
ಮುಂಬೈ (ಸೆ.23) ಉದ್ಯಮಿಗಳು ಪ್ರತಿಷ್ಠಿತ ಏರಿಯಾಗಳಲ್ಲಿ ಐಷಾರಾಮಿ ಮನೆ ಖರೀದಿಸುವುದು ಹೊಸದೇನಲ್ಲ. ನೂರಾರು ಕೋಟಿ ರೂಪಾಯಿಗೆ ಮನೆ, ಬಂಗಲೆ, ವಾಣಿಜ್ಯ ಕಟ್ಟಡಗಳನ್ನು ಖರೀದಿ ಮಾಡುತ್ತಾರೆ. ಇದೀಗ ಮುಂಬೈನ ಏಂಜಲ್ ಒನ್ ಸ್ಟಾಕ್‌ಬ್ರೋಕಿಂಗ್ ಕಂಪನಿ ಸಂಸ್ಥಾಪಕ ಹಾಗೂ ಚೇರ್ಮೆನ್ ದಿನೇಶ್ ಥಾಕ್ಕರ್ ಹೊಸ ದಾಖಲೆ ಬರೆದಿದ್ದಾರೆ. ದಿನೇಶ್ ಕಾಕ್ಕರ್ ಮನೆ, ಬಂಗಲೆ ಬದಲು ಲುಕ್ಷರಿ ಅಪಾರ್ಟ್‌ಮೆಂಟ್‌ನ ಒಂದು ಇಡೀ ಟವರ್ ಖರೀದಿಸಿದ್ದಾರೆ. ಬರೋಬ್ಬರಿ 711 ಕೋಟಿ ರೂಪಾಯಿಗೆ ಈ ಟವರ್ ಖರೀದಿಸಿದ್ದಾರೆ. ಇದು ಭಾರತದಲ್ಲಿ ಅತೀ ದುಬಾರಿ ಬೆಲೆ ಖರೀದಿಯಾದ ಏಕೈಕ ರೆಸೆಡೆನ್ಶಿಯಲ್ ಯೂನಿಟ್ ಅನ್ನೋ ದಾಖಲೆ ಬರೆದಿದೆ.
ಮುಂಬೈನ ಜುಹುವಿನಲ್ಲಿರುವ ಪ್ರತಿಷ್ಠಿತ ಲುಕ್ಷುರಿ ಎಂಬಸಿ ಟೆರಾಜಾ ಅಪಾರ್ಟ್‌ಮೆಂಟ್ ಆಗಿದೆ. ಇದರ G+7 ಇಡೀ ಟವರ್‌ನ್ನು ದನೇಶ್ ಥಾಕ್ಕರ್ ಖರೀದಿಸಿದ್ದಾರೆ. ಈ ಟವರ್ 8 ಮಹಡಿ ಹೊಂದಿದೆ. 63,000 ಚದರ ಅಡಿ ಹೊಂದಿರುವ ಅತ್ಯಂತ ಐಷಾರಾಮಿ ಹಾಗೂ ಎಲ್ಲಾ ಸೌಕರ್ಯಗಳನ್ನೊಳಗೊಂಡ ಅಪಾರ್ಟ್‌ಮೆಂಟ್ ಇದಾಗಿದೆ.
ಮುಂಬೈನ ಜುಹುವಿನಲ್ಲಿ ಈ ಟವರ್ ಮಾರಾಟ ಮಾಡಿದ್ದು ಬೆಂಗಳೂರಿನ ರಿಯಲ್ ಎಸ್ಟೇಟ್ ಕಂಪನಿ ಎಂಬಸಿ ಡೆವಲಪ್‌ಮೆಂಟ್. ಎಂಜಲ್ ಒನ್ ಲಿಮಿಟೆಡ್ ಚೇರ್ಮೆನ್ ದಿನೇಶ್ ಥಾಕ್ಕರ್ ಜೊತೆ MoU ಸಹಿ ಮಾಡಿದೆ. ಸೆಪ್ಟೆಂಬರ್ 22 ರಂದು ಈ ಮಾರಾಟ ಡೀಲ್ ಕುರಿತು ಎಂಬಸಿ ಡೆವಲಪ್‌ಮೆಂಟ್ ಘೋಷಣೆ ಮಾಡಿದೆ. ಮಾರಾಟ ವಹಿವಾಟಿನ ಮೌಲ್ಯ 711 ಕೋಟಿ ರೂಪಾಯಿ ಎಂದು ಉಲ್ಲೇಖಿಸಿದೆ.
ದಿನೇಶ್ ಥಾಕ್ಕರ್ ಮುಂಬೈನ ಶ್ರೀಮಂತ ಉದ್ಯಮಗಳಲ್ಲಿ ಒಬ್ಬರಾಗಿದ್ದಾರೆ. ವಿಶೇಷ ಅಂದರೆ ದಿನೇಶ್ ಥಾಕ್ಕರ್ ಪಿಯುಸಿ ಬಳಿಕ ವಿದ್ಯಾಭ್ಯಾಸ ಮುಂದುವರಿಸಿಲ್ಲ. ದಿನೇಶ್ ಥಾಕ್ಕರ್ ಪೋಷಕರು ಗುಜರಾತ್‌ನಲ್ಲಿ ಬಟ್ಟೆ ವ್ಯಾಪಾಪಸ್ಥರಾಗಿದ್ದರು. ದಿನೇಶ್ ಥಾಕ್ಕರ್ ತಂದೆಯ ವ್ಯಾಪಾರ ಮುಂದುವರಿಸಲು ಇಷ್ಟವಿರಲಿಲ್ಲ. ಹೀಗಾಗಿ ಮುಂಬೈಗೆ ಬಂದಿಳಿದ ದಿನೇಶ್ ಥಾಕ್ಕರ್ ದೊಡ್ಡ ಉದ್ಯಮಿಯಾಗಬೇಕೆಂದು ಪಣತೊಟ್ಟಿದ್ದರು. ಸ್ಟಾಕ್ ಮಾರ್ಕೆಟ್‌ನಲ್ಲಿ ತೊಡಗಿಸಿಕೊಂಡ ದಿನೇಶ್ ಥಾಕ್ಕರ್ ಬಹುಬೇಗನೆ ಬ್ರೋಕಿಂಗ್ ಪಟ್ಟುಗಳನ್ನು ಕರಗತ ಮಾಡಿಕೊಂಡಿದ್ದರು.
1996ರಲ್ಲಿ ಎಂಜಲ್ ಬ್ರೋಕಿಂಗ್ ಕಂಪನಿ ಆರಂಭಿಸಿದ ದಿನೇಶ್ ಥಾಕ್ಕರ್ ಇದೀಗ ಭಾರತದ ಅತೀ ದೊಡ್ಡ ಸ್ಟಾಕ್ ಬ್ರೋಕರ್ ಕಂಪನಿಗಳಲ್ಲಿ ಎಂಜಲ್ ಒನ್ ಕೂಡ ಒಂದಾಗಿದೆ. ಇದೀಗ ಒಂದೇ ಬಾರಿಗೆ 711 ಕೋಟಿ ರೂಪಾಯಿ ಮನೆ ಖರೀದಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಮುಂಬೈನಲ್ಲಿ ಮುಕೇಶ್ ಅಂಬಾನಿ ಸೇರಿದಂತೆ ಹಲವು ಉದ್ಯಮಿಗಳು ಮನೆ, ಬಂಗಲೆ ಸೇರಿದಂತೆ ಹಲವು ಆಸ್ತಿ ಖರೀದಿಸಿದ್ದಾರೆ. ಆದರೆ ಈ ಎಲ್ಲಾ ದಾಖಲೆಯನ್ನು ಒಂದೇ ಖರೀದಿಯಲ್ಲಿ ದಿನೇಶ್ ಥಾಕ್ಕರ್ ಮೀರಿಸಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.