ಜಿಎಸ್‌ಟಿ ಸಂಗ್ರಹ: ಮತ್ತೆ ಕರ್ನಾಟಕ ನಂ.2

Published : Apr 02, 2023, 09:31 AM ISTUpdated : Apr 02, 2023, 09:56 AM IST
ಜಿಎಸ್‌ಟಿ ಸಂಗ್ರಹ: ಮತ್ತೆ ಕರ್ನಾಟಕ ನಂ.2

ಸಾರಾಂಶ

ಜಿಎಸ್‌ಟಿ ಸಂಗ್ರಹದಲ್ಲಿ ದೇಶದಲ್ಲೇ ಕರ್ನಾಟಕ ಮತ್ತೆ ನಂ.2ನೇ ಸ್ಥಾನ ಸಂಪಾದಿಸಿದೆ. ಮಾರ್ಚ್‌ನಲ್ಲಿ 19,360 ಕೋಟಿ ರು. ಜಿಎಸ್‌ಟಿ ಸಂಗ್ರಹ ರಾಜ್ಯದಲ್ಲಾಗಿದೆ. ಇದರೊಂದಿಗೆ ಸತತ 5ನೇ ತಿಂಗಳೂ ರಾಜ್ಯದಲ್ಲಿ 10 ಸಾವಿರ ಕೋಟಿ ರು.ಗಿಂತ ಹೆಚ್ಚು ಜಿಎಸ್‌ಟಿ ಸಂಗ್ರಹವಾದಂತಾಗಿದೆ.

ನವದೆಹಲಿ: ಜಿಎಸ್‌ಟಿ ಸಂಗ್ರಹದಲ್ಲಿ ದೇಶದಲ್ಲೇ ಕರ್ನಾಟಕ ಮತ್ತೆ ನಂ.2ನೇ ಸ್ಥಾನ ಸಂಪಾದಿಸಿದೆ. ಮಾರ್ಚ್‌ನಲ್ಲಿ 19,360 ಕೋಟಿ ರು. ಜಿಎಸ್‌ಟಿ ಸಂಗ್ರಹ ರಾಜ್ಯದಲ್ಲಾಗಿದೆ. ಇದರೊಂದಿಗೆ ಸತತ 5ನೇ ತಿಂಗಳೂ ರಾಜ್ಯದಲ್ಲಿ 10 ಸಾವಿರ ಕೋಟಿ ರು.ಗಿಂತ ಹೆಚ್ಚು ಜಿಎಸ್‌ಟಿ ಸಂಗ್ರಹವಾದಂತಾಗಿದೆ. ಫೆಬ್ರವರಿಯಲ್ಲಿ ರಾಜ್ಯದಲ್ಲಿ 10,809 ಕೋಟಿ ರು. ಜಿಎಸ್‌ಟಿ ಸಂಗ್ರಹವಾಗಿತ್ತು.

ಮೊದಲ ಸ್ಥಾನದಲ್ಲಿ ಮಹಾರಾಷ್ಟ್ರ (Maharashtra) ಇದ್ದು 22,695 ಕೋಟಿ ರು. ಸಂಗ್ರಹವಾಗಿದೆ. 3ನೇ ಸ್ಥಾನದಲ್ಲಿ ಇರುವ ಗುಜರಾತ್‌ನಲ್ಲಿ 9919 ಕೋಟಿ ರು., 4ನೇ ಸ್ಥಾನದಲ್ಲಿರುವ ತಮಿಳುನಾಡಿನಲ್ಲಿ(Tamilnadu)  9245 ಕೋಟಿ ರು., ಹಾಗೂ ಹರಿಯಾಣದಲ್ಲಿ 7780 ಕೋಟಿ ರು. ಸರಕು ಹಾಗೂ ಸೇವಾ ತೆರಿಗೆ ಸಂಗ್ರಹವಾಗಿದೆ ಎಂದು ಕೇಂದ್ರ ಸರ್ಕಾರದ ಅಂಕಿ-ಅಂಶಗಳು ಹೇಳಿವೆ.

ಏ.1ರಿಂದ ಸಿಗರೇಟ್, ತಂಬಾಕು ಉತ್ಪನ್ನಗಳ ಬೆಲೆ ಹೆಚ್ಚಳ; ದುಬಾರಿಯಾಗಲಿವೆ ಇನ್ನೂ ಕೆಲವು ವಸ್ತುಗಳು

ಮಾರ್ಚ್‌ನಲ್ಲಿ 1.6 ಲಕ್ಷ ಕೋಟಿ ರು. ಜಿಎಸ್‌ಟಿ ಸಂಗ್ರಹ

ಮಾರ್ಚ್‌ನಲ್ಲಿ ಜಿಎಸ್‌ಟಿ ಸಂಗ್ರಹ ಶೇ.13ರಷ್ಟು ಏರಿಕೆ ಕಂಡಿದ್ದು, 1.6 ಲಕ್ಷ ಕೋಟಿ ರು.ಗೆ ಹೆಚ್ಚಳ ಕಂಡಿದೆ. ಇದು ಈವರೆಗೆ ತಿಂಗಳೊಂದರಲ್ಲಿ ಸಂಗ್ರಹವಾದ 2ನೇ ಅತಿಹೆಚ್ಚು ಮೊತ್ತದ ಜಿಎಸ್‌ಟಿ ಸಂಗ್ರಹವಾಗಿದೆ. ಅಲ್ಲದೇ, ಈ ಹಣಕಾಸು ವರ್ಷದಲ್ಲಿ 4ನೇ ಬಾರಿ ಜಿಎಸ್‌ಟಿ ಸಂಗ್ರಹ 1.5 ಲಕ್ಷ ಕೋಟಿ ರು.ನ ಗಡಿ ದಾಟಿದೆ.  ಮಾರ್ಚ್‌ನಲ್ಲಿಕ ಒಟ್ಟು 1,60,122 ಕೋಟಿ ರು. ಜಿಎಸ್‌ಟಿ ಸಂಗ್ರಹವಾಗಿದ್ದು, ಇದರಲ್ಲಿ 29,546 ಕೋಟಿ ಸಿಜಿಎಸ್‌ಟಿ, 37,314 ಕೋಟಿ ರು. ಎಸ್‌ಜಿಎಸ್‌ಟಿ ಮತ್ತು 82,907 ಕೋಟಿ ರು. ಐಜಿಎಸ್‌ಟಿ (42,503 ಕೋಟಿ ರು. ರಫ್ತು ಸೇರಿ) ಮತ್ತು 10,355 ಕೋಟಿ ರು. ಸೆಸ್‌ ಸೇರಿದೆ. 2022-23ನೇ ಸಾಲಿನಲ್ಲಿ ಒಟ್ಟು 18.1 ಲಕ್ಷ ಕೋಟಿ ರು. ಜಿಎಸ್‌ಟಿ ಸಂಗ್ರಹವಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.22ರಷ್ಟು ಹೆಚ್ಚಳವಾಗಿದೆ. 2021-22ರ ಮಾರ್ಚ್‌ನಲ್ಲಿ 1.51 ಲಕ್ಷ ಕೋಟಿ ರು. ಸಂಗ್ರಹವಾಗಿತ್ತು.

ಕಳೆದ ವರ್ಷ ಏಪ್ರಿಲ್‌ನಲ್ಲಿ ಸಂಗ್ರಹವಾಗಿದ್ದ 1.68 ಲಕ್ಷ ಕೋಟಿ ರು. ಈವರೆಗಿನ ಗರಿಷ್ಠ ಜಿಎಸ್‌ಟಿ ಸಂಗ್ರಹವಾಗಿದೆ.

ಕರ್ನಾಟಕದಲ್ಲಿ ದಾಖಲೆಯ 11317 ಕೋಟಿ ಜಿಎಸ್‌ಟಿ ಸಂಗ್ರಹ: ಸಿಎಂ ಹರ್ಷ

: ಜನವರಿ ತಿಂಗಳಲ್ಲಿ ರಾಜ್ಯದಲ್ಲಿ ಸಾರ್ವಕಾಲಿಕ ದಾಖಲೆಯ 11,317 ಕೋಟಿ ರು. ಜಿಎಸ್‌ಟಿ ಸಂಗ್ರಹವಾಗಿದೆ. ಇದು ಕೋವಿಡ್‌ ನಂತರ ರಾಜ್ಯದ ಆರ್ಥಿಕ ಸ್ಥಿತಿ ಬಲಗೊಳ್ಳುತ್ತಿದೆ ಎಂಬುದರ ಸಂಕೇತ ಹಾಗೂ ಫೆ.17ರಂದು ಮಂಡನೆ ಆಗಲಿರುವ ರಾಜ್ಯ ಬಜೆಟ್‌ಗೆ ಈ ಅಂಕಿ-ಅಂಶ ಉತ್ತೇಜನಕಾರಿ ಎಂದು ವಿಶ್ಲೇಷಿಸಲಾಗಿದೆ. ರಾಜ್ಯದಲ್ಲಿ ಡಿಸೆಂಬರ್‌ನಲ್ಲಿ 10,061 ಕೋಟಿ ರು. ಜಿಎಸ್‌ಟಿ ಸಂಗ್ರಹವಾಗಿತ್ತು. ಈ ದಾಖಲೆಯನ್ನು ಒಂದೇ ತಿಂಗಳಲ್ಲಿ ರಾಜ್ಯ ಮುರಿದಿದೆ.

ಜನವರಿಯಲ್ಲಿ ಸಂಗ್ರಹವಾದ 11,317 ಕೋಟಿ ರು. ಒಟ್ಟಾರೆ ಜಿಎಸ್‌ಟಿ ಪೈಕಿ, 6,085 ಕೋಟಿ ರು. ರಾಜ್ಯದ ಪಾಲಿನ ಜಿಎಸ್‌ಟಿ ಹಾಗೂ 5231 ಕೋಟಿ ರು. ಕೇಂದ್ರೀಯ ಜಿಎಸ್‌ಟಿ ಸಂಗ್ರಹವಾಗಿದೆ. ಇದಲ್ಲದೆ, 107.5 ಕೋಟಿ ರು. ವೃತ್ತಿಪರ ತೆರಿಗೆ ಹಾಗೂ 1716.5 ಕೋಟಿ ರು. ಪೆಟ್ರೋಲ್‌-ಡೀಸೆಲ್‌ ಮಾರಾಟ ತೆರಿಗೆ ಸಂಗ್ರಹವಾಗಿದೆ. ಇದರಿಂದ ಈ ಎಲ್ಲ ತೆರಿಗೆಗಳು ಸೇರಿದಂತೆ ಒಟ್ಟಾರೆ 13,141 ಕೋಟಿ ರು. ವಾಣಿಜ್ಯ ತೆರಿಗೆ ಸಂಗ್ರಹವಾಗಿದೆ.

ಜನವರಿಯಲ್ಲಿ 6,085 ಕೋಟಿ ರೂ. ಜಿಎಸ್‌ಟಿ ಸಂಗ್ರಹ: ಸಿಎಂ ಬಸವರಾಜ ಬೊಮ್ಮಾಯಿ

ಸಿಎಂ ಹರ್ಷ: ಈ ಬಗ್ಗೆ ಟ್ವೀಟ್‌ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಜಿಎಸ್‌ಟಿ ತೆರಿಗೆ ಸಂಗ್ರಹಣೆಯಲ್ಲಿ ಕರ್ನಾಟಕ ಶೇ.30ರಷ್ಟುಬೆಳವಣಿಗೆ ಪ್ರಮಾಣ ಹೊಂದಿದ್ದು, ಅತ್ಯಧಿಕ ಬೆಳವಣಿಗೆಯ ರಾಜ್ಯವಾಗಿ ಮುಂದುವರಿದಿದೆ’ ಎಂದು ಹರ್ಷಿಸಿದ್ದಾರೆ. ಅಲ್ಲದೆ, ‘ತೆರಿಗೆ ಸಂಗ್ರಹಣೆಯಲ್ಲಿ ಸುಧಾರಣೆ, ಹೆಚ್ಚಿನ ಕಣ್ಗಾವಲು, ಆರ್ಥಿಕತೆಯಲ್ಲಿ ಚೇತರಿಕೆ ಮತ್ತು ತೆರಿಗೆದಾರರಲ್ಲಿ ಹೆಚ್ಚಿರುವ ಅನುಸರಣೆಯಿಂದಾಗಿ ಈ ಗಮನಾರ್ಹ ಸಾಧನೆ ಮಾಡಲು ಸಾಧ್ಯವಾಗಿದೆ. ಈ ಆದಾಯದ ಬೆಳವಣಿಗೆಯಿಂದ ಸರ್ಕಾರವು ಈ ವರ್ಷ ಉತ್ತಮ ಆಯವ್ಯಯ ಮಂಡಿಸಲು ಅನುವು ಮಾಡಿಕೊಡಲಿದೆ’ ಎಂದಿದ್ದಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌