ಈ ಊರಿನ 250ಕ್ಕೂ ಹೆಚ್ಚು ಪಾನ್ ಮಾರಾಟಗಾರರೆಲ್ಲರೂ ಕೋಟ್ಯಾಧಿಪತಿಗಳೇ...

Published : Mar 14, 2025, 05:04 PM ISTUpdated : Mar 14, 2025, 09:07 PM IST
ಈ ಊರಿನ 250ಕ್ಕೂ ಹೆಚ್ಚು ಪಾನ್ ಮಾರಾಟಗಾರರೆಲ್ಲರೂ ಕೋಟ್ಯಾಧಿಪತಿಗಳೇ...

ಸಾರಾಂಶ

ಉತ್ತರ ಪ್ರದೇಶದ ಕಾನ್ಪುರದಲ್ಲಿ 250ಕ್ಕೂ ಹೆಚ್ಚು ಪಾನ್ ಮಾರಾಟಗಾರರಿದ್ದು, ಅವರೆಲ್ಲರೂ ಕೋಟ್ಯಾಧಿಪತಿಗಳಾಗಿದ್ದಾರೆ. ಹಿಂದಿನ ಪೀಳಿಗೆ ಶೋಕಿ ಮಾಡದಿದ್ದರೂ, ಈಗಿನ ಪೀಳಿಗೆ ಐಷಾರಾಮಿ ಜೀವನ ನಡೆಸುತ್ತಿದೆ.

ಉತ್ತರ ಭಾರತದಲ್ಲಿ ಪಾನ್‌ ತಿನ್ನದವರೇ ತೀರಾ ಅಪರೂಪ ಊಟವಾದ ನಂತರ ಕೆಲವರು ಪಾನ್ ತಿಂದರೆ ಮತ್ತೆ ಕೆಲವರಿಗೆ ಪಾನ್ ತಿನ್ನೋದು ಒಂದು ಚಟ. ಪಾನ್ ನೋಡುವುದಕ್ಕೆ ಒಂದು ಸಣ್ಣ ಉದ್ಯಮ ಎನಿಸಬಹುದು ಆದರೆ ಅದರಲ್ಲಿ ಲಾಭ ಜಾಸ್ತಿ. ಅದು ಹೇಗೆ ಅಂತೀರಾ ದೇಶದ ಹಲವು ಕಡೆಗಳಿಗೆ ಪಾನ್ ಪೂರೈಕೆ ಮಾಡುವುದಕ್ಕೆ ಹೆಸರಾದ ಉತ್ತರ ಪ್ರದೇಶದ ಬಹುತೇಕ ಪಾನ್‌ವಾಲಾಗಳು ಕೋಟ್ಯಾಧಿಪತಿಗಳಂತೆ. ಹೌದು ಉತ್ತರ ಪ್ರದೇಶದ ಕಾನ್ಪುರದಲ್ಲಿ ಪಾನ್ ಹಾಕದವರೇ ಇಲ್ಲ, ಇಲ್ಲಿ ಸುಮಾರು 250ಕ್ಕೂ ಹೆಚ್ಚು ಪಾನ್ ಮಾರಾಟಗಾರರಿದ್ದು, ಅವರೆಲ್ಲರೂ ಬಹುತೇಕ ಕೋಟ್ಯಾಧಿಪತಿಗಳೆ ಎಂದು ವರದಿಯೊಂದು ಹೇಳಿದೆ. 

ಲಕ್ಸುರಿ ಬ್ರಾಂಡ್, ರಾಯಲ್ ಲೈಫ್
ಇಲ್ಲಿನ ಪಾನ್‌ವಾಲಾಗಳ ಈಗಿನ ಹಾಗೂ ಮುಂದಿನ ಪೀಳಿಗೆಗಳು ಸಖತ್ ರಾಯಲ್ ಜೀವನ ಮಾಡುತ್ತಿದ್ದಾರೆ. ಅನೇಕರು ವಿದೇಶಗಳಲ್ಲಿ ಶಿಕ್ಷಣ ಪೂರೈಸಿದರೆ ಮತ್ತೆ ಅನೇಕರು ವಿದೇಶಗಳಲ್ಲಿ ಜಾಲಿಯಾಗಿ ತಿರುಗಾಡುತ್ತಾರೆ. ಐಷಾರಾಮಿ ಬ್ರಾಂಡ್‌ಗಳನ್ನು ಧರಿಸಿ ಓಡಾಡುತ್ತಿದ್ದಾರೆ. ಇಲ್ಲಿನ ಪಾನ್‌ವಾಲ್‌ಗಳು ಹಿಂದಿನಿಂದಲೂ ಶ್ರೀಮಂತರಾಗಿದ್ದರೂ ಹಿಂದಿನ ಪೀಳಿಗೆಯ ಜನರು ಯಾವತ್ತೂ ಶೋಕಿ ಮಾಡುವುದು ಶ್ರೀಮಂತಿಕೆಯನ್ನು ತೋರಿಸಿಕೊಳ್ಳುವುದು ಮಾಡುತ್ತಿರಲಿಲ್ಲವಂತೆ. ಆದರೆ ಈಗಿನ ತಲೆಮಾರಿನ ಜನರು  ರೋಲೆಕ್ಸ್ ವಾಚ್, ಪ್ರಾಡಾ ಬ್ಯಾಗ್ ಧರಿಸಿ ಪಾರ್ಟಿಗಳನ್ನು ಮಾಡಿಕೊಂಡು ಪೋರ್ಷೆ ಕಾರಲ್ಲಿ ಓಡಾಡುತ್ತಿದ್ದಾರೆ ಎಂದು ವರದಿಯೊಂದು ಹೇಳಿದೆ. 

ಪಾನ್‌ ಮಸಾಲಾ ಬದಲು ಚಿಪ್ಸ್‌ ಖರೀದಿ: 6 ವರ್ಷದ ಬಾಲಕಿಯ ಭೀಕರ ಹತ್ಯೆ ಮಾಡಿದ ಪಾಪಿ!

ವಿದೇಶಗಳಲ್ಲಿ ಶಿಕ್ಷಣ ಮುಗಿಸಿದ ಇವತ್ತಿನ ತಲೆಮಾರು
ಕಾನ್ಪುರದಲ್ಲಿ ಯಾವಾಗಲೂ ಹೇರಳವಾದ ಸಂಪತ್ತು ಇತ್ತು, ಆದರೆ ಇಷ್ಟೊಂದು ಆಡಂಬರ ಎಂದೂ ಇರಲಿಲ್ಲ. ಹೊಸ ಪೀಳಿಗೆಯ ಪಾನ್ ಮಸಾಲ ಮತ್ತು ಇತರ ಕುಟುಂಬಗಳು ಅಧಿಕಾರ ವಹಿಸಿಕೊಂಡ ನಂತರ ಈ ಬದಲಾವಣೆ ಬಂದಿತು. ಅವರು ಪ್ರಪಂಚವನ್ನು ಸುತ್ತಿದ್ದಾರೆ, ಅಮೆರಿಕ ಮತ್ತು ಇಂಗ್ಲೆಂಡ್‌ನ ಗಣ್ಯ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಿದ್ದಾರೆ, ಎ-ಲಿಸ್ಟರ್‌ಗಳೊಂದಿಗೆ ಭಾಗವಾಗಿದ್ದಾರೆ ಮತ್ತು ಕುಟುಂಬ ವ್ಯವಹಾರಗಳನ್ನು ವಹಿಸಿಕೊಳ್ಳಲು ಕಾನ್ಪುರಕ್ಕೆ ಬಂದಿದ್ದಾರೆ ಎಂದು ಹೇಳುತ್ತಾರೆ ಒಬ್ಬರು ಉದ್ಯಮಿ.

ಶ್ರೀಮಂತರಾಗಿದ್ದು ಹೇಗೆ?
1980 ರ ದಶಕದಿಂದಲೂ ಕಾನ್ಪುರದಲ್ಲಿ ಹಣದ ಹರಿವು ಚೆನ್ನಾಗೇ ಇದೆ, ಉತ್ತರ ಪ್ರದೇಶದ ವಿವಿಧ ಭಾಗಗಳಿಂದ ಕುಟುಂಬಗಳು ಪಾನ್ ಮಸಾಲಾ ತಯಾರಕರು ಮತ್ತು  ರಫ್ತುದಾರರಾಗಿ ಸ್ಪರ್ಧೆಗೆ ಇಳಿದಾಗಿನಿಂದಲೂ ಇಲ್ಲಿ ಹಣದ ಹರಿವು ಚೆನ್ನಾಗಿತ್ತು. ಆದರೆ ಅವರು ಯಾವತ್ತೂ ಶೋಕಿ ಮಾಡಲಿಲ್ಲ, ತಮ್ಮ ತಲೆಯನ್ನು ಕೆಳಕ್ಕೆ ಇರಿಸಿ ಕೆಲಸದ ಮೇಲೆ ಕೇಂದ್ರೀಕರಿಸಿದರು. ಒಂದು ಪೀಳಿಗೆಯ ಹಿಂದಿನವರೆಗೂ ಅವರು ಬಹಳ ಮಿತವ್ಯಯದಿಂದ ಜೀವನ ಮಾಡುತ್ತಿದ್ದರು. ಬ್ರಿಟಿಷ್ ರಾಜ್‌ನ ಕೈಗಾರಿಕಾ ಹೃದಯವಾಗಿದ್ದ ಕಾನ್ಪುರದ ವಿಶಿಷ್ಟ ಲಕ್ಷಣ ಇದಾಗಿತ್ತು. ಇದೇ ಕಾರಣಕ್ಕೆ ಇದನ್ನು 'ಪೂರ್ವದ ಮ್ಯಾಂಚೆಸ್ಟರ್' ಎಂದು ಕೂಡ ಕರೆಯಲಾಗುತ್ತದೆ. ಆದರೆ ಈಗ ಕಾಲ ಬದಲಾಗಿದ್ದು, ಇಲ್ಲಿನ ಯುವ ಸಮೂಹ ಪಾನ್ ಮಸಾಲದಿಂದ ಬಂದ ತಮ್ಮ ಹಳೆ ಪೀಳಿಗೆಯ ಹಣವನ್ನು ಹೊಸ ಉದ್ಯಮದಲ್ಲಿ ತೊಡಗಿಸಿಕೊಂಡು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ. 

Omg..! ರಜನಿಗಂಧ ಪಾನ್ ಮಸಾಲಾ ಫ್ಲೇವರ್ ಐಸ್ ಕ್ರೀಂ ಇದಂತೆ!

ಅಂಬಾನಿಗಳು ತಮ್ಮ ಸಂಪತ್ತನ್ನು ಪ್ರದರ್ಶಿಸುತ್ತಾರೆ ಎಂದಾದರೆ ನಾವು ಏಕೆ ಮಾಡಬಾರದು ಎಂಬ ಯೋಚನೆ ಈಗಿನ ಯುವ ಪೀಳಿಗೆಗಿದೆ ಎಂದು ಹೇಳುತ್ತಾರೆ ಈ ಹಳೆ ಹಾಗೂ ಹೊಸ ಎರಡೂ ತಲೆಮಾರುಗಳನ್ನು ನೋಡಿದ ಸ್ಥಳೀಯ ವ್ಯಕ್ತಿ. ಕಳೆದ ವರ್ಷ ಇಲ್ಲಿನ ಪಾನ್ ಮಸಾಲ ವ್ಯಾಪಾರಿ ಮನೆ ಮೇಲೆ ಐಟಿ ದಾಳಿ ನಡೆದಿರುವುದನ್ನು ಈ ಸಂದರ್ಭದಲ್ಲಿ ನೆನಯಬಹುದು.  ಒಂದು ಪಾನ್‌ಗೆ ಕನಿಷ್ಠ 25ರೂಪಾಯಿಯಿಂದ ಶುರುವಾಗಿ ಲಕ್ಷದವರೆಗೂ ದರವಿದೆ ಹೀಗಿರುವಾಗ ಇದು ಜಾಸ್ತಿ ಬಂಡವಾಳ ಬೇಕಿಲ್ಲದ ಆದರೆ ಹೆಚ್ಚು ಲಾಭ ನೀಡುವ ಉದ್ಯಮ ಎಂದು ಆರಾಮವಾಗಿ ಹೇಳಬಹುದಾಗಿದೆ. ಹೀಗಿರುವಾಗ ಪಾನ್ ವ್ಯಾಪಾರಿಗಳು ಕೋಟ್ಯಾಧಿಪತಿಗಳಾಗುವುದು ದೊಡ್ಡ ವಿಚಾರವೇನಲ್ಲ. ಈ ಬಗ್ಗೆ ನೀವೇನಂತಿರಿ ಕಾಮೆಂಟ್ ಮಾಡಿ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!