
ಬೆಂಗಳೂರು (ಜ.29) ಭಾರತದಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಯಾಗಿ ಇದೀಗ ಗ್ರಾಹಕರಿಗೆ ಅತ್ಯುತ್ತಮ ಸೇವೆ ಲಭ್ಯವಾಗುತ್ತಿದೆ. ಈ ಪೈಕಿ ಎರ್ಟೆಲ್ ಇದೀಗ ತನ್ನ 36 ಕೋಟಿ ಗ್ರಾಹಕರಿಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ, ಉಚಿತವಾಗಿ ಅಡೋಬ್ ಎಕ್ಸ್ ಪ್ರೆಸ್ ಪ್ರೀಮಿಯಂ ಒದಗಿಸುವುದಾಗಿ ಘೋಷಿಸಿದೆ. ಈ ಐತಿಹಾಸಿಕ ಮತ್ತು ಇದೇ ಮೊದಲ ಬಾರಿಗೆ ನಡೆದಿರುವ ಸಹಭಾಗಿತ್ವವು, ಎಲ್ಲಾ ಏರ್ ಟೆಲ್ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೋಶಿಯಲ್ ಮೀಡಿಯಾ ಪೋಸ್ಟ್ ಗಳು, ಮಾರ್ಕೆಟಿಂಗ್ ಕಂಟೆಂಟ್ ಗಳು, ಸಣ್ಣ ವಿಡಿಯೋಗಳು ಕ್ರಿಯೇಟ್ ಮಾಡಲು ಹಾಗೂ ಪೋಸ್ಟ್ ಮಾಡಲು ಸಾಧ್ಯವಾಗಲಿದೆ. ಯಾವುದೇ ಅಡೇ ತಡೆ ಇಲ್ಲದೇ ವಿಡಿಯೋ, ಪೋಸ್ಟ್ ಮಾಡಲು ಸಾಧ್ಯ.
ಗ್ರಾಹಕರು ಇಚ್ಛಿಸುವ ಯಾವುದೇ ವಿನ್ಯಾಸವನ್ನು ಅತ್ಯಂತ ವೇಗವಾಗಿ ಮತ್ತು ಸುಲಭವಾಗಿ ಸೃಷ್ಟಿಸಲು ಅಡೋಬ್ ಎಕ್ಸ್ ಪ್ರೆಸ್ ಪ್ರೀಮಿಯಂ ಒದಗಿಸುತ್ತದೆ. ಸುಮಾರು 4,000 ರೂಪಾಯಿ ಮೌಲ್ಯದ ಅಡೋಬ್ ಎಕ್ಸ್ ಪ್ರೆಸ್ ಪ್ರೀಮಿಯಂ ಈಗ ಒಂದು ವರ್ಷದವರೆಗೆ ಉಚಿತವಾಗಿ ಲಭ್ಯವಿದೆ. ವಿನ್ಯಾಸದ ಅನುಭವ ಇರಲಿ ಇಲ್ಲದಿರಲಿ, ಎಲ್ಲಾ ಏರ್‌ಟೆಲ್ ಗ್ರಾಹಕರು ತಮ್ಮ ಸೃಜನಶೀಲ ಸಾಮರ್ಥ್ಯವನ್ನು ಪ್ರದರ್ಶಿಸಲು ಮತ್ತು ವೃತ್ತಿಪರ ಗುಣಮಟ್ಟದ ಕಂಟೆಂಟ್ ತಯಾರಿಸಲು ಇದು ಅನುವು ಮಾಡಿಕೊಡುತ್ತದೆ.
ಈ ಅಡೋಬ್ ಎಕ್ಸ್ ಪ್ರೆಸ್ ಪ್ರೀಮಿಯಂ ಚಂದಾದಾರಿಕೆಯು ಮೊಬೈಲ್, ವೈ -ಫೈ ಮತ್ತು ಡಿಟಿಎಚ್ ಸೇರಿದಂತೆ ಎಲ್ಲಾ ಏರ್ ಟೆಲ್ ಗ್ರಾಹಕರಿಗೆ ಲಭ್ಯವಿರುತ್ತದೆ. ಗ್ರಾಹಕರು ಯಾವುದೇ ಕ್ರೆಡಿಟ್ ಕಾರ್ಡ್ ಮಾಹಿತಿ ಒದಗಿಸುವ ಅಗತ್ಯವಿಲ್ಲದೆ, ಏರ್ ಟೆಲ್ ಥ್ಯಾಂಕ್ಸ್ ಆ್ಯಪ್ ಗೆ ಲಾಗಿನ್ ಆಗುವ ಮೂಲಕ ಈ ಚಂದಾದಾರಿಕೆಯನ್ನು ಪಡೆದುಕೊಳ್ಳಬಹುದು.
ಲಕ್ಷಾಂತರ ಭಾರತೀಯರಿಗೆ ಅತ್ಯಾಧುನಿಕ ಎಐ ಪರಿಕರಗಳ ಮೂಲಕ ಹೊಸದನ್ನು ಸೃಷ್ಟಿಸಲು ಮತ್ತು ಹೊಸತನ ಒದಗಿಸಲು ಶಕ್ತಿ ತುಂಬುವ ಕೆಲಸವಾಗಿದೆ ಎಂದು ಏರ್‌ಟೆಲ್ ಸಿಇಓ ಸಿದ್ಧಾರ್ಥ್ ಶರ್ಮಾ ಹೇಳಿದ್ದಾರೆ. ತನ್ನ ಮೊದಲ ರೆಸ್ಯೂಮೆ ಸಿದ್ಧಪಡಿಸುತ್ತಿರುವ ವಿದ್ಯಾರ್ಥಿಯಿಂದ ಹಿಡಿದು, ಪೋಸ್ಟರ್ ವಿನ್ಯಾಸಗೊಳಿಸಲು ಬಯಸುತ್ತಿರುವ ಸಣ್ಣ ಉದ್ಯಮಿ ಅಥವಾ ಫಾಲೋವರ್ಸ್ ಗಳಿಗಾಗಿ ವಿಡಿಯೋ ಎಡಿಟ್ ಮಾಡುತ್ತಿರುವ ಕ್ರಿಯೇಟರ್‌ವರೆಗೆ - ಪ್ರತಿಯೊಬ್ಬ ಏರ್ ಟೆಲ್ ಗ್ರಾಹಕನಿಗೂ ತಮ್ಮ ಅಭಿವ್ಯಕ್ತಿಗೆ ಪೂರಕವಾದ ಸಾಧನಗಳನ್ನು ಒದಗಿಸುವುದು ನಮ್ಮ ಗುರಿಯಾಗಿದೆ. ಅಡೋಬ್ ಎಕ್ಸ್ ಪ್ರೆಸ್ ಮೂಲಕ ವಿಶ್ವದರ್ಜೆಯ ಸೃಜನಶೀಲ ಪರಿಕರಗಳು ಇನ್ನು ಮುಂದೆ ಐಷಾರಾಮಿ ಅಲ್ಲ, ಅವು ಪ್ರತಿಯೊಬ್ಬ ಭಾರತೀಯನ ಕೈಗೆಟಕುವ ಶಕ್ತಿಯಾಗಿದೆ ಎಂದಿದ್ದಾರೆ.
ಅಡೋಬ್ ಎಕ್ಸ್ ಪ್ರೆಸ್ ಪ್ರೀಮಿಯಂ, ಅಡೋಬ್ ನ ಅತ್ಯುತ್ತಮ ವೈಶಿಷ್ಟ್ಯಗಳನ್ನು ಜನರ ಕೈಗೆಟುಕುವಂತೆ ಮಾಡುತ್ತದೆ. ಈ ಚಂದಾದಾರಿಕೆಯು ಭಾರತೀಯ ಮನೆಮಂದಿಯ ಹಬ್ಬಗಳು, ಮದುವೆಗಳು ಮತ್ತು ಸ್ಥಳೀಯ ಉದ್ಯಮಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾದ ಸಾವಿರಾರು ಸಿದ್ಧ ಟೆಂಪ್ಲೇಟ್ ಗಳನ್ನು ಹೊಂದಲು ಅನುವು ಮಾಡಿಕೊಡುತ್ತದೆ. ಇದರೊಂದಿಗೆ, ಬ್ಯಾಕ್ ಗ್ರೌಂಡ್ ಅನ್ನು ತಕ್ಷಣವೇ ತೆಗೆದುಹಾಕುವುದು, ಕಸ್ಟಮ್ ಚಿತ್ರಗಳನ್ನು ಸೃಷ್ಟಿಸುವುದು, ಒಂದೇ ಟ್ಯಾಪ್ ನಲ್ಲಿ ವಿಡಿಯೋ ಎಡಿಟಿಂಗ್, ಪ್ರೀಮಿಯಂ ಅಡೋಬ್ ಸ್ಟಾಕ್ ಅಸೆಟ್ ಗಳು, 30,000 ಕ್ಕೂ ಹೆಚ್ಚು ವೃತ್ತಿಪರ ಫಾಂಟ್ ಗಳು ಹಾಗೂ 100 ಜಿಬಿ ಕ್ಲೌಡ್ ಸ್ಟೋರೇಜ್ ನಂತಹ ಎಐ ಚಾಲಿತ ಸೌಲಭ್ಯಗಳನ್ನು ಇದು ಒಳಗೊಂಡಿದೆ.
ಅಲ್ಲದೆ ಆಟೋ ಕ್ಯಾಪ್ಶನ್ ಗಳು ಮತ್ತು ಇನ್ ಸ್ಟಾಂಟ್ ರೀಸೈಜ್ ಮುಂತಾದ ಸುಧಾರಿತ ವೈಶಿಷ್ಟ್ಯಗಳು ಯಾವುದೇ ವಾಟರ್‌ಮಾರ್ಕ್ ಇಲ್ಲದೆ ಲಭ್ಯವಿದ್ದು, ವಿವಿಧ ಡಿವೈಸ್ ಗಳ ನಡುವೆ ಸುಲಭವಾಗಿ ಸಿಂಕ್ ಆಗುತ್ತವೆ. ಅಡೋಬ್ ಎಕ್ಸ್ ಪ್ರೆಸ್ ಇಂಗ್ಲಿಷ್, ಹಿಂದಿ, ತಮಿಳು ಮತ್ತು ಬೆಂಗಾಲಿ ಭಾಷೆಗಳಲ್ಲಿ ಲಭ್ಯವಿದ್ದು, ಬಳಕೆದಾರರು ತಮ್ಮ ತಮ್ಮ ಭಾಷೆಗಳಲ್ಲೇ ಈ ಸೌಲಭ್ಯಗಳನ್ನು ಬಳಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಹಬ್ಬದ ಶುಭಾಶಯ ಪತ್ರಗಳು, ಮದುವೆಯ ಆಹ್ವಾನ ಪತ್ರಿಕೆಗಳು, ಸ್ಥಳೀಯ ಅಂಗಡಿಗಳ ಪ್ರಚಾರದ ಕಂಟೆಂಟ್ ಗಳು ಅಥವಾ ವಾಟ್ಸಾಪ್ ಸ್ಟೇಟಸ್ ಅಪ್ ಡೇಟ್ ಗಳನ್ನು ತಯಾರಿಸಲು ಅಡೋಬ್ ಎಕ್ಸ್ ಪ್ರೆಸ್ ಎಲ್ಲರಿಗೂ ಅತ್ಯುತ್ತಮ ವೇದಿಕೆಯಾಗಿದೆ. ಏರ್‌ಟೆಲ್ ಜೊತೆಗೆ ಅಡೋಬ್ ಎಕ್ಸ್ ಪ್ರೆಸ್ ಸಹಯೋಗ ಉತ್ತಮವಾಗಿ ಗುರುತಿಸಿಕೊಳ್ಳಲು ನೆರವಾಗಲಿದೆ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.