ನೋಟ್ ಬ್ಯಾನ್ ಸಾಧಿಸಿದ್ದೇನು?: ಮೋದಿ ಬೈದವರಿಗೆ ಇಲ್ಲಿದೆ ಉತ್ತರ!

By Web Desk  |  First Published Nov 11, 2018, 10:32 AM IST

ನೋಟು ಅಮಾನ್ಯೀಕರಣದ ಬಳಿಕ ಡಿಜಿಟಲ್‌ ಪೇಮೆಂಟ್ ಅಧಿಕ! ಕ್ಯಾಶ್‌ಲೆಸ್‌ ವರ್ಗಾವಣೆಗಳು ವೃದ್ಧಿಯಾಗಿದೆ ಎಂದ ಆರ್‌ಬಿಐ! 10 ಲಕ್ಷವರೆಗಿನ ಜನಸಂಖ್ಯೆ ಹೊಂದಿರುವ ಪಟ್ಟಣಗಳಲ್ಲಿ ಡಿಜಿಟಲ್ ಪೇಮೆಂಟ್ ಅಧಿಕ! ಟಾಪ್‌ ಮೆಟ್ರೊ ನಗರಗಳಲ್ಲಿ ಡಿಜಿಟಲ್‌ ವಹಿವಾಟಿನ ಬೆಳವಣಿಗೆ ಸ್ಥಿರ! ಕಾರ್ಡ್‌ ಆಧಾರಿತ ವಹಿವಾಟು ಕಡಿಮೆಯಾಗಗುವ ಸಂಭವ


ನವದೆಹಲಿ(ನ.11): ನೋಟು ಅಮಾನ್ಯೀಕರಣದ ಬಳಿಕ ದೇಶದ ಸಣ್ಣ ಪಟ್ಟಣ, ನಗರಗಳಲ್ಲಿ ಜನರು ಸರಕು ಹಾಗೂ ಸೇವೆಗಳನ್ನು ಖರೀದಿಸಲು ಡಿಜಿಟಲ್‌ ವಿಧಾನವನ್ನು ಹೆಚ್ಚು ಬಳಸುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ವರದಿ ತಿಳಿಸಿದೆ.

ಕ್ಯಾಶ್‌ಲೆಸ್‌ ವರ್ಗಾವಣೆಗಳು ವೃದ್ಧಿಸಿರುವುದನ್ನು ಆರ್‌ಬಿಐ ಕೂಡ ಸ್ಪಷ್ಟಪಡಿಸಿದ್ದು, ಈ ವರ್ಷ 74,978 ಕೋಟಿ ರೂ.ಗಳಷ್ಟು ವಹಿವಾಟುಗಳು ಡಿಜಿಟಲ್‌ ಮೂಲಕ ನಡೆದಿದೆ ಎನ್ನಲಾಗಿದೆ.

Latest Videos

undefined

 

10 ಲಕ್ಷವರೆಗಿನ ಜನಸಂಖ್ಯೆ ಹೊಂದಿರುವ ಪಟ್ಟಣಗಳಲ್ಲಿ ಕಾರ್ಡ್‌ ಮೂಲಕ ನಡೆಯುವ ವಹಿವಾಟುಗಳು ನೋಟು ಅಮಾನ್ಯೀಕರಣದ ಬಳಿಕ ದುಪ್ಪಟ್ಟುಗೊಂಡಿದೆ. 

ಡೆಬಿಟ್‌ ಕಾರ್ಡ್‌ ವಹಿವಾಟುಗಳು 2017ರಲ್ಲಿ ಶೇ.105ರಷ್ಟು ಏರಿಕೆಯಾಗಿರುವುದು ಆರ್‌ಬಿಐ ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಆಗಸ್ಟ್‌ ತನಕ ಡೆಬಿಟ್‌ ಕಾರ್ಡ್‌ ಸ್ವೈಪ್‌ಗಳು ಶೇ.37.5ರಷ್ಟು ಏರಿಕೆಯಾಗಿದೆ. 

ಎರಡನೇ ಮತ್ತು ಮೂರನೇ ಸ್ಥರದ ನಗರಗಳಲ್ಲೂ ಡಿಜಿಟಲ್‌ ವಹಿವಾಟು ಏರುತ್ತಿದೆ. ಟಾಪ್‌ ಮೆಟ್ರೊ ನಗರಗಳಲ್ಲಿ ಡಿಜಿಟಲ್‌ ವಹಿವಾಟಿನ ಬೆಳವಣಿಗೆ ಸ್ಥಿರಗೊಂಡಿರುವ ಸೂಚನೆಗಳು ಕಂಡು ಬಂದಿವೆ ಎಂದು ಉದ್ಯಮದ ಮೂಲಗಳು ತಿಳಿಸಿವೆ. 

ಅದರಂತೆ 2016ರ ನವೆಂಬರ್‌ನಲ್ಲಿ ಯುಪಿಐ ವಹಿವಾಟು 2 ಲಕ್ಷ ಇದ್ದರೆ, ಅದು 2018ರ ಅಕ್ಟೋಬರ್‌ ವೇಳೆಗೆ 48.2 ಕೋಟಿಗೆ ಏರಿಕೆಯಾಗಿದೆ.

ದೈನಂದಿನ ವಸ್ತುಗಳ ಖರೀದಿಗೆ ಬಹುತೇಕರು ಆಧುನಿಕ ಡಿಜಿಟಲ್‌ ಪೇಮೆಂಟ್‌ ಮಾದರಿಗಳತ್ತ ವಾಲಿದ್ದು, ಮುಂದಿನ ದಿನಗಳಲ್ಲಿ ಕಾರ್ಡ್‌ ಆಧಾರಿತ ವಹಿವಾಟು ಕಡಿಮೆಯಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮೋದಿಗೆ ಯಾರೂ ಬೈಯದ ಹಾಗೆ ಬೈದ ರಘುರಾಮ್ ರಾಜನ್!

ನೋಟ್ ಬ್ಯಾನ್: ಉತ್ತರ ಸಿಗದ ಪ್ರಶ್ನೆಗಳು, ಮೋದಿ ಅರಿಯದ ವಿಪಕ್ಷಗಳು!

click me!