Business Idea: ಬಾಯಾರಿದವರಿಗೆ ಜ್ಯೂಸ್ ಕೊಟ್ಟು ಹಣ ಗಳಿಸಿ,

Published : Jan 30, 2024, 03:14 PM IST
Business Idea: ಬಾಯಾರಿದವರಿಗೆ ಜ್ಯೂಸ್ ಕೊಟ್ಟು ಹಣ ಗಳಿಸಿ,

ಸಾರಾಂಶ

ಬ್ಯುಸಿನೆಸ್ ಮಾಡ್ಬೇಕು ಎನ್ನುವ ಆಸೆ ಅನೇಕರಿಗಿದೆ. ಆದ್ರೆ ಯಾವುದು ಎಂಬ ಪ್ರಶ್ನೆ ಕಾಡ್ತಿದೆ. ಕಡಿಮೆ ಹೂಡಿಕೆ ಮಾಡಿ ಹೆಚ್ಚು ಸಂಪಾದನೆ ಮಾಡುವ ಬ್ಯುಸಿನೆಸ್ ನೀವು ಹುಡುಕ್ತಿದ್ದರೆ ಇಲ್ಲೊಂದು ಸೂಪರ್ ಐಡಿಯಾ ಇದೆ.  

ಮನೆಯಲ್ಲಿ ತಯಾರಿಸಿದ ಜ್ಯೂಸ್ ಆಯೋಗ್ಯಕ್ಕೆ ಒಳ್ಳೆಯದು ಅಂತಾ ಹೇಳೋಕೆ ಚೆಂದ. ಆದ್ರೆ ಬಹುತೇಕ ಬಾರಿ ಇದನ್ನು ಪಾಲಿಸೋದು ಕಷ್ಟ. ಕೆಲಸದ ಕಾರಣಕ್ಕೆ ಮನೆಯಿಂದ ಹೊರಗೆ ಇರುವ ಜನರಿಗೆ ಮನೆಯಲ್ಲಿ ತಯಾರಿಸಿ ಜ್ಯೂಸ್ ಕುಡಿಯಲು ಸಾಧ್ಯವಾಗೋದಿಲ್ಲ. ಮಧ್ಯಾಹ್ನದ ಸಮಯದಲ್ಲಿ, ಬೇಸಿಗೆಯಲ್ಲಿ ಬಾಯಾರಿದಾಗ ನಮಗೆ ನೆನಪಾಗೋದು ಜ್ಯೂಸ್ ಅಂಗಡಿ. ಕಚೇರಿ ಅಥವಾ ನಾವು ಕೆಲಸ ಮಾಡುವ ಸ್ಥಳದ ಆಸುಪಾಸು ಜ್ಯೂಸ್ ಅಂಗಡಿ ಎಲ್ಲಿದೆ ಅಂತಾ ಹುಡುಕ್ತೇವೆ. ತಂಪಾದ ಜ್ಯೂಸ್ ಕುಡಿದು ತೇಗ್ತೇವೆ. ಜ್ಯೂಸ್ ಆರೋಗ್ಯಕ್ಕೂ ಒಳ್ಳೆಯದು. 

ಜ್ಯೂಸ್ (Juice) ನಲ್ಲಿ ನಾನಾ ವಿಧಗಳಿವೆ. ಜ್ಯೂಸ್ (Juice), ಲಸ್ಸಿ (Lassi), ಮಿಲ್ಕ್ ಶೇಕ್  (Milk Shake) ಮಾತ್ರವಲ್ಲದೆ ಈಗ ಸರ್ಕಾರ, ಪ್ರೋಟೀನ್ ಶೇಕ್‌ (Protein Shake) ಗಳನ್ನು ಕೂಡ ಜ್ಯೂಸ್ ಅಂಗಡಿಯಲ್ಲಿ ಮಾರಾಟ ಮಾಡಲು ಅವಕಾಶ ನೀಡಿದೆ. ನೀವೂ ಒಳ್ಳೆ ಬ್ಯುಸಿನೆಸ್ (Business) ಹುಡುಕಾಟದಲ್ಲಿದ್ದರೆ ಜ್ಯೂಸ್ ಅಂಗಡಿ ಶುರು ಮಾಡಬಹುದು. ಇದು ಲಾಭಕರ ವ್ಯಾಪಾರದಲ್ಲಿ ಒಂದು. ಬಹುತೇಕ ಎಲ್ಲ ಋತುವಿನಲ್ಲಿ ಇದಕ್ಕೆ ಬೇಡಿಕೆ ಇದೆ. ನಾವಿಂದು ಜ್ಯೂಸ್ ಕಾರ್ನರ್ ಬ್ಯುಸಿನೆಸ್ ಬಗ್ಗೆ ನಿಮಗೆ ಕೆಲ ಮಾಹಿತಿ ನೀಡ್ತೇವೆ.

ಎಲಾನ್ ಮಸ್ಕ್ ಕೈಜಾರಿದ ವಿಶ್ವದ ನಂ.1 ಶ್ರೀಮಂತನ ಪಟ್ಟ;ಫ್ರೆಂಚ್ ಉದ್ಯಮಿ ಬರ್ನಾರ್ಡ್‌ ಅರ್ನಾಲ್ಟ್‌ಗೆ ಒಲಿದ ಅಗ್ರಸ್ಥಾನ

ಯಾವುದೇ ವ್ಯವಹಾರ ಇರಲಿ, ನೀವು ಅದನ್ನು ಎಲ್ಲಿ ಶುರು ಮಾಡ್ತೀರಿ ಮತ್ತೆ ಗುಣಮಟ್ಟ ಹೇಗಿದೆ ಎಂಬುದು ಲಾಭದ ಜೊತೆ ಸಂಬಂಧ ಹೊಂದಿರುತ್ತದೆ. ಜನರು ಓಡಾಡದ ಪ್ರದೇಶದಲ್ಲಿ ಜ್ಯೂಸ್ ಕಾರ್ನರ್ ಶುರು ಮಾಡಿದ್ರೆ ಪ್ರಯೋಜನವಿಲ್ಲ. ಜನನಿಬಿಡ ಪ್ರದೇಶ, ಕಚೇರಿ, ಮಳಿಗೆಗಳು ಹೆಚ್ಚಿರುವ ಪ್ರದೇಶ, ಆಸ್ಪತ್ರೆ – ಬಸ್ ನಿಲ್ದಾಣ ಹತ್ತಿರ ಇರುವ ಪ್ರದೇಶದಲ್ಲಿ ಇಲ್ಲವೆ ಜಿಮ್, ಫಿಟ್ನೆಸ್ ಕೇಂದ್ರವಿರುವ ಜಾಗದಲ್ಲಿ ನೀವು ಜ್ಯೂಸ್ ಕಾರ್ನರ್ ಶುರು ಮಾಡಬೇಕು. ಒಂದು ಜಾಗವನ್ನು ಬಾಡಿಗೆಗೆ ಪಡೆದು ಕೆಲಸ ಆರಂಭಿಸಿ. ಇಂಥ ಪ್ರದೇಶದಲ್ಲಿ ನಿಮ್ಮದೇ ಸ್ವಂತ ಜಾಗವಿದ್ದಲ್ಲಿ ಬಾಡಿಗೆ ಕಟ್ಟುವ ಅವಶ್ಯಕತೆ ಇರೋದಿಲ್ಲ. 

ನೀವು ಜ್ಯೂಸ್ ಕಾರ್ನರ್ ಶುರು ಮಾಡಲು ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಜಿಲ್ಲೆಯ ಆಹಾರ ಪ್ರಾಧಿಕಾರದಿಂದ (Food Authority) ಅನುಮತಿ ಪಡೆಯಬೇಕಾಗುತ್ತದೆ. ಬಾಡಿಗೆ, ಅಗತ್ಯ ವಸ್ತುಗಳು, ಒಬ್ಬರು ಸಹಾಯಕರನ್ನು ನೀವು ಪಡೆದು ಕೆಲಸ ಶುರು ಮಾಡ್ತಿದ್ದರೆ 5-7 ಲಕ್ಷ ರೂಪಾಯಿ ಹೂಡಿಕೆಯ ಅವಶ್ಯಕತೆ ಇರುತ್ತದೆ. ಮಿಕ್ಸರ್, ಹಣ್ಣು ಮಿಶ್ರಣ ಯಂತ್ರ, ಹಣ್ಣು ಕತ್ತರಿಸುವ ಯಂತ್ರ ಮತ್ತು ರೆಫ್ರಿಜರೇಟರ್, ಹಣ್ಣುಗಳು, ತರಕಾರಿಗಳು, ಸಕ್ಕರೆ, ಸಿರಪ್, ಹಾಲು, ಐಸ್ ಕ್ರೀಮ್, ನೀರು ಸೇರಿದಂತೆ ಅಗತ್ಯ ವಸ್ತುಗಳನ್ನು ನೀವು ಖರೀದಿ ಮಾಡಬೇಕು. ದೊಡ್ಡ ಗಾತ್ರದಲ್ಲಿ ಜ್ಯೂಸ್ ಕಾರ್ನರ್ ಶುರು ಮಾಡ್ತಿದ್ದರೆ ಒಂದಿಬ್ಬರು ಕೆಲಸಗಾರರ ಅಗತ್ಯವಿರುತ್ತದೆ. ಸಣ್ಣದಾಗಿ ಶುರು ಮಾಡ್ತಿದ್ದರೆ ನೀವೊಬ್ಬರೇ ಕೆಲಸ ಮಾಡಬಹುದು. ನೀವು ಜ್ಯೂಸ್ ಜೊತೆ ಮಿಲ್ಕ್ ಶೇಕ್ ಗಳು ಮತ್ತು ಪ್ರೋಟೀನ್ ಶೇಕ್ ಮಾರಾಟ ಮಾಡಿದಲ್ಲಿ ಬರುವ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತದೆ. ಅದರಂತೆ ಲಾಭವೂ ಹೆಚ್ಚಾಗುತ್ತದೆ. 

ಇನ್ನು 3 ವರ್ಷದಲ್ಲಿ ಭಾರತ ವಿಶ್ವದ ನಂ. 3 ಆರ್ಥಿಕ ಶಕ್ತಿ: ಜರ್ಮನಿ, ಜಪಾನ್‌ ಹಿಂದಿಕ್ಕಲಿದೆ ದೇಶ

ಜ್ಯೂಸ್ ಕಾರ್ನರ್ (Juice Corner) ನಿಂದ ಆಗುವ ಲಾಭ ಎಷ್ಟು? : ಮೊದಲೇ ಹೇಳಿದಂತೆ ಜಾಗ ಹಾಗೂ ಗುಣಮಟ್ಟ ಇಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಗಾಡಿಗಳಲ್ಲಿ ಸಣ್ಣ ಪ್ರಮಾಣದಲ್ಲಿ ಜ್ಯೂಸ್ ವ್ಯಾಪಾರ ಮಾಡುವವರೇ ತಿಂಗಳಿಗೆ ಹತ್ತು ಸಾವಿರ ರೂಪಾಯಿ ಗಳಿಸ್ತಾರೆ. ಇನ್ನು ದೊಡ್ಡ ಮಟ್ಟದಲ್ಲಿ ಹಾಗೂ ಬೇರೆ ಬೇರೆ ಜ್ಯೂಸ್ ಜೊತೆ ಶೇಕ್ ಗಳನ್ನು ನೀವು ಮಾರಾಟ ಮಾಡುತ್ತಿದ್ದರೆ ತಿಂಗಳಿಗೆ  30,000 ರಿಂದ 40,000 ರೂಪಾಯಿಯನ್ನು ನೀವು ಆರಾಮವಾಗಿ ಗಳಿಸಬಹುದು. ನಿಮ್ಮ ಜ್ಯೂಸ್ ರುಚಿ ಗ್ರಾಹಕರನ್ನು ಸೆಳೆದಿದ್ದಲ್ಲಿ ಗ್ರಾಹಕರ ಸಂಖ್ಯೆ ನಿಧಾನವಾಗಿ ಹೆಚ್ಚಾಗುತ್ತದೆ. 
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!
ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್