
ಭಾರತದ ಪ್ರಮುಖ ವಾಹನ ತಯಾರಿಕಾ ಸಂಸ್ಥೆ ಟಾಟಾ ಮೋಟಾರ್ಸ್ ಲಿಮಿಟೆಡ್, ಇಟಲಿಯ ಇವೆಕೊ ಗ್ರೂಪ್‌ನ ವಾಣಿಜ್ಯ ವಾಹನ ವ್ಯವಹಾರದ ಸ್ವಾಧೀನಕ್ಕಾಗಿ ಸುಮಾರು $4.5 ಬಿಲಿಯನ್ ಮೌಲ್ಯದ ಬ್ರಿಡ್ಜ್ ಸಾಲವನ್ನು (ಮಧ್ಯಂತರ ಸಾಲ) ವ್ಯವಸ್ಥೆ ಮಾಡುತ್ತಿದೆ. ಈ ವರ್ಷದ ಏಷ್ಯಾದ ಅತಿದೊಡ್ಡ ಒಪ್ಪಂದಗಳಲ್ಲಿ ಇದು ಕೂಡ ಒಂದು ಎನ್ನಲಾಗುತ್ತಿದೆ. ಈ ಸಂಬಂಧ ಒಪ್ಪಂದಗಳೂ ನಡೆದಿದ್ದು, ಸುಮಾರು 39,800 ಕೋಟಿ ರೂಪಾಯಿ ಬೃಹತ್ ಮೊತ್ತದ ಸಾಲಕ್ಕೆ ದಾಖಲೆಗಳನ್ನು ಸಿದ್ದಪಡಿಸಿದೆ ಎಂದು ಬ್ಲೂಂಬರ್ಗ್ ವರದಿ ಮಾಡಿದೆ. ಈ ಸಾಲಕ್ಕೆ ಟಾಟಾ ಸಮೂಹದ ಹೂಡಿಕೆ ಅಂಗಸಂಸ್ಥೆಯಾದ ಟಾಟಾ ಸನ್ಸ್ ಬೆಂಬಲ ಪತ್ರವನ್ನು ಕೂಡ ನೀಡಲಾಗಿದ್ದು, ಮೋರ್ಗನ್ ಸ್ಟಾನ್ಲಿ ಮತ್ತು ಮಿತ್ಸುಬಿಷಿ ಯುಎಫ್‌ಜೆ ಫೈನಾನ್ಷಿಯಲ್ ಗ್ರೂಪ್ (ಎಂಯುಎಫ್‌ಜಿ) ಸಾಲದ ವ್ಯವಸ್ಥೆಯನ್ನು ನೋಡಿಕೊಳ್ಳಲಿದೆ. ಈ ಒಪ್ಪಂದವು ಯುರೋಪಿಯನ್ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್‌ನ ಸ್ಥಾನವನ್ನು ಮತ್ತಷ್ಟು ಭದ್ರಗೊಳಿಸಲು ಸಹಾಯಕವಾಗಲಿದೆ.
ಟಾಟಾ ಮೋಟಾರ್ಸ್ ಪ್ರತಿಕ್ರಿಯೆ ನೀಡದಿದ್ದರೂ, ಸಂಸ್ಥೆನ ಬಗ್ಗೆ ತಿಳಿದವರ ಅಭಿಪ್ರಾಯದಲ್ಲಿ ಇದು ಕಂಪನಿಯ ಜಾಗತಿಕ ವಿಸ್ತರಣೆಗೆ ಮಹತ್ವದ ಹೆಜ್ಜೆ.
ಇವೆಕೊ ಸ್ವಾಧೀನದಿಂದ ಟಾಟಾ ಮೋಟಾರ್ಸ್‌ಗೆ ಯುರೋಪಿನ ವಾಣಿಜ್ಯ ವಾಹನ ಮಾರುಕಟ್ಟೆಯಲ್ಲಿ ಬಲವಾದ ನೆಲೆ ದೊರಕಲಿದೆ. ಸುಮಾರು ಎರಡು ದಶಕಗಳ ಹಿಂದೆ, 2008ರಲ್ಲಿ ಜಾಗ್ವಾರ್ ಲ್ಯಾಂಡ್ ರೋವರ್ ಖರೀದಿಸಿದ ನಂತರ, ಯುರೋಪಿನಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ಗಟ್ಟಿಗೊಳಿಸುವಂತಾಗಿದೆ.
ಬ್ಲೂಮ್‌ಬರ್ಗ್ ವರದಿ ಪ್ರಕಾರ, 2025ರಲ್ಲಿ ಜಪಾನ್ ಹೊರತುಪಡಿಸಿ ಏಷ್ಯಾ–ಪೆಸಿಫಿಕ್ ಪ್ರದೇಶದಲ್ಲಿ M&A ಸಾಲಗಳು 70% ಹೆಚ್ಚಳ ಕಂಡು $31.3 ಶತಕೋಟಿ ತಲುಪಿವೆ. ಟಾಟಾ–ಇವೆಕೊ ಒಪ್ಪಂದವೂ ಈ ಪ್ರವೃತ್ತಿಗೆ ಹೊಸ ಸೇರ್ಪಡೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.