ಪಾನ್ ಮಸಾಲಾ ಬದಲು ಚಿಪ್ಸ್ ಖರೀದಿ: 6 ವರ್ಷದ ಬಾಲಕಿಯ ಭೀಕರ ಹತ್ಯೆ ಮಾಡಿದ ಪಾಪಿ!
6 ವರ್ಷದ ಹುಡುಗಿಯ ಹತ್ಯೆ ಸಂಬಂಧ ಆರೋಪಿ ಹಾಗೂ ಆತನ ಇಬ್ಬರು ಸಹೋದರರನ್ನು ಬಂಧಿಸಲಾಗಿದ್ದು, ಹಾಗೂ ಬಾಲಕಿಯ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಗ್ರಾ (ಸೆಪ್ಟೆಂಬರ್ 29, 2023): ಬಾಲಕಿ ತಾನು ಹೇಳಿದ್ದ ಪಾನ್ ಮಸಾಲಾ ತರುವ ಬದಲು ಚಿಪ್ಸ್ ಪ್ಯಾಕೆಟ್ ಖರೀದಿಸಿದ್ದಕ್ಕಾಗಿ ಉತ್ತರ ಪ್ರದೇಶದ ಆಲಿಘರ್‌ನಲ್ಲಿ 6 ವರ್ಷದ ಬಾಲಕಿಯನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ನೆರೆಹೊರೆಯ ವ್ಯಕ್ತಿ ಆಕೆಯನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದ್ದು, ಬಾಲಕಿಯ ಶವವನ್ನು ಅವರ ಮನೆಯಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಿಲೇವಾರಿ ಮಾಡಲು ಗೋಣಿಚೀಲದಲ್ಲಿ ಇಟ್ಟಿದ್ದ ಮೃತದೇಹ ಮಂಗಳವಾರ ತಡರಾತ್ರಿ ಆರೋಪಿಯ ನಿವಾಸದಲ್ಲಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ ಆರೋಪಿ ಹಾಗೂ ಆತನ ಇಬ್ಬರು ಸಹೋದರರನ್ನು ಬಂಧಿಸಲಾಗಿದ್ದು, ಹಾಗೂ ಬಾಲಕಿಯ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮಂಗಳವಾರ ಬೆಳಗ್ಗೆ ಬಾಲಕಿ ತನ್ನ ಅಲಿಗಢ ಕಾಲೋನಿಯಿಂದ ನಾಪತ್ತೆಯಾಗಿದ್ದಳು. ಆಕೆಯ ಕುಟುಂಬದವರು ನಗರ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಸಂಜೆಯ ನಂತರ ಕಾಣೆಯಾದ ದೂರು ದಾಖಲಿಸಿದ್ದರು.
ಇದನ್ನು ಓದಿ: ಹಿಂದೂ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡುವಂತೆ ಮುಸ್ಲಿಂ ಸಹಪಾಠಿಗೆ ಆದೇಶಿಸಿದ ಶಿಕ್ಷಕಿ!
ಬಳಿಕ, ಸಿಸಿಟಿವಿ ಕ್ಯಾಮೆರಾ ದೃಶ್ಯಗಳ ಸಹಾಯದಿಂದ, ಪೊಲೀಸರು ತನಿಖೆಯನ್ನು ಪ್ರಾರಂಭಿಸಿದರು. ಅದು ಅವರನ್ನು ಆಕೆಯ ನೆರೆಯ ಮನೆಗೆ ಕರೆದೊಯ್ದಿತು, ಅಲ್ಲಿ ಅವರು ಆಕೆಯ ಶವವನ್ನು ಕಂಡುಕೊಂಡರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇನ್ನು, ಈ ಘಟನೆ ಬಗ್ಗೆ ಮಾಧ್ಯಮಗಳಿಗೆ ವಿವರ ನೀಡಿದ ಎಸ್ಪಿ (ನಗರ) ಮೃಗಾಂಕ್ ಶೇಖರ್ ಪಾಠಕ್, "ತನಿಖೆಯ ಸಮಯದಲ್ಲಿ, ಆರೋಪಿಗಳಲ್ಲಿ ಒಬ್ಬರು ಅಪರಾಧವನ್ನು ಒಪ್ಪಿಕೊಂಡರು, ಅವರು 20 ರೂ.ಗೆ ಪಾನ್ ಮಸಾಲವನ್ನು ಖರೀದಿಸಲು ಹುಡುಗಿಯನ್ನು ಕಳುಹಿಸಿದ್ದಾಗಿ ಹೇಳಿದರು, ಆದರೆ ಅವಳು ಚಿಪ್ಸ್ ಪ್ಯಾಕೆಟ್ ತಗೊಂಡು ಬಂದಿದ್ದಳು. ಅದಕ್ಕೆ ಬಾಲಕಿಯನ್ನು ಆರೋಪಿ ಗದರಿಸಿದಾಗ, ಆಕೆ ಅನುಚಿತವಾಗಿ ವರ್ತಿಸಿದಳು. ಅದಕ್ಕೆ ಆರೋಪಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಮುಂದಿನ ಕ್ರಮ ತೆಗೆದುಕೊಳ್ಳಲು ನಾವು ಶವಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ’’ ಎಂದೂ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಇದನ್ನೂ ಓದಿ: 'ಆತ್ಮಹತ್ಯೆ’ ಮಾಡ್ಕೊಳ್ಳೋದು ಹೇಗೆ ಅಂತ ಗೂಗಲ್ ಸರ್ಚ್ ಮಾಡಿದ್ರೆ ಹುಷಾರ್; ನಿಮ್ಮ ಮನೆಗೂ ಬರ್ತಾರೆ ಪೊಲೀಸ್ರು!