ಏರ್‌ಟೆಲ್ ಗ್ರಾಹಕರಿಗೆ ಬಂಪರ್ ಆಫರ್, ಐಕ್ಲೌಡ್, ಆ್ಯಪಲ್ ಟಿವಿ, ಆ್ಯಪಲ್ ಆರ್ಕೇಡ್ ಉಚಿತ

Published : Sep 23, 2026, 01:48 PM IST
Big Airtel Offer for Postpaid Customers

ಸಾರಾಂಶ

ಏರ್‌ಟೆಲ್ ಇದೀಗ ಬಂಪರ್ ಕೊಡುಗೆ ಘೋಷಣೆ ಮಾಡಿದೆ. ಪ್ರಮುಖವಾಗಿ ಆ್ಯಪಲ್‌ನ ಐಕ್ಲೌಡ್ ಪ್ಲಸ್ ಜೊತೆಗೆ ಆ್ಯಪಲ್ ಟಿವಿ, ಆ್ಯಪಲ್ ಆರ್ಕೆಡ್ ನೀಡುತ್ತಿದೆ. ಈ ಆಫರ್ ಪಡೆಯಲು ಏನು ಮಾಡಬೇಕು? ಇಲ್ಲಿದೆ ವಿವರ

ಬೆಂಗಳೂರು (ಸೆ.23) : ಭಾರತದ ಟೆಲಿಕಾಂ ಕಂಪನಿಗಳ ಪೈಪೋಟಿ ತೀವ್ರಗೊಳ್ಳುತ್ತಿದೆ. ಗ್ರಾಹಕರ ಆಕರ್ಷಿಸಲು ಆಪರೇಟರ್ ಹಲವು ಆಫರ್ ನೀಡುತ್ತಿದ್ದಾರೆ. ಇದೀಗ ಏರ್‌ಟೆಲ್ ಮಹತ್ವದ ಆಫರ್ ಘೋಷಣೆ ಮಾಡಿದೆ. ಏರ್‌ಟೆಲ್ ತನ್ನ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಆ್ಯಪಲ್ ಸರ್ವೀಸ್‌ಗಳನ್ನು ನೀಡುತ್ತಿದೆ. ಆ್ಯಪಲ್‌ನ ಐಕ್ಲೌಡ್ ಪ್ಲಸ್, ಆ್ಯಪಲ್ ಟಿವಿ, ಆ್ಯಪಲ್ ಆರ್ಕೇಡ್ ಪ್ಯಾಕ್ ಜೊತೆ ನೀಡಲಾಗುತ್ತಿದೆ. ಈ ಮೂಲಕ ಗ್ರಾಹಕರಿಗೆ ಹಲವು ಆಕರ್ಷಕ ಕೊಡುಗೆ ನೀಡಿದೆ.

ಯಾರಿಗೆಲ್ಲಾ ಈ ಆಫರ್ ಲಭ್ಯ

ಏರ್‌ಟೆಲ್‌ ಆರಂಭಿಸಿದ ಹೊಸ ಪೋಸ್ಟ್‌ ಪೇಯ್ಡ್ ಕೊಡುಗೆಯು ಆ್ಯಪಲ್ ನ ವಿಸ್ತರಿತ ಐಕ್ಲೌಡ್+ ಸೌಲಭ್ಯಗಳನ್ನು ಒಳಗೊಂಡಿದೆ. ಇದು ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಅತ್ಯಂತ ಸುರಕ್ಷಿತವಾಗಿ ಸಂಗ್ರಹಿಸಲು ಮತ್ತು ಹಂಚಿಕೊಳ್ಳಲು ನೆರವಾಗುತ್ತದೆ. ಇದಲ್ಲದೆ, ಆ್ಯಪಲ್ ಟಿವಿಯ ಜನಪ್ರಿಯ ಪ್ರಶಸ್ತಿ ವಿಜೇತ ಒರಿಜಿನಲ್ ಕಾರ್ಯಕ್ರಮಗಳನ್ನು ವೀಕ್ಷಿಸುವ ಹಾಗೂ ಆ್ಯಪಲ್ ಆರ್ಕೇಡ್ ಮೂಲಕ ನೂರಾರು ರೋಚಕ ಗೇಮ್‌ಗಳನ್ನು ಆಡುವ ಅವಕಾಶವನ್ನು ಕಲ್ಪಿಸುತ್ತದೆ. ಈ ನೂತನ ಸೌಲಭ್ಯವು ₹999 ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ಫ್ಯಾಮಿಲಿ ಪ್ಲಾನ್ ಹೊಂದಿರುವ ಏರ್‌ಟೆಲ್ ಗ್ರಾಹಕರಿಗೆ ಲಭ್ಯವಾಗಲಿದೆ.

ಭರ್ಜರಿ ಸೌಲಭ್ಯ, ಡೇಟಾ ಸುರಕ್ಷಿತ

ಐಕ್ಲೌಡ್+ ಮೂಲಕ ಏರ್‌ಟೆಲ್‌ನ ಲಕ್ಷಾಂತರ ಪೋಸ್ಟ್‌ ಪೇಯ್ಡ್ ಗ್ರಾಹಕರು ತಮ್ಮ ಫೋಟೋಗಳು, ಫೈಲ್‌ಗಳು, ಪಾಸ್‌ವರ್ಡ್‌ಗಳು, ಸಂಪರ್ಕ ಸಂಖ್ಯೆಗಳು ಸೇರಿದಂತೆ ಪ್ರಮುಖ ಮಾಹಿತಿಯನ್ನು ತಮ್ಮ ಆ್ಯಪಲ್ ಡಿವೈಸ್‌ಗಳಲ್ಲಿ ಸುರಕ್ಷಿತವಾಗಿ ಶೇಖರಿಸಿಟ್ಟುಕೊಳ್ಳಲು, ಸಿಂಕ್ ಮಾಡಲು ಮತ್ತು ಸುಲಭವಾಗಿ ಪಡೆಯಲು ಸಾಧ್ಯವಾಗಲಿದೆ. ಡಿಜಿಟಲ್ ಮಾಹಿತಿಯು ಸುರಕ್ಷಿತವಾಗಿ ಬ್ಯಾಕಪ್ ಆಗುವುದರಿಂದ, ಹೊಸ ಡಿವೈಸ್ ಪಡೆದಾಗಲೂ ಡೇಟಾವನ್ನು ಸುಲಭವಾಗಿ ಮರಳಿ ಪಡೆಯಬಹುದು. ಇದರೊಂದಿಗೆ, ಆ್ಯಪಲ್ ಟಿವಿಯು ಆ್ಯಪಲ್‌ನ ಅತ್ಯುನ್ನತ ಗುಣಮಟ್ಟದ ಒರಿಜಿನಲ್ ಸರಣಿಗಳು ಮತ್ತು ಚಲನಚಿತ್ರಗಳ ವೀಕ್ಷಣೆಗೆ ಅವಕಾಶ ನೀಡಿದರೆ, ಆ್ಯಪಲ್ ಆರ್ಕೇಡ್ ಯಾವುದೇ ಕಿರಿಕಿರಿಯುಂಟುಮಾಡುವ ಜಾಹೀರಾತುಗಳು ಅಥವಾ ಆ್ಯಪ್ ಒಳಗಿನ ಹೆಚ್ಚುವರಿ ಖರೀದಿಗಳಿಲ್ಲದೆ (ಇನ್-ಆ್ಯಪ್ ಪರ್ಚೇಸ್) ನೂರಾರು ಗೇಮ್‌ಗಳನ್ನು ಅನಿಯಮಿತವಾಗಿ ಆಡುವ ಸೌಲಭ್ಯವನ್ನು ಒದಗಿಸುತ್ತದೆ.

ಮೂವರು ಸದಸ್ಯರ ಕುಟುಂಬಕ್ಕೆ ಫಾಸ್ಟ್‌ ಲೇನ್

999 ರೂಪಾಯಿ ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಯೋಜನೆಯು ಮೂವರು ಸದಸ್ಯರ ಕುಟುಂಬಕ್ಕೆ ಫಾಸ್ಟ್‌ ಲೇನ್ ತಂತ್ರಜ್ಞಾನದೊಂದಿಗೆ ಅನ್‌ಲಿಮಿಟೆಡ್ ಡೇಟಾ, ಸ್ಪ್ಯಾಮ್ ಕರೆಗಳಿಂದ ಪ್ರೊಟೆಕ್ಷನ್ ಹಾಗೂ ಮನರಂಜನಾ ಸಬ್‌ಸ್ಕ್ರಪ್ಶನ್ ನೀಡುತ್ತಿದೆ. ಇದೀಗ ಆ್ಯಪಲ್ನ ಐಕ್ಲೌಡ್+, ಆ್ಯಪಲ್ ಟಿವಿ ಮತ್ತು ಆ್ಯಪಲ್ ಆರ್ಕೇಡ್ ಸೇರ್ಪಡೆಯೊಂದಿಗೆ ಸಂಪರ್ಕ, ಮನರಂಜನೆ, ಗೇಮಿಂಗ್ ಮತ್ತು ಕ್ಲೌಡ್ ಸ್ಟೋರೇಜ್‌ಗಳು ಒಂದೇ ಪ್ಲಾನ್‌ನಲ್ಲಿ ದೊರೆಯಲಿವೆ. ಇದು ಕುಟುಂಬಗಳಿಗೆ ಮತ್ತಷ್ಟು ಪ್ರಯೋಜನಕಾರಿಯಾಗಲಿದ್ದು, ಗ್ರಾಹಕರು ತಮ್ಮ ಪೋಸ್ಟ್‌ಪೇಯ್ಡ್ ಯೋಜನೆಯನ್ನು ಅಪ್‌ಗ್ರೇಡ್ ಮಾಡಿಕೊಳ್ಳಲು ಮಹತ್ವದ ಕಾರಣವಾಗಲಿದೆ. ಗ್ರಾಹಕರು ಏರ್‌ಟೆಲ್ ಆ್ಯಪ್ ಮೂಲಕ ಅಥವಾ ಹತ್ತಿರದ ಯಾವುದೇ ಏರ್‌ಟೆಲ್ ಮಳಿಗೆಗೆ ಭೇಟಿ ನೀಡಿ ಈ ಯೋಜನೆಗಳಿಗೆ ಸುಲಭವಾಗಿ ಅಪ್‌ಗ್ರೇಡ್ ಮಾಡಿಕೊಳ್ಳಬಹುದಾಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಶಿವಮೊಗ್ಗದ MSME ಉದ್ಯಮಿಗಳಿಗೆ ಡಿಜಿಟಲ್‌ ಬೂಸ್ಟ್‌; ಇ-ಕಾಮರ್ಸ್‌ನಿಂದ ಹೊಸ ಮಾರುಕಟ್ಟೆ ಅವಕಾಶ!
ಡಿ-ಮಾರ್ಟ್‌ನಲ್ಲಿ ಆಫರ್ ಕಂಡ ತಕ್ಷಣ ಖರೀದಿಸಬೇಡಿ! ಈ 5 ವಸ್ತುಗಳು ನಿಮ್ಮ ಜೇಬಿಗೆ ಕತ್ತರಿ ಹಾಕಬಹುದು