ಪೈಟಿಂಗ್‌ನಲ್ಲಿ ಹೊಸತನ ಅಳವಡಿಸಿದ ಏಷ್ಯನ್ ಪೈಂಟ್ಸ್; ಸುರಕ್ಷತೆಗೆ ಆದ್ಯತೆ!

By Suvarna NewsFirst Published Jun 1, 2020, 4:00 PM IST
Highlights

ಕಳೆದೆರಡು ತಿಂಗಳಲ್ಲಿ ಭಾರತ ಸೇರಿದಿತಂ ಇಡೀ ವಿಶ್ವ ಅತ್ಯಂತ ಕಠಿಣ ಸಂದರ್ಭ ಎದುರಿಸಿದೆ.  ಕೊರೋನಾ ಮಾಹಾಮಾರಿ ವೇಳೆ ಉದ್ಯೋಗಿಗಳು, ಗ್ರಾಹಕರ ಸುರಕ್ಷತೆಗೆ ಅದ್ಯತೆ ನೀಡಿದ ಏಷ್ಯನ್ ಪೈಂಟ್ಸ್ ಹಲವು ಹೊಸ ವಿಧಾನ ಹಾಗೂ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದೆ. ಕೊರೋನಾ ವಿರುದ್ಧದ ಹೋರಾಟದಲ್ಲಿ ಸರ್ಕಾರದ ಜೊತೆಗೂ ಕೈಜೋಡಿಸಿದೆ. ಇದೀಗ ಏಷ್ಯನ್ ಪೈಂಟ್ಸ್  ಮಾದರಿಯಾಗಿದೆ.

ಬೆಂಗಳೂರು(ಜೂ.01) ಕಳೆದೆರಡು ತಿಂಗಳು ಭಾರತ ಲಾಕ್‌ಡೌನ್ ಆಗಿತ್ತು. ಬಹುತೇಕ ಎಲ್ಲಾ ಸೇವೆಗಳು ಸ್ಥಗಿತಗೊಂಡಿತು. 4 ಹಂತದ ಲಾಕ್‌ಡೌನ್ ಮುಗಿಸಿ ಇದೀಗ ನಾವು 5ನೇ ಹಂತಕ್ಕೆ ಕಾಲಿಟ್ಟಿದ್ದೇವೆ. ಈ ಎರಡು ತಿಂಗಳು ಪರಿಸ್ಥಿತಿಗೆ ಅನುಗುಣವಾಗಿ ನಾವೆಲ್ಲ ಬದಲಾಗಿದ್ದೇವೆ. ಮಾಸ್ಕ್ ಇಲ್ಲದೆ ಹೊರಗೆ ಹೋಗುತ್ತಿಲ್ಲ, ಸ್ಯಾನಿಟೈಸ್ ಮಾಡಿಕೊಳ್ಳುತ್ತಿದ್ದೇವೆ. ಶುಚಿತ್ವಕ್ಕೆ ಮೊದಲ ಆದ್ಯತೆ ನೀಡಿದ್ದೇವೆ. ಆನ್‌ಲೈನ್ ಶಾಂಪಿಂಗ್, ಮನೆಯಿಂದ ಕೆಲಸ ಸೇರಿದಂತೆ ಹಲವು ಬದಲಾವಣೆಗಳಾಗಿವೆ. ಈ ಮೂಲಕ ಕಠಿಣ ಸಂದರ್ಭವನ್ನೂ ನಿಭಾಯಿಸಲು ಕಲಿತಿದ್ದೇವೆ. 

ಕೊರೋನಾ ವೈರಸ್ ಸಮಯದಲ್ಲಿ ಏಷ್ಯನ್ ಪೈಂಟ್ಸ್ ಕೂಡ ಕೆಲಸದಲ್ಲಿ ಹಲವು ಬದಲಾವಣೆ ತಂದಿದೆ. ಗ್ರಾಹಕರು ಹಾಗೂ ಪೈಂಟರ್ಸ್ ಸುರಕ್ಷತೆಗೆ ಮೊದಲ ಆದ್ಯತೆ ನೀಡಿದೆ.  ಇದಕ್ಕಾಗಿ ಏಷ್ಯನ್ ಪೈಂಟ್ಸ್ ಹೊಸ ವಿಧಾನದ ಸುರಕ್ಷತೆಯ ಪೈಂಟಿಂಗ್ ಸೂತ್ರವನ್ನು ಪರಿಚಯಿಸಿದೆ.  ಈ ಮೂಲಕ ಸುರಕ್ಷತೆ ಹಾಗೂ ಕ್ರೀಯಾಶೀಲತೆಯಲ್ಲಿ ಇತರ ಎಲ್ಲರಿಗಿಂತ ಅಗ್ರಸ್ಥಾನ ಪಡೆದುಕೊಂಡಿದೆ. ಕಂಪನಿಯು ಪ್ರಾರಂಭಿಸಿದ ಹೊಸ ಬ್ರಾಂಡ್ ಅಭಿಯಾನವು ಈ ಕುರಿತು ಹೇಳುತ್ತದೆ.

ಹೊಸ ವಿಧಾನದ ಪೈಂಟಿಂಗ್‌ನ್ನು ದೇಶದ ಎಲ್ಲಾ ನಗರಗಳಲ್ಲಿ ಪರಿಚಯಿಸಲಾಗಿದೆ. ಧೂಳು ಮುಕ್ತ ಯಾಂತ್ರೀಕೃತ ಪೈಂಟಿಂಗ್‌ನಿಂದ, ಕಡಿಮೆ ಕೆಲಸಗಾರರಿಂದ ಕಾರ್ಯ ಪೂರ್ಣಗೊಳ್ಳುತ್ತಿದೆ. ಇದರಿಂದ ಮನೆ ಮಾಲೀಕರೂ ಹಾಗೂ ಪೈಂಟರ್ಸ್‌ಗಳು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸುಲಭವಾಗಿದೆ. 

 

ಪೈಂಟರ್ಸ್ ತಮ್ಮ ಕೆಲಸ ಆರಂಭಿಸುವ ಮೊದಲು ಹಾಗೂ ಪೂರ್ಣಗೊಳಿಸಿದ ಬಳಿಕ ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಿಕೊಳ್ಳುತ್ತಾರೆ.  ಕೆಲದ ಸ್ಥಳಕ್ಕೆ ಹಾಜರಾಗುವಾಗ ಸ್ಯಾನಿಟೈಸ್ ಮಾಡಿಕೊಳ್ಳುತ್ತಾರೆ. ಫೇಸ್ ಮಾಸ್ಕ್ ಧರಿಸುತ್ತಾರೆ, ಇನ್ನು ಸಂಪೂರ್ಣ ದೇಹ ಮುಚ್ಚುವ ಕವರ್ ಆಲ್ ಧರಿಸಿ ಕೆಲಸ ಆರಂಭಿಸುತ್ತಾರೆ. ದಿನದ ಕೆಲಸ ಮುಗಿಸಿದ ಬಳಿಕವೂ ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡುತ್ತಾರೆ. ಬಳಸಿದ ಮಾಸ್ಕ್, ಕವರ್ ಆಲ್ ಸೇರಿದಂತೆ ಎಲ್ಲಾ ವಸ್ತುಗಳ ಕುರಿತು ಜಾಗೃತೆ ವಹಿಸಲಾಗುತ್ತಿದೆ. ಈ ಮೂಲಕ ತಮ್ಮೊಂದಿಗೆ ಯಾವುದೇ ವೈರಸ್ ಕೊಂಡೊಯ್ಯದಂತೆ ಎಚ್ಚರವಹಿಸುತ್ತಾರೆ. ಇದರಿಂದ ಮನೆಯ ಮಾಲೀಕರ ಸುರಕ್ಷತೆ ಜೊತೆಗೆ ಪೈಂಟಿಂಗ್ ಕೆಲಸಗಾರರು ಸುರಕ್ಷಿತವಾಗುತ್ತಾರೆ.

 

ಸುರಕ್ಷತೆಯ ಪೈಂಟಿಂಗ್ ಸೇವೆ ಸೇರಿದಂತೆ ಹಲವು ಕ್ರಮಗಳನ್ನು ಏಷ್ಯನ್ ಪೈಂಟ್ಸ್ ಈ ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಸಮಯದಲ್ಲಿ ತೆಗೆದುಕೊಡಿದೆ. ಇದು ಕೊರೋನಾ ವೈರಸ್ ಸಮಯದಲ್ಲಿ ಕಂಪನಿ, ಉದ್ಯೋಗಿಗಳ ಹಾಗೂ ಗ್ರಾಹಕರ ಸುರಕ್ಷತೆಗೆ ಅದ್ಯತೆ ನೀಡಿರುವುದು ಏಷ್ಯನ್ ಪೈಂಟ್ಸ್ ಮೇಲೆ ಗ್ರಾಹಕರು, ಉದ್ಯೋಗಿಗಳ ವಿಶ್ವಾಸ ಹೆಚ್ಚಾಗಿದೆ. ಏಷ್ಯನ್ ಪೈಂಟ್ಸ್ ಸುರಕ್ಷತೆಯ ಪೈಂಟಿಂಗ್ ಸೇವೆಯಿಂದ ಉದ್ಯೋಗಿಗಳಿಗೆ ತಮ್ಮ ಕುಟುಂಬದ ಬಗ್ಗೆಯೂ ಕಂಪನಿ ಕಾಳಜಿ ವಹಿಸಿದೆ ಅನ್ನೋದು ಸ್ಪಷ್ಟವಾಗಿದೆ. ಕೊರೋನಾ ವಿರುದ್ಧದ ಹೋರಾಟದಲ್ಲಿ ಏಷ್ಯನ್ ಪೈಂಟ್ಸ್ ಸರ್ಕಾರದ ಜೊತೆ ಕೈಜೋಡಿಸಿದೆ. ಈಗಾಗಲೇ ಕೊರೋನಾ ವಾರಿಯರ್ಸ್‌ಗೆ ಗೀತೆ ನಮನ ಸಲ್ಲಿಸಿದೆ. ಒಂದು ರಾಷ್ಟ್ರ, ಒಂದು ಧನಿ ಅನ್ನೋ ಗೀತೆಯನ್ನು ಕೊರೋನಾ ವಾರಿಯರ್ಸ್‌ಗಾಗಿ ಏಷ್ಯನ್ ಪೈಂಟ್ಸ್ ಅರ್ಪಿಸಿದೆ. ಪ್ರಧಾನಿ ಪರಿಹಾರ ನಿಧಿ ಹಾಗೂ ಹಲವು ರಾಜ್ಯಗಳ ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಟ್ಟು 35 ಕೋಟಿ ರೂಪಾಯಿ ದೇಣಿಗೆಯನ್ನು ಏಷ್ಯನ್ ಪೈಂಟ್ಸ್ ನೀಡಿದೆ.

ಏಷ್ಯನ್ ಕಂಪನಿಯ ಹಲವು ಸುರಕ್ಷತೆ ಹಾಗೂ ಮುಂಜಾಗ್ರತ ಕ್ರಮಗಳು ಇತರರಿಗೆ ಸ್ಪೂರ್ತಿ ಮಾತ್ರವಲ್ಲ, ಹೊಸ ಭವ್ಯ ಭಾರತದ ಭವಿಷ್ಯಕ್ಕೂ ಸಹಕಾರಿಯಾಗಿದೆ.
 

click me!