ಮೋದಿಗೆ ಯಾರೂ ಬೈಯದ ಹಾಗೆ ಬೈದ ರಘುರಾಮ್ ರಾಜನ್!

By Web Desk  |  First Published Nov 10, 2018, 6:00 PM IST

ಅಪನಗದೀಕರಣ, ಜಿಎಸ್ ಟಿಯಿಂದ ಆರ್ಥಿಕತೆಗೆ ಹೊಡೆತ! ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಅಭಿಮತ! ಶೇ.7 ಜಿಡಿಪಿ ದೇಶದ ಅಗತ್ಯತೆ ಪೂರೈಸಲು ಸಾಲಲ್ಲ ಎಂದ ರಾಜನ್! ನೋಟ್ ಬ್ಯಾನ್, ಜಿಎಸ್ ಟಿ ಎರಡು ಬಹುದೊಡ್ಡ ಆಘಾತ


‘ನೋಟ್ ಬ್ಯಾನ್, ಜಿಎಸ್‌ಟಿ: ಆರ್ಥಿಕತೆ ಹೊಡಿತಿದೆ ಲಗಾಟಿ’!

ವಾಷಿಂಗ್ಟನ್(ನ.10): ಕಳೆದ ಸಾಲಿನಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರ ಕುಸಿಯಲು ಸರ್ಕಾರ ಜಾರಿಗೊಳಿಸಿದ ಅಪನಗದೀಕರಣ ಹಾಗೂ ಸರಕು  ಮತ್ತು ಸೇವಾ ತೆರಿಗೆಯೇ ಕಾರಣ ಆಗಿದೆ ಎಂದು ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಆಪಾದಿಸಿದ್ದಾರೆ. 

Tap to resize

Latest Videos

ಇಲ್ಲಿನ ಬರ್ಕ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ  ಸಭಿಕರನ್ನುದ್ದೇಶಿಸಿ ಮಾತನಾಡಿದ ರಾಜನ್, ಪ್ರಸಕ್ತ ಶೇ. 7 ಬೆಳವಣಿಗೆಯ ದರ ದೇಶದ ಅಗತ್ಯಗಳನ್ನು ಪೂರೈಸಲು ಸಾಕಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು. 

2012ರಿಂದ 2016ರವರೆಗೆ ಭಾರತ ಅತ್ಯಂತ ವೇಗವಾಗಿ ಆರ್ಥಿಕ ಪ್ರಗತಿಯನ್ನು ದಾಖಲಿಸಿತ್ತು. ಇದು ನೋಟ್ ಬ್ಯಾನ್ ಹಾಗೂ ಜಿಎಸ್‌ಟಿ  ಜಾರಿಯಾದ ಬಳಿಕ ಕುಂಠಿತವಾಗಿದೆ ಎಂದು ರಾಜನ್ ಹೇಳಿದರು. 

ಅಪನಗದೀಕರಣ ಮತ್ತು ಜಿಎಸ್‌ಟಿ ಎಂಬ ಎರಡು ಬಹುದೊಡ್ಡ ಆಘಾತಗಳು  ಭಾರತದ ಬೆಳವಣಿಗೆಯ ಮೇಲೆ ಗಂಭೀರ ಪರಿಣಾಮ ಬೀರಿದೆ. ಜಾಗತಿಕ ಆರ್ಥಿಕತೆಯ ಬೆಳವಣಿಗೆ ಏರಿಕೆಯಾದಗಲೂ ಸಹ ಭಾರತದ ಬೆಳವಣಿಗೆ ಕುಸಿತ ದಾಖಲಿಸಿದೆ ಎಂದು ರಾಜನ್ ಅಸಮಾಧಾಣ ವ್ಯಕ್ತಪಡಿಸಿದರು.

ಉದ್ಯೋಗ ಮಾರುಕಟ್ಟೆಗೆ ಆಗಮಿಸುತ್ತಿರುವ ಜನರಿಗೆ ಉದ್ಯೋಗ ನೀಡುವುದು ಸರ್ಕಾರವೊಂದರ ಆದ್ಯ ಕರ್ತವ್ಯ ಎಂದ ರಾಜನ್, ಉದ್ಯೋಗ ಸೃಷ್ಟಿಗೆ ಹೆಚ್ಚಿನ ಮಟ್ಟದ ಆರ್ಥಿಕ ಬೆಳವಣಿಗೆ ಅಗತ್ಯವಿದೆ ಎಂದು ಹೇಳಿದರು.
 

click me!