ಅದಾನಿ ಕಂಪನಿ ವಿರುದ್ಧ ಮತ್ತೊಂದು ಆರೋಪ, ಅಮೆರಿಕದ ಸಂಸ್ಥೆಯಿಂದ ಭಾರೀ ಪ್ರಮಾಣದ ರಹಸ್ಯ ಹೂಡಿಕೆ

By Kannadaprabha News  |  First Published Sep 1, 2023, 10:15 AM IST

ಅದಾನಿ ಸಮೂಹದ ವಿರುದ್ಧ ಮತ್ತೆ ಅಕ್ರಮದ ಆರೋಪ. ಮಾರಿಷಸ್‌ ಕಂಪನಿಯಿಂದ ಅದಾನಿ ಸಮೂಹದಲ್ಲಿ ಹೂಡಿಕೆ. ಸೊರೋಸ್‌ಗೆ ಸಂಬಂಧಿಸಿದ ಸಮೂಹದಿಂದ ಆರೋಪ.  


ನವದೆಹಲಿ (ಸೆ.1): ಗೌತಮ್‌ ಅದಾನಿ ಕುಟುಂಬವು 2013-18ರ ಅವಧಿಯಲ್ಲಿ ತಮ್ಮದೇ ಕಂಪನಿಗಳ ಷೇರುಗಳ ಮೇಲೆ ಮಾರಿಷಸ್‌ ಮೂಲದ ಒಪೆಕ್ಯೂ ಇನ್ವೆಸ್ಟ್‌ಮೆಂಟ್ ಫಂಡ್‌ ಹೆಸರಿನ ಸಂಸ್ಥೆಯ ಮೂಲಕ ಭಾರೀ ಪ್ರಮಾಣದ ಹಣವನ್ನು ರಹಸ್ಯವಾಗಿ ಹೂಡಿಕೆ ಮಾಡಿತ್ತು ಎಂಬ ಗಂಭೀರ ಆರೋಪವೊಂದು ಕೇಳಿಬಬಂದಿದೆ. ವಿಶೇಷವೆಂದರೆ ಈ ಅವಧಿಯಲ್ಲಿ ಅದಾನಿ ಸಮೂಹದ ಷೇರುಗಳ ಮೌಲ್ಯ ಭಾರೀ ಏರಿಕೆ ಕಂಡಿತ್ತು.

ದ ಆರ್ಗನೈಸ್ಡ್‌ ಕ್ರೈಮ್‌ ಆ್ಯಂಡ್‌ ಕರಪಕ್ಷನ್‌ ರಿಪೋರ್ಟಿಂಗ್‌ ಪ್ರಾಜೆಕ್ಟ್ (ಒಸಿಸಿಆರ್‌ಪಿ) ಎಂಬ ಸಂಸ್ಥೆ ಅದಾನಿ ಸಮೂಹದ ಮೇಲೆ ಈ ಗಂಭೀರ ಆರೋಪ ಮಾಡಿದೆ.

Tap to resize

Latest Videos

ಆದರೆ ಈ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಅದಾನಿ ಸಮೂಹ, ‘ಇದು ಹಳೆಯ ಆರೋಪವಾಗಿದ್ದ ಹಳೇ ಆಪಾದನೆಯನ್ನೇ ಮರುಬಳಕೆ ಮಾಡಿದಂತಿದೆ’ ಎಂದು ವ್ಯಂಗ್ಯವಾಡಿದೆ. ಜೊತೆಗೆ ದಶಕಗಳ ಹಿಂದೆ ತನಿಖೆ ನಡೆಸಿ ಕ್ಲೀನ್‌ಚಿಟ್‌ ನೀಡಲಾದ ಪ್ರಕರಣದ ಅಂಕಿ ಅಂಶಗಳನ್ನು ಇಟ್ಟುಕೊಂಡೇ ಮತ್ತೆ ಹೊಸ ಆರೋಪ ಮಾಡಲಾಗುತ್ತಿದೆ ಎಂದು ಹೇಳಿದೆ.

ಗುಜರಾತ್‌ನ ನಂ.1 ಶ್ರೀಮಂತ ಉದ್ಯಮಿಯ ಒಂದು ದಿನದ ಸಂಪಾದನೆ 8700 ಕೋಟಿ ರೂ!

ಕಳೆದ ಜನವರಿ ತಿಂಗಳಲ್ಲಿ ಕೂಡಾ ಅದಾನಿ ಸಮೂಹದ ಮೇಲೆ ಅಮೆರಿಕ ಮೂಲದ ಹಿಂಡನ್‌ಬಗ್‌ರ್‍ ಸಂಸ್ಥೆ ನಾನಾ ರೀತಿಯ ಆರೋಪ ಮಾಡಿತ್ತು. ಅದರ ಬಳಿಕ ಅದಾನಿ ಸಮೂಹದ ವಿವಿಧ ಕಂಪನಿಗಳ ಷೇರು ಮೌಲ್ಯ 150 ಶತಕೋಟಿ ಡಾಲರ್‌ಗೂ (12 ಲಕ್ಷ ಕೋಟಿ ರು.) ಹೆಚ್ಚಿನ ಕುಸಿತ ಕಂಡಿತ್ತು. ಹಿಂಡನ್‌ಬಗ್‌ರ್‍ ಸಂಸ್ಥೆಯ ಜಾಜ್‌ರ್‍ ಸೊರೋಸ್‌ ಕೂಡಾ ಹಾಲಿ ಆರೋಪ ಮಾಡಿರುವ ಸಂಸ್ಥೆಯ ಹಿಂದಿನ ಶಕ್ತಿ ಕೂಡಾ ಹೌದು. ಇತ್ತೀಚೆಗಷ್ಟೇ ಜಾಜ್‌ರ್‍ ಸೊರೋಸ್‌, ಶೀಘ್ರವೇ ಭಾರತದ ಪ್ರಮುಖ ಕಂಪನಿಯೊಂದರ ಅಕ್ರಮ ಬಹಿರಂಗಪಡಿಸುವುದಾಗಿ ಹೇಳಿದ್ದರು. ಅದರ ಬೆನ್ನಲ್ಲೇ ಇದೀಗ ವರದಿ ಬಿಡುಗಡೆಯಾಗಿದೆ.

ಹೊಸ ಆರೋಪ ಏನು?: ಅದಾನಿ ಸಮೂಹದ ಸ್ಥಾಪಕ ಮತ್ತು ಗೌತಮ್‌ ಅದಾನಿ ಅವರ ಸೋದರ ವಿನೋದ್‌ ಅದಾನಿ ದುಬೈನಲ್ಲಿ ಕಂಪನಿಯೊಂದನ್ನು ಹೊಂದಿದ್ದಾರೆ. ಇವರ ಪರವಾಗಿ ಯುಎಇ ಮೂಲದ ನಾಸೆರ್‌ ಅಲಿ ಶಬಾನ್‌ ಮತ್ತು ತೈವಾನ್‌ ಮೂಲಕ ಚಾಂಗ್‌ ಚುಂಗ್‌ ಲಿಂಗ್‌ ಎಂಬಿಬ್ಬರು ಮಾರಿಷಸ್‌ ಮೂಲದ ಎರಡು ಹೂಡಿಕೆ ಸಂಸ್ಥೆಗಳ ಮೂಲಕ ಹಲವು ವರ್ಷಗಳ ಕಾಲ ಅದಾನಿ ಸಮೂಹಕ್ಕೆ ಸೇರಿದ ಕೋಟ್ಯಂತರ ರು. ಮೌಲ್ಯದ ಷೇರುಗಳ ವಹಿವಾಟು ನಡೆಸಿದ್ದಾರೆ. ಹೀಗೆ ಪರೋಕ್ಷವಾಗಿ ತಮ್ಮದೇ ಕಂಪನಿಯಲ್ಲಿ ಅದಾನಿ ಸಮೂಹ ರಹಸ್ಯವಾಗಿ ಭಾರೀ ಪ್ರಮಾಣದ ಹಣ ಹೂಡಿಕೆ ಮಾಡಿದೆ. ಇದರಿಂದಾಗಿ ಕಂಪನಿಯ ಷೇರು ಮೌಲ್ಯ ಭಾರೀ ಏರಿಕೆ ಕಂಡಿದೆ ಎಂಬುದು ಒಸಿಸಿಆರ್‌ಪಿ ಸಂಸ್ಥೆ ಆರೋಪ.

ಭಾರತದ ಶ್ರೀಮಂತ ನಟಿ, ಯಶಸ್ವಿ ಉದ್ಯಮಿ ಬಳಿ ಇದೆ 3 ಮನೆ, 25 ಕೋಟಿ ರೂ ಬೆಲೆ ಬಾಳುವ

ಆರೋಪಕ್ಕೆ ದಾಖಲೆ: 2014ರಲ್ಲಿ ಅದಾನಿ ಸಮೂಹದ ಷೇರುಗಳ ಮೌಲ್ಯ ಭಾರೀ ಏರಿಕೆ ಬಗ್ಗೆ ಸ್ವತಃ ಸೆಬಿಗೆ ಸಾಕ್ಷ್ಯ ನೀಡಲಾಗಿತ್ತು. ಇದನ್ನು ಆಧರಿಸಿ ಮತ್ತು ಕಂಪನಿಯ ಆಂತರಿಕ ಇ ಮೇಲ್‌ಗಳನ್ನು ಆಧರಿಸಿ ಈ ತನಿಖಾ ವರದಿ ಸಿದ್ಧಪಡಿಸಲಾಗಿದೆ ಎಂದು ಸಂಸ್ಥೆ ಹೇಳಿದೆ. ಜೊತೆಗೆ ಆಗ ಸೆಬಿ ಅಧ್ಯಕ್ಷರಾಗಿದ್ದ ಯು.ಕೆ.ಸಿನ್ಹಾ ಇದೀಗ ಅದಾನಿ ಸಮೂಹದ ಒಡೆತನದ ಎನ್‌ಡಿಟೀವಿ ಗ್ರೂಪ್‌ನ ನಿರ್ದೇಶಕ ಮತ್ತು ಅಧ್ಯಕ್ಷರಾಗಿದ್ದಾರೆ ಎಂದು ವರದಿ ಹೇಳಿದೆ.

ಅದಾನಿ ವಿರುದ್ಧ ತನಿಖೆ: ಮತ್ತೆ ರಾಹುಲ್‌ ಆಗ್ರಹ

ಗೌತಮ್‌ ಅದಾನಿ ಸಮೂಹದ ನಡೆಸಿರುವ ವ್ಯವಹಾರಗಳ ಬಗ್ಗೆ ತನಿಖೆ ಆಗಬೇಕು ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಮತ್ತೆ ಆಗ್ರಹ ಮಾಡಿದ್ದಾರೆ. ಮಾರಿಷಸ್‌ ಮೂಲದ ಕಂಪನಿಯು ರಹಸ್ಯವಾಗಿ ಅದಾನಿ ಕಂಪನಿಯಲ್ಲಿ ಹೂಡಿಕೆ ಮಾಡಿತ್ತು ಎಂದು ಅಮೆರಿಕದ ಸಂಸ್ಥೆಯೊಂದು ಆರೋಪಿಸಿದ ಬೆನ್ನಲ್ಲೇ ರಾಹುಲ್‌ ಈ ಒತ್ತಾಯ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ ವಿಶ್ವದ ಅನೇಕ ಕಡೆಗಳಿಂದ ಇಂದು ಅದಾನಿ ಸಮೂಹದ ಬಗ್ಗೆ ಆರೋಪ ಕೇಳಿಬರುತ್ತಿದೆ. ಸೆಬಿ ವರದಿ ಕೂಡ ಈ ಬಗ್ಗೆ ಆರೋಪ ಮಾಡಿತ್ತು. ಆದರೆ ಸರ್ಕಾರವು ಅದನ್ನೆಲ್ಲ ಮುಚ್ಚಿಹಾಕಿ ಅದಾನಿಗೆ ಕ್ಲೀನ್‌ಚಿಟ್‌ ಕೊಡುವುದು ಸರಿಯಲ್ಲ. ಜಂಟಿ ಸದನ ಸಮಿತಿ ರಚಿಸಿ ಅದಾನಿ ಅಕ್ರಮಗಳ ತನಿಖೆ ನಡೆಸಬೇಕು. ಮಾರಿಷಸ್‌ ಕಂಪನಿಗಳ ಅಕ್ರಮ ಹೂಡಿಕೆ ಹಿಂದೆ ಗೌತಮ್‌ ಅದಾನಿ ಸೋದರ ವಿನೋದ್‌ ಅದಾನಿ ಇದ್ದಾರೆ. ಮಾರಿಷಸ್‌ ಕಂಪನಿಗಳ ಹಣ ಅದಾನಿಯದ್ದೇ ಎನ್ನಲಾಗಿದೆ. ಈ ಬಗ್ಗೆ ತನಿಖೆ ನಡೆಯಬೇಕು’ ಎಂದು ರಾಹುಲ್‌ ಅಗ್ರಹಿಸಿದ್ದಾರೆ.

click me!