
ಬೀಜಿಂಗ್(ಮಾ.06): ಜಗತ್ತಿನ ಅತ್ಯಂತ ವೇಗದ ಆರ್ಥಿಕ ಬೆಳವಣಿಗೆ ಹೊಂದುತ್ತಿರುವ ರಾಷ್ಟ್ರ ಎಂದು ಬೀಗುತ್ತಿದ್ದ ಚೀನಾ, ಇದೀಗ ಆರ್ಥಿಕ ಹಿನ್ನಡೆ ಅನುಭವಿಸುತ್ತಿದೆ.
ಚೀನಾ ಈ ವರ್ಷ ತನ್ನ ಆರ್ಥಿಕ ಬೆಳವಣಿಗೆಯ ಅಂದಾಜು ಗುರಿಯನ್ನು ಶೇ.6.5ರಿಂದ ಶೇ.6ಕ್ಕೆ ಇಳಿಸಿದೆ. ಆರ್ಥಿಕ ಬೆಳವಣಿಗೆಯ ಮಂದಗತಿಯೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ.
ಅಮೆರಿಕದ ಜೊತೆಗಿನ ವಾಣಿಜ್ಯ ಸಮರದ ಪರಿಣಾಮ ಚೀನಾದ ಆರ್ಥಿಕ ಬೆಳವಣಿಗೆ ಕುಂಠಿತವಾಗಿದ್ದು, ಜಿಡಿಪಿ ಬೆಳವಣಿಗೆಯ ಅಂದಾಜು ಗುರಿಯನ್ನು ಸರ್ಕಾರ ಕಡಿತಗೊಳಿಸಿದೆ.
ಕಳೆದ ವರ್ಷ ಚೀನಾ ಶೇ.6.6ರ ಜಿಡಿಪಿ ದಾಖಲಿಸಿತ್ತು. ಕಳೆದ ಮೂರು ದಶಕಗಳಲ್ಲಿಯೇ ಇದು ಕನಿಷ್ಠ ಮಟ್ಟದ ದಾಖಲೆಯಾಗಿದೆ. ಚೀನಾದ ಆರ್ಥಿಕ ಬೆಳವಣಿಗೆ ಕುಂಠಿತವಾಗಿರುವುದು ಮತ್ತು ಅದನ್ನು ಸರಿದೂಗಿಸಲು ಜಿಡಿಪಿ ಗುರಿಯನ್ನೇ ಕಡಿಮೆ ಮಾಡಿರುವುದು ನಗೆಪಾಟಲಿಗೆ ಗುರಿಯಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.