ತುರ್ತಾಗಿ ಕ್ಯಾಷ್​ ಬೇಕಾ? ಹತ್ತಿರದಲ್ಲಿ ಎಟಿಎಂ ಇಲ್ವಾ? ಹಾಗಿದ್ರೆ ಚಿಂತೆ ಬಿಡಿ.. ಮನೆ ಬಾಗಿಲಿಗೆ ಬರತ್ತೆ ದುಡ್ಡು...

Published : Feb 18, 2025, 07:49 PM ISTUpdated : Feb 19, 2025, 08:27 AM IST
ತುರ್ತಾಗಿ ಕ್ಯಾಷ್​ ಬೇಕಾ? ಹತ್ತಿರದಲ್ಲಿ ಎಟಿಎಂ ಇಲ್ವಾ? ಹಾಗಿದ್ರೆ ಚಿಂತೆ ಬಿಡಿ.. ಮನೆ ಬಾಗಿಲಿಗೆ ಬರತ್ತೆ ದುಡ್ಡು...

ಸಾರಾಂಶ

ಡಿಜಿಟಲ್ ಪಾವತಿಯ ಜೊತೆಗೆ ನಗದು ಅಗತ್ಯವಿದ್ದು, ಎಟಿಎಂ ಸಮಸ್ಯೆಗಳಿಗೆ ಪರಿಹಾರವಾಗಿ ಅಂಚೆ ಇಲಾಖೆಯ ಆಧಾರ್ ಆಧಾರಿತ ಪಾವತಿ ವ್ಯವಸ್ಥೆ(AePS) ಮನೆ ಬಾಗಿಲಿಗೆ ಹಣ ತಲುಪಿಸುತ್ತದೆ. ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಇದ್ದವರು ಪೋಸ್ಟ್‌ಮ್ಯಾನ್ ಮೂಲಕ ಹಣ ಪಡೆಯಬಹುದು, ಬ್ಯಾಲೆನ್ಸ್ ಚೆಕ್ ಮಾಡಬಹುದು ಹಾಗೂ ಹಣ ವರ್ಗಾಯಿಸಬಹುದು. ಸೇವಾ ಶುಲ್ಕ ಅನ್ವಯ.

ಇದು ಡಿಜಿಟಲ್​ ಯುಗ. ಒಂದೇ ಒಂದು ಕ್ಲಿಕ್​ಗೆ ಬೇಕಾದದ್ದೆಲ್ಲವೂ ಮನೆ ಬಾಗಿಲಿಗೆ ಬರುವ ಕಾಲವಿದು. ಅದರ ಜೊತೆಗೆ ಡಿಜಿಟಲ್​ ಪೇಮೆಂಟ್​ ಹೆಚ್ಚಾಗಿರುವ ಈ ದಿನಗಳಲ್ಲಿ ಕ್ಯಾಷ್​ ಯಾರ ಬಳಿ ಇರುವುದೂ ಬಲು ಅಪರೂಪ. ಚಿಲ್ಲರೆ ಕಾಸಾದರೂ ಸರಿ, ನಗದು ಹಣ ಕೈಯಲ್ಲಿ ಇದ್ದವನೇ ಶ್ರೀಮಂತ ಎನ್ನುವ ತಮಾಷೆಯ ಮೀಮ್ಸ್​ಗಳೂ ಇಂದು ಜನಪ್ರಿಯವಾಗಿದೆ. ಆದರೆ ಎಲ್ಲಾ ಸಂದರ್ಭಗಳಲ್ಲಿ ಡಿಜಿಟಲ್​ ಪೇಮೆಂಟ್​ ಸಾಧ್ಯವಾಗದೇ ಹೋಗಬಹುದು. ಕೆಲವೊಮ್ಮೆ ಬ್ಯಾಂಕ್​ಗಳು ಕೈಕೊಟ್ಟರೆ, ಮತ್ತೆ ಕೆಲವೊಮ್ಮೆ ಕೆಲವರು ಡಿಜಿಟಲ್​ ಹಣ ಪಡೆಯದೇ ಹೋಗಬಹುದು. ಆದರೆ ಕ್ಯಾಷ್​ ಬೇಕೇ ಬೇಕಾಗುತ್ತದೆ. 

ಆಗ ಚಿಂತೆ ಶುರುವಾಗುವುದು ಸಹಜವೇ. ಏಕೆಂದರೆ ಹಲವಾರು ಎಟಿಎಂಗಳು ಈಗ ಮುಚ್ಚಿಬಿಟ್ಟಿವೆ. ಎಷ್ಟೋ ಮಂದಿಯ ಮನೆಯ ಸಮೀಪದಲ್ಲಿ ಎಟಿಎಂಗಳೇ  ಇರುವುದಿಲ್ಲ. ಇದ್ದರೂ ಕ್ಯಾಷ್​  ಇರುವುದಿಲ್ಲ. ಆದರೆ ನಗದು ಬೇಕೇ ಬೇಕಾಗುತ್ತದೆ. ಅಂಥ ಸಂದರ್ಭಗಳಲ್ಲಿ ಭಯ ಪಡುವ ಅಗತ್ಯವಿಲ್ಲ. ಏಕೆಂದರೆ, ಅಂಚೆ ಇಲಾಖೆ ಈ ಸಂಬಂಧವೇ ಸೇವೆ ಆರಂಭಿಸಿದೆ. ಈ ಸೇವೆ ಆರಂಭವಾಗಿ ವರ್ಷ ಕಳೆದರೂ ಹಲವರಿಗೆ ಇದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಈ ಹಿನ್ನೆಲೆಯಲ್ಲಿ ಇದರ ಡಿಟೇಲ್ಸ್​ ಇಲ್ಲಿ ನೀಡಲಾಗಿದೆ.  

ಎಟಿಎಂ ಕಾರ್ಡ್​ ಇದ್ಯಾ? ಹಾಗಿದ್ರೆ ಈ ಮಹತ್ವದ ಮಾಹಿತಿ ಅರಿಯಿರಿ- ಇದರಿಂದ ಏನೆಲ್ಲಾ ಪ್ರಯೋಜನ ಇವೆ ಗೊತ್ತಾ?

ಇದರ ಹೆಸರು  ಆಧಾರ್ ಆಧರಿತ ಪಾವತಿ ವ್ಯವಸ್ಥೆ (The Aadhaar Enabled Payment System- AePS). ಅಂಚೆ ಇಲಾಖೆ ಈ ಸೇವೆ ಕಳೆದ ವರ್ಷ ಆರಂಭ ಮಾಡಿದೆ. ಇದರಿಂದ ಮನೆಯ ಬಾಗಿಲಿಗೇ ನಿಮ್ಮ ಹಣ ತಲುಪಲಿದೆ. ಅಂದರೆ,  ಪೋಸ್ಟ್‌ಮ್ಯಾನ್ ನಿಮ್ಮ ಮನೆಗೆ ಬಂದು ಹಣ ಡ್ರಾ ಮಾಡಿ ಕೊಡುತ್ತಾರೆ.  ಈ ಆನ್‌ಲೈನ್ ಆಧಾರ್ ATM (AePS) ಸೇವೆ ಬಳಸಲು ನಿಮ್ಮ ಆಧಾರ್ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರಬೇಕು. ನಿಮ್ಮ ಬಯೋಮೆಟ್ರಿಕ್ ಕೂಡ ಸರಿಯಾಗಿ ನೋಂದಣಿಯಾಗಿರಬೇಕು. ಈ ಮಾಹಿತಿ ಬಳಸಿ ಹಣ ಡ್ರಾ ಮಾಡಬಹುದಾಗಿದೆ. ಇದರ ಅರ್ಥ ಈಗ ಬ್ಯಾಂಕ್​ಗಳಿಗೆ ಆಧಾರ್​ ಕಡ್ಡಾಯ ಆಗಿರುವ ಹಿನ್ನೆಲೆಯಲ್ಲಿ, ಎಲ್ಲರ ಅಕೌಂಟ್​ಗೂ ಲಿಂಕ್​  ಆಗಿರುತ್ತದೆ.  ಆಧಾರ್​  ಲಿಂಕ್​  ಆಗಿದ್ದರೆ, ಬಯೋಮೆಟ್ರಿಕ್ ಕೂಡ ಸರಿಯಾಗಿ ಇರುತ್ತದೆ. ಆದ್ದರಿಂದ ಚಿಂತೆ ಇಲ್ಲ. 

ಮನೆಗೆ ಬಂದು ಸೇವೆ ನೀಡಿದ್ದಕ್ಕೆ ಪೋಸ್ಟ್‌ಮ್ಯಾನ್‌ಗೆ ಸರ್ವಿಸ್ ಚಾರ್ಜ್ ಕೊಡಬೇಕಾಗುತ್ತದೆ.  ಇದನ್ನು ಬಿಟ್ಟರೆ ಬೇರೆ ಶುಲ್ಕ ಇರುವುದಿಲ್ಲ. AePS ಮೂಲಕ ಮನೆಯಲ್ಲೇ ಹಣ ಡ್ರಾ ಮಾಡಬಹುದು. ಖಾತೆಯಲ್ಲಿ ಬ್ಯಾಲೆನ್ಸ್ ತಿಳಿದುಕೊಳ್ಳಬಹುದು. ಮಿನಿ ಸ್ಟೇಟ್‌ಮೆಂಟ್ ಪಡೆಯಬಹುದು. ಇತರೆ ಬ್ಯಾಂಕ್‌ಗಳಿಗೆ ಹಣ ವರ್ಗಾಯಿಸಬಹುದು. ಹೀಗೆ ಪೋಸ್ಟ್​ ಮ್ಯಾನ್​ ಬಂದಾಗ, ನೀವು ಹಣ ಡ್ರಾ ಮಾಡಿದ ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಹಣ ವರ್ಗಾವಣೆಯ SMS ಬರುತ್ತದೆ. ಈ ಸಂದೇಶವನ್ನು ಇಂಡಿಯನ್ ಪೋಸ್ಟಲ್ ಸರ್ವಿಸ್ ಮತ್ತು ನಿಮ್ಮ ಬ್ಯಾಂಕ್ ಕಳುಹಿಸುತ್ತದೆ. 

ಬ್ಯಾಂಕ್​ಗಳಲ್ಲಿ ಎಫ್​ಡಿ ಇಡಲು ಇದು ಸುಸಮಯ: ತಡ ಮಾಡಿದ್ರೆ ಕಡಿಮೆ ಬಡ್ಡಿ- ಫುಲ್​ ಡಿಟೇಲ್ಸ್​ ಇಲ್ಲಿದೆ...
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!