
ನವದೆಹಲಿ(ಸೆ.20): ಬಿಹಾರದಲ್ಲಿ ಸ್ವಂತ ಪರಿಶ್ರಮದಿಂದ 3 ಕಿ.ಮೀ. ಉದ್ದದ ಕಾಲುವೆ ನಿರ್ಮಿಸಿದ ರೈತನಿಗೆ ಮಹೀಂದ್ರಾ ಗ್ರೂಪ್‌ನ ಮುಖ್ಯಸ್ಥ ಆನಂದ್ ಮಹೀಂದ್ರಾ ಅವರು ಟ್ರಾಕ್ಟರ್‌ವೊಂದನ್ನು ಉಡುಗೊರೆ ನೀಡುವುದಾಗಿ ತಿಳಿಸಿದ್ದಾರೆ.
ಬಿಹಾರದ ಗಯಾ ಜಿಲ್ಲೆಯ ಲಹ್ತುವಾ ಪ್ರದೇಶದ ಕೋಠಿಲಾವಾ ಎಂಬ ಗ್ರಾಮಕ್ಕೆ ಸಮೀಪದ ಗುಡ್ಡವೊಂದರಿಂದ ನೀರು ಹರಿಸಲು ಲೌಂಗಿ ಬುಹಿಯಾನ್ ಏಕಾಂಗಿಯಾಗಿ 30 ವರ್ಷ ಶ್ರಮಿಸಿ ಕಾಲುವೆ ನಿರ್ಮಿಸಿ ದೇಶದ ಗಮನ ಸೆಳೆದಿದ್ದರು.
ಬಿಹಾರದ ರೈತನ ಈ ಸಾಧನೆ ತಾಜ್ ಮಹಲ್ ಅಥವಾ ಪಿರಾಮಿಡ್ ಸ್ಮಾರಕಗಳಿಗೆ ಸಮ. ನಾವು ಅವರಿಗೆ ಟ್ರಾಕ್ಟರ್‌ವೊಂದನ್ನು ಉಡುಗೊರೆ ನೀಡಲು ಬಯಸುತ್ತೇವೆ. ಒಂದು ವೇಳೆ ಅವರು ಮಹಿಂದ್ರಾ ಟ್ರ್ಯಾಕ್ಟರ್ ಅನ್ನು ಬಳಸಲು ಒಪ್ಪಿದರೆ ಅದು ನಮ್ಮ ಗೌರವ ಎಂಬುದಾಗಿ ಭಾವಿಸುತ್ತೇವೆ ಎಂದು ಆನಂದ್ ಮಹಿಂದ್ರಾ ಟ್ವೀಟ್ ಮಾಡಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.