ವೈದ್ಯಕೀಯ ತುರ್ತು ಪರಿಸ್ಥಿಯಲ್ಲಿ ಏನ್ಮಾಡಬೇಕು?

Published : Mar 06, 2019, 02:11 PM ISTUpdated : Mar 06, 2019, 02:12 PM IST
ವೈದ್ಯಕೀಯ ತುರ್ತು ಪರಿಸ್ಥಿಯಲ್ಲಿ ಏನ್ಮಾಡಬೇಕು?

ಸಾರಾಂಶ

ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಏನ್ಮಾಡಬೇಕು ಎಂಬ ಅರಿವು ಇಲ್ಲದೇ ಹೋದರೆ, ಪರಿಸ್ಥಿತಿ ಇನ್ನೂ ಗಂಭೀರವಾಗುತ್ತದೆ.  ಅಂತಹ ಕ್ಲಿಷ್ಟಕರ ಸನ್ನಿವೇಶವನ್ನು ಹೇಗೆ ನಿರ್ವಹಿಸಬೇಕು? ಯಾವ್ಯಾವ ವಿಷಯಗಳನ್ನು ಗಮನದಲ್ಲಿಡಬೇಕು? ಇಲ್ಲಿದೆ ಕೆಲವು ಉಪಯುಕ್ತ ಮಾಹಿತಿ.

ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಏನ್ಮಾಡಬೇಕು ಎಂಬ ಅರಿವು ಇಲ್ಲದೇ ಹೋದರೆ, ಪರಿಸ್ಥಿತಿ ಇನ್ನೂ ಗಂಭೀರವಾಗುತ್ತದೆ. ಅಂತಹ ಕ್ಲಿಷ್ಟಕರ ಸನ್ನಿವೇಶವನ್ನು ಹೇಗೆ ನಿರ್ವಹಿಸಬೇಕು? ಯಾವ್ಯಾವ ವಿಷಯಗಳನ್ನು ಗಮನದಲ್ಲಿಡಬೇಕು? ಇಲ್ಲಿದೆ ಕೆಲವು ಉಪಯುಕ್ತ ಮಾಹಿತಿ.

  • ತುರ್ತು ಪರಿಸ್ಥಿತಿಯಲ್ಲಿ ಸಂಪರ್ಕಿಸಬೇಕಾದವರ  ಮಾಹಿತಿಯು ಸದಾ ನಿಮ್ಮ ಬಳಿ  ಇರಬೇಕು.  ಒಂದೋ ಫೋನ್‌ನಲ್ಲಿ ಸ್ಪೀಡ್ ಡಯಲ್ ರೂಪದಲ್ಲೋ ಅಥವಾ ಪಾಕೆಟ್‌ನಲ್ಲಿ ಚೀಟಿ ಬರೆದಿಟ್ಟಿರಬೇಕು.  ತುರ್ತು ಸಂದರ್ಭದಲ್ಲಿ ನೀವು ಅಥವಾ ಇತರರು ಇದನ್ನು ಬಳಸಲು ಅನುಕೂಲವಾಗುತ್ತದೆ.
  • ಮೊಬೈಲ್ ಫೋನ್ ಇಂದು ಜೀವನದ ಅವಿಭಾಜ್ಯ ಅಂಗವಾಗಿದೆ. ಸ್ಮಾರ್ಟ್‌ಫೋನ್ ಬಳಕೆದಾರರು ತುರ್ತು ಸಂದರ್ಭಗಳಲ್ಲಿ  ಬಳಸಬಹುದಾದ ಆ್ಯಪ್‌ಗಳನ್ನು ಇನ್ಸ್ಟಾಲ್ ಮಾಡಿಟ್ಟರೆ ಒಳ್ಳೆಯದು. ಕೆಲವು ಆ್ಯಪ್‌ಗಳು ಪೊಲೀಸ್, ಆಸ್ಪತ್ರೆಗಳಂತಹ ತುರ್ತು ಸೇವೆಗಳಿಗೆ ಸಂಪರ್ಕ ಕಲ್ಪಿಸುತ್ತದೆ.  ಆ್ಯಪ್‌ಗಳ ಮೂಲಕ ಸಂಬಂಧಪಟ್ಟವರನ್ನು ಅಲರ್ಟ್ ಮಾಡಬಹುದು, ಅಷ್ಟೇ ತ್ವರಿತವಾಗಿ ಪ್ರತಿಕ್ರಿಯೆಯನ್ನು ನಿರೀಕ್ಷಿಸಬಹುದು.
  • ಮುಖ್ಯವಾಗಿ, ನಿಮ್ಮ ಹೆಸರಿನಲ್ಲಿ ಕ್ಯಾಶ್‌ಲೆಸ್ ಆರೋಗ್ಯ ವಿಮೆ ಇರಲಿ.  ತುರ್ತು ಸಂದರ್ಭಗಳಲ್ಲಿ ಬಿಲ್ ಪಾವತಿ, ನಗದು ಹಣ ವ್ಯವಸ್ಥೆ ಮಾಡುವ ರಗಳೆಗಳಿಂದ ಮುಕ್ತಿಹೊಂದಬಹುದು.

 

ಭಾರತದಲ್ಲಿ Max Bupa ಆರೋಗ್ಯ ವಿಮೆ ಉತ್ತಮ ಸೇವೆ ಹಾಗೂ ಸೌಲಭ್ಯಗಳನ್ನು ಒದಗಿಸುತ್ತಿದೆ. ಬಿಲ್‌ಗಳ ಬಗ್ಗೆ ಚಿಂತಿಸದೇ ಉತ್ತಮ ಆರೋಗ್ಯ ಸೇವೆಗಳನ್ನು ಪಡೆಯುವಲ್ಲಿ Max Bupa ಸಹಕಾರಿಯಾಗಿದೆ.  ವಿಮಾದಾರರಿಗೆ ಅನುಕೂಲವಾಗುವಂತೆ ಕೇವಲ 30 ನಿಮಿಷಗಳಲ್ಲಿ ಕ್ಯಾಶ್‌ಲೆಸ್ ಕ್ಲೇಮ್ ಪ್ರಕ್ರಿಯೆಗಳನ್ನು  Max Bupa ಪೂರ್ಣಗೊಳಿಸುತ್ತದೆ.

Max Bupa ವಿಶಾಲವಾದ ಆಸ್ಪತ್ರೆಗಳ ಜಾಲವನ್ನು ಹೊಂದಿದೆ. 4500 ಕ್ಕಿಂತಲೂ ಹೆಚ್ಚು ಆಸ್ಪತ್ರೆಗಳು ನೇರವಾಗಿ Max Bupa ಸಂಪರ್ಕದಲ್ಲಿವೆ.  ಜೊತೆಗೆ, ವಿಮಾದಾರರ ಅನುಕೂಲಕ್ಕಾಗಿ, 24/7  ಗಂಟೆ ಕಾರ್ಯನಿರ್ವಹಿಸುವ ಹೆಲ್ಪ್ ಲೈನ್, ಮೊಬೈಲ್ ಆ್ಯಪನ್ನು ಕೂಡಾ Max Bupa ಹೊಂದಿದೆ.   ಆ ಮೂಲಕ, ಎಲ್ಲಿದ್ದರೂ, ಯಾವಾಗ ಬೇಕಾದರೂ ಅಗತ್ಯ ನೆರವನ್ನು ಪಡೆಯಬಹುದು.

ನೀವು ಕ್ಯಾಶ್ ಲೆಸ್ ವಿಮೆಯನ್ನು ಖರೀದಿಸಿದ ಬಳಿಕ, Max Bupa ದಲ್ಲಿ ನಿಮಗೆ ಆಸ್ಪತ್ರೆ ದಾಖಲಾಗುವ ಮುಂಚೆ, ದಾಖಲಾದ ನಂತರದ ಕವರೇಜ್ ಸಿಗುತ್ತದೆ.  Max Bupa ಯಾವುದೇ ಥರ್ಡ್ ಪಾರ್ಟಿ ಸಂಸ್ಥೆಗಳನ್ನು ಬಳಸದೇ, ನೇರವಾಗಿ ಕ್ಲೇಮ್‌ಗಳನ್ನು ಸೆಟಲ್ ಮಾಡುವುದರಿಂದ ನಿಮ್ಮ ಕೆಲಸ ಬಹಳ ಬೇಗ ಮುಗಿಯುತ್ತದೆ.

Max Bupa ವಿಮಾ ಕಂಪನಿಯು 2018 ಸಾಲಿನ ಪ್ರತಿಷ್ಠಿತ GoActive ಪ್ರಶಸ್ತಿಗೂ ಭಾಜನವಾಗಿದೆ. ಹಾಗಾದರೆ, ತುರ್ತು ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಬೇಕಾದರೆ, ನೀವು ಕಷ್ಟಪಟ್ಟು ದುಡಿದು ಮಾಡಿರುವ ‘ಉಳಿತಾಯ’ಕ್ಕೆ ಯಾವುದೇ ಧಕ್ಕೆಯುಂಟಾಗದೇ ಇರಬೇಕಾದರೆ,  ನೀವು ಇಂದೇ ಆರೋಗ್ಯ ವಿಮೆ ಪಡೆದುಕೊಳ್ಳಿ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಇದೇ ಮೊದಲ ಬಾರಿಗೆ ಅತೀ ದುಬಾರಿಯಾದ ಬೆಳ್ಳಿ, ಚಿನ್ನಕ್ಕಿಂತ ವೇಗದಲ್ಲಿ ಸಾಗುತ್ತಿದೆ ಸಿಲ್ವರ್
ಇಂಡಿಗೋ ಅವಾಂತರ: ನಾಲ್ವರು ಫ್ಲೈಟ್ ಆಪರೇಷನ್ ಇನ್ಸ್‌ಪೆಕ್ಟರ್‌ಗಳ ವಜಾ ಮಾಡಿದ ಡಿಜಿಸಿಎ