18000 ಸಿಬ್ಬಂದಿ ತೆಗೆದ ಅಮೆಜಾನ್‌ನಿಂದ ಮತ್ತೆ 9000 ಹುದ್ದೆ ಕಡಿತ

By Kannadaprabha NewsFirst Published Mar 21, 2023, 1:39 PM IST
Highlights

ಕಳೆದ ಜನವರಿಯಲ್ಲಿ 18,000 ಉದ್ಯೋಗಿಗಳನ್ನು ವಜಾಗೊಳಿಸಿದ್ದ ಅಮೆರಿಕ ಮೂಲದ ಜಾಗತಿಕ ರಿಟೇಲ್‌ ದೈತ್ಯ ಅಮೆಜಾನ್‌ ಇನ್ನು ಕೆಲ ದಿನಗಳಲ್ಲಿ ಮತ್ತೆ 9,000 ಉದ್ಯೋಗಿಗಳನ್ನು ಕೈಬಿಡುವುದಾಗಿ ಘೋಷಿಸಿದೆ.

ನ್ಯೂಯಾರ್ಕ್: ಕಳೆದ ಜನವರಿಯಲ್ಲಿ 18,000 ಉದ್ಯೋಗಿಗಳನ್ನು ವಜಾಗೊಳಿಸಿದ್ದ ಅಮೆರಿಕ ಮೂಲದ ಜಾಗತಿಕ ರಿಟೇಲ್‌ ದೈತ್ಯ ಅಮೆಜಾನ್‌ ಇನ್ನು ಕೆಲ ದಿನಗಳಲ್ಲಿ ಮತ್ತೆ 9,000 ಉದ್ಯೋಗಿಗಳನ್ನು ಕೈಬಿಡುವುದಾಗಿ ಘೋಷಿಸಿದೆ. ಕಂಪನಿಯ ವಾರ್ಷಿಕ ಯೋಜನೆಯ ಎರಡನೇ ಹಂತ ಈ ತಿಂಗಳು ಮುಕ್ತಾಯವಾಗಿದ್ದು, ಈ ಹಿನ್ನೆಲೆ ಮತ್ತೆ ಉದ್ಯೋಗ ಕಡಿತ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಇಒ ಆ್ಯಂಡಿ ಜಸ್ಸಿ ತಿಳಿಸಿದ್ದಾರೆ. ಅಲ್ಲದೇ ಕೆಲ ವಿಭಾಗಗಳಲ್ಲಿ ನೂತನ ಉದ್ಯೋಗಿಗಳನ್ನು ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.

ಉದ್ಯೋಗ ವಜಾದ ಬಗ್ಗೆ ಸ್ವತಃ ಸಿಇಒ ಆಂಡಿ ಜಾಸ್ಸಿ (Andy Jassy) ಉದ್ಯೋಗಿಗಳಿಗೆ ಸಂದೇಶ ಕಳುಹಿಸಿದ್ದಾರೆ.  ಅಮೆಜಾನ್ ಕಷ್ಟದ ಸಮಯವನ್ನು ಎದುರಿಸುತ್ತಿದೆ ಮತ್ತು ವೆಚ್ಚವನ್ನು ಉಳಿಸಲು ಈ ಕ್ರಮವನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.  ಜನವರಿ ತಿಂಗಳಲ್ಲಷ್ಟೇ ಈ ಇ-ಕಾಮರ್ಸ್ ಸಂಸ್ಥೆ 18,000 ಉದ್ಯೋಗಿಗಳನ್ನು ತೆಗೆದು ಹಾಕಿತ್ತು.  ಈಗ ಮತ್ತೆ 9 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವುದರಿಂದ ಒಟ್ಟು 27 ಸಾವಿರ ಉದ್ಯೋಗಿಗಳನ್ನು ಅಮೇಜಾನ್ ವಜಾ ಮಾಡಿದಂತಾಗಿದೆ. 

ಶೀಘ್ರದಲ್ಲೇ ಮತ್ತಷ್ಟು ಉದ್ಯೋಗಿಗಳ ವಜಾಕ್ಕೆ ಫೇಸ್ಬುಕ್ ಮೆಟಾ ಚಿಂತನೆ...!


ಮುಂದಿನ ಕೆಲವು ವಾರಗಳಲ್ಲಿ ಸುಮಾರು 9,000 ಹೆಚ್ಚಿನ ಉದ್ಯೋಗಗಳನ್ನು ನಾವು  ತೆಗೆದುಹಾಕಲು ಬಯಸಿದ್ದೇವೆ. ಹೆಚ್ಚಾಗಿ AWS, PXT, ಜಾಹೀರಾತು ಮತ್ತು ಟ್ವಿಚ್‌ (Twitch) ವಲಯದ ಉದ್ಯೋಗಿಗಳ ವಜಾ ಆಗಲಿದೆ. ಇದು ಕಠಿಣ ನಿರ್ಧಾರವಾಗಿದೆ. ಆದರೆ ದೀರ್ಘಾವಧಿಯಲ್ಲಿ ಇದರಿಂದ ಕಂಪನಿಗೆ ಒಳ್ಳೆಯದಾಗಲಿದೆ ಎಂದು ನಾವು ಭಾವಿಸುತ್ತೇವೆ ಎಂದು ಉದ್ಯೋಗಿಗಳಿಗೆ ಕಳುಹಿಸಲಾದ ಇಮೇಲ್‌ನಲ್ಲಿ ಜಾಸ್ಸಿ ಹೇಳಿದ್ದಾರೆ.

ಮತ್ತೆ ಸಾವಿರಾರು ಉದ್ಯೋಗಿಗಳ ವಜಾ ಏಕೆ?

ಕಳೆದ ಕೆಲವು ವರ್ಷಗಳಲ್ಲಿ ಅಮೆಜಾನ್ ಲೆಕ್ಕಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಕೆಲಸಕ್ಕೆ ತೆಗೆದುಕೊಂಡಿದೆ. ಈಗ, ಆರ್ಥಿಕ ಕುಸಿತದ ಕಾರಣ ವೆಚ್ಚವನ್ನು ಉಳಿಸಲು ಮತ್ತು ಸಂಪನ್ಮೂಲಗಳನ್ನು ಎಚ್ಚರಿಕೆಯಿಂದ ಬಳಸಲು ಹೆಚ್ಚುವರಿ ಉದ್ಯೋಗಿಗಳನ್ನು ವಜಾ ಮಾಡಬೇಕಾಗುತ್ತದೆ. ಈ ಕ್ರಮವು ದೀರ್ಘಾವಧಿಯಲ್ಲಿ ಕಂಪನಿಗೆ ಸಹಾಯ ಮಾಡುತ್ತದೆ ಮತ್ತು ಉಳಿಸಿದ ಹಣವನ್ನು ಉತ್ತಮ ವಿಷಯಗಳಿಗೆ ಬಳಸಿಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ. 

ಪ್ರಸ್ತುತ ಆರ್ಥಿಕತೆ ಅನಿಶ್ಚಿತವಾಗಿದ್ದು, ಮುಂದಿನ ದಿನಗಳು ಕೂಡ ಹೇಗಿದೆ ಎಂದು ಹೇಳಲಾಗದು. ಈ ಎಲ್ಲಾ ಅನಿಶ್ಚಿತತೆಯನ್ನು ಗಮನದಲ್ಲಿಟ್ಟುಕೊಂಡು, ನಮ್ಮ ವೆಚ್ಚಗಳು ಮತ್ತು ಎಣಿಕೆಯಲ್ಲಿ ಹೆಚ್ಚು ಸುವ್ಯವಸ್ಥಿತವಾಗಿರಲು ನಾವು ಈ ಆಯ್ಕೆ ಮಾಡಿಕೊಂಡಿದ್ದೇವೆ ಎಂದು ಅವರು ಹೇಳಿದ್ದಾರೆ. ಸಂಸ್ಥೆಯೂ ಮೊದಲ ಹಂತದ ಉದ್ಯೋಗಿಗಳ ವಜಾದ (layoffs) ವೇಳೆ ಎಲ್ಲಾ ವಿಭಾಗಗಳನ್ನು ವಿಶ್ಲೇಷಣೆ ಮಾಡಿರಲಿಲ್ಲ. ಹಾಗಾಗಿ ಈಗ 2ನೇ ಸುತ್ತಿನ ವಜಾ ನಡೆಯುತ್ತಿದೆ ಎಂದು ಜಾಸ್ಸಿ ಜೇಳಿದ್ದಾರೆ. 

ಫೇಸ್‌ಬುಕ್‌ ಉದ್ಯೋಗಿಗಳ ವಜಾ ಬೆನ್ನಲ್ಲೇ ಜುಕರ್‌ಬರ್ಗ್‌ ಭದ್ರತಾ ವೆಚ್ಚದಲ್ಲಿ 82 ಕೋಟಿ ಏರಿಕೆ!

ಕಂಪನಿಯ ಈ ಎರಡನೇ ಹಂತದ ಉದ್ಯೋಗಿಗಳ ವಜಾವೂ ಏಪ್ರಿಲ್ ಮಧ್ಯದಿಂದ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ.  ಅಲ್ಲದೇ ವಜಾಗೊಂಡ ಉದ್ಯೋಗಿಗಳಿಗೆ ಸಂಸ್ಥೆಯೂ ವಜಾ ವೇಳೆಯ ಸಂಬಳ (separation payment), ಪರಿವರ್ತನೆಯ ಆರೋಗ್ಯ ವಿಮೆ ಪ್ರಯೋಜನಗಳು (transitional health insurance benefits) ಮತ್ತು ಬಾಹ್ಯ ಉದ್ಯೋಗ ನಿಯೋಜನೆ ಬೆಂಬಲವನ್ನು ಒಳಗೊಂಡಿರುವ ಪ್ಯಾಕೇಜ್‌ಗಳನ್ನು ಒದಗಿಸಿ ಬೆಂಬಲಿಸಲಿದೆ  ಎಂದು ಸಂಸ್ಥೆ ಹೇಳಿದೆ. 

click me!