ಬೆಂಗಳೂರಿನ ಹೊಸ ಆ್ಯಪಲ್ ಸ್ಟೋರ್‌ನಲ್ಲಿ ಉದ್ಯೋಗ, ಲಕ್ಷ ರೂ ಸಂಬಳದ 400 ಹುದ್ದೆಗೆ ನೇಮಕಾತಿ!

By Chethan Kumar  |  First Published Oct 24, 2024, 4:12 PM IST

ಭಾರತದಲ್ಲಿ ಐಫೋನ್ ಸೇರಿದಂತೆ ಐ್ಯಪಲ್ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಇದೀಗ  ಬೆಂಗಳೂರು ಸೇರಿದಂತೆ 4 ನಗರಗಳಲ್ಲಿ ಹೊಸ ಆ್ಯಪಲ್ ಸ್ಟೋರ್ ಆರಂಭಗೊಳ್ಳುತ್ತಿದೆ. ಇದಕ್ಕಾಗಿ ನೇಮಕಾತಿ ಆರಂಭಗೊಂಡಿದೆ. ಉತ್ತಮ ವೇತನವೂ ಸಿಗಲಿದೆ.


ಬೆಂಗಳೂರು(ಅ.24) ಭಾರತದಲ್ಲಿ ಐಫೋನ್ 16 ಸೀರಿಸ್‌ಗೆ ಸಿಕ್ಕ ಬೇಡಿಕೆಗೆ ಖುದ್ದು ಆ್ಯಪಲ್ ನಿಬ್ಬೆರಗಾಗಿದೆ. ಇದೇ ವೇಳೆ ಆ್ಯಪಲ್ ಇತರ ಉತ್ಪನ್ನಗಳಿಗೂ ಬೇಡಿಕೆ ಬೆಚ್ಚಾಗಿದೆ. ಇದೀಗ ಆ್ಯಪಲ್ ಬೆಂಗಳೂರು ಸೇರಿದಂತೆ 4 ನಗರದಲ್ಲಿ ಹೊಸ ಆ್ಯಪಲ್ ಸ್ಟೋರ್ ಆರಂಭಿಸುತ್ತಿದೆ. ಈ ಸ್ಟೋರ್‌ಗಲ್ಲಿ ಸೇಲ್ಸ್ ಎಕ್ಸ್‌ಕ್ಯೂಟೀವ್, ಮ್ಯಾನೇಜರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿ ಆರಂಭಗೊಳ್ಳುತ್ತಿದೆ. 400 ಹುದ್ದಗಳಿಗೆ ನೇಮಕಾತಿ ನಡೆಯಲಿದೆ. ಆ್ಯಪಲ್ ಅಧಿಕೃತ ವೆಬ್‌ಸೈಟ್‌ನಲ್ಲಿ ಉದ್ಯೋಗ ಹಾಗೂ ನೇಮಕಾತಿ ಮಾಹಿತಿ ಹಂಚಿಕೊಂಡಿದೆ ಎಂದು ಮನಿಕಂಟ್ರೋಲ್ ಮಾಧ್ಯಮ ವರದಿ ಮಾಡಿದೆ.

ಬೆಂಗಳೂರು, ಪುಣೆ, ಮುಂಬೈ ಹಾಗೂ ದೆಹಲಿಯಲ್ಲಿ ಹೊಸ ಆ್ಯಪಲ್ ಸ್ಟೋರ್ ಆರಂಭಗೊಳ್ಳುತ್ತಿದೆ. ಒಟ್ಟು 400 ಹುದ್ದೆಗಳು ಲಭ್ಯವಿದೆ. ವಿಶೇಷ ಅಂದರೆ ಪಾರ್ಟ್ ಟೈಮ್ ಜಾಬ್ ಕೂಡ ಲಭ್ಯವಿದೆ. ಪದವಿ ಸೇರಿದಂತೆ ಇತರ ವಿಧ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಪಾರ್ಟ್ ಟೈಮ್ ಜಾಬ್‌ಗೂ ಅವಕಾಶ ನೀಡಿದೆ ಎಂದು ವರದಿಯಾಗಿದೆ. 

Tap to resize

Latest Videos

undefined

ಫೆಸ್ಟಿವಲ್ ಸೇಲ್ ಮಿಸ್ ಮಾಡಿಕೊಂಡ್ರಾ? ಇದೀಗ 27,000 ರೂ ಡಿಸ್ಕೌಂಟ್‌ನಲ್ಲಿ ಐಫೋನ್ 15 ಲಭ್ಯ!

ಒಟ್ಟು ನಾಲ್ಕು ಹೊಸ ಆ್ಯಪಲ್ ಮಳಿಗೆ ಆರಂಭಗೊಳ್ಳುತ್ತಿದೆ. ಪ್ರತಿ ಮಳಿಗೆಗೆ 90 ರಿಂದ 100 ಉದ್ಯೋಗಿಗಳ ಅವಶ್ಯಕತೆ ಇದೆ. ಈಗಾಗಲೇ ನೇಮಕಾತಿ ಪ್ರಕ್ರಿಯೆಗಳು ಆರಂಭಗೊಂಡಿದೆ. ಆ್ಯಪಲ್ ಅಧಿಕೃತ ವೆಬ್‍‌ಸೈಟ್, ಲಿಂಕ್ಡ್‌ಇನ್ ಸೇರಿದಂತೆ ಅಧಿಕೃತ ವೇದಿಕೆಗಳಲ್ಲಿ ಈ ಉದ್ಯೋಗದ ಕುರಿತು ಮಾಹಿತಿ ನೀಡಲಾಗಿದೆ. ಅಧಿಕೃತ ಮೂಲಗಳ ಮೂಲಕ ಮಾತ್ರ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿ.

ದೆಹಲಿ ಹಾಗೂ ಮುಂಬೈನಲ್ಲಿರುವ ಆ್ಯಪಲ್ ಸ್ಟೋರ್ ಈಗಾಗಲೇ ಹಲವು ಭಾಷೆಗಳಲ್ಲಿ ಪರಿಣತರನ್ನು ನೇಮಿಸಿಕೊಂಡಿದೆ. ಮೂಲಗಳ ಪ್ರಕಾರ 20ಕ್ಕೂ ಹೆಚ್ಚು ಭಾಷಾ ಪರಿಣಿತರು ಮುಂಬೈ ಹಾಗೂ ದೆಹಲಿ ಆ್ಯಪಲ್ ಸ್ಟೋರ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಭಾರತದ ಆ್ಯಪಲ್ ಸ್ಟೋರ್ ಮೂಲಕ ಆ್ಯಪಲ್ ಭಾರಿ ಲಾಭ ಗಳಿಸುತ್ತಿದೆ. 

ಸೆಪ್ಟೆಂಬರ್ ತಿಂಗಳಲ್ಲಿ ಆ್ಯಪಲ್ ಭಾರತದಲ್ಲಿ ಐಫೋನ್ 16 ಸೀರಿಸ್ ಬಿಡುಗಡೆ ಮಾಡಿತ್ತು. ಬಿಡುಗಡೆ ವಾರ ಆ್ಯಪಲ್ ಸ್ಟೋರ್ ಬಳಿ ಜನಸಾಗರವೇ ಹರಿದು ಬಂದಿತ್ತು. ರಾತ್ರಿ ಇಡಿ, ಬೆಳಗ್ಗೆ 4 ಗಂಟೆಯಿಂದ ಸರದಿ ಸಾಲಿನಲ್ಲಿ ನಿಂತು ಆ್ಯಪಲ್ 16 ಸೀರಿಸ್ ಫೋನ್ ಖರೀದಿಸಿದಿದ್ದಾರೆ. ಜನರ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದರು. ಇನ್ನು ಆನ್‌ಲೈನ್ ಮೂಲಕವೂ ಅತೀ ಹೆಚ್ಚು ಮಾರಾಟ ಕಂಡಿತ್ತು. ಆನ್‌ಲೈನ್ ಶಾಪಿಂಗ್‌ನಲ್ಲಿ ಕೆಲ ಭರ್ಜರಿ ಆಫರ್ ಕೂಡ ನೀಡಲಾಗಿತ್ತು. ಹೀಗಾಗಿ ಅತೀ ಹೆಚ್ಚಿನ ಮಂದಿ ಆನ್‌ಲೈನ್ ಮೂಲಕ ಐಫೋನ್ ಖರೀದಿಸಿದ್ದರು.

ಸ್ವಿಸ್ ಜನಕ್ಕೆ ನಾಲ್ಕೇ ದಿನ, ಐಫೋನ್ 16 ಖರೀದಿಗೆ ಭಾರತೀಯರು ಸರಾಸರಿ ಎಷ್ಟು ದಿನ ಕೆಲಸ ಮಾಡಬೇಕು?
 

click me!