ಯುವ ಉದ್ಯಮಿಗಳಿಗೆ ಟಿಮ್‌ ಕುಕ್‌ ನೀಡೋ ಟಿಪ್ಸ್

By Web DeskFirst Published Mar 18, 2019, 3:40 PM IST
Highlights
  • ಆ್ಯಪಲ್‌ ಕಂಪೆನಿ ಸೇರಲು ಡಿಗ್ರಿ ಸರ್ಟಿಫಿಕೇಟ್‌ ಬೇಡ, ಸ್ಕಿಲ್‌ ಇದ್ರೆ ಸಾಕು
  • ಯುವ ಉದ್ಯಮಿಗಳಿಗೆ ಟಿಮ್‌ ಹೇಳುವ ಐದು ಪಾಠಗಳು

‘ಬ್ಯುಸಿನೆಸ್‌ಗೆ ಬೇಕಾಗಿರುವ ಕೌಶಲ್ಯಕ್ಕೂ, ಕಾಲೇಜಿನಲ್ಲಿ ಕಲಿಸುವ ಸ್ಕಿಲ್‌ಗೂ ಅಜಗಜಾಂತರ ವ್ಯತ್ಯಾಸವಿದೆ. ಈಗ ಫೇಮಸ್‌ ಆಗ್ತಿರೋದು ಕೋಡಿಂಗ್‌ ತಂತ್ರಜ್ಞಾನ. ಇದರಲ್ಲಂತೂ ಕಾಲೇಜ್‌ನಲ್ಲಿ ಏನು ಕಲಿಸ್ತಾರೋ ಅದಕ್ಕೂ ಫೀಲ್ಡ್‌ನಲ್ಲಿರೋದಕ್ಕೂ ಯಾವ ಸಂಬಂಧವೂ ಇರಲ್ಲ. ಅದಕ್ಕೇ ನಮ್ಮ ಕಂಪೆನಿಯಲ್ಲಿ ಶೇ50 ರಷ್ಟುಡಿಗ್ರಿ ಇಲ್ಲದವರಿಗೆ ಆದ್ಯತೆ ನೀಡುತ್ತೇವೆ.’

ಎಂಬಿಎ ಮಾಡ್ಬೇಕು. ಮತ್ತೇನೋ ಕೋರ್ಸ್‌ ಮಾಡ್ಬೇಕು ಅಂದುಕೊಂಡಿರೋರಿಗೆಲ್ಲ ಶಾಕ್‌ ಆಗುವಂತಿದೆ ಟಿಮ್‌ ಕುಕ್‌ನ ಈ ಸ್ಟೇಟ್‌ಮೆಂಟ್‌. ಅಷ್ಟಕ್ಕೂ ಟಿಮ್‌ ಇದನ್ನು ಸುಮ್ಮನೆ ಬಾಯಿ ಮಾತಿಗೆ ಹೇಳಿದ್ದಲ್ಲ. ಅಂತಾರಾಷ್ಟ್ರೀಯ ಬ್ಯುಸಿನೆಸ್‌ ಜಗತ್ತಿನಲ್ಲಿ ಬಹಳ ಮಹತ್ವ ಪಡೆದಿರುವ ಸಭೆಯಲ್ಲಿ ಆಡಿರುವ ಮಾತು. ಮತ್ತೆ ನೋಡಿದರೆ ಟಿಮ್‌ ಮಾತಾಡುವ ಮೊದಲೇ ಇದನ್ನು ಕಾರ್ಯದಲ್ಲೂ ಸಾಧಿಸಿದ್ದಾರೆ. ಆ್ಯಪಲ್‌ ಕಂಪೆನಿಯಲ್ಲಿ ಅರ್ಧಕ್ಕರ್ಧ ಜನ ಬ್ಯುಸಿನೆಸ್‌ ಸ್ಕೂಲ್‌ಗಳ ಮೆಟ್ಟಿಲೇರದೇ ಬಂದವರು. ಅಷ್ಟೇ ಅಲ್ಲ, ಗೂಗಲ್‌, ಐಬಿಎಂ ಸೇರಿದಂತೆ ಹಲವಾರು ಜಾಗತಿಕ ಮಟ್ಟದ ಕಂಪೆನಿಗಳು ಉದ್ಯೋಗಿಗಳ ಆಯ್ಕೆಯಲ್ಲಿ ಈ ಸೂತ್ರವನ್ನೇ ಬಳಸುತ್ತಿವೆ. ಬ್ಯುಸಿನೆಸ್‌ ಜಗತ್ತಿನಲ್ಲಿ ಬೆಳೆಯಲು ಡಿಗ್ರಿ ಬೇಡ, ಮತ್ತೇನು ಬೇಕು ಅನ್ನೋದನ್ನು ಟಿಮ್‌ ಕುಕ್‌ ವಿವರಿಸುತ್ತಾರೆ.

ಯುವ ಉದ್ಯಮಿಗಳಿಗೆ ಟಿಮ್‌ ಹೇಳುವ ಐದು ಪಾಠಗಳು

1. ನಿಮ್ಮ ಕೌಶಲ್ಯವನ್ನು ಗುರುತಿಸಿ ಅದನ್ನು ಅಭಿವೃದ್ಧಿಪಡಿಸಿ:

ಆ್ಯಪಲ್‌ನಂಥ ಕಂಪೆನಿಯನ್ನು ಕಟ್ಟಿಬೆಳೆಸಿದ ಸ್ಟೀವ್‌ ಜಾಬ್ಸ್‌ ಅವರ ಬದುಕೇ ಯುವ ಉದ್ಯಮಿಗಳಿಗೆ ದೊಡ್ಡ ಪಾಠ. ಅವರು ಸ್ವಂತ ಪರಿಶ್ರಮದಿಂದ ತಮ್ಮ ಕೌಶಲ್ಯವನ್ನು ವೃದ್ಧಿಸುತ್ತಾ ಹೋದರು. ಅವರು ಬ್ಯುಸಿನೆಸ್‌ ಸ್ಕೂಲ್‌ ಟಾಪರ್‌ ಖಂಡಿತಾ ಅಗಿರಲಿಲ್ಲ. ಬದಲಾಗಿ ಡ್ರಾಪ್‌ಔಟ್‌ ಆದ ವಿದ್ಯಾರ್ಥಿಯಾಗಿದ್ದರು. ಪಠ್ಯದಲ್ಲಿರುವುದು ನಿಮಗೆ ರೆಫರೆನ್ಸ್‌ ಅಷ್ಟೇ. ಆದರೆ ಅದರಾಚೆ ಯೋಚಿಸುವವನೇ ಬ್ಯುಸಿನೆಸ್‌ ಜಗತ್ತಿನ ಲೀಡರ್‌ ಆಗ್ತಾನೆ. ಅಷ್ಟಕ್ಕೂ ಬ್ಯುಸಿನೆಸ್‌ನಲ್ಲಿ ಆಸಕ್ತಿ ಇದೆ. ಆದರೆ ಕಾಲೇಜಿಗೆ ಹೋಗಲು ಆರ್ಥಿಕ ಸಮಸ್ಯೆ ಇದೆ ಎನ್ನುವವರಿಗಂತೂ ಈಗ ಸುವರ್ಣ ಕಾಲ. ಏಕೆಂದರೆ ಪಠ್ಯದ ಹಂಗಿಲ್ಲದೇ ಅನೇಕ ಮೂಲಗಳಿಂದ ನಿಮ್ಮ ಕೌಶಲ್ಯ ಅಭಿವೃದ್ಧಿಪಡಿಸುತ್ತ ಸ್ವತಂತ್ರವಾಗಿ ಬೆಳೆಯಬಹುದು.

2. ಕೋಡಿಂಗ್‌ ಕಲಿಯೋದು ಬಹಳ ಮುಖ್ಯ:

ತಂತ್ರಜ್ಞಾನಕ್ಕೆ ಒಂದು ಭಾಷೆ ಇದೆ. ಅದೇ ಕೋಡ್‌. ನನ್ನ ಪ್ರಕಾರ ಉತ್ತಮ ಫ್ಯೂಚರ್‌ನ ಕನಸಿನಲ್ಲಿರುವವರು ಈ ಕೋಡಿಂಗ್‌ ಅನ್ನು ಕಲಿಯೋದು ಬಹಳ ಮುಖ್ಯ. ತಂತ್ರಜ್ಞಾನದ ಭಾಷೆಯನ್ನು ಸರಿಯಾಗಿ ಕಲಿಯದೇ ನೀವು ಈ ಕ್ಷೇತ್ರದಲ್ಲಿ ಮುಂದೆ ಹೋಗ್ತೀನಿ ಅಂದರೆ ಕಷ್ಟ. ಬೇರೆ ದೇಶಗಳಿಂದ ಕೆಲಸ ಅರಸಿ ಇಲ್ಲಿಗೆ ಬರುವವರು ಫಾರಿನ್‌ ಲಾಂಗ್ವೇಜ್‌ ಕಲಿಯೋದಕ್ಕೂ ಮೊದಲೇ ತಂತ್ರಜ್ಞಾನದ ಭಾಷೆ ಕಲಿಯಿರಿ. ಒಂದು ಪ್ರೋಗ್ರಾಮ್‌ ಅನ್ನು ಸ್ವತಂತ್ರವಾಗಿ ರಚಿಸಲು ಕಲಿತರೆ ಮುಂದಿನ ಹಾದಿ ಸುಲಲಿತ. ಕೋಡಿಂಗ್‌ನ ಅವಶ್ಯಕತೆಗೆ ಒಂದು ಉದಾಹರಣೆ- ನಿಮಗೆ ಪಿಜ್ಜಾ ತಿನ್ನುವ ಮನಸ್ಸಾಗಿದೆ. ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಲು ಹೊರಡುತ್ತೀರಿ. ಹೀಗೆ ಆರ್ಡರ್‌ ಮಾಡಲು ಸಾಧ್ಯವಾಗುವುದು ಕೋಡಿಂಗ್‌ನಿಂದ. ಜೊತೆಗೆ ನಿಮ್ಮ ಆರ್ಡರ್‌ಅನ್ನು ಟ್ರೇಸ್‌ ಮಾಡೋದು, ಬದಲಾಯಿಸೋದು ಇವೆಲ್ಲದಕ್ಕೂ ಸಹಾಯ ಮಾಡೋದು ಕೋಡಿಂಗ್‌. ಅದಕ್ಕೆಂದೇ ಆ್ಯಪಲ್‌ ಕಂಪೆನಿ ವತಿಯಿಂದ ‘ಎವರಿವನ್‌ ಕ್ಯಾನ್‌ ಕೋಡ್‌’ ಎಂಬ ಪ್ರೋಗ್ರಾಮನ್ನು ಅಭಿವೃದ್ಧಿಪಡಿಸಲಾಗಿದೆ. ಇದರಲ್ಲಿ ಪ್ರೈಮರಿ ಶಾಲೆ ಮಗುವಿನಿಂದ ಹಿರಿಯ ನಾಗರಿಕರವರೆಗೆ ಯಾರು ಬೇಕಾದರೂ ಕೋಡಿಂಗನ್ನು ಕಲಿಯಬಹುದು.

3. ಬೇರುಗಳು ಭದ್ರವಾಗಿರಲಿ:

‘ಎತ್ತರಕ್ಕೆ ಬೆಳೆಯಿರಿ’ ಎನ್ನುವ ಮಾತನ್ನು ಎಲ್ಲರೂ ಹೇಳುತ್ತಾರೆ. ಆದರೆ ಅದಕ್ಕೂ ಮೊದಲು ಆ ಎತ್ತರಕ್ಕೇರಲು ನಮ್ಮ ಬೇರುಗಳು ಎಷ್ಟುಆಳಕ್ಕಿಳಿದಿವೆ ಅನ್ನುವುದೂ ಬಹಳ ಮುಖ್ಯ. ಬೇರು ಗಟ್ಟಿಯಾಗಿರದೇ ಆಕಾಶದಷ್ಟೆಲ್ಲರ ಬೆಳೆಯುತ್ತೇನೆ ಎಂದರೆ ಕಷ್ಟ. ಒಂದು ಸಣ್ಣ ಗಾಳಿ ನಿಮ್ಮನ್ನು ಹೊಡೆದುಹಾಕಬಹುದು. ಬ್ಯುಸಿನೆಸ್‌ ಜಗತ್ತಿನ ಆಳಗಳನ್ನು ಅರಿತುಕೊಳ್ಳಿ. ಆಳಕ್ಕಿಳಿದು ಅಧ್ಯಯನ ಮಾಡಿ. ಆಗ ಕ್ಷಣ ಕ್ಷಣಕ್ಕೂ ಎದುರಾಗುವ ಸವಾಲುಗಳನ್ನು ಜಯಿಸಿ ಮುಂದೆ ಹೋಗಬಹುದು.

4. ದೂರದೃಷ್ಟಿಇದ್ದರಷ್ಟೇ ಲೈಫು:

ಸ್ವತಂತ್ರವಾಗಿ ಏನೋ ಬ್ಯುಸಿನೆಸ್‌ ಮಾಡಲು ಹೊರಡುತ್ತೀರಿ. ಈ ಕ್ಷಣದ ಮಾರ್ಕೆಟಿಂಗ್‌ಅನ್ನು ಗಮನದಲ್ಲಿಟ್ಟುಕೊಂಡು ಬಂಡವಾಳ ಹೂಡಿದರೆ ಅಥವಾ ಯೋಜನೆ ರೂಪಿಸಿದರೆ ಪ್ರಯೋಜನವಿಲ್ಲ. ಇದಕ್ಕೆಷ್ಟುಫä್ಯಚರ್‌ ಇದೆ ಅನ್ನೋದು ಬಹಳ ಮುಖ್ಯ. ಸ್ಟೀವ್‌ ಜಾಬ್ಸ್‌ ಕಾಲೇಜಿಂದ ಹೊರಬಿದ್ದು ಸ್ವತಂತ್ರ ಉದ್ಯಮ ಆರಂಭಿಸಿದಾಗ ಎಲ್ಲರೂ ತಮಾಷೆ ಮಾಡಿ ನಕ್ಕಿದ್ದರು. ಇಂದು ಅದೇ ಉದ್ಯಮ ಎಷ್ಟೆತ್ತರಕ್ಕೆ ಬೆಳೆದು ನಿಂತಿದೆ ಅನ್ನೋದು ಎಲ್ಲರಿಗೂ ಗೊತ್ತು.

5. ಅನುಕರಣೆ ಬೇಡವೇ ಬೇಡ:

ಕಂಪೆನಿ ಸಿಇಓ ಅಂದರೆ ಆತನಿಗಿರಬೇಕಾದ ಮೊದಲ ಅರ್ಹತೆ ಗಟ್ಟಿನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ. ಹಿಂದಿನ ಸಿಇಓ ಹಾಕಿಕೊಟ್ಟಹಾದಿಯಲ್ಲೇ ಆತನ ನೆರಳಿನಲ್ಲೇ ಏನನ್ನಾದರೂ ಸಾಧಿಸುತ್ತೇನೆ ಎಂದರೆ ಅದು ಸಾಧ್ಯವಿಲ್ಲ. ಸ್ಟೀವ್‌ ಜಾಬ್ಸ್‌ ಸ್ಥಾನಕ್ಕೆ ನಾನು ಬಂದಾಗ ನನ್ನ ಮುಂದೆ ಎರಡು ಆಯ್ಕೆಗಳಿದ್ದವು. ಮೊದಲನೆಯದು ಸ್ಟೀವ್‌ ಹಾದಿಯಲ್ಲೇ ನಡೆಯೋದು, ಇನ್ನೊಂದು ಸ್ವತಂತ್ರವಾಗಿ ಕಂಪೆನಿಯನ್ನು ಮುನ್ನಡೆಸೋದು. ಮೊದಲನೆಯ ಆಯ್ಕೆಯಲ್ಲಿ ಸವಾಲುಗಳು ಕಡಿಮೆ, ಕೆಲಸ ಸುಲಭ. ಆದರೆ ನಾನು ಮಾತ್ರ ಎರಡನೇ ದಾರಿಯನ್ನೇ ಆಯ್ಕೆ ಮಾಡಿದೆ. ಇದರಿಂದ ಕಂಪೆನಿ ಇನ್ನಷ್ಟುಅಭಿವೃದ್ಧಿ ಕಂಡಿತು.
 

click me!