JIO ಗ್ರಾಹಕರಿಗೆ ಭರ್ಜರಿ ಗುಡ್​​ನ್ಯೂಸ್​: 449 ರೂ.ನಲ್ಲಿ ಮೂರು ನಂಬರ್​ ಬಳಕೆಗೆ ಅವಕಾಶ! ಏನಿದು ಪ್ಲ್ಯಾನ್​?

Published : Oct 08, 2025, 09:46 PM IST
Jio

ಸಾರಾಂಶ

ಜಿಯೋ ತನ್ನ ಗ್ರಾಹಕರಿಗಾಗಿ ಹೊಸ  ಫ್ಯಾಮಿಲಿ ಪ್ಲ್ಯಾನ್ ಪರಿಚಯಿಸಿದೆ. ಈ ಯೋಜನೆಯಲ್ಲಿ, ಕೇವಲ 449 ರೂಪಾಯಿಗಳ ಮೂಲ ಬೆಲೆಯಲ್ಲಿ ಮೂರು ಮೊಬೈಲ್ ಸಂಖ್ಯೆಗಳನ್ನು ಬಳಸಬಹುದು. ಇದು ತಿಂಗಳು ಪೂರ್ತಿ ಅನಿಯಮಿತ ಕರೆ, 75 GB ಡೇಟಾ ಮತ್ತು SMS ಸೌಲಭ್ಯಗಳನ್ನು ಒದಗಿಸುತ್ತದೆ. ಏನಿದು ಪ್ಲ್ಯಾನ್​? 

ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ಆಗ್ತಿರೋದು ಎಲ್ಲರಿಗೂ ಗೊತ್ತಿರುವ ವಿಷಯವೇ. ಕೆಲ ತಿಂಗಳ ಹಿಂದೆ ಜಿಯೋ ಸೇರಿದಂತೆ ಎಲ್ಲಾ ಕಂಪೆನಿಗಳು ಏಕಾಏಕಿ ದರ ಏರಿಸಿ ಶಾಕ್​ ಕೊಟ್ಟಿದ್ದೂ ಆಗಿದೆ. ಆದರೆ ಏರ್​ಟೆಲ್​ಗೆ ಹೋಲಿಸಿದರೆ, ಜಿಯೋದಲ್ಲಿ ರೇಟ್​ ಕಡಿಮೆ ಎನ್ನುವ ಮಾತಿದೆ. ಇದೀಗ ಜಿಯೋ (JIO Recharge plan) ಇನ್ನೊಂದು ಹೊಸ ಯೋಜನೆಯನ್ನು ಆರಂಭಿಸಿದೆ. ಈ ಮೂಲಕ ಗ್ರಾಹಕರಿಗೆ ಭರ್ಜರಿ ಗುಡ್​ನ್ಯೂಸ್​ ಕೊಟ್ಟಿದೆ. ಅದೇನೆಂದರೆ ಕೇವಲ 449 ರೂಪಾಯಿಗಳಲ್ಲಿ ಮೂರು ಮೊಬೈಲ್​ ನಂಬರ್​ಗಳನ್ನು ಬಳಸಲು ಅವಕಾಶ ಕಲ್ಪಿಸಲಾಗಿದೆ. ಇದರ ಅರ್ಥ ಒಂದೇ ರಿಚಾರ್ಜ್‌ನಲ್ಲಿ 3 ನಂಬರ್ ಬಳಸಲು ಅವಕಾಶ ಇವೆ. ತಿಂಗಳು ಪೂರ್ತಿ ಅನಿಯಮಿತ ಕರೆ ಸೌಲಭ್ಯವನ್ನೂ ಇದರಲ್ಲಿ ಪಡೆಯಬಹುದು.

ಏನಿದು ಪ್ಲ್ಯಾನ್​?

ಒಂದು ವೇಳೆ ನೀವು ಅಥವಾ ನಿಮ್ಮ ಫ್ಯಾಮಿಲಿಯಲ್ಲಿ ಮೂವರು ಜಿಯೋ ಬಳಸುತ್ತಿದ್ದೀರಿ ಎಂದಾದರೆ ಇದರ ಲಾಭವನ್ನು ನೀವು ಪಡೆಯಬಹುದು. 449 ರೂಪಾಯಿಗೆ ಮೂರು ಮಂದಿ ಉಪಯೋಗಿಸಬಹುದು. ಇದು ಪೋಸ್ಟ್​ ಪೇಯ್ಡ್​ ಪ್ಲ್ಯಾನ್​ ಆಗಿದೆ (Post Paid plan). ಜಿಯೋದ ಈ ವಿಶೇಷ ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ ಫ್ಯಾಮಿಲಿ ಆಡ್-ಆನ್ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಇದರ ಅಡಿಯಲ್ಲಿ, ಒಬ್ಬ ಮುಖ್ಯ ಬಳಕೆದಾರರು ಇರುತ್ತಾರೆ. ಅವರು ಮೂವರು ಹೆಚ್ಚುವರಿ ಸದಸ್ಯರನ್ನು ಸೇರಿಸಿಕೊಳ್ಳಲು ಅವಕಾಶ ಇದೆ. ಮೊದಲಿಗೆ 449 ರೀಚಾರ್ಜ್​ ಮಾಡಿಸಬೇಕು. ಕೊನೆಗೆ ಮೂರು ಮಂದಿ ಸದಸ್ಯರನ್ನು ಆ್ಯಡ್​ ಆನ್​ ಮಾಡಲು ಅವಕಾಶವಿದೆ. ಪ್ರತಿಯೊಬ್ಬರಿಗೂ 150 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಒಂದು ವೇಳೆ ನೀವು ಇಬ್ಬರನ್ನು ಆ್ಯಡ್​ ಆನ್​ ಮಾಡಿದರೆ, ₹ 449 + ₹ 150 × 2 = ₹ 749 ರಲ್ಲಿ ಮೊಬೈಲ್ ಸೇವೆಯನ್ನು ಪಡೆಯಬಹುದು.

ಈ ಸೇವೆ ಪಡೆಯಲು ಏನು ಮಾಡಬೇಕು?

ಈ ಜಿಯೋ ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಪ್ಲ್ಯಾನ್​ಗೆ ಸೇರಲು ಮೊದಲಿಗೆ ನೀವು ಪ್ರೈಮರಿ ಎಂದು ಪರಿಗಣಿಸುವ ಒಂದು ನಂಬರ್​ ಅನ್ನು ಮೊದಲಿಗೆ ಪ್ರಿಪೇಯ್ಡ್ ನಿಂದ ಪೋಸ್ಟ್​ಪೇಯ್ಡ್​ಗೆ ಮೈಗ್ರೇಶನ್ ಮಾಡಿಕೊಳ್ಳಬೇಕಾಗುತ್ತದೆ. ಇದು ನಿಮಗೆ ಕಸ್ಟಮರ್ ಕೇರ್​ಗೆ ಕರೆ ಮಾಡುವ ಮೂಲಕ ಮಾಡಿಕೊಳ್ಳಬಹುದು. ಬಳಿಕ ಉಳಿದ ಎರಡು ಸಂಖ್ಯೆಯನ್ನು ಇದರಡಿಯಲ್ಲಿ ಸೇರಿಸಲಾಗುತ್ತದೆ. ಆದರೆ ಈ ಆಡ್-ಆನ್ ಸಂಖ್ಯೆಗಳಿಗೆ 150 ರೂಗಳ ಮಾಸಿಕ ಶುಲ್ಕ ಸಹ ನೀಡಬೇಕಾಗುತ್ತದೆ.

ಇದರ ಪ್ರಯೋಜನಗಳೇನು?

ರಿಲಯನ್ಸ್ ಜಿಯೋ ರೂ. 449 ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಒಂದು ತಿಂಗಳವರೆಗೆ ಅನಿಯಮಿತ ಕರೆ ಸೌಲಭ್ಯವನ್ನು ನೀಡುತ್ತದೆ. ಈ ಯೋಜನೆಯು ಒಟ್ಟು 75 GB ಡೇಟಾ ಇದೆ. ಈ ಡೇಟಾ ಮುಗಿದ ನಂತರ ಪ್ರತಿ 1GB ಡೇಟಾ ಬಳಕೆಗೆ ರೂ. 10 ಶುಲ್ಕ ವಿಧಿಸಲಾಗುತ್ತದೆ. ಇದು ಹೆಚ್ಚುವರಿ ಫ್ಯಾಮಿಲಿ ಸದಸ್ಯರಿಗೆ 5GB ಹೆಚ್ಚುವರಿ ಡೇಟಾವನ್ನು ಸಹ ಒದಗಿಸುತ್ತದೆ. ಇದರ ಜೊತೆಗೆ, ದಿನಕ್ಕೆ 100 SMS ಕಳುಹಿಸಬಹುದು. ಇದರ ಇನ್ನೊಂದು ಪ್ರಯೋಜನ ಎಂದರೆ, ಪ್ರೈಮರಿ ನಂಬರ್ ಇರುವವರು ಬೇರೆ ಎರಡು ನಂಬರ್​ಗಳ ಡೇಟಾ ಮತ್ತು SMS ಕಂಟ್ರೋಲ್​ ಮಾಡಲು ಅವಕಾಶ ಕಲ್ಪಿಸಲಾಗಿದೆ.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

2026 ರಲ್ಲಿ ಮೇಷ ರಾಶಿಯವರ ಆರ್ಥಿಕ ಸ್ಥಿತಿ ಹೇಗಿರುತ್ತದೆ? AI ಪ್ರಕಾರ ಲಾಭನಾ ಅಥವಾ ನಷ್ಟನಾ?
ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು