
ಬೆಂಗಳೂರು (ಅ.08): ಭಾರತದಲ್ಲಿ ಏರ್‌ಟೆಲ್ ಹಲವು ಕೊಡುಗೆಗಳ ಮೂಲಕ ಗ್ರಾಹಕರಿಗೆ ಹಲವು ಪ್ಲಾನ್ ನೀಡುತ್ತಿದೆ. ಇದೀಗ ಅನ್‌ಲಿಮಿಟೆಡ್ ಡೇಟಾ, ಮನರಂಜನೆ ಸೇರಿದಂತೆ ಹಲವು ವಿಶೇಷ ಕೊಡುಗೆಗಳ ಜೊತೆ ಸಂಪೂರ್ಣ ಉಚಿತ ಇಂಟರ್‌ನ್ಯಾಷನಲ್ ರೋಮಿಂಗ್ ಸೌಲಭ್ಯ ನೀಡುತ್ತಿದೆ. ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಈ ಕೊಡುಗೆ ಘೋಷಿಸಲಾಗಿದೆ. ಅಕ್ಟೋಬರ್ 8 ರಿಂದ ಏರ್‌ಟೆಲ್ ಗ್ರಾಹಕರು ಈ ಹೊಸ ಪೋಸ್ಟ್ ಪೇಯ್ಡ್ ಪ್ಲಾನ್ ಮೂಲಕ ಎಲ್ಲಾ ಹಾಲಿ ಪ್ರಯೋಜನಗಳ ಜೊತೆಗೆ ಪ್ರತಿ ವರ್ಷ ಒಂದು ಅಂತರರಾಷ್ಟ್ರೀಯ ಪ್ರವಾಸದಲ್ಲಿ ಉಚಿತ ರೋಮಿಂಗ್ ಸೌಲಭ್ಯವನ್ನು ಆನಂದಿಸಬಹುದು.
ಈ ಉಚಿತ ಇಂಟರ್‌ನ್ಯಾಷನಲ್ ರೋಮಿಂಗ್ ಪ್ಯಾಕ್ 5 ದಿನಗಳ ಮಾನ್ಯತೆ (ವ್ಯಾಲಿಡಿಟಿ) ಹೊಂದಿದ್ದು, 5 ಜಿಬಿ ಡೇಟಾ, 60 ನಿಮಿಷಗಳ ಕರೆಗಳು, 25 ಔಟ್‌ಗೋಯಿಂಗ್ ಎಸ್ಎಎಸ್ ಗಳು ಹಾಗೂ ಉಚಿತ ಇನ್‌ಕಮಿಂಗ್ ಎಸ್ಎಂಎಸ್ ಒಳಗೊಂಡಿದೆ. ಗ್ರಾಹಕರು ಈ 5 ದಿನಗಳ ಪ್ಯಾಕ್ ತಮಗೆ ಬೇಕಾದ ನಿಖರ ಸಮಯದಲ್ಲಿ ಸಕ್ರಿಯಗೊಳಿಸಿಕೊಳ್ಳುವ ಸಂಪೂರ್ಣ ಸೌಲಭ್ಯವನ್ನು ಹೊಂದಿದೆ. ಇದರಿಂದ ವಿದೇಶ ಪ್ರಯಾಣದ ವೇಳೆ ಸಂಪರ್ಕದಲ್ಲಿರುವುದು ಇನ್ನಷ್ಟು ಸುಲಭವಾಗಲಿದೆ. ಏರ್‌ಟೆಲ್ ಪೋಸ್ಟ್‌ಪೇಯ್ಡ್ ಫ್ಯಾಮಿಲಿ ಪ್ಲಾನ್ ಹೊಂದಿರುವ ಗ್ರಾಹಕರಿಗೆ, ಆ ಪ್ಲಾನ್‌ನಲ್ಲಿ ಒಳಗೊಂಡಿರುವ ಪ್ರತಿಯೊಬ್ಬ ಕುಟುಂಬ ಸದಸ್ಯರಿಗೂ ಈ ಉಚಿತ ಇಂಟರ್‌ನ್ಯಾಷನಲ್ ರೋಮಿಂಗ್ ಆಯ್ಕೆ ಲಭ್ಯವಿರುತ್ತದೆ.
ಫಾಸ್ಟ್ ಲೇನ್ ಟೆಕ್ನಾಲಜಿ, ಅನ್‌ಲಿಮಿಟೆಡ್ ಡೇಟಾ, ಸ್ಪ್ಯಾಮ್ ಹಾಗೂ ವಂಚನೆಯ ಲಿಂಕ್‌ಗಳ ವಿರುದ್ಧ ನೆಟ್‌ವರ್ಕ್ ಮಟ್ಟದ ರಕ್ಷಣೆಯೊಂದಿಗೆ ಅತ್ಯುತ್ತಮ ಅನುಭವ ನೀಡುವ ಏರ್‌ಟೆಲ್ ಪೋಸ್ಟ್‌ಪೇಯ್ಡ್ ಪ್ಲಾನ್‌ಗಳಿಗೆ ಉಚಿತ ಇಂಟರ್‌ನ್ಯಾಷನಲ್ ರೋಮಿಂಗ್ ಹೊಸ ಸೇರ್ಪಡೆಯಾಗಿದೆ. ಗ್ರಾಹಕರು ವಿವಿಧ ಮನರಂಜನಾ ಚಂದಾದಾರಿಕೆಗಳನ್ನು (ಸಬ್‌ಸ್ಕ್ರಿಪ್ಷನ್‌ಗಳು) ಆನಂದಿಸುವುದರ ಜೊತೆಗೆ, ಏರ್‌ಟೆಲ್ ಪೋಸ್ಟ್‌ಪೇಯ್ಡ್ ಅಡ್ವಾಂಟೇಜ್ ಕ್ಲಬ್ ಮೂಲಕ ಕಾಮಿಡಿ ಶೋಗಳು, ಸಿನಿಮಾ ಪ್ರೀಮಿಯರ್‌ಗಳು ಮತ್ತು ಸಂಗೀತ ಕಛೇರಿಗಳು ಸೇರಿದಂತೆ ಹಲವು ವಿಶೇಷ ಅನುಭವಗಳ ಪ್ರವೇಶಾವಕಾಶವನ್ನೂ ಪಡೆಯಬಹುದು.
ಅಕ್ಟೋಬರ್ 8, 2026 ರಿಂದ ಜಾರಿಗೆ ಬರುವಂತೆ, ಏರ್‌ಟೆಲ್ ಪೋಸ್ಟ್ ಪೇಯ್ಡ್ ಆಯ್ಕೆ ಮಾಡಿಕೊಳ್ಳುವ ಎಲ್ಲಾ ಗ್ರಾಹಕರಿಗೂ ಈ ಪ್ಲಾನ್‌ಗಳು ಲಭ್ಯವಿರುತ್ತವೆ. ಹಾಲಿ ಏರ್‌ಟೆಲ್ ಗ್ರಾಹಕರು (ಹಳೆಯ ಪೋಸ್ಟ್ ಪೇಯ್ಡ್ ಅಥವಾ ಪ್ರಿಪೇಯ್ಡ್ ಎರಡೂ ಬಳಕೆದಾರರು) ಏರ್‌ಟೆಲ್ ಆ್ಯಪ್ ಮೂಲಕ ಅಥವಾ ಹತ್ತಿರದ ಏರ್‌ಟೆಲ್ ಸ್ಟೋರ್‌ಗೆ ಭೇಟಿ ನೀಡುವ ಮೂಲಕ ಸುಲಭವಾಗಿ ಈ ಪ್ಲಾನ್‌ಗಳಿಗೆ ಅಪ್‌ಗ್ರೇಡ್ ಆಗಬಹುದು. ಏರ್‌ಟೆಲ್ ಹೊರತುಪಡಿಸಿ ಇತರ ನೆಟ್‌ವರ್ಕ್ ಬಳಕೆದಾರರು ಏರ್‌ಟೆಲ್ ಆ್ಯಪ್ ಮೂಲಕ ಸ್ವಿಚಿಂಗ್ ರಿಕ್ವೆಸ್ಟ್ ಸಲ್ಲಿಸಿ ಅಥವಾ ಏರ್‌ಟೆಲ್ ಸ್ಟೋರ್‌ಗೆ ಭೇಟಿ ನೀಡಿ ಏರ್‌ಟೆಲ್ ಪೋಸ್ಟ್‌ಪೇಯ್ಡ್‌ಗೆ ಬದಲಾಗಬಹುದು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.