆ ಪಾನ್‌ ಅಮಾನ್ಯ: ಬ್ಯಾಂಕ್‌ ವ್ಯವಹಾರವೂ ಇಲ್ಲ..!

ಏಪ್ರಿಲ್ 21:  ಈದ್ -ಉಲ್-ಫಿತ್ರ (ತ್ರಿಪುರ, ಜಮ್ಮು ಮತ್ತು ಕಾಶ್ಮೀರ ಹಾಗೂ ಕೇರಳದಲ್ಲಿ ಬ್ಯಾಂಕ್ ಗಳು ಮುಚ್ಚಿರುತ್ತವೆ.)
ಏಪ್ರಿಲ್ 22: ನಾಲ್ಕನೇ ಶನಿವಾರ
ಏಪ್ರಿಲ್ 23:ಭಾನುವಾರ
ಏಪ್ರಿಲ್ 30: ಭಾನುವಾರ

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!