ಪಾದಯಾತ್ರೆ ನಡುವೆ ಮಹಿಳೆ ಕೊಟ್ಟ 101 ರೂ ಕಾಣಿಕೆ ಸ್ವೀಕರಿಸಿದ ಅನಂತ್ ಅಂಬಾನಿ

ಶ್ರೀಮಂತ ಉದ್ಯಮಿ ಅನಂತ್ ಅಂಬಾನಿ ಪಾದಯಾತ್ರೆ ಮೂಲಕ ದ್ವಾರಕ ಶ್ರೀಕೃಷ್ಣನ ದರ್ಶನಕ್ಕೆ ತೆರಳಿದ್ದಾರೆ. ಈ ವೇಳೆ ದಾರಿ ನಡುವೆ ಸ್ಥಳೀಯರು ಅದ್ಧೂರಿ ಸ್ವಾಗತ ಕೋರುತ್ತಿದ್ದಾರೆ. ದೇವಸ್ಥಾನಕ್ಕೆ ತೆರಳುತ್ತಿರುವ ಅನಂತ್ ಅಂಬಾನಿಗೆ ಮಹಿಳೆಯೊಬ್ಬರು 101 ರೂಪಾಯಿ ಕಾಣಿಕೆ ನೀಡಿದ್ದಾರೆ. ಕೋಟಾಧ್ಯೀಶ್ವರ ಅನಂತ್ ಅಂಬಾನಿ ಅಷ್ಟೇ ಪ್ರೀತಿಯಿಂದ ಸ್ವೀಕರಿಸಿದ ನಡೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.


ಜಾಮ್‌ನಗರ(ಏ.05) ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ದ್ವಾರಕ ಶ್ರೀಕೃಷ್ಣನ ದರ್ಶನಕ್ಕೆ ಪಾದಯಾತ್ರೆ ಮೂಲಕ ತೆರಳುತ್ತಿದ್ದಾರೆ. ಎಪ್ರಿಲ್ 10 ರಂದು ಅನಂತ್ ಅಂಬಾನಿ 30ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಬಾರಿಯ ಹುಟ್ಟುಹಬ್ಬವನ್ನು ದ್ವಾರಕಾ ಶ್ರೀಕೃಷ್ಣನ ದರ್ಶನದ ಮೂಲಕ ಆಚರಿಸಲು ಜಾಮ್‌ನಗರದಿಂದ ಪಾದಯಾತ್ರೆ ಮೂಲಕ ತೆರಳುತ್ತಿದ್ದಾರೆ. ಅನಂತ್ ಅಂಬಾನಿ ಸಾಗುವ ಮಾರ್ಗದಲ್ಲಿ ಸ್ಥಳೀಯರು ಆತ್ಮೀಯ ಸ್ವಾಗತ ಕೋರುತ್ತಿದ್ದಾರೆ. ಇದೇ ವೇಳೆ ಪೋಷಕರು ತಮ್ಮ ತಮ್ಮ ಪುಟ್ಟ ಮಗುವಿಗೆ ಶ್ರೀಕೃಷ್ಣನ ವೇಷ ತೊಡಿಸಿ ಅನಂತ್ ಅಂಬಾನಿಯ ಸ್ವಾಗತಿಸಿದ್ದಾರೆ. ಈ ಮಗುವನ್ನು ಎತ್ತಿಕೊಂಡು ಮುದ್ದಾಡಿದ ಅನಂತ್ ಅಂಬಾನಿಗೆ ಮಹಿಳೆ 101 ರೂಪಾಯಿ ಕಾಣಿಕೆ ನೀಡಿದ್ದಾರೆ.

ಕಾಣಿಕೆ ಸ್ವೀಕರಿಸಿದ ಅನಂತ್ ಅಂಬಾನಿ
ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಆಸ್ತಿ, ಆದಾಯದ ಲೆಕ್ಕ ಬಿಡಿಸಿ ಹೇಳಬೇಕಾಗಿಲ್ಲ. ಪ್ರತಿ ದಿನ ಲಕ್ಷ ಲಕ್ಷ ಕೋಟಿ ರೂಪಾಯಿಗಳಲ್ಲಿ ವ್ಯವಹಾರಗಳು ನಡೆಯುತ್ತೆದ. ಆದರೆ ಅನಂತ್ ಅಂಬಾನಿಗೆ ಶ್ರೀಮಂತಿಕೆಯ ಅಹಂ ಇಲ್ಲ. ಎಲ್ಲರ ಜೊತೆಗೂ ಬೆರೆಯುತ್ತಾರೆ. ಯಾರೇ ಆದರೂ ಸರಿ ಹಿರಿಯರ ಆಶೀರ್ವಾದ ಪಡೆಯುತ್ತಾರೆ. ಇದಕ್ಕೆ ಮತ್ತೊಂದು ಉದಾಹರಣೆ ಪಾದಯಾತ್ರೆಯಲ್ಲಿ ಸಿಕ್ಕಿದೆ. ಅನಂತ್ ಅಂಬಾನಿ ನಡೆದುಕೊಂಡು ಬರುತ್ತಿದ್ದ ದಾರಿಯಲ್ಲಿ ಸ್ಥಳೀಯರು ಶ್ರೀಕೃಷ್ಣ ಭಜನೆಯೊಂದಿಗೆ ಅನಂತ್ ಅಂಬಾನಿ ಸ್ವಾಗತಿಸಿದ್ದಾರೆ.

Latest Videos

ಪಾದಯಾತ್ರೆ ಮೂಲಕ ದ್ವಾರಕಾಗೆ ಅನಂತ್ ಅಂಬಾನಿ, ಹುಟ್ಟುಹಬ್ಬಕ್ಕೆ ಶ್ರೀಕೃಷ್ಣನ ದರ್ಶನ

ಅವರನ್ನು ಬೀಳ್ಕೊಟ್ಟು ಅನಂತ್ ಅಂಬಾನಿ ತೆರಳುತ್ತಿದ್ದಂತೆ ಮಗುವಿನ ತಾಯಿಯೊಬ್ಬರು 101 ರೂಪಾಯಿ ಕಾಣಿಕೆಯನ್ನು ಅನಂತ್ ಅಂಬಾನಿ ಕೈಗೆ ನೀಡಿದ್ದಾರೆ. ಅನಂತ್ ಅಂಬಾನಿ ಅಷ್ಟೇ ಪ್ರೀತಿ ಹಾಗೂ ಗೌರವದಿಂದ ಈ ಹಣ ಸ್ವೀಕರಿಸಿ ತಮ್ಮ ಸಿಬ್ಬಂದಿಗಳ ಕೈಗೆ ಕೊಟ್ಟಿದ್ದಾರೆ. ಇಲ್ಲಿ ಶ್ರೀಮಂತಿಕೆಯ ಪ್ರಶ್ನೆ ಅಲ್ಲ. ಇದು ಸಂಪ್ರದಾಯ ಹಾಗೂ ಪದ್ಧತಿ. ದೇವಸ್ಥಾನಕ್ಕೆ ತೆರಳುವಾಗ ತಮ್ಮ ಕಾಣಿಕೆಯನ್ನು ಹಾಕಲು ಸಾಮಾನ್ಯವಾಗಿ ಮಂದಿರಕ್ಕೆ ತೆರಳು ವ್ಯಕ್ತಿಗಳ ಕೈಗೆ ನೀಡುತ್ತಾರೆ. ಇನ್ನು ಕಾಶಿ,ಅಮರನಾಥ ಸೇರಿದಂತೆ ದೂರದ ಯಾತ್ರಾಸ್ಥಳಗಳಿಗೆ ತೆರಳುವಾಗ ಸ್ಥಳೀಯರು, ನೆರೆಮನೆಯವರು ಒಂದಿಷ್ಟು ಹಣ ನೀಡುತ್ತಾರೆ. ಶತ ಶತಮಾನಗಳ ಕಾಲದಿಂದಲೂ ಭಾರತದಲ್ಲಿ ನಡೆದುಕೊಂಡು ಬಂದಿದೆ. ಇದರಂತೆ ಇಲ್ಲಿ ಮಹಿಳೆಯೊಬ್ಬರು ಕಾಣಿಕೆ ನೀಡಿದ್ದಾರೆ. ಅನಂತ್ ಅಂಬಾನಿ ಈ ಸಂಪ್ರದಾಯದಂತೆ ಅತ್ಯಂತ ಗೌರವದಿಂದ ಹಣ ಸ್ವೀಕರಿಸಿ ಮಹಿಳೆಗೆ ಕೈಮುಗಿದು ನಮಸ್ಕರಿಸಿದ್ದಾರೆ.

 

 

ಮದುವೆಯಲ್ಲೂ ಮುಯ್ಯಿ ಸ್ವೀಕರಿಸಿದ್ದ ಅನಂತ್ ಅಂಬಾನಿ
ಅನಂತ್ ಅಂಬಾನಿಯ ಅದ್ಧೂರಿ ಮದುವೆ ವಿಶ್ವದಲ್ಲೇ ಸದ್ದು ಮಾಡಿತ್ತು. ವಿಶ್ವದ ಎಲ್ಲಾ ದಿಗ್ಗಜರು, ಶ್ರೀಮಂತರು ಈ ಮದುವೆಯಲ್ಲಿ ಪಾಲ್ಗೊಂಡಿದ್ದರು. ಅನಂತ್ ಅಂಬಾನಿಯ ಈ ಮದುವೆಗೆ ಸಾಮಾನ್ಯರನ್ನೂ ಆಹ್ವಾನಿಸಲಾಗಿತ್ತು. ಈ ವೇಳೆ ಮಹಿಳೆಯೊಬ್ಬರು ಅನಂತ್ ಅಂಬಾನಿಗೆ ಮದುವೆಗೆ ಆಗಮಿಸಿ ಮುಯ್ಯಿ ನೀಡಿದ್ದರು. ಈ ವೇಳೆ ಅನಂತ್ ಅಂಬಾನಿ ಪ್ರೀತಿಯಿಂದ ಈ ಮುಯ್ಯಿ ಸ್ವೀಕರಿಸಿದ್ದರು. ಈ ಮೂಲಕ ಸರಳತೆಯನ್ನು ಮೆರೆದಿದ್ದರು.

ಪಾದಯಾತ್ರೆಯಲ್ಲಿ ಬಾಲ ಕೃಷ್ಣನ ಕಂಡ ಪುಳಕಿತರಾದ ಅಂಬಾನಿ
ಅನಂತ್ ಅಂಬಾನಿ ತಮ್ಮ ಪೂರ್ವಜರಿದ್ದ ಜಾಮ್‌ನಗರದಿಂದ ದ್ವಾರಕಾಗೆ ಪಾದಯಾತ್ರೆ ಮೂಲಕ ತೆರಳುತ್ತಿದ್ದಾರೆ. ದ್ವಾರಕ ಶ್ರೀಕೃಷ್ಣನ ದರ್ಶನ ಮಾಡಲು ಜೊತೆಗೆ ಹುಟ್ಟು ಹಬ್ಬ ಆಚರಿಸಲು ಅನಂತ್ ಅಂಬಾನಿ ಪಾದಯಾತ್ರೆ ಮಾಡುತ್ತಿದ್ದಾರೆ. ಸರಿಸುಮಾರು 150 ಕಿಲೋಮೀಟರ್ ಪಾದಯಾತ್ರೆ ಏಪ್ರಿಲ್ 8ಕ್ಕೆ ದ್ವಾರಕ ತಲುಪಲಿದೆ. ಎಪ್ರಿಲ್ 10 ರಂದು ದ್ವಾರಕೇಶ್ವರ ಮಂದಿರದಲ್ಲಿ ಅನಂತ್ ಅಂಬಾನಿ ಶ್ರೀಕೃಷ್ಣನ ದರ್ಶನ ಪಡೆಯಲಿದ್ದಾರೆ. ದಾರಿಯಲ್ಲಿ ಅನಂತ್ ಅಂಬಾನಿ ಬಾಲ ಕೃಷ್ಣನ ಕಂಡು ಪುಳಕಿತರಾಗಿದ್ದಾರೆ. ಪೋಷಕರು ತಮ್ಮ ಮುದ್ದು ಕಂದನಿಗೆ ಶ್ರೀಕೃಷ್ಣನ ವೇಷ ತೊಡಿಸಿ ಸ್ವಾಗಸಿದ್ದಾರೆ. ಬಾಲ ಕೃಷ್ಣನ ಎತ್ತಿಕೊಂಡು ಅನಂತ್ ಅಂಬಾನಿ ಮುದ್ದಾಡಿದ್ದಾರೆ. 

ಮುಕೇಶ್-ನೀತಾ ಅಂಬಾನಿ 40ನೇ ವಿವಾಹ ವಾರ್ಷಿಕೋತ್ಸವದಲ್ಲಿ ಗಮನ ಸೆಳೆದ ಕೇಕ್! ಅಂತಹದ್ದೇನಿದೆ?
 

click me!