ಅಮೇಜಾನ್‌ನಲ್ಲಿ ಆರ್ಡರ್ ಮಾಡಿ ಕಾಯಬೇಕಿಲ್ಲ, ಕೇವಲ 10 ನಿಮಿಷಕ್ಕೆ ಡೆಲಿವರಿ ಆರಂಭ

Published : Sep 12, 2025, 12:20 PM IST
Amazon E commerce online shopping

ಸಾರಾಂಶ

ಅಮೇಜಾನ್‌ನಲ್ಲಿ ಆರ್ಡರ್ ಮಾಡಿ ಕಾಯಬೇಕಿಲ್ಲ. ಕೇವಲ 10 ನಿಮಿಷಕ್ಕೆ ಡೆಲಿವರಿ ಆಗಲಿದೆ. ಬೆಂಗಳೂರಿನಲ್ಲಿ ಈ ಸೇವೆಗೆ ಭರ್ಜರಿ ಸ್ಪಂದನೆ ಸಿಕ್ಕಿದೆ. ಇದೀಗ ಇತರ ನಗರಕ್ಕೂ ವಿಸ್ತರಣೆಯಾಗಿದೆ.

ಮುಂಬೈ (ಸೆ.12) ಮನೆಯಲ್ಲೇ ಕುಳಿತು ವಸ್ತುಗಳ ಖರೀದಿಸುವ ಟ್ರೆಂಡ್ ಹೆಚ್ಚು. ಸುಲಭಾಗಿ ಒಂದೇ ಕ್ಲಿಕ್‌ನಲ್ಲಿ ಮನೆ ಬಾಗಿಲಿಗೆ ಉತ್ಪನ್ನ ಆಗಮಿಸಲಿದೆ. ಫುಡ್ ಆರ್ಡರ್ ಕೆಲವೇ ಕೆಲವು ಸೆಕಂಡ್‌ಗಲ್ಲಿ ಡೆಲಿವರಿ ಆಗಲಿದೆ. ವಿಶೇಷ ಅಂದರೆ ಇದೀಗ ಅಮೇಜಾನ್ ಕೂಡ ಕೇವಲ 10 ನಿಮಿಷಕ್ಕೆ ಡೆಲಿವರಿ ಮಾಡುತ್ತಿದೆ. ಆರ್ಡರ್ ಬುಕ್ ಮಾಡಿದ ಹತ್ತೇ ನಿಮಿಷಕ್ಕೆ ಡೆಲಿವರಿ ಆಗಲಿದೆ. ಹೀಗಾಗಿ ಅಮೇಜಾನ್ ಗ್ರಾಹಕರು ಉತ್ಪನ್ನ ಬುಕ್ ಮಾಡಿ ಒಂದೆರೆಡು ದಿನ ಕಾಯುವ ಪರಿಸ್ಥಿತಿ ಇಲ್ಲ. ಈ ಸೇವೆಗೆ ಬೆಂಗಳೂರಿನಲ್ಲಿ ಭರ್ಜರಿ ಸ್ಪಂದನೆ ಸಿಕ್ಕಿದೆ. ಹೀಗಾಗಿ ಅಮೇಜಾನ್ 10 ನಿಮಿಷ ಡೆಲಿವರಿ ಇತರ ನಗರಗಳಿಗೆ ವಿಸ್ತರಣೆಯಾಗುತ್ತಿದೆ.

ಬೆಂಗಳೂರು, ದೆಹಲಿಯಲ್ಲಿ 10 ನಿಮಿಷ ಡೆಲಿವರಿಗೆ ಉತ್ತಮ ರೆಸ್ಪಾನ್ಸ್

ಬೆಂಗಳೂರು ಹಾಗೂ ದೆಹಲಿಯಲ್ಲಿ ಅಮೇಜಾನ್ 10 ನಿಮಿಷ ಡೆಲಿವರಿಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಜನರು ಆರ್ಡರ್ ಮಾಡಿದ ತಕ್ಷಣವೇ ಉತ್ಪನ್ನ ಕೈಸೇರುವ ಕಾರಣ ಗ್ರಾಹಕರು ಖುಷಿಯಾಗಿದ್ದಾರೆ. ಇಷ್ಟೇ ಅಲ್ಲ ತುರ್ತಾಗಿ ಉತ್ಪನ್ನ ಬೇಕಿದ್ದವರೂ ಇದೀಗ ಆನ್‌ಲೈ್ ಮೂಲಕ ಖರೀದಿ ಸಾಧ್ಯವಾಗುತ್ತದೆ. ಹಲವರು ಕೊನೆ ಕ್ಷಣದಲ್ಲಿ ಉತ್ಪನ್ನ ಖರೀದಿಸಲು ನಿರ್ಧರಿಸುತ್ತಾರೆ. ಶೀಘ್ರದಲ್ಲೇ ಉತ್ಪನ್ನ ಬೇಕಿರುವ ಕಾರಣ ಆನ್‌ಲೈನ್ ಬಿಟ್ಟು ಶಾಪ್ ಮೂಲಕ ಖರೀದಿಸುತ್ತಿದ್ದರು. ಇದೀಗ ಜನರು ಆಮೇಜಾನ್ ಮೂಲಕ 10 ನಿಮಿಷದಲ್ಲಿ ಡೆಲಿವರಿ ಪಡೆಯುತ್ತಿದ್ದಾರೆ. ಬೆಂಗಳೂರು ಹಾಗೂ ದೆಹಲಿಯಲ್ಲಿರುವ ಈ ಸೇವೆಯನ್ನು ಇದೀಗ ಮುಂಬೈಗೆ ವಿಸ್ತರಿಸಲಾಗಿದೆ.

ಅಮೆಜಾನ್-ಫ್ಲಿಪ್‌ಕಾರ್ಟ್‌ನಿಂದ 37 ಲಕ್ಷ ಜಾಬ್; ಅರ್ಜಿ ಸಲ್ಲಿಸೋದು ಹೇಗೆ?

ಈ ಕುರಿತು ಅಮೇಜಾನ್ ಇಂಡಿಯಾ ಉಪಾಧ್ಯಕ್ಷ ಹಾಗೂ ಮ್ಯಾನೇಜರ್ ಸಮೀರ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಅಮೇಜಾನ್ 10 ನಿಮಿಷ ಡೆಲಿವರಿಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಅಮೇಜಾನ್ ಅಗತ್ಯವಸ್ತುಗಳನ್ನು ಕೇವಲ 10 ನಿಮಿಷದಲ್ಲಿ ಡೆಲಿವರಿ ಮಾಡುತ್ತಿದೆ. ಬೆಂಗಳೂರಿನಲ್ಲಿ ಸಿಕ್ಕಿದ ಸ್ಪಂದನೆಯಿಂದ ಇದೀಗ ಮತ್ತಷ್ಟು ನಗರಗಳಿಗೆ ಈ ಸೇವೆ ವಿಸ್ತರಿಸಲಾಗುತ್ತದೆ. ಗ್ರಾಹಕರು ಅಮೇಜಾನ್ ನೌ ಮೂಲಕ ತ್ವರಿತವಾಗಿ ಅಗತ್ಯವಸ್ತುಗಳ ಖರೀದಿಸಬಹುದು ಎಂದಿದ್ದಾರೆ.

ವ್ಯಾಪಾರದಲ್ಲಿ ಶೇಕಡಾ 25ರಷ್ಟು ಏರಿಕೆ

ತ್ವರಿತ ಡೆಲಿವರಿ ಸೇವೆ ಆರಂಭಿಸಿದ ಬಳಿಕ ಅಮೇಜಾನ್ ವಹಿವಾಟಿನಲ್ಲಿ ಶೇಕಡಾ 25ರಷ್ಟು ಏರಿಕೆ ಕಂಡಿದೆ. ತಿಂಗಳ ವಹಿವಾಟು ಶೇಕಡಾ 25ರಷ್ಟು ಏರಿಕಯಾಗುವ ಮೂಲಕ ಉದ್ಯಮ ತ್ವರಿತಗತಿಯಲ್ಲಿ ಬೆಳವಣಿಗೆ ಕಾಣಲು ಸಹಕಾರಿಯಾಗಿದೆ ಎಂದು ಸಮೀರ್ ಕುಮಾರ್ ಹೇಳಿದ್ದಾರೆ.

ಬೆಂಗಳೂರು, ದೆಹಲಿ ಹಾಗೂ ಮುಂಬೈನಲ್ಲಿ 10 ನಿಮಿಷ ಡೆಲಿವರಿ ಸೇವೆಯನ್ನು ಮತ್ತಷ್ಟು ಪರಿಣಾಕಾರಿಯಾಗಿ ಮಾಡಲಾಗುತ್ತಿದೆ. 100ಕ್ಕೂ ಹೆಚ್ಚು ಕೇಂದ್ರಗಳ ಮೂಲಕ ನಗರದ ಮೂಲೆ ಮೂಲೆಗೆ 10 ನಿಮಿಷದಲ್ಲಿ ಡೆಲಿವರಿ ಮಾಡಲಾಗುತ್ತಿದೆ. ಗ್ರಾಹಕರು ತ್ವರಿತ ಡೆಲವಿರಿ ನಿರೀಕ್ಷಿಸಿದ್ದರು. ಅಗತ್ಯ ವಸ್ತುಗಳ ಡೆಲಿವರಿ 10 ನಿಮಿಷದಲ್ಲಿ ಸಿಗುವ ಕಾರಣ ಜನರು ಇದೀಗ ಅಮೇಜಾನ್ ಮೂಲಕ ವೇಗವಾಗಿ ವಸ್ತುಗಳ ಖರೀದಿಗೆ ಮುಂದಾಗುತ್ತಿದ್ದಾರೆ ಎಂದು ಸಮೀರ್ ಕುಮಾರ್ ಹೇಳಿದ್ದಾರೆ.

ಜಸ್ಟ್‌ 999 ರೂಪಾಯಿಗೆ ಸಿಗ್ತಿದೆ boAt ಇಯರ್‌ಬಡ್ಸ್‌

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ಆರ್‌ಬಿಐ ಮಹತ್ವದ ನಿರ್ಧಾರ, ರೆಪೋ ದರ ಬದಲಾವಣೆಯಿಂದ ಸಾಲದ ಬಡ್ಡಿ ಭಾರಿ ಇಳಿಕೆ