
ನವದೆಹಲಿ(ಅ.24): ದೇಶಾದ್ಯಂತ ನವರಾತ್ರಿ, ದೀಪಾವಳಿ ಹಬ್ಬದ ಸಂಭ್ರಮದ ವಾತಾವರಣ ಇದೆ. ಜನ ಸಂಭ್ರಮದಿಂದ ಹಬ್ಬ ಆಚರಿಸಲು ಮುಂದಾಗಿದ್ದಾರೆ.
ಈ ಮಧ್ಯೆ ಹಬ್ಬದ ನಿಮಿತ್ತ ಬಂಗಾರದ ಬೇಡಿಕೆಯೂ ಹೆಚ್ಚಿದೆ. ಹೀಗಾಗಿ ಚಿನ್ನದ ದರ ಕೂಡ ಕಳೆದ ಮೂರು ತಿಂಗಳಿನಲ್ಲಿ ಗರಿಷ್ಠ ಮಟ್ಟಕ್ಕೇರಿದೆ. ಸದ್ಯ ಚಿನ್ನದ ದರದಲ್ಲಿ 150 ರೂ. ಹೆಚ್ಚಳವಾಗಿದ್ದು, 10 ಗ್ರಾಂ ಚಿನ್ನಕ್ಕೆ 32,500 ರೂ. ಆಗಿದೆ.
ಈ ಬಾರಿ ದೀಪಾವಳಿಗೆ 2 ದಿನ ಮುನ್ನ ಧನ್‌ತೇರಾಸ್ ಬಂದಿದ್ದು, ಸ್ವರ್ಣದ ಬೇಡಿಕೆ ಹೆಚ್ಚಿದೆ. ಕಳೆದ ವರ್ಷಗಳಲ್ಲಿ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಸರಾಸರಿ 240 ಟನ್ ಬಂಗಾರವನ್ನು ಭಾರತೀಯರು ಖರೀದಿಸಿದ್ದರು.
ಜಾಗತಿಕ ಮಾರುಕಟ್ಟೆಗಳಲ್ಲಿ, ಹಿಂದಿನ ಸೆಷನ್ನಲ್ಲಿ ಮೂರು ತಿಂಗಳಲ್ಲಿ ಚಿನ್ನದ ಗರಿಷ್ಠ ಬೆಲೆ ಏರಿಕೆ ಕಂಡ ನಂತರ, ಇಂದು ಹೆಚ್ಚಿನ ಮಟ್ಟದಲ್ಲಿ ಏರಿಕೆ ಕಂಡಿದೆ. ಲೋಹಕ್ಕೆ ಸುರಕ್ಷಿತವಾದ ಧಾರಣೆ ಬೇಡಿಕೆಗೆ ಅಂತರಾಷ್ಟ್ರೀಯ ರಾಜಕೀಯ ಮತ್ತು ಆರ್ಥಿಕ ಅನಿಶ್ಚಿತತೆ ಕಾರಣವಾಗಿದೆ.
ಜಾಗತಿಕವಾಗಿ ಕಳೆದ ಆಗಸ್ಟ್ ನಲ್ಲಿ ಚಿನ್ನದ ದರ ಕುಸಿತ ಕಂಡಿತ್ತು. ಆದರೆ ಅಕ್ಟೋಬರ್ ತಿಂಗಳಲ್ಲಿ ದರದಲ್ಲಿ ಶೇ. 6%ರಷ್ಟು ಏರಿಕೆ ಕಂಡಿದೆ. ಜಾಗತಿಕ ಷೇರು ಮಾರುಕಟ್ಟೆಗಳು, ಅಮೆರಿಕ-ಚೀನಾ ನಡುವಿನ ವಾಣಿಜ್ಯ ಯುದ್ಧ ಹಾಗೂ ಇತರ ಅಂತರಾಷ್ಟ್ರೀಯ ವಿದ್ಯಮಾನಗಳೂ ಚಿನ್ನದ ದರ ಏರಿಕೆಯಾಗಲು ಕಾರಣ ಎನ್ನಲಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.