ರಫೆಲ್ ಡೀಲ್, ರಾಹುಲ್ ಆರೋಪ ಡಲ್: ಅಂಬಾನಿ ಪತ್ರ!

Published : Aug 20, 2018, 08:57 PM ISTUpdated : Sep 09, 2018, 10:06 PM IST
ರಫೆಲ್ ಡೀಲ್, ರಾಹುಲ್ ಆರೋಪ ಡಲ್: ಅಂಬಾನಿ ಪತ್ರ!

ಸಾರಾಂಶ

ರಫೆಲ್ ಒಪ್ಪಂದದಲ್ಲಿ ಹಗರಣ ಆರೋಪ! ರಾಹುಲ್ ಗಾಂಧಿಗೆ ಪತ್ರ ಬರೆದ ಅನಿಲ್ ಅಂಬಾನಿ! ಪಟ್ಟಭದ್ರ ಹಿತಾಸಕ್ತಿಗಳು ರಾಹುಲ್ ದಾರಿ ತಪ್ಪಿಸುತ್ತಿದ್ದಾರೆ! ರಾಹುಲ್ ಆರೋಪದಿಂದ ನೋವಾಗಿದೆ ಎಂದ ಅನಿಲ್! ರಾಹುಲ್ ಆರೋಪಗಳ ಕುರಿತು ಅನಿಲ್ ಸ್ಪಷ್ಟೀಕರಣ

ಮುಂಬೈ(ಆ.20): ರಫೆಲ್ ಒಪ್ಪಂದದಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ರಿಲಾಯನ್ಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಅನಿಲ್ ಅಂಬಾನಿ ಪತ್ರ ಬರೆದಿದ್ದಾರೆ. 

ಪಟ್ಟಭದ್ರ ಹಿತಾಸಕ್ತಿಗಳು, ಕಾರ್ಪೊರೇಟ್ ವಿರೋಧಿಗಳು ರಫೆಲ್ ಜೆಟ್ ಖರೀದಿ ಹಗರಣದ ಬಗ್ಗೆ ಕಾಂಗ್ರೆಸ್ ಪಕ್ಷವನ್ನು ದಾರಿ ತಪ್ಪಿಸಿದ್ದಾರೆ ಎಂದು ಅನಿಲ್ ಈ ಪತ್ರದಲ್ಲಿ ತಿಳಿಸಿದ್ದಾರೆ. ರಫೆಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಮುಂದುವರೆದ ವೈಯಕ್ತಿಕ ವಾಗ್ದಾಳಿಗಳಿಂದ ನೋವಾಗಿದೆ ಎಂದೂ ರಾಹುಲ್ ಗಾಂಧಿಗೆ ಬರೆದಿರುವ ಪತ್ರದಲ್ಲಿ ಅಂಬಾನಿ ಹೇಳಿದ್ದಾರೆ. 

ತಪ್ಪು ಮಾಹಿತಿ ಪಡೆದು ರಾಹುಲ್ ಗಾಂಧಿ ವೈಯಕ್ತಿಕ ವಾಗ್ದಾಳಿ ನಡೆಸಿರುವುದು ದುರದೃಷ್ಟಕರ. ಇದರಿಂದಾಗಿ ನೋವಾಗಿದೆ ಎಂದು ಅನಿಲ್ ಅಂಬಾನಿ ಪತ್ರದಲ್ಲಿ ಬರೆದಿದ್ದಾರೆ ಎನ್ನಲಾಗಿದೆ. 

ರಫ್ತು ಹಾಗೂ ಕೆಲಸದ ಹಂಚಿಕೆಯಲ್ಲಿ ರಿಲಾಯನ್ಸ್ ಸಂಸ್ಥೆಯ ಪಾತ್ರದ ಬಗ್ಗೆ ಸ್ಪಷ್ಟನೆ ನೀಡಿರುವ ಅಂಬಾನಿ, ರಫೆಲ್ ಫೈಟರ್ ಜೆಟ್ ಗಳನ್ನು ರಿಲಾಯನ್ಸ್ ಅಥವಾ ಡಸ್ಸಾಲ್ಟ್ ರಿಲಯನ್ಸ್ ಜಾಯಿಂಟ್ ವೆಂಚರ್ ನಲ್ಲಿ ಉತ್ಪಾದನೆ ಮಾಡಲಾಗುತ್ತಿಲ್ಲ ಎಂದು ಹೇಳಿದ್ದಾರೆ. 

ಫ್ರೆಂಚ್ ನ 36 ರಾಫೆಲ್ ಜೆಟ್ ಗಳನ್ನು ಖರೀದಿಸುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅಧಿಕೃತ ಘೋಷಣೆ ಮಾಡುವುದಕ್ಕೂ ಕೇವಲ 10 ದಿನಗಳ ಮುಂಚೆ ರಿಲಾಯನ್ಸ್ ಡಿಫೆನ್ಸ್ ಸಂಸ್ಥೆ ಅಸ್ಥಿತ್ವಕ್ಕೆ ಬಂದಿತ್ತು ಎಂಬ ರಾಹುಲ್ ಗಾಂಧಿ ಅವರ ಆರೋಪವನ್ನೂ ಅನಿಲ್ ತಳ್ಳಿಹಾಕಿದ್ದಾರೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಈ ರಾಶಿ ಜನರು ಹೊಸ ವರ್ಷ 2026 ರಲ್ಲಿ ಲಕ್ಷಾಧಿಪತಿಗಳಾಗುತ್ತಾರೆ, ಬಂಪರ್ ಯಶಸ್ಸು, ಸಂತೋಷ ಮತ್ತು ಸಮೃದ್ಧಿ
2026 ರಲ್ಲಿ ಮೇಷ ರಾಶಿಯವರ ಆರ್ಥಿಕ ಸ್ಥಿತಿ ಹೇಗಿರುತ್ತದೆ? AI ಪ್ರಕಾರ ಲಾಭನಾ ಅಥವಾ ನಷ್ಟನಾ?