ಗುಜರಾತ್ ಏರ್ ಪೋರ್ಟ್ ಕಾಮಗಾರಿ ಅನಿಲ್ ಅಂಬಾನಿ ಕಂಪನಿಗೆ!

Published : Mar 06, 2019, 06:38 PM IST
ಗುಜರಾತ್ ಏರ್ ಪೋರ್ಟ್ ಕಾಮಗಾರಿ ಅನಿಲ್ ಅಂಬಾನಿ ಕಂಪನಿಗೆ!

ಸಾರಾಂಶ

ಎರಿಕ್ಸನ್ ಕಂಪನಿಗೆ 550 ಕೋಟಿ ರೂ. ಸಾಲ ನೀಡಬೇಕಾದ ಅನಿಲ್ ಅಂಬಾನಿ| ಗುಜರಾತ್ ನ ರಾಜಕೋಟ್ ಬಳಿ ಇರುವ ಹಿರಾಸರ್ ವಿಮಾನ ನಿಲ್ದಾಣದ ಕಾಮಗಾರಿ ಅನಿಲ್ ಪಾಲಿಗೆ| ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಜೊತೆ ಒಪ್ಪಂದ| ಒಟ್ಟು 648 ಕೋಟಿ ರೂ. ವೆಚ್ಛದ ಹಿರಾಸರ್ ವಿಮಾನ ನಿಲ್ದಾಣದ ಕಾಮಗಾರಿ| 30 ತಿಂಗಳಲ್ಲಿ ಹಿರಾಸರ್ ವಿಮಾನ ನಿಲ್ದಾಣವನ್ನು ಪೂರ್ಣಗೊಳಿಸುವ ಜವಾಬ್ದಾರಿ|

ಗಾಂಧಿನಗರ(ಮಾ.06): ಎರಿಕ್ಸನ್ ಕಂಪನಿಗೆ ನಾಲ್ಕು ವಾರಗಳಲ್ಲಿ 550 ಕೋಟಿ ರೂ. ಸಾಲ ನೀಡಬೇಕಾದ ಅನಿವಾರ್ಯತೆಗೆ ರಿಲಯನ್ಸ್ ಕಮ್ಯುನಿಕೇಶನ್ಸ್ ಮುಖ್ಯಸ್ಥ ಅನಿಲ್ ಅಂಬಾನಿ ಸಿಲುಕಿದ್ದಾರೆ.

ಈ ಮಧ್ಯೆ ಗುಜರಾತ್ ನ ರಾಜಕೋಟ್ ಬಳಿ ಇರುವ ಹಿರಾಸರ್ ವಿಮಾನ ನಿಲ್ದಾಣದ ಕಾಮಗಾರಿ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಪಾಲಿಗೆ ದೊರೆತಿದೆ.

ಒಟ್ಟು 648 ಕೋಟಿ ರೂ. ವೆಚ್ಛದ ಹಿರಾಸರ್ ವಿಮಾನ ನಿಲ್ದಾಣದ ಕಾಮಗಾರಿಯನ್ನು ಅಂಬಾನಿ ಒಡೆತನದ ಕಂಪನಿಗೆ ನೀಡಲಾಗಿದೆ. ಈ ಕುರಿತು ಕಂಪನಿ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದೆ.

ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಸೇರಿದಂತೆ 9 ಇತರ ಕಂಪನಿಗಳು ಬಿಡ್ಡಿಂಗ್ ನಲ್ಲಿ ಪಾಲ್ಗೊಂಡಿದ್ದು, ಕಡೆಗೆ ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಜೊತೆ ಅಂತಿಮ ಒಪ್ಪಂದ ಮಾಡಿಕೊಳ್ಳಲಾಗಿದೆ.

ರಾಜಕೋಟ್ ವಿಮಾನ ನಿಲ್ದಾಣದಿಂದ ಸುಮಾರು 36 ಕಿ.ಮೀ ದೂರದಲ್ಲಿರುವ ಈ ವಿಮಾನ ನಿಲ್ದಾಣಕ್ಕೆ ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿ ಸಂಪರ್ಕವಿದೆ.  

30 ತಿಂಗಳಲ್ಲಿ ಹಿರಾಸರ್ ವಿಮಾನ ನಿಲ್ದಾಣವನ್ನು ಪೂರ್ಣಗೊಳಿಸುವ ಜವಾಬ್ದಾರಿ ಇದೀಗ ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಮೇಲಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಇದೇ ಮೊದಲ ಬಾರಿಗೆ ಅತೀ ದುಬಾರಿಯಾದ ಬೆಳ್ಳಿ, ಚಿನ್ನಕ್ಕಿಂತ ವೇಗದಲ್ಲಿ ಸಾಗುತ್ತಿದೆ ಸಿಲ್ವರ್
ಇಂಡಿಗೋ ಅವಾಂತರ: ನಾಲ್ವರು ಫ್ಲೈಟ್ ಆಪರೇಷನ್ ಇನ್ಸ್‌ಪೆಕ್ಟರ್‌ಗಳ ವಜಾ ಮಾಡಿದ ಡಿಜಿಸಿಎ