ಅದಾನಿ-ಐಎಚ್‌ಜಿ ಮೈತ್ರಿ: ಪ್ರವಾಸೋದ್ಯಮದಲ್ಲಿ ಹೊಸ ಅಧ್ಯಾಯ, ಮಂಗಳೂರು ಸೇರಿ 5 ಕಡೆಗಳಲ್ಲಿ ಕಿಂಪ್ಟನ್‌ ಹೊಟೇಲ್‌

Published : May 15, 2026, 09:45 PM IST
mangaluru airport

ಸಾರಾಂಶ

ಅದಾನಿ ಏರ್‌ಪೋರ್ಟ್‌ ಹೋಲ್ಡಿಂಗ್ಸ್‌ ಲಿಮಿಟೆಡ್‌ ಮತ್ತು ಐಎಚ್‌ಜಿ ಹೊಟೇಲ್ಸ್ ಅಂಡ್‌ ರೆಸಾರ್ಟ್ಸ್‌, ಭಾರತದ ಮಂಗಳೂರು, ಜೈಪುರ, ತಿರುವನಂತಪುರಂ ಮತ್ತು ಮುಂಬೈನಲ್ಲಿ ಐದು ಹೊಸ ಹೋಟೆಲ್‌ಗಳನ್ನು ನಿರ್ಮಿಸಲು ಒಪ್ಪಂದ ಮಾಡಿಕೊಂಡಿವೆ. ಈ ಯೋಜನೆಯಡಿ ಸುಮಾರು 1,500 ಕೊಠಡಿಗಳು ನಿರ್ಮಾಣವಾಗಲಿದ್ದು, ಇದು ವಿಮಾನ ನಿಲ್ದಾಣ ಆಧಾರಿತ ನಗರಾಭಿವೃದ್ಧಿ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದೆ.

ಮಂಗಳೂರು: ಅದಾನಿ ಏರ್‌ಪೋರ್ಟ್‌ ಹೋಲ್ಡಿಂಗ್ಸ್‌ ಲಿಮಿಟೆಡ್‌ ಹಾಗೂ ಐಎಚ್‌ಜಿ ಹೊಟೇಲ್ಸ್ ಅಂಡ್‌ ರೆಸಾರ್ಟ್ಸ್‌ ಭಾರತದಲ್ಲಿ ಐದು ಹೊಸ ಹೋಟೆಲ್‌ಗಳನ್ನು ಅಭಿವೃದ್ಧಿಪಡಿಸಲು ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಯೋಜನೆಯಡಿ ಸುಮಾರು 1,500 ಕೊಠಡಿಗಳಿರುವ ಹೋಟೆಲ್‌ಗಳು ನಿರ್ಮಾಣವಾಗಲಿವೆ.

ಈ ಒಪ್ಪಂದದ ಮೂಲಕ ಜೈಪುರದಲ್ಲಿ ಭಾರತದಲ್ಲೇ ಮೊದಲ ಬಾರಿಗೆ ಕಿಂಪ್ಟನ್ಸ್‌ ಹೊಟೇಲ್‌ ಅಂಡ್‌ ರೆಸ್ಟೋರೆಂಟ್‌ ಬ್ರ್ಯಾಂಡ್ ಪ್ರವೇಶಿಸಲಿದೆ. ಜೊತೆಗೆ ಹಾಲಿಡೇ ಇನ್‌ ಹಾಗೂ ಹಾಲಿಡೇ ಇನ್‌ ಎಕ್ಸ್‌ಪ್ರೆಸ್‌ ಹೋಟೆಲ್‌ಗಳನ್ನೂ ಅಭಿವೃದ್ಧಿಪಡಿಸಲಾಗುತ್ತದೆ.

ಯಾವ ನಗರದಲ್ಲಿ ಈ ಯೋಜನೆ

ಈ ಹೋಟೆಲ್‌ಗಳು ಮಂಗಳೂರು, ಜೈಪುರ, ತಿರುವನಂತಪುರಂ ಮತ್ತು ಮುಂಬೈ ಮೆಟ್ರೋಪಾಲಿಟನ್ ಪ್ರದೇಶಗಳಲ್ಲಿ ನಿರ್ಮಾಣವಾಗಲಿವೆ. ವಿಮಾನ ನಿಲ್ದಾಣ ಆಧಾರಿತ ನಗರಾಭಿವೃದ್ಧಿ ಹಾಗೂ ಪ್ರವಾಸೋದ್ಯಮ ವಲಯಕ್ಕೆ ಈ ಯೋಜನೆ ಹೊಸ ಉತ್ತೇಜನ ನೀಡಲಿದೆ.

ಪ್ರಣವ್‌ ಅದಾನಿ ಹೇಳಿದ್ದೇನು?

ಅದಾನಿ ಎಂಟರ್‌ಪ್ರೈಸಸ್ ನಿರ್ದೇಶಕ ಪ್ರಣವ್‌ ಅದಾನಿ ಮಾತನಾಡಿ, ಭಾರತದ ವೇಗವಾಗಿ ಬೆಳೆಯುತ್ತಿರುವ ವಿಮಾನಯಾನ ಕ್ಷೇತ್ರಕ್ಕೆ ಅನುಗುಣವಾಗಿ ವಿಶ್ವಮಟ್ಟದ ಪ್ರವಾಸ ಮತ್ತು ವಸತಿ ಅನುಭವವನ್ನು ರೂಪಿಸುವುದು ನಮ್ಮ ಗುರಿ ಎಂದು ತಿಳಿಸಿದ್ದಾರೆ.

ಐಎಚ್‌ಜಿ ದಕ್ಷಿಣ ಪಶ್ಚಿಮ ಏಷ್ಯಾ ವ್ಯವಸ್ಥಾಪಕ ನಿರ್ದೇಶಕ ಸುದೀಪ್‌ ಜೈನ್‌, ಭಾರತದಲ್ಲಿ ಲಕ್ಸುರಿ ಮತ್ತು ಬಿಸಿನೆಸ್ ಹೋಟೆಲ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಈ ಸಹಭಾಗಿತ್ವ ಮತ್ತಷ್ಟು ಬಲಪಡಿಸುತ್ತದೆ ಎಂದು ಹೇಳಿದ್ದಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ನಾರ್ಮಲ್ ಪೆಟ್ರೋಲ್ vs ಪವರ್ ಪೆಟ್ರೋಲ್, ನಿಮ್ಮ ಗಾಡಿಗೆ ಯಾವುದು ಬೆಸ್ಟ್? ವ್ಯತ್ಯಾಸ ಇಲ್ಲಿದೆ ನೋಡಿ
ರಾಜ್ಯದಲ್ಲಿ ಗಾಡಿ ಎಣ್ಣೆ ರೇಟ್ ಹೆಚ್ಚಾಯ್ತು, ಈ ಎಣ್ಣೆಯ ದರ ಇಳಿಕೆ ಆಯ್ತು! ಬ್ರ್ಯಾಂಡ್‌ವೈಸ್ ಬೆಲೆ ಇಲ್ಲಿದೆ ನೋಡಿ!