MSCI ಎಮರ್ಜಿಂಗ್ ಮಾರ್ಕೆಟ್‌ನ IMIನಲ್ಲಿ ಭಾರತ ಮೊದಲ ಸ್ಥಾನಕ್ಕೇರಿದೆ. ಇದೇ ಮೊದಲ ಬಾರಿಗೆ ಚೀನಾ ಹಿಂದಿಕ್ಕಿರುವ ಭಾರತ ಐತಿಹಾಸಿಕ ಸಾಧನೆ ಮಾಡಿದೆ.
ನವದೆಹಲಿ(ಸೆ.07) ಭಾರತ ಜಾಗತಿಕ ಮಟ್ಟದಲ್ಲಿ ಹಲವು ಐತಿಹಾಸಿಕ ಸಾಧನೆಗಳೊಂದಿಗೆ ಮುನ್ನುಗ್ಗುತ್ತಿದೆ. ಆರ್ಥಿಕತೆ, ಜಿಡಿಪಿ, ಬಾಹ್ಯಾಕಾಶ ಸೇರಿದಂತೆ ಹಲವು ಕ್ಷೇತ್ರದಲ್ಲಿ ಭಾರತ ತನ್ನದೇ ಆದ ಛಾಪು ಮೂಡಿಸಿದೆ. ಇದೀಗ ಇನ್ವೆಸ್ಟಬಲ್ ಮಾರ್ಕೆಟ್ ಇಂಡೆಕ್ಸ್‌ನಲ್ಲಿ ಭಾರತ ಐತಿಹಾಸಿಕ ಮೈಲಿಗಲ್ಲು ನಿರ್ಮಿಸಿದೆ. ಮಾರ್ಗನ್ ಸ್ಟಾನ್ಲಿ( MSCI )ಎಮರ್ಜಿಂಗ್ ಮಾರ್ಕೆಟ್‌ನ IMIನಲ್ಲಿ ಭಾರತ ಇದೇ ಮೊದಲ ಬಾರಿಗೆ ಚೀನಾ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದೆ. ಷೇರು ಮಾರುಕಟ್ಟೆ ಸೂಚ್ಯಂಕದಲ್ಲಿ ಭಾರತೀಯ ಷೇರುಗಳ ಶೇಕಡಾ 22.27ರಷ್ಟು ಮೌಲ್ಯ ಹೊಂದಿದ್ದರೆ, ಚೀನಾ ಸ್ಟಾಕ್ ಶೇಕಡಾ 21.58ಕ್ಕೆ ಇಳಿಕೆಯಾಗಿದೆ.
ಆದರೆ ಬಂಡವಾಳ ಮೂಲಗಳಲ್ಲಿ ಚೀನಾ ಮುಂದಿದೆ. ಚೀನಾದ ಬಂಡವಾಳೀಕರಣ 8.14 ಟ್ರಿಲಿಯನ್ ಅಮೆರಿಕನ್ ಡಾಲರ್ ಮೊತ್ತದಷ್ಟಿದೆ. ಭಾರತದ ಮೌಲ್ಯ ಶೇಕಡಾ 5.02 ಟ್ರಿಲಿಯನ್ ಡಾಲರ್. ಚೀನಾದ ಬಂಡವಾಳೀಕರಣ ಭಾರತಕ್ಕಿಂತ ಶೇಕಡಾ 60 ಪ್ರತಿಶತದಷ್ಟು ಹೆಚ್ಚಿದ್ದರೂ ಸ್ಟಾಕ್ ಮೌಲ್ಯದಲ್ಲಿ ಭಾರತ ಮೊದಲ ಸ್ಥಾನ ಅಲಂಕರಿಸಿದೆ.
ಪೋಸ್ಟ್ ಆಫೀಸ್‌ನಲ್ಲಿ 100 ರೂಗೆ ಖಾತೆ ತೆರೆದು ಹೂಡಿಕೆ ಮಾಡಿ, 10 ವರ್ಷದಲ್ಲಿ ಕೈಸೇರಲಿದೆ 8 ಲಕ್ಷ ರೂ!
ಅಮೆರಿಕ ಬ್ರೋಕ್‌ರೇಡ್ ಸಂಸ್ಥೆ ಮೊರ್ಗಾನ್ ಸ್ಟ್ಲಾನಿ ಸೂಚ್ಯಂಕದಲ್ಲಿ ಭಾರತ ಅಗ್ರಸ್ಥಾನಕ್ಕೇರಿದೆ. ಇದರಿಂದ ಭಾರತಕ್ಕೆ ಬಂಡವಾಳ ಹೂಡಿಕೆಯಲ್ಲಿ ಮತ್ತಷ್ಟು ನೆರವಾಗಲಿದೆ. ಕಾರಣ ವಿದೇಶಿ ಸಂಸ್ಥೆಗಳ ಬಂಡವಾಳ ಹೂಡಿಕೆ ಆಕರ್ಷಿಸಲು ಈ ಇಂಡೆಕ್ಸ್ ಸ್ಥಾನ ನೆರವಾಗಲಿದೆ ಎಂದು ಮಾರ್ಗನ್ ಸ್ಟಾನ್ಲಿ ಸಂಸ್ಥೆ ಹೇಳಿದೆ.
ಮಾರ್ಗನ್ ಸ್ಟ್ಲಾನಿ ಸೂಚ್ಯಂಕದಲ್ಲಿ ಬೃಹತ್ ಹಾಗೂ ಮಿಡ್‌ಕ್ಯಾಪ್, ಬೃಹತ್ , ಮಧ್ಯಮ ಹಾಗೂ ಸಣ್ಣ ಕ್ಯಾಪ್ ಸ್ಟಾಕ್ ಒಳಗೊಳ್ಳುವ ಮೂಲಕ ವಿಸ್ತಾರ ಶ್ರೇಣಿ ಹೊಂದಿದೆ. ಭಾರತದ ಮಾರುಕಟ್ಟೆ ಮೈಕ್ರೋ ಇಕಾನಮಿ ಪರಿಸ್ಥಿತಿಯಂದ ಹೆಚ್ಚು ಬಲಿಷ್ಠಗೊಳ್ಳುತ್ತಿದೆ. ಇದೇ ವೇಳೆ ಚೀನಾದ ಕೆಲ ಆರ್ಥಿಕ ತೊಳಲಾಟಗಳು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ಇದರಿಂದ ಕುಸಿತ ಕಂಡಿದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.
ಇತ್ತೀಚೆಗಿನ ದಿನಗಳಲ್ಲಿ ಭಾರತ ಈಕ್ವಿಟಿ ಮಾರುಕಟ್ಟೆಯಲ್ಲಿ ಉತ್ತಮ ಪರ್ಫಾಮೆನ್ಸ್ ನೀಡುತ್ತಿದೆ.ಭಾರತೀಯ ಕಾರ್ಪೋರೇಟ್ ಸಂಸ್ಥೆಗಳ ಕೂಡ ಮಾರುಕಟ್ಟೆ ಬೆಳವಣಿಗೆಯಲ್ಲಿ ಮಹತ್ವದ ಕೊಡುಗೆ ನೀಡುತ್ತಿದೆ. 2024ರಲ್ಲಿ ಭಾರತದಲ್ಲಿ ನೇರ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಶೇಕಡಾ 47 ರಷ್ಟು ಪ್ರಗತಿ ಸಾಧಿಸಿದೆ. ಇನ್ನು ಕಚ್ಚಾ ತೈಲ ಆಮದುವಿನಲ್ಲಿ ಆಗಿರುವ ಇಳಿಕೆ ಸೇರಿದಂತೆ ಇತರ ಖರ್ಚು ವೆಚ್ಚಳ ಶಿಸ್ತು ಭಾರತದ ಮಾರುಕಟ್ಟೆಯನ್ನು ಮತ್ತಷ್ಟು ಸದೃಢ ಮಾಡುತ್ತಿದೆ ಅನ್ನೋ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.
ವಿದೇಶಿ ಬಂಡವಾಳ ಹೂಡಿಕೆಯಲ್ಲಿ ದೇಶಕ್ಕೆ ಕರ್ನಾಟಕ ನಂಬರ್ 2..!