ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಪ್ರಕಾರ ಬರ್ನಾರ್ಡ್ ಅರ್ನಾಲ್ಟ್ ಅಂದಾಜು $177.7 ಶತಕೋಟಿ ಮೌಲ್ಯವನ್ನು ಹೊಂದಿದ್ದಾರೆ.
ನ್ಯೂಯಾರ್ಕ್ (ಮೇ.24): ವಿಶ್ವದ ಐಷಾರಾಮಿ ಬ್ರ್ಯಾಂಡ್‌ಗಳಲ್ಲಿ ಒಂದಾದ ಲೂಯಿ ವಿಟಾನ್ ಮೊಯೆಟ್ ಹೆನೆಸ್ಸಿಯ ಸಂಸ್ಥಾಪಕ ಹಾಗೂ ವಿಶ್ವದ ಶ್ರೀಮಂತ ವ್ಯಕ್ತಿ ಬರ್ನಾರ್ಡ್ ಅರ್ನಾಲ್ಟ್ ಒಂದೇ ದಿನದಲ್ಲಿ ಬರೋಬ್ಬರಿ 11.2 ಬಿಲಿಯನ್ ಯುಎಸ್ ಡಾಲರ್ ಹಣವನ್ನು ಕಳೆದುಕೊಂಡಿದ್ದಾರೆ. ಭಾರತೀಯ ರೂಪಾಯಿಯಲ್ಲಿ ಈ ಮೊತ್ತವನ್ನು ಹೇಳುವುದಾದರೆ 92, 620 ಕೋಟಿ ರೂಪಾಯಿ ಮೊತ್ತವನ್ನು ಅವರು ಕಳೆದುಕೊಂಡಿದ್ದಾರೆ. ಅದಕ್ಕೆ ಕಾರಣವಾಗಿರುವುದು ಅಮೆರಿಕದ ಆರ್ಥಿಕತೆ. ಅಮೆರಿಕದ ಆರ್ಥಿಕತೆ ಮಂದವಾಗಿರುವ ಕಾರಣ, ಐಷಾರಾಮಿ ಉತ್ಪನ್ನಗಳಿಗೆ ಬೇಡಿಕೆ ಕಡಿಮೆಯಾಗಬಹುದು ಎಂದು ಅಂದಾಜಿಸಲಾಗಿದ್ದು, ಇದರ ನೇರ ಪರಿಣಾಮ ಎಲ್‌ವಿಎಂಎಚ್ ಷೇರುಗಳ ಮೇಲಾಗಿದೆ. ಲೂಯಿ ವಿಟಾನ್‌ನ ಆಕರ್ಷಕ ಕೈಚೀಲಗಳು ಮೊಯೆಟ್ ಮತ್ತು ಚಾಂಡನ್ ಶಾಂಪೇನ್ ಮತ್ತು ಕ್ರಿಶ್ಚಿಯನ್ ಡಿಯರ್ ಗೌನ್‌ಗಳು ತಯಾರಿಸುವ ಎಲ್‌ವಿಎಂಎಚ್ ಈ ವರ್ಷವಿಡೀ ಸಂಪತ್ತಿನ ಮಹಾಪೂರ ನೋಡಿತ್ತು. ಈ ವರ್ಷದ ಹೆಚ್ಚಿನ ಅವಧಿಯಲ್ಲಿ ಯುರೋಪಿಯನ್ ಐಷಾರಾಮಿ ಕಂಪನಿಗಳ ಷೇರು ಬೆಲೆಯಲ್ಲಿ ಏರಿಕೆ ಕಂಡಿದ್ದವು ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.
ಆದರೆ, ಮಂಗಳವಾರ ಅವರು ತಾವು ಸಂಪಾದನೆ ಮಾಡಿದ ಸಂಪತ್ತಿನ ಕೆಲ ಭಾಗವನ್ನು ಕಳೆದುಕೊಂಡಿದೆ. ಪ್ಯಾರಿಸ್‌ನಲ್ಲಿ ಎಲ್‌ವಿಎಂಎಚ್‌ನ ಷೇರುಗಳು ಶೇ. 5ರಷ್ಟು ಕುಸಿದಿವೆ. ಇದು ಕಳೆದ ಒಂದು ವರ್ಷದಲ್ಲಿಯೇ ಅತ್ಯಧಿಕವಾಗಿದೆ. ಇನ್ನು ಯುರೋಪಿಯನ್‌ನ ಐಷಾರಾಮಿ ವಲಯದಲ್ಲಿ ಒಟ್ಟಾರೆ 30 ಬಿಲಿಯನ್ ಯುಎಸ್ ಡಾಲರ್ ನಷ್ಟ ಉಂಟಾಗಿದೆ. ಬರ್ನಾರ್ಡ್ ಅರ್ನಾಲ್ಟ್ ಕಳೆದುಕೊಂಡಿರುವ ಹಣ ಎಷ್ಟೆಂದರೆ, ಪಾಕಿಸ್ತಾನ ಐಎಂಎಫ್‌ಗೆ ನೀಡಬೇಕಿರುವ ಹಣದ ದುಪ್ಪಟ್ಟು ಪ್ರಮಾಣವಾಗಿದೆ. ಆದರೆ, ಹಿಂಡೆನ್‌ಬರ್ಗ್ ವರದಿ ಪ್ರಕಟವಾದಾಗ ಗೌತಮ್ ಅದಾನಿ ಇದಕ್ಕಿಂತ ದೊಡ್ಡ ಮೊತ್ತದ ಹಣವನ್ನು ಕಳೆದುಕೊಂಡಿದ್ದರು.
ಲೂಯಿ ವಿಟಾನ್ ಕಂಪನಿಯ ಷೇರುಗಳ ಮಾರಾಟದ ಒತ್ತಡದ ನಡುವೆ ಫ್ರೆಂಚ್ ಮೂಲದ ಶತಕೋಟ್ಯಾಧಿಪತಿಯ ಬಳಿ 191.6 ಬಿಲಿಯುನ್ ಯುಎಸ್ ಡಾಲರ್ ಹಣವಿದೆ ಎಂದು ಬ್ಲೂಮ್‌ಬರ್ಗ್ ಬಿಲಿಯನೇರ್ ಇಂಡೆಕ್ಸ್ ವರದಿ ಮಾಡಿದೆ. ಈ ವರ್ಷ ತಮ್ಮ ಸಂಪತ್ತಿಗೆ ಅಂದಾಜು 30 ಬಿಲಯನ್ ಡಾಲರ್ ಹಣವನ್ನು ಅರ್ನಾಲ್ಟ್ ಸೇರಿಸಿಕೊಂಡಿದ್ದಾರೆ.
ಈ ನಷ್ಟದೊಂದಿಗೆ ವಿಶ್ವದದ ಶ್ರೀಮಂತ ವ್ಯಕ್ತೊಗಳ ಪಟ್ಟಿಯಲ್ಲಿ ಬರ್ನಾರ್ಡ್ ಅರ್ನಾಲ್ಟ್ ಹಾಗೂ 2ನೇ ಸ್ಥಾನದಲ್ಲಿರುವ ಟೆಸ್ಲಾ ಇಂಕ್‌ನ ಸಂಸ್ಥಾಪಕ ಎಲಾನ್ ಮಸ್ಕ್ ಅವರ ಅಂತರ 11.4 ಬಿಲಿಯನ್ ಯುಎಸ್ ಡಾಲರ್‌ಗೆ ಇಳಿದಿದೆ.
ಮಂಗಳವಾರದ ಇಳಿಕೆ, ಎಲ್‌ವಿಎಂಎಚ್ ಷೇರುಗಳ ಬೆಲೆಯಲ್ಲಿ ದೊಡ್ಡ ಹಿನ್ನಡೆಯಾಗಿದೆ. ಹಾಗಿದ್ದರೂ ಈ ವರ್ಷ ಲೂಯಿ ವಿಟಾನ್ ಷೇರು ಬೆಲೆಯಲ್ಲಿ ಶೇ. 23ರಷ್ಟು ಏರಿಕೆಯಾಗಿದೆ. ಎಂಎಸ್‌ಸಿಐ ಯುರೋಪ್ ಟೆಕ್ಸ್‌ಟೈಲ್ಸ್ ಅಪ್ರೀಲ್ & ಲಕ್ಶುರಿ ಗೂಡ್ಸ್ ಸೂಚ್ಯಂಕ ಶೇ 27ರಷ್ಟು ಏರಿಕೆಯಾಗಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.
ಉತ್ತರಾಧಿಕಾರಿ ನೇಮಕಕ್ಕೆ ಮಕ್ಕಳ ಅಡಿಷನ್ ನಡೆಸಿದ ವಿಶ್ವದ ಸಿರಿವಂತ; ಯಾರ ಕೈಗೆ ಅಧಿಕಾರ ನೀಡ್ತಾರೆ ಅರ್ನಾಲ್ಟ್ ?
ಹೂಡಿಕೆ ಬ್ಯಾಂಕ್‌ನ ವಿಶ್ಲೇಷಕ ಎಡ್ವರ್ಡ್ ಆಬಿನ್ ಪ್ರಕಾರ, ಪ್ಯಾರಿಸ್‌ನಲ್ಲಿ ಮೋರ್ಗನ್ ಸ್ಟಾನ್ಲಿ ಆಯೋಜಿಸಿದ ಐಷಾರಾಮಿ ಸಮ್ಮೇಳನದಲ್ಲಿ ಭಾಗವಹಿಸಿದವರು ಯುಎಸ್‌ನಲ್ಲಿ "ತುಲನಾತ್ಮಕವಾಗಿ ಹೆಚ್ಚು ಅಧೀನ" ಪ್ರದರ್ಶನವನ್ನು ಫ್ಲ್ಯಾಗ್ ಮಾಡಿದ್ದಾರೆ. ಡಾಯ್ಚ ಬ್ಯಾಂಕ್ ಎಜಿ ವಿಶ್ಲೇಷಕರಾದ ಮ್ಯಾಟ್ ಗಾರ್ಲ್ಯಾಂಡ್ ಮತ್ತು ಆಡಮ್ ಕೊಕ್ರೇನ್ ಅವರು ಯುಎಸ್‌ನಲ್ಲಿ ನಿಧಾನಗತಿಯ ಬೆಳವಣಿಗೆಯು ಕಳವಳಕಾರಿಯಾಗಿದೆ ಎಂದಿದ್ದಾರೆ.
ನಂ.1 ಶ್ರೀಮಂತನ ಉತ್ತರಾಧಿಕಾರಿ ಆಯ್ಕೆಗೆ ಪ್ರತಿ ತಿಂಗಳೂ 5 ಮಕ್ಕಳ ಸಂದರ್ಶನ! ಆಡಿಷನ್ ಪ್ರಕ್ರಿಯೆ ಹೀಗಿದೆ..