ಅಬಕಾರಿಯಿಂದಲೇ ಬಹುತೇಕ ರಾಜ್ಯಗಳ ಬೊಕ್ಕಸ ತುಂಬುತ್ತದೆ. ಈ ಹಿನ್ನೆಲೆಯಲ್ಲಿ ಕರ್ನಾಟಕವೂ ಸೇರಿದಂತೆ ಇತರ ರಾಜ್ಯಗಳಾದ, ನವದೆಹಲಿ, ಹರ್ಯಾಣ, ಪಂಜಾಬ್, ತಮಿಳುನಾಡು, ಗೋವಾ, ಕೇರಳ ರಾಜ್ಯಗಳು ಗ್ರಾಹಕರಿಗೆ ಮನೆ ಬಾಗಿಲಿಗೆ ಮದ್ಯ ತಲುಪಿಸುವ ಬಗ್ಗೆ ಪ್ರಯೋಗಿಕ ಯೋಜನೆ ಜಾರಿಗೆ ತರಲು ಮುಂದಾಗಿವೆ ಎಂದು ಅಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.
ನವದೆಹಲಿ: ಅಬಕಾರಿಯಿಂದಲೇ ಬಹುತೇಕ ರಾಜ್ಯಗಳ ಬೊಕ್ಕಸ ತುಂಬುತ್ತದೆ. ಈ ಹಿನ್ನೆಲೆಯಲ್ಲಿ ಕರ್ನಾಟಕವೂ ಸೇರಿದಂತೆ ಇತರ ರಾಜ್ಯಗಳಾದ, ನವದೆಹಲಿ, ಹರ್ಯಾಣ, ಪಂಜಾಬ್, ತಮಿಳುನಾಡು, ಗೋವಾ, ಕೇರಳ ರಾಜ್ಯಗಳು ಗ್ರಾಹಕರಿಗೆ ಮನೆ ಬಾಗಿಲಿಗೆ ಮದ್ಯ ತಲುಪಿಸುವ ಬಗ್ಗೆ ಪ್ರಯೋಗಿಕ ಯೋಜನೆ ಜಾರಿಗೆ ತರಲು ಮುಂದಾಗಿವೆ ಎಂದು ಅಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. ಆನ್‌ಲೈನ್ ಮಾರುಕಟ್ಟೆ ವೇದಿಕೆಗಳಾದ ಸ್ವಿಗ್ಗಿ, ಬಿಗ್ ಬಾಸ್ಕೆಟ್, ಹಾಗೂ ಝೊಮ್ಯಾಟೋ ಹಾಗೂ ಬ್ಲಿಂಕಿಟ್ ಮುಂತಾದ ವಾಣಿಜ್ಯ ಮಾರುಕಟ್ಟೆಯ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ಮದ್ಯ ತಲುಪಿಸುವ ಪ್ರಾಯೋಗಿಕ ಯೋಜನೆಯನ್ನು ಜಾರಿಗೆ ತರಲು ಮುಂದಾಗಿವೆ. ಕಡಿಮೆ ಅಮಲು ಪದಾರ್ಥಗಳನ್ನು ಹೊಂದಿರುವ ಬೀರ್, ವೈನ್, ಲಿಕ್ಕರ್ ಮುಂತಾದವನ್ನು ಆರಂಭದಲ್ಲಿ ಮನೆ ಬಾಗಿಲಿಗೆ ಪೂರೈಕೆ ಮಾಡಲು ಪ್ರಾಯೋಗಿಕವಾಗಿ ಯೋಜನೆ ರೂಪಿಸಲಾಗುತ್ತಿದೆ ಎಂದು ಈ ಬೆಳವಣಿಗೆಗಳ ಬಗ್ಗೆ ತಿಳಿದ ಮದ್ಯ ಉದ್ಯಮದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿ ಆಗಿದೆ.
ಪ್ರಸ್ತುತ ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಸರಾಯಿಯನ್ನು ಮನೆ ಬಾಗಿಲಿಗೆ ಪೂರೈಸಲಾಗುತ್ತದೆ. ಹೀಗಾಗಿ ಇತರ ರಾಜ್ಯಗಳಲ್ಲಿ ಜಾರಿಗೆ ತರುವ ಬಗ್ಗೆ ಹಾಗೂ ಇದರ ಸಾಧಕ ಬಾಧಕಗಳ ಬಗ್ಗೆ ತಿಳಿಯುವುದಕ್ಕೆ ಪ್ರಯೋಗಿಕವಾಗಿ ಹರ್ಯಾಣ, ಪಂಜಾಬ್, ತಮಿಳುನಾಡು, ಗೋವಾ, ಕೇರಳ ರಾಜ್ಯಗಳಲ್ಲಿ ಕಡಿಮೆ ಅಮಲು ಪದಾರ್ಥಗಳಿರುವ ಡ್ರಿಂಕ್ಸ್‌ನ್ನು ಮನೆ ಬಾಗಿಲಿಗೆ ತಲುಪಿಸಿ ಇದಕ್ಕೆ ಪ್ರತಿಕ್ರಿಯೆ ಹೇಗಿದೆ ಎಂದು ನೋಡುವ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಪತ್ನಿಯ ನಾಲ್ಕೇ ನಾಲ್ಕು ಪೆಗ್‌ಗೆ ಗಿರಗಿರ ತಿರುಗಿದ ಗಂಡ, ಡಿವೋರ್ಸ್ ಕೇಳಿದವನಿಗೆ ನೆಟ್ಟಿಗರ ಸಲಹೆ!
ಕೆಲ ಹೈಕ್ಲಾಸ್ ಕುಟುಂಬಗಳು ಮದ್ಯವನ್ನು ಊಟದ ಜೊತೆಗೆ ಮನರಂಜನಾ ಪಾನೀಯವೆಂದು ಕುಡಿಯುತ್ತಾರೆ. ಅಲ್ಲದೇ ಕೆಲವು ಮನೆಗಳಲ್ಲಿ ಹೆಣ್ಣು ಗಂಡು ಎಂಬ ಬೇಧವಿಲ್ಲದೇ ಕುಟುಂಬಸ್ಥರೆಲ್ಲಾ ಜೊತೆಯಾಗಿ ಮದ್ಯಸೇವನೆ ಮಾಡುತ್ತಾರೆ. ಆದರೆ ಮಹಿಳೆಯರು ಮದ್ಯದಂಗಡಿಗೆ ಹೋಗಿ ಮದ್ಯ ಖರೀದಿಸುವ ಸ್ಥಿತಿ ಅಷ್ಟೊಂದು ಚೆನ್ನಾಗಿಲ್ಲ, ಕೆಲವರು ಮಹಿಳೆಯರನ್ನು ಒಂಥರಾ ನೋಡುತ್ತಾರೆ ಎನ್ನುವ ಅಭಿಪ್ರಾಯಗಳ ಹಿನ್ನೆಲೆ ಹಾಗೂ ವಿಶೇಷವಾಗಿ ಮಹಾನಗರಗಳಲ್ಲಿ ಹೆಚ್ಚುತ್ತಿರುವ ವಲಸಿಗ ಜನಸಂಖ್ಯೆಗೆ ಮದ್ಯ ಪೂರೈಸುವುದಕ್ಕಾಗಿ ಈ ಆನ್‌ಲೈನ್ ಮದ್ಯ ಡೆಲಿವರಿ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ವರದಿ ಆಗಿದೆ.
ಈ ಆನ್‌ಲೈನ್ ಡೆಲಿವರಿ ಪಡೆಯುವುದಕ್ಕೆ ನಿಯಮಗಳಿದ್ದು, ಎಂಡ್ ಟೂ ಎಂಡ್ ವಹಿವಾಟು ದಾಖಲೆಗಳು (end-to-end transaction records) ಮದ್ಯ ಆರ್ಡರ್ ಮಾಡುವ ವ್ಯಕ್ತಿಯ ವಯಸ್ಸಿನ ಪರಿಶೀಲನೆ ಮತ್ತು ಮಿತಿಗಳಿಗೆ ಬದ್ಧವಾಗಿರುತ್ತವೆ. ಇದಲ್ಲದೆ, ಆನ್‌ಲೈನ್ ಟೆಕ್ ಸ್ಟ್ಯಾಕ್‌ಗಳು ನಿಯಂತ್ರಕ ಮತ್ತು ಅಬಕಾರಿ ಅಗತ್ಯಗಳೊಂದಿಗೆ ಸಿಂಕ್ರೊನೈಸ್ ಆಗಿದ್ದು, ಮದ್ಯ ಆರ್ಡರ್ ಮಾಡುವ ಸಮಯಕ್ಕೂ ಲಿಮಿಟ್ ಇರುತ್ತದೆ ಇದರ ಜೊತೆಗೆ, ಡ್ರೈ ಡೇಗಳಲ್ಲಿ ಇದರಲ್ಲಿ ಮದ್ಯ ಸಿಗುವುದಿಲ್ಲ ಈ ಮುಂತಾದ ನಿಯಮಗಳನ್ನು ಪಾಲಿಸಲಾಗುತ್ತದೆ ಸ್ವಿಗ್ಗಿಯ ಕಾರ್ಪೊರೇಟ್ ವ್ಯವಹಾರಗಳ ಉಪಾಧ್ಯಕ್ಷ ಡಿಂಕರ್ ವಶಿಷ್ಟ್ ಹೇಳಿದ್ದಾರೆ.
'ಆಟವಾಡೋ ಮಕ್ಕಳೆಲ್ಲ ಕುಡಿದು ಸಾಯ್ತಿದ್ದಾರೆ ಸಾರ್, ಬಾರ್ ಕ್ಲೋಸ್ ಮಾಡ್ಸಿ' ಸಚಿವರ ಮುಂದೆ ಕೈಮುಗಿದು ಬೇಡಿಕೊಂಡ ಮಹಿಳೆ!
ಮಹಾರಾಷ್ಟ್ರ , ಜಾರ್ಖಂಡ್, ಛತ್ತಿಸ್‌ಗಡ, ಅಸ್ಸಾಂ ಮುಂತಾದ ರಾಜ್ಯಗಳಲ್ಲಿ ಕೋವಿಡ್ ಸಮಯದಲ್ಲಿ ತಾತ್ಕಾಲಿಕವಾಗಿ ಮದ್ಯವನ್ನು ಮನೆಗೆ ಪೂರೈಕೆ ಮಾಡಲಾಗುತ್ತಿತ್ತು. ಆದರೆ ಕೋವಿಡ್ ಕಡಿಮೆಯಾದ ನಂತರ ಇದನ್ನು ಕಡಿಮೆ ಮಾಡಲಾಗಿತ್ತು. ಕೆಲ ವರದಿಗಳ ಪ್ರಕಾರ, ಆನ್‌ಲೈನ್ ಡೆಲಿವರಿಯಿಂದಾಗಿ ಪಶ್ಚಿಮ ಬಂಗಾಳ ಹಾಗೂ ಒಡಿಶಾದಲ್ಲಿ ಮದ್ಯ ಮಾರಾಟದಲ್ಲಿ ಶೇಕಡಾ 20 ರಿಂದ 30 ಶೇಕಡಾ ಏರಿಕೆಯಾಗಿದೆ ಎಂದು ಚಿಲ್ಲರೆ ಉದ್ಯಮದ ಅಧಿಕಾರಿಗಳು ಹೇಳಿದ್ದಾರೆ.