
ಮುಂಬೈ: 90ರ ದಶಕದ ಮಕ್ಕಳ ಶಾಲಾ ಜೀವನದಲ್ಲಿ ಕೆಮ್ಲಿನ್ ಜಾಮೆಟ್ರಿ ಬಾಕ್ಸ್ ಪ್ರಮುಖ ವಸ್ತುವಾಗಿದೆ. ಈ ಒಂದು ಜಾಮೆಟ್ರಿ ಬಾಕ್ಸ್ ಇದ್ರೆ ಮಕ್ಕಳಿಗೆ ಹೆಮ್ಮೆಯ ವಿಷಯವಾಗಿತ್ತು. ಸೋಮವಾರ ಜಾಮೆಟ್ರಿ ಬಾಕ್ಸ್ ಸ್ಥಾಪಕ ಸುಭಾಷ್ ದಾಂಡೇಕರ್ ನಿಧನರಾಗಿದ್ದಾರೆ. ಕಾಮ್ಲಿನ್ ಗ್ರುಪ್ ಉದ್ಯಮದ (Camlin Group of Industries) ಸ್ಥಾಪಕ ಸುಭಾಷ್ ದಾಂಡೇಕರ್ (Subhash Dandekar) ವಿಧಿವಶರಾಗಿದ್ದಾರೆ. ಸುಭಾಷ್ ದಾಂಡೇಕರ್ ಅವರಿಗೆ 86 ವರ್ಷ ವಯಸ್ಸು ಆಗಿತ್ತು. ಕಳೆದ ಕೆಲವು ದಿನಗಳಿಂದ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸುಭಾಷ್ ದಾಂಡೇಕರ್ ಅವರನ್ನು ಹಿಂದೂಜಾ ಆಸ್ಪತ್ರೆಗೆ (Hinduja Hospital) ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತರಾಗಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಸುಭಾಷ್ ದಾಂಡೇಕರ್ ಅವರ ಅಂತಿಮ ಸಂಸ್ಕಾರ ಮುಂಬೈನಲ್ಲಿಯೇ ನಡೆದಿದೆ. ಮೃತ ಸುಭಾಷ್ ದಾಂಡೇಕರ್ ಅವರಿಗೆ ಆಶಿಶ್ ಮತ್ತು ಅನಘಾ ಎಂಬ ಇಬ್ಬರು ಮಕ್ಕಳಿದ್ದಾರೆ.
ಜಪಾನಿನ ಕೊಕುಯೊ ಮಾರಾಟದ ಬಳಿಕ ಕೊಕುಯೊ ಕ್ಯಾಮ್ಲಿನ್‌ನ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಮಹಾರಾಷ್ಟ್ರದಲ್ಲಿ ಚಿರಪರಿತ ಉದ್ಯಮಿಯಾಗಿದ್ದ ಇವರನ್ನು ಜನರು ಪ್ರೀತಿಯಿಂದ ದಾದಾಸಾಹೇಬ್ ದಿಗಂಬರ್ ದಾಂಡೇಕರ್ ಎಂದು ಕರೆಯುತ್ತಿದ್ದರು.
ಮಗನ ಮದುವೆಗೆ ಖರ್ಚು ಮಾಡಿದ ಹಣವನ್ನ ಎಷ್ಟು ಗಂಟೆಗಳಲ್ಲಿ ಗಳಿಸ್ತಾರೆ ಮುಕೇಶ್ ಅಂಬಾನಿ?
ದೇವೇಂದ್ರ ಫಡ್ನವೀಸ್ ಸಂತಾಪ
ಉದ್ಯಮಿ ಸುಭಾಷ್ ದಾಂಡೇಕರ್ ನಿಧನಕ್ಕೆ ಮಹಾರಾಷ್ಟ್ರದ ಡಿಸಿಎಂ ದೇವೇಂದ್ರ ಫಡ್ನವೀಸ್ ಸಂತಾಪ ಸೂಚಿಸಿದ್ದಾರೆ. ಸುಭಾಷ್ ದಾಂಡೇಕರ್ ಮಹಾರಾಷ್ಟ್ರದಲ್ಲಿ ಉದ್ಯಮ ಆರಂಭಿಸಿ ಸಾವಿರಾರು ಯುವಕರಿಗೆ ಉದ್ಯೋಗ ನೀಡಿದ್ದರು. ಜೀವನದಲ್ಲಿ ಮಾನವೀಯ ಮೌಲ್ಯಗಳಿಗೆ ಮೊದಲ ಆದ್ಯತೆ ನೀಡುತ್ತಿದ್ದ ಸುಭಾಷ್ ದಾಂಡೇಕರ್ ಅವರು ಕಾರ್ಮಿಕರನ್ನು ಗೌರವಿಸಬೇಕು ಎಂಬ ಮಾತನ್ನು ಪದೇ ಪದೇ ಹೇಳುತ್ತಿದ್ದರು. ಸಾಮಾಜಿಕ ಕೆಲಸಗಳು, ಕಲೆ, ಉದ್ಯಮಿಯಾಗಿ ಸುಭಾಷ್ ದಾಂಡೇಕರ್ ಚಿರಪರಿಚಿತರಾಗಿದ್ದರು ಎಂದು ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ಗುರುವಾರ ಸಂತಾಪ ಕಾರ್ಯಕ್ರಮ
ಸೋಮವಾರ ಮುಂಬೈನ ದಾದರ್‌ನ ಶಿವಾಜಿ ಪಾರ್ಕ್ ಸ್ಮಶಾನದಲ್ಲಿ ಉದ್ಯಮಿ ಸುಭಾಷ್ ದಾಂಡೇಕರ್ ಅಂತ್ಯಕ್ರಿಯೆ ನಡೆದಿದೆ. ಅಂತ್ಯಕ್ರಿಯ ವೇಳೆ ಕುಟುಂಬದ ಸದಸ್ಯರು, ಕ್ಯಾಮ್ಲಿನ್ ಗ್ರೂಪ್ ಉದ್ಯೋಗಿಗಳು ಮತ್ತು ಉದ್ಯಮದ ಗಣ್ಯರು ಉಪಸ್ಥಿತರಿದ್ದರು. ಗುರುವಾರ ಸೆಂಟ್ರಲ್ ಮುಂಬೈನಲ್ಲಿ ನಡೆಯಲಿದೆ ಎಂದು ದಾಂಡೇಕರ್ ಕುಟುಂಬ ಮಾಹಿತಿ ನೀಡಿದೆ.
ನನ್ನ ಹೆಂಡ್ತಿ ಹಿಸ್ಟರಿ ಚೆಕ್ ಮಾಡ್ತಾಳೆ ಅಂತ ಗೋಳಾಡ್ತಿದ್ದ ಗಂಡಂದಿರ ಮನವಿಗೆ ಸ್ಪಂದಿಸಿದ ಜೊಮ್ಯಾಟೋ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.