ಐಐಟಿ ಮದ್ರಾಸ್‌ಗೆ 110 ಕೋಟಿ ರೂಪಾಯಿ ಗಿಫ್ಟ್‌ ನೀಡಿದ ಮಾಜಿ ವಿದ್ಯಾರ್ಥಿ!

By Santosh Naik  |  First Published Jan 30, 2024, 7:21 PM IST

ಸುನೀಲ್‌ ವಾಧ್ವಾನಿ ಐಐಟಿ ಮದ್ರಾಸ್‌ಗೆ ನೀಡಿದ ಗಿಫ್ಟ್‌ಅನ್ನು, ಭಾರತದ ಶಿಕ್ಷಣ ಸಂಸ್ಥೆಯೊಂದರಲ್ಲಿ ಶಾಲೆಯನ್ನು ರಚಿಸಲು ಹಳೆಯ ವಿದ್ಯಾರ್ಥಿಯೊಬ್ಬ ನೀಡಿದ ಅತ್ಯಂತ ಗರಿಷ್ಠ ಮೊತ್ತದ ಗಿಫ್ಟ್‌ನಲ್ಲಿ ಒಂದಾಗಿದೆ.
 


ನವದೆಹಲಿ (ಜ.30): ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ (ಐಐಟಿ ಮದ್ರಾಸ್) ಹಳೆಯ ವಿದ್ಯಾರ್ಥಿ ಸುನಿಲ್ ವಾಧ್ವಾನಿ ಅವರು ಜನವರಿ 30 ರಂದು ಕಾಲೇಜಿನಲ್ಲಿ ವಾಧ್ವನಿ ಸ್ಕೂಲ್ ಆಫ್ ಡೇಟಾ ಸೈನ್ಸ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಸ್ಥಾಪಿಸಲು 110 ಕೋಟಿ ರೂಪಾಯಿ ಹಣವನ್ನು ದತ್ತಿಯಾಗಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ದತ್ತಾಂಶ ವಿಜ್ಞಾನ ಮತ್ತುಎಐ ಸಂಬಂಧಿತ ನೀತಿ ಕ್ಷೇತ್ರಗಳ ಕುರಿತು ಸರ್ಕಾರ ಮತ್ತು ನೀತಿ ನಿರೂಪಕರಿಗೆ ಸಲಹೆ ನೀಡುವ ಗುರಿಯನ್ನು ಈ ಸ್ಕೂಲ್‌ ಹೊಂದಿರಲಿದೆ ಎಂದು ಐಐಟಿ ಮದ್ರಾಸ್ ಪ್ರಕಟಣೆಯಲ್ಲಿ ತಿಳಿಸಿದೆ. ವಾಧ್ವಾನಿ ಅವರು ಅಮೆರಿಕ ಮೂಲದ ಐಟಿ ಸೇವಾ ಕಂಪನಿಗಳಾದ ಐಗೇಟ್‌ ಮತ್ತು ಮಾಸ್ಕೆಟ್‌ ಡಿಜಿಟಲ್‌ನ ಸಹ-ಸಂಸ್ಥಾಪಕರೂ ಆಗಿದ್ದಾರೆ. ಭಾರತದ ಶಿಕ್ಷಣ ಸಂಸ್ಥೆಯೊಂದಿಗೆ ಶಾಲೆಯನ್ನು ರಚಿಸಲು ಹಳೆಯ ವಿದ್ಯಾರ್ಥಿಯೊಬ್ಬ ನೀಡಿದ ಗರಿಷ್ಠ ಮೊತ್ತದ ದತ್ತಿ ಕಾಣಿಕೆಗಳಲ್ಲಿ ಇದು ಒಂದಾಗಿದೆ ಎಂದು ತಿಳಿಸಲಾಗಿದೆ.

ಎಐ ಮತ್ತು ಡೇಟಾ ಸೈನ್ಸ್‌ನಲ್ಲಿ ವಿವಿಧ ಪದವಿಪೂರ್ವ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಿಗೆ 2024ರ ಜುಲೈನಿಂದ ಪ್ರವೇಶಗಳು ಪ್ರಾರಂಭವಾಗುತ್ತವೆ. ಶಾಲೆಯು ಯುಕೆ ಬರ್ಮಿಂಗ್ಹ್ಯಾಮ್ ವಿಶ್ವವಿದ್ಯಾಲಯದೊಂದಿಗೆ ಡೇಟಾ ಸೈನ್ಸ್ ಮತ್ತು ಎಐ ನಲ್ಲಿ ಜಂಟಿ ಸ್ನಾತಕೋತ್ತರ ಪದವಿಯನ್ನು ನೀಡಲಿದೆ.

Tap to resize

Latest Videos

undefined

ಐಐಟಿ ಮದ್ರಾಸ್‌ನ ನಿರ್ದೇಶಕ ವಿ.ಕಾಮಕೋಟಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಇಂಡಸ್ಟ್ರಿ 4.0 ಆಗಮನದೊಂದಿಗೆ ದತ್ತಾಂಶ ವಿಜ್ಞಾನ ಮತ್ತು ಎಐಗಾಗಿ ಶಾಲೆಯ ಅಗತ್ಯವು ನಿರ್ಣಾಯಕವಾಗಿದೆ, ಇದರಲ್ಲಿ ಎಐ ಮತ್ತು ಡೇಟಾ ಸೈನ್ಸ್ ಪ್ರಮುಖ ವಿಭಾಗಗಳಾಗಿವೆ. ಐಐಟಿ ಮದ್ರಾಸ್ ಈ ಹೆಚ್ಚು ಅಂತರಶಿಕ್ಷಣ ಶಾಲೆಯನ್ನು ಪ್ರಾರಂಭಿಸಿದೆ, ಇದರಲ್ಲಿ ಅನೇಕ ವಿಭಾಗಗಳ ಅಧ್ಯಾಪಕರು ಜವಾಬ್ದಾರಿಯುತ ಎಐ ಸೇರಿದಂತೆ ಎಐ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಲು ಕೈಜೋಡಿಸಿದ್ದಾರೆ" ಎಂದು ಕಾಮಕೋಟಿ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.

ಉದ್ಯಮದಲ್ಲಿ 9 ಬಾರಿ ಸೋತು ಸುಣ್ಣವಾಗಿ ಖಿನ್ನತೆ ಬಳಿಕ 99 ಸಾವಿರ ಕೋಟಿ ರೂ ಸಾಮ್ರಾಜ್ಯ ಕಟ್ಟಿದ ಭಾರತೀಯ

ಅನ್ವಯಿಕ ಸಂಶೋಧನೆಯ ಮೇಲೆ ಕೇಂದ್ರೀಕರಿಸುವ ಮೀಸಲಾದ ಡೇಟಾ ಸೈನ್ಸ್ ಮತ್ತು ಎಐ ಶಾಲೆಯ ಬಲವಾದ ಅಗತ್ಯದ ಬಗ್ಗೆ ಮೊದಲಿನಿಂದಲೂ ಮಾತನಾಡುತ್ತಲೇ ಬಂದಿರುವ ಸುನೀಲ್‌ ವಾಧ್ವಾನಿ  "ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಪ್ರಗತಿಯೊಂದಿಗೆ, ಭಾರತವು ಅಪಾರ ಸಾಮರ್ಥ್ಯವನ್ನು ಹೊಂದಿದೆ ಮತ್ತು ಎಐ ಮತ್ತು ಸಂಬಂಧಿತ ವಿಜ್ಞಾನಗಳಲ್ಲಿ ಭಾರತವು ವಿಶ್ವ ನಾಯಕನಾಗಬಹುದು" ಎಂದು ಹೇಳಿದ್ದಾರೆ.

Union Budget 2024: ಪಿಎಂ ಕಿಸಾನ್ ಯೋಜನೆ ಸಹಾಯಧನ 9,000ರೂಪಾಯಿಗೆ ಏರಿಕೆ ಸಾಧ್ಯತೆ,ರೈತರಲ್ಲಿ ಹೆಚ್ಚಿದ ನಿರೀಕ್ಷೆ

click me!