LPG ಬಳಕೆದಾರರಿಗೆ ಬ್ಯಾಡ್‌ ನ್ಯೂಸ್‌: ಸಿಲಿಂಡರ್‌ ಬೆಲೆಯಲ್ಲಿ ಹೆಚ್ಚಳ; ಇಂದಿನಿಂದಲೇ ಪರಿಷ್ಕೃತ ದರ ಜಾರಿ!

By BK AshwinFirst Published Jul 4, 2023, 12:24 PM IST
Highlights

ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 7 ರೂ. ಹೆಚ್ಚಿಸಿವೆ. 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ದೆಹಲಿ ಚಿಲ್ಲರೆ ಮಾರಾಟದ ಬೆಲೆ ಪ್ರತಿ ಸಿಲಿಂಡರ್‌ಗೆ ರೂ. 1,773 ರಿಂದ ರೂ. 1,780 ಕ್ಕೆ ಏರಿಕೆಯಾಗಿದೆ.

ಹೊಸದಿಲ್ಲಿ (ಜುಲೈ 4, 2023): ಪ್ರತಿ ತಿಂಗಳು 1ನೇ ತಾರೀಕು ಸಾಮಾನ್ಯವಾಗಿ ಎಲ್‌ಪಿಜಿ ಬೆಲೆಯನ್ನು ಏರಿಕೆ ಅಥವಾ ಇಳಿಕೆ ಮಾಡಲಾಗುತ್ತಿರುತ್ತದೆ. ಆದರೆ, ಜುಲೈ 4, ಇಂದು ಎಲ್‌ಪಿಜಿ ಬೆಲೆಯನ್ನು ಏರಿಸಲಾಗಿದೆ. ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ಮಂಗಳವಾರ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 7 ರೂ. ಹೆಚ್ಚಿಸಿದೆ. ಈ ಪರಿಷ್ಕೃತ ದರಗಳು ಇಂದಿನಿಂದಲೇ ಜಾರಿಗೆ ಬರಲಿವೆ ಎಂದೂ ತಿಳಿದುಬಂದಿದೆ. 3 ತಿಂಗಳ ಬಳಿಕ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯಲ್ಲಿ ಮತ್ತೆ ಹೆಚ್ಚಿಸಲಾಗಿದೆ. ಈ ಬದಲಾವಣೆಯ ನಂತರ, ದೆಹಲಿಯಲ್ಲಿ 19 ಕೆಜಿ ಎಲ್‌ಪಿಜಿ ಸಿಲಿಂಡರ್‌ಗೆ ಪ್ರಸ್ತುತ ಚಿಲ್ಲರೆ ಬೆಲೆ 1,780 ರೂ. ಗೆ ಏರಿಕೆಯಾಗಲಿದೆ.

ಈ ಸಂಬಂಧ ಸುದ್ದಿಸಂಸ್ಥೆ ಎಎನ್‌ಐ ಸಹ ಟ್ವೀಟ್‌ ಮಾಡಿದ್ದು, ‘’ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 7 ರೂ. ಹೆಚ್ಚಿಸಿವೆ. 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ದೆಹಲಿ ಚಿಲ್ಲರೆ ಮಾರಾಟದ ಬೆಲೆ ಪ್ರತಿ ಸಿಲಿಂಡರ್‌ಗೆ ರೂ. 1,773 ರಿಂದ ರೂ. 1,780 ಕ್ಕೆ ಏರಿಕೆಯಾಗಿದೆ. ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ’’ ಎಂದು ಮಾಹಿತಿ ನೀಡಿದೆ.

Latest Videos

ಇದನ್ನು ಓದಿ: ಈ ರಾಜ್ಯದಲ್ಲಿ ಇನ್ಮುಂದೆ ಕೇವಲ 500 ರೂ.ಗೆ ಎಲ್‌ಪಿಜಿ ಸಿಲಿಂಡರ್‌ ಪಡೀಬಹುದು!

ಹೌದು, ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತೈಲ ಮಾರುಕಟ್ಟೆ ಕಂಪನಿಗಳು ತಿಳಿಸಿವೆ. 1 ವರ್ಷದಿಂದ ಗೃಹ ಬಳಕೆಯ ಅಥವಾ ವಾಣಿಜ್ಯ ಸಿಲಿಂಡರ್‌ ದರದಲ್ಲಿ ಭಾರಿ ಏರಿಕೆಯಾಗಿದೆ. ಜೂನ್‌ನಲ್ಲಿ 83 ರೂ. ಹಾಗೂ ಮೇ ತಿಂಗಳಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ದರವನ್ನು 171.50 ರೂ ಕಡಿತಗೊಳಿಸಲಾಗಿತ್ತಾದ್ರೂ, ಮಾರ್ಚ್‌ 1 ರಂದು ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ  ಪ್ರತಿ ಯೂನಿಟ್‌ಗೆ 50 ರೂ. ಹೆಚ್ಚಳವಾಗಿದ್ದು, ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಗಳು 350.50 ರೂ. ಏರಿಕೆಯಾಗಿತ್ತು. ಅಲ್ಲದೆ, ಜನವರಿ 1 ರಂದು ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಪ್ರತಿ ಯೂನಿಟ್‌ಗೆ 25 ರೂ. ಏರಿಕೆ ಮಾಡಲಾಗಿತ್ತು.

ಇದಕ್ಕೂ ಮುನ್ನ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ಕಳೆದ ವರ್ಷ ಸೆಪ್ಟೆಂಬರ್ 1 ರಂದು 91.50 ರೂಪಾಯಿಗಳಷ್ಟು ಕಡಿಮೆ ಮಾಡಲಾಗಿತ್ತು. ಹಾಗೆ, ಆಗಸ್ಟ್ 1, 2022 ರಂದು, ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 36 ರೂ.ಗಳಷ್ಟು ಕಡಿಮೆ ಮಾಡಲಾಗಿದೆ. ಅದಕ್ಕೂ ಮೊದಲು, ಜುಲೈ 6 ರಂದು, 19 ಕಿಲೋಗ್ರಾಂಗಳ ವಾಣಿಜ್ಯ ಸಿಲಿಂಡರ್‌ನ ದರವನ್ನು ಪ್ರತಿ ಯೂನಿಟ್‌ಗೆ 8.5 ರೂ. ಇಳಿಕೆ ಮಾಡಲಾಗಿತ್ತು. 

ಇದನ್ನೂ ಓದಿ: ಗುಡ್‌ ನ್ಯೂಸ್‌: ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ 171.50 ರೂ. ಇಳಿಕೆ; ಹೊಸ ಬೆಲೆಗಳು ಹೀಗಿದೆ ನೋಡಿ..

ಆದರೆ, ಗೃಹ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಮೇ ತಿಂಗಳಲ್ಲಿ 50 ರೂ. ಹೆಚ್ಚಿಸಿದ ಬಳಿಕ ಮತ್ತೆ ಪರಿಷ್ಕರಿಸಲಾಗಿಲ್ಲ. ಸದ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ  ಬೆಂಗಳೂರಲ್ಲಿ 1,105.50 ರೂ. ಇದೆ. 

ಇದನ್ನೂ ಓದಿ: ಎಲ್‌ಪಿಜಿ ಗ್ರಾಹಕರಿಗೆ ಗುಡ್‌ ನ್ಯೂಸ್‌: 92 ರೂ. ಇಳಿಕೆಯಾದ ಸಿಲಿಂಡರ್‌ ಬೆಲೆ

click me!