
ಯುಐಡಿಎಐ ಆನ್ ಲೈಮ್ ನಲ್ಲಿ ವಿವರ ಬದಲಾವಣೆ ಮಾಡಲು ಅವಕಾಶ ಮಾಡಿಕೊಟ್ಟಿದೆ. ಆಧಾರ್ ಸೆಲ್ಫ್ ಸರ್ವೀಸ್ ಅಪ್ ಡೇಟ್ ಪೋರ್ಟಲ್ ಮೂಲಕ ನಿಮ್ಮ ಕೆಲಸ ಸಾಧಿಸಿಕೊಳ್ಳಬಹುದು. ತಪ್ಪುಗಳನ್ನು ಮಾತ್ರ ಮಾಡಲೇ ಬಾರದು.
1. ಸರಿಯಾದ ವಿಳಾಸ ದಾಖಲೆ ಅಪ್ ಲೋಡ್ ಮಾಡಿ:
ವಿಳಾಸ ಬದಲಾವಣೆ ಮಾಡಿಕೊಳ್ಳಬೇಕು ಎಂದಾದರೆ ಸ್ಕಾನ್ ಮಾಡಿದ ಸರಿಯಾದ ದಾಖಲೆ ಅಪ್ ಲೋಡ್ ಮಾಡಬೇಕಾಗುತ್ತದೆ. ಸ್ವಯಂ ದೃಢೀಕೃತ ದಾಖಲೆಗಳನ್ನು ಅಪ್ ಲೋಡ್ ಮಾಡುವುದು ಕಡ್ಡಾಯ.
* ಪಾಸ್ ಪೋರ್ಟ್
* ರೇಶನ್ ಕಾರ್ಡ್
* ಬ್ಯಾಂಕ್ ಸ್ಟೇಟ್ ಮೆಂಟ್ ಅಥವಾ ಪಾಸ್ ಬುಕ್
* ಮತದಾರರ ಗುರುತಿನ ಚೀಟಿ
* ವಾಹನ ಚಾಲನಾ ಪರವಾನಗಿ
* ಸರಕಾರದಿಂದ ಅನುಮೋದನೆಗೆ ಒಳಗಾದ ಫೋಟೋ ಹೊಂದಿರುವ ಗುರುತಿನ ಪತ್ರ
* ವಿದ್ಯುತ್ ಬಿಲ್, ನೀರು, ಲ್ಯಾಂಡ್ ಲೈನ್, ಪ್ರಾಪರ್ಟಿ ಟ್ಯಾಕ್ಸ್ ಸಲ್ಲಿಕೆ ಪಾವತಿ, ಕ್ರೆಡಿಟ್ ಕಾರ್ಡ್ ಸ್ಟೇಟ್ ಮೆಂಟ್[3 ತಿಂಗಳಿಗಿಂತ ಹಳೆಯದು ಉಪಯೋಗಕ್ಕೆ ಬರಲ್ಲ]
*ವಿಮಾ ಪಾಲಿಸಿ
*ಮಾರಾಟ ಮತ್ತು ಖರೀದಿಯ ನೋಂದಾವಣಿಯಾದ ದಾಖಲೆ
*ಮದುವೆಯಾದ ಮಹಿಳೆ ಗಂಡನ ಐಡಿ ಪ್ರೂಫ್ ನೀಡಬಹುದು
*ಮ್ಯಾರೇಜ್ ಸರ್ಟಿಫಿಕೇಟ್
ಈ ಮೇಲಿನಲ್ಲಿ ಯಾವುದಾದರೊಂದನ್ನು ಸಲ್ಲಿಸಬೇಕಾಗುತ್ತದೆ.
2. ಒಂದು ವೇಳೆ ನೀವು ಸಲ್ಲಿಕೆ ಮಾಡಿದ ದಾಖಲೆ ಸ್ವಯಂ ದೃಢೀಕರಣ ಆಗಿರದಿದ್ದರೆ ರಿಜಕ್ಟ್ ಆಗುವುದು.
3. ಆಧಾರ್ ಅಪ್ ಡೇಶನ್ ಅರ್ಜಿ ಎರಡು ವಿಭಾಗ ಹೊಂದಿರುತ್ತದೆ. ಆಂಗ್ಲ ಭಾಷೆಯಲ್ಲಿ ಒಂದಿದ್ದರೆ ಇನ್ನೊಂದು ಹಿಂದಿ, ಬೆಂಗಾಲಿ, ತಮಿಳು ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ಇರುತ್ತದೆ. ಆಂಗ್ಲ ಭಾಷೆಯಲ್ಲಿ ಅಪ್ ಡೇಟ್ ಮಾಡಿದರೆ ತನ್ನಿಂದ ತಾನೆ ಅದನ್ನು ಪ್ರಾದೇಶಿಕ ಭಾಷೆಗೆ ಸೖಟ್ ಭಾಷಾಂತರ ಮಾಡಿಕೊಳ್ಳುತ್ತದೆ.
4. ಯಾವುದೆ ದಾಖಲೆ ಅಪ್ ಲೋಡ್ ಮಾಡುವುದಿದ್ದರೂ ಮೂಲ ಪ್ರತಿಯ ಸ್ಕ್ಯಾನ್ ಕಾಪಿ ಹಾಕಬೇಕು. ಝೆರಾಕ್ಸ್ ನಿಂದ ಕೆಲಸ ಆಗುವುದಿಲ್ಲ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.