ಫ್ಲಿಪ್ ಕಾರ್ಟ್‌ ಡಿಲೆವರಿಗೆ ಕೊಟ್ಟಿದ್ದ ಅಡ್ರೆಸ್ ಕಂಡು ದಂಗಾದವರು ಒಬ್ರಾ..ಇಬ್ರಾ!

By Suvarna NewsFirst Published Jul 10, 2020, 2:47 PM IST
Highlights

ಫ್ಲಿಪ್ ಕಾರ್ಟ್ ಫನ್ ಸ್ಟೋರಿ/ ದೇವಾಲಯದ ಮುಂದೆ ಬಂದು ಕರೆ ಮಾಡಿ, ಬಂದು ತೆಗೆದುಕೊಳ್ಳುತ್ತೇನೆ/  ವಿಭಿನ್ನವಾಗಿ ಅಡ್ರೆಸ್ ಬರೆದ ಗ್ರಾಹಕ/  ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಟ್ವೀಟ್

ಜೈಪುರ(ಜೂ.  10)  ಈ ಆನ್ ಲೈನ್ ಶಾಪಿಂಗೆ ಒಂದಾದ ಮೇಲೆ ಒಂದು ಮಜಾ ಕತೆಗಳನ್ನು ತೆರೆದಿಡುತ್ತದೆ .  ಭಾರತದಲ್ಲಿ ಇ ಶಾಪಿಂಗ್ ಲಾಕ್ ಡೌನ್ ವೇಳೆ ಜೋರಾಗಿಯೇ ನಡೆಯುತ್ತಿದೆ.

ಡಿಲೆವರಿ ಮಾಡುವ ಹುಡುಗರು ಅಡ್ರೆಸ್ ತಪ್ಪಿಸಿಕೊಳ್ಳುವುದು, ಆರ್ಡರ್ ಮಾಡಿದ್ದು ಒಂದು ಬಂದಿದ್ದು ಒಂದು... ಸಾಮಾನ್ಯ ಬಾಡಿಲೋಶನ್ ಗೆ ದುಬಾರಿ ವಸ್ತುವೊಂದು ಬಂದು ಅದನ್ನು ನೀವೇ ಇಟ್ಟುಕೊಳ್ಳಿ ಎಂದು  ಹೇಳಿದ್ದು ಎಲ್ಲವನ್ನು ಕೇಳಿದ್ದೇವೆ. ಆದರೆ ಇದು ಅದೆಲ್ಲದಕ್ಕಿಂತ ಭಿನ್ನವಾದ ಸ್ಟೋರಿ. 

ಟ್ವಿಟರ್ ಬಳಕೆದಾರ ಮನ್ ಗೇಶ್ ಪಂಡಿತ್ರೋ ಎಂಬುವರು ಶೇರ್ ಮಾಡಿಕೊಂಡ ಪೋಟೋ ಸೋಶಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಅನ್ನೇ ಸೃಷ್ಟಿ ಮಾಡಿದೆ.  ಶಿಪ್ಪಿಂಗ್ ಕಸ್ಟಮರ್ ಅಡ್ರೆಸ್ ಜಾಗದಲ್ಲಿ ಬರೆದ ಶಬ್ದಗಳು ಇದಕ್ಕೆಲ್ಲ ಕಾರಣ.

ಅಮೇಜಾನ್, ಫ್ಲಿಪ್‌ ಕಾರ್ಟ್ ಗೆ ಬಾಲಕನ ಏಟು

ರಾಜಸ್ಥಾನದ ಕೋಟಾ ಬಳಿಯ ಅಡ್ರೆಸ್ ಒಂದಕ್ಕೆ ಈ ಪ್ಯಾಕೇಜ್ ಡಿಲೆವರಿ ಆಗಬೇಕಾಗಿತ್ತು. '448  ಚಾಹೋತ್ ಮಾತಾ ಮಂದಿರ್, ಮಂದಿರದ ಮುಂದೆ ಬರುತ್ತಲೇ ನನಗೆ ಕಾಲ್ ಮಾಡಿ, ನಾನು ಬಂದು ತೆಗೆದುಕೊಳ್ಳುತ್ತೇನೆ, ಶಿವಪುರ' ಹೀಗೆಂದು ಬರೆಯಲಾಗಿತ್ತು. 

ಭಾರತದ ಇ ಕಾಮರ್ಸ್ ತುಂಬಾ ಭಿನ್ನವಾದ ಹಾದಿ ತುಳಿದಿದೆ ಎಂದು ಬರೆದು ಶೇರ್ ಮಾಡಿದ್ದರು.  ಇದಾದ ಮೇಲೆ ಈ ಟ್ವೀಟ್ ವೈರಲ್ ಆಗಿದೆ. 2.8  ಸಾವಿರ ರಿ ಟ್ವೀಟ್ ಪಡೆದುಕೊಂಡಿದೆ.  ಇದಕ್ಕೆ ಪ್ರತಿಕ್ರಿಯೆ ನೀಡಿರುವ ಫ್ಲಿಫ್ ಕಾರ್ಡ್ ಮನೆಯೂ ಒಂದು ಮಂದಿರ ಎಂದು ಹೇಳಿದೆ.

Indian eCommerce is different. pic.twitter.com/EewQnPcU5p

— Mangesh Panditrao (@mpanditr)

Taking ‘Ghar ek mandir hai’ to a whole new level! pic.twitter.com/uuDoIYLyId

— Flipkart (@Flipkart)
click me!