ಇಂದು ಅಕ್ಷಯ ತೃತೀಯ: ₹20000 ಕೋಟಿ ಮೌಲ್ಯದ ಚಿನ್ನ, ಬೆಳ್ಳಿ ಸೇಲ್‌ ನಿರೀಕ್ಷೆ

Published : Apr 20, 2026, 06:41 AM IST
akshaya tritiya 2026

ಸಾರಾಂಶ

ಅಕ್ಷಯ ತೃತೀಯದಂದು ಚಿನ್ನ ಮತ್ತು ಬೆಳ್ಳಿಯ ಬೆಲೆ ಗಣನೀಯವಾಗಿ ಏರಿಕೆಯಾಗಿದ್ದರೂ, ಈ ವರ್ಷದ ವ್ಯಾಪಾರವು 20,000 ಕೋಟಿ ರುಪಾಯಿ ತಲುಪುವ ನಿರೀಕ್ಷೆಯಿದೆ. ಕಳೆದ ವರ್ಷಕ್ಕಿಂತ ಮಾರಾಟದ ಮೌಲ್ಯ ಹೆಚ್ಚಾಗುವ ಅಂದಾಜಿದೆ.

ನವದೆಹಲಿ (ಏ.20): ಅಕ್ಷಯ ತೃತೀಯದ ಶುಭದಿನವಾದ ಏ.20ರ ಸೋಮವಾರ ದೇಶವ್ಯಾಪಿ ಭಾರೀ ಪ್ರಮಾಣದ ಚಿನ್ನ ಮತ್ತು ಬೆಳ್ಳಿ ಮಾರಾಟದ ನಿರೀಕ್ಷೆ ವ್ಯಕ್ತವಾಗಿದೆ. ಕಳೆದ ವರ್ಷ ದೇಶವ್ಯಾಪಿ 16000 ಕೋಟಿ ರು. ಮೌಲ್ಯದ ಚಿನ್ನ, ಬೆಳ್ಳಿ ಖರೀದಿಯಾಗಿದ್ದರೆ, ಈ ವರ್ಷ ಅದು 20000 ಕೋಟಿ ರು.ಗೆ ತಲುಪುವ ನಿರೀಕ್ಷೆ ಇದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಅಂದಾಜಿಸಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 1 ಲಕ್ಷ ರು.ನಷ್ಟಿತ್ತು. ಆದರೆ ಈ ವರ್ಷ ಅದು 1.58 ಲಕ್ಷ ರು.ಗೆ ಏರಿದೆ. ಮತ್ತೊಂದೆಡೆ ಬೆಳ್ಳಿ ಬೆಲೆ ಕೆಜಿಗೆ 85000 ರು. ಇದ್ದಿದ್ದು ಇದೀಗ 2.55 ಲಕ್ಷ ರು.ಗೆ ತಲುಪಿದೆ. ಅಂದರೆ ಚಿನ್ನದ ಬೆಲೆಯಲ್ಲಿ ಶೇ.58ರಷ್ಟು ಮತ್ತು ಬೆಳ್ಳಿಯ ಬೆಲೆಯಲ್ಲಿ ಶೇ.200ರಷ್ಟು ಏರಿಕೆಯಾಗಿದ್ದರೂ ಖರೀದಿಗೆ ಹೊಡೆತ ಬೀಳುವ ಸಾಧ್ಯತೆ ಇಲ್ಲ. ಅಕ್ಷಯ ತೃತೀಯ ದಿನದಂದು ಖರೀದಿ ಮಾಡಿದರೆ ಒಳ್ಳೆಯದೆಂಬ ನಂಬಿಕೆಯಿಂದ ಈ ವರ್ಷವೂ ಭರ್ಜರಿ ವ್ಯಾಪಾರದ ನಿರೀಕ್ಷೆ ಇದೆ ಎಂದು ಸಿಎಐಟಿ ಕಾರ್ಯದರ್ಶಿ ಪ್ರವೀಣ್‌ ಖಂಡೇಲ್‌ವಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆದರೆ ಈ ವರ್ಷ ಸುಮಾರು 16000 ಕೋಟಿ ರು. ಮೊತ್ತದ 10 ಟನ್‌ನಷ್ಟು ಚಿನ್ನ ಮತ್ತು 4000 ಕೋಟಿ ರು. ಮೌಲ್ಯದ 157 ಟನ್‌ ಬೆಳ್ಳಿ ಮಾರಾಟದ ನಿರೀಕ್ಷೆ ಇದೆ. ಮೇಲ್ನೋಟಕ್ಕೆ ಮೊತ್ತ ಹೆಚ್ಚಳವಾದರೂ, ತೂಕದ ಲೆಕ್ಕದಲ್ಲಿ ಕಳೆದ ವರ್ಷಕ್ಕಿಂತ ಕಡಿಮೆ ಮರಾಟ ಆಗಬಹುದು ಎಂದು ಅಖಿಲ ಭಾರತ ಆಭರಣ ಮತ್ತು ಚಿನ್ನ ವ್ಯಾಪಾರಿಗಳ ಸಂಘಟನೆ ಅಧ್ಯಕ್ಷ ಪಂಕಜ್‌ ಆರೋರಾ ಹೇಳಿದ್ದಾರೆ.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಈ ದಿನಾಂಕದಲ್ಲಿ ಜನಿಸಿದವರು ಹುಟ್ಟಿನಿಂದಲೇ ಸಂಪತ್ತನ್ನು ಸೆಳೆಯುವವರು, ಜಾತಕದಲ್ಲೇ ಇದೆ ಕೋಟ್ಯಾಧಿಪತಿ ಯೋಗ
ಜಪ್ತಿ ಮಾಡಿದ್ದ ಟ್ರಕ್ ರಿಲೀಸ್‌ಗೆ 55 ಲಕ್ಷಕ್ಕೆ ಬೇಡಿಕೆ : 10 ಲಕ್ಷ ಲಂಚ ಸ್ವೀಕರಿಸುತ್ತಿದ್ದ GST ಅಧಿಕಾರಿಗಳು ಎಸಿಬಿ ಬಲೆಗೆ