ಭಾರತ ಒನ್ ಬೆಲ್ಟ್ ಒನ್ ರೋಡ್ ಒಪ್ಪಿಕೊಂಡ್ರೆ ಒಳ್ಳೇದು: ಚೀನಾ!

By Web DeskFirst Published Apr 19, 2019, 3:56 PM IST
Highlights

ಭಾರತದ ಮೇಲೆ ಒತ್ತಡ ಹೇರಲು ಮುಂದಾದ ಚೀನಾ| ಒನ್ ಬೆಲ್ಟ್ ಒನ್ ರೋಡ್ ಯೋಜನೆ ಒಪ್ಪಿಕೊಳ್ಳುವಂತೆ ಸಲಹೆ| ಬೆಲ್ಟ್ ರೋಡ್ ಫೋರಂನಿಂದ ಭಾರತಕ್ಕೆ ಲಾಭವಾಗಲಿದೆ ಎಂದ ಚೀನಾ| ಇದೇ ಏ.25-27ರಂದು ಬಿಜಿಂಗ್ ನಲ್ಲಿ ಬೆಲ್ಟ್ ರೋಡ್ ಫೋರಂ(BRF) ಸಭೆ| ಎರಡನೇ ಬಾರಿ BRF ಸಭೆ ಬಹಿಷ್ಕರಿಸಿದ ಭಾರತ| ಸಭೆಯಲ್ಲಿ 50 ದೇಶ ಮತ್ತು 90 ಅಂತಾರಾಷ್ಟ್ರೀಯ ಸಂಸ್ಥೆಗಳು ಭಾಗಿ|

ಬಿಜಿಂಗ್(ಏ.19): ಚೀನಾದ ಮಹತ್ವಾಕಾಂಕ್ಷಿ ಯೋಜನೆಯಾದ ಒನ್ ಬೆಲ್ಟ್, ಒನ್ ರೋಡ್ ಯೋಜನೆಯನ್ನು ಭಾರತ ತೀವ್ರವಾಗಿ ವಿರೋಧಿಸುತ್ತಿದೆ. ನೆಲ ಮತ್ತು ಸಮುದ್ರ ಮಾರ್ಗದ ಮೂಲಕ ತನ್ನನ್ನು ಸುತ್ತುವರೆಯುವ ಚೀನಾದ ತಂತ್ರವಿದು ಎಂದು ಭಾರತ ವಾದಿಸುತ್ತಿದೆ.

ಅದರಲ್ಲೂ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್(CPEC) ಕುರಿತು ತೀವ್ರ ಆಕ್ಷೇಪ ಹೊಂದಿರುವ ಭಾರತ, ಈ ಮಾರ್ಗ ವಿವಾದಿತ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹಾದು ಹೋಗುವುದಕ್ಕೆ ಭಾರತ ವಿರೋಧಿಸುತ್ತಿದೆ.

ಸುಮಾರು 60 ಬಿಲಿಯನ್ ಯುಎಸ್ ಡಾಲರ್ ಮೊತ್ತದಲ್ಲಿ ಸಿಪಿಇಸಿ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಇದು ಭಾರತವನ್ನು ಕಟ್ಟಿಹಾಕುವ ಕುತಂತ್ರ ಎಂಬುದು ಗೋಡೆ ಮೇಲಿನ ಬರಹದಷ್ಟೇ ಸತ್ಯ.

ಈ ಮಧ್ಯೆ ಒನ್ ಬೆಲ್ಟ್ ಒನ್ ರೋಡ್ ಯೋಜನೆಯನ್ನು ಭಾರತ ಒಪ್ಪಿಕೊಂಡರೆ ಆರ್ಥಿಕವಾಗಿ ಅದಕ್ಕೆ ಲಾಭವಾಗಲಿದೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹೇಳಿದ್ದಾರೆ. ಈ ಮೂಲಕ ಭಾರತದ ಮೇಲೆ ಒತ್ತಡ ಹೇರುವ ತಂತ್ರಕ್ಕೆ ಚೀನಾ ಮುಂದಾಗಿರುವುದು ಸ್ಪಷ್ಟವಾಗಿದೆ.

ಇದೇ ಏ.25-27ರಂದು ಬಿಜಿಂಗ್ ನಲ್ಲಿ ಬೆಲ್ಟ್ ರೋಡ್ ಫೋರಂ(BRF) ಸಭೆ ನಡೆಯಲಿದ್ದು, ಭಾರತ ಈ ಸಭೆಯನ್ನು ಎರಡನೇಯ ಬಾರಿಯೂ ಧಿಕ್ಕರಿಸಿದೆ. ಅಲ್ಲದೇ ಸಭೆಯಲ್ಲಿ ತಾನು ಪಾಲ್ಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಬೆಲ್ಟ್ ರೋಡ್ ಯೋಜನೆ ಭಾರತಕ್ಕೂ ಕೂಡ ಲಾಭದಾಯಕವಾಗಲಿದ್ದು, ಈ ಯೋಜನೆಯನ್ನು ಭಾರತ ಒಪ್ಪಿಕೊಳ್ಳುವುದು ಒಳ್ಳೆಯದು ಎಂದು ಚೀನಾ ಪ್ರತಿಕ್ರಿಯೆ ನೀಡಿದೆ.

ಸುಮಾರು ಒಂದು ಟ್ರಿಲಿಯನ್ ಯುಎಸ್ ಡಾಲರ್ ಮೊತ್ತದ BRF ಯೋಜನೆಗೆ ಚೀನಾ ಈಗಾಗಲೇ ಮುನ್ನುಡಿ ಬರೆದಿದ್ದು, BRF ಸಭೆಗೆ ಸುಮಾರು 150 ದೇಶ ಮತ್ತು 90 ಅಂತಾರಾಷ್ಟ್ರೀಯ ಸಂಸ್ಥೆಗಳು ಈ ಸಭೆಯಲ್ಲಿ ಭಾಗವಹಿಸುತ್ತಿವೆ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯೀ ಮಾಹಿತಿ ನೀಡಿದ್ದಾರೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.

click me!