ಮೋದಿ ಮುಂದೆ ಟ್ರಂಪ್ ಬಸ್ಕಿ: ನಿರ್ಬಂಧ ನಿಮಗಲ್ಲ ಅಂತಾ ಪೂಸಿ!

By Web DeskFirst Published Oct 6, 2018, 4:34 PM IST
Highlights

ಒಂದೇ ದಿನದಲ್ಲಿ ಉಲ್ಟಾ ಹೊಡೆದ ಅಮೆರಿಕ! ರಷ್ಯಾ-ಭಾರತ ರಕ್ಷಣಾ ಒಪ್ಪಂದಕ್ಕೆ ತಕರಾರಿಲ್ಲ! ಭಾರತದ ಮೇಲೆ ನಿರ್ಬಂಧ ಹೇರಿಕೆ ಸಾಧ್ಯವಿಲ್ಲ ಎಂದ ಅಮೆರಿಕ! ಭಾರತ ನಮ್ಮ ಮಿತ್ರರಾಷ್ಟ್ರ ಎಂದು ಪೂಸಿ ಹೊಡೆದ ಡೋನಾಲ್ಡ್ ಟ್ರಂಪ್

ನವದೆಹಲಿ(ಅ.6): ರಷ್ಯಾ ಜೊತೆ ಕ್ಷಿಪಣಿ ವ್ಯವಸ್ಥೆ ಒಪ್ಪಂದಕ್ಕೆ ಮುಂದಾದರೆ ಭಾರತದ ಮೇಲೆ ನಿರ್ಬಂಧ ವಿಧಿಸಲಾಗುತ್ತದೆ ಎಂಬ ಅಮೆರಿಕ ಎಚ್ಚರಿಕೆಯ ಹೊರತಾಗಿಯೂ, ರಷ್ಯಾ ಜೊತೆ ಭಾರತ ಎಸ್-400 ಕ್ಷಿಪಣಿ ವ್ಯವಸ್ಥೆ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಬಗ್ಗೆ ಅಮೆರಿಕ ನೀಡಿರುವ ಪ್ರತಿಕ್ರಿಯೆ ಕೂಡ ಅಚ್ಚರಿ ಮೂಡಿಸಿದೆ. 

ರಷ್ಯಾ-ಭಾರತದ ಒಪ್ಪಂದದ ನಂತರ ಪ್ರತಿಕ್ರಿಯೆ ನೀಡಿರುವ ಅಮೆರಿಕ ರಕ್ಷಣಾತ್ಮಕ ಹೇಳಿಕೆ ನೀಡಿದ್ದು,  ರಷ್ಯಾ ಜೊತೆಗೆ ಒಪ್ಪಂದ ಮಾಡಿಕೊಳ್ಳುವ ನಮ್ಮ ಮಿತ್ರ ರಾಷ್ಟ್ರಗಳ ಸೇನಾ ಸಾಮರ್ಥ್ಯಕ್ಕೆ ಧಕ್ಕೆ ಉಂಟು ಮಾಡುವುದು ನಾವು ಹೇರುವ ನಿರ್ಬಂಧದ ಉದ್ದೇಶವಲ್ಲ, ಆದ್ದರಿಂದ ಈಗ ರಷ್ಯಾ ಜೊತೆ ಎಸ್-400 ಗೆ ಸಹಿ ಹಾಕಿರುವ ಭಾರತದ ಮೇಲೆ ನಾವು ನಿರ್ಬಂಧ ಹೇರಲು ಸಾಧ್ಯವಿಲ್ಲ ಎಂದು ಹೇಳಿದೆ. 
ಕೆಡುಕು ಮಾಡುವ ರಷ್ಯಾದ ನಡವಳಿಕೆಗೆ ಅಂಕುಶ ಹಾಕುವುದು ನಮ್ಮ ಉದ್ದೇಶ, ಈ ಮೂಲಕ ರಷ್ಯಾಗೆ ಪಾಠ ಕಲಿಸುವುದು ನಿರ್ಬಂಧದ ಉದ್ದೇಶವಾಗಿದೆಯಷ್ಟೇ. ಹಾಗೆಂದ ಮಾತ್ರಕ್ಕೆ ರಷ್ಯಾ ಜೊತೆ ಒಪ್ಪಂದ ಮಾಡಿಕೊಳ್ಳುವ ನಮ್ಮ ಮಿತ್ರ ರಾಷ್ಟ್ರಗಳ ಸೇನಾ ಸಾಮರ್ಥ್ಯಕ್ಕೆ ಧಕ್ಕೆ ಉಂಟುಮಾಡುವುದು ನಮ್ಮ ಉದ್ದೇಶವಲ್ಲ ಎಂದು ಅಮೆರಿಕ ಭಾರತದೆಡೆಗಿನ ತನ್ನ ನಿಲುವನ್ನು ಬದಲಾವಣೆ ಮಾಡಿಕೊಂಡಿದೆ.

ನಿರ್ಬಂಧ ವಿಧಿಸುವ ನಿರ್ಧಾರವನ್ನು ಪೂರ್ವಾಗ್ರಹವಾಗಿ ತೆಗೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಸಿಎಎಟಿಎಸ್ಎ ಸೆಕ್ಷನ್ 231 ರ ಪ್ರಕಾರ ನಿರ್ಬಂಧ ವಿಧಿಸುವುದನ್ನು ವಹಿವಾಟು-ವಹಿವಾಟು ಆಧಾರದ ಮೇಲೆ ಪರಿಗಣಿಸಲಾಗುತ್ತದೆ. ರಷ್ಯಾ ರಕ್ಷಣಾ ಕ್ಷೇತ್ರಕ್ಕೆ ಹಣದ ಹರಿವನ್ನು ತಡೆಗಟ್ಟುವುದು ನಮ್ಮ ಉದ್ದೇಶ ಎಂದು ಅಮೆರಿಕ ಹೇಳಿದೆ.

ರಷ್ಯಾದೊಂದಿಗೆ ಒಪ್ಪಂದಕ್ಕೆ ಮುಂದಾದ ನಮ್ಮ ಮಿತ್ರ ರಾಷ್ಟ್ರಗಳ ಮೇಲೆ ನಿರ್ಬಂಧ ವಿಧಿಸುವ ಪೂರ್ವಾಗ್ರಹದ ನಿರ್ಧಾರಗಳನ್ನು ಕೈಗೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಅಮೆರಿಕ ರಾಯಭಾರಿ ಕಚೇರಿ ಸ್ಪಷ್ಟಪಡಿಸಿದೆ.

click me!