EPFO Rules: ಎಚ್ಚರ! ಈ ತಪ್ಪಿನಿಂದಾಗಿ ಕಷ್ಟಪಟ್ಟು ಕೂಡಿಟ್ಟ ಹಣ ಕೈತಪ್ಪಿ ಹೋಗ್ಬಹುದು!

Suvarna News   | Asianet News
Published : Dec 24, 2021, 12:43 PM ISTUpdated : Dec 24, 2021, 03:14 PM IST
EPFO Rules: ಎಚ್ಚರ! ಈ ತಪ್ಪಿನಿಂದಾಗಿ ಕಷ್ಟಪಟ್ಟು ಕೂಡಿಟ್ಟ ಹಣ ಕೈತಪ್ಪಿ ಹೋಗ್ಬಹುದು!

ಸಾರಾಂಶ

ಮಾಡಿದ ಕೆಲಸಕ್ಕೆ ಸಂಬಳ ಪಡೆಯುವುದು ಮಾತ್ರವಲ್ಲ ಗಳಿಸಿದ ಹಣದಲ್ಲಿ ಒಂದಿಷ್ಟನ್ನು ಕೂಡಿಡಬೇಕಾಗುತ್ತದೆ. ಪಿಎಫ್ ಖಾತೆಗೆ ನಮ್ಮ ಸಂಪಾದನೆಯ ಸ್ವಲ್ಪ ಹಣ ಹೋಗಿರುತ್ತದೆ. ಆದ್ರೆ ಮಾಹಿತಿ ಕೊರತೆಯಿಂದ ನಾವು ಈ ಹಣವನ್ನು ಕಳೆದುಕೊಳ್ತೇವೆ. 

Business Desk: ಸಂಘಟಿತ ವಲಯದ ಉದ್ಯೋಗಿಗಳು ಉದ್ಯೋಗಿ (Employee) ಭವಿಷ್ಯ ನಿಧಿ ಸಂಸ್ಥೆಯಲ್ಲಿ ಖಾತೆ ಹೊಂದಿರುತ್ತಾರೆ. ಅವರ ಸಂಬಳ(Salary)ದ ಸ್ವಲ್ಪ ಭಾಗವನ್ನು ಪ್ರತಿ ತಿಂಗಳು ಠೇವಣಿ ಮಾಡಲಾಗುತ್ತದೆ. ಸಂಬಳ ಪಡೆಯುವ ಉದ್ಯೋಗಿಗಳಿಗೆ ಪಿಎಫ್ ಹಣ ಜೀವಮಾನದ ಗಳಿಕೆಯಾಗಿದೆ. ಪಿಎಫ್ ಖಾತೆ ಹೊಂದಿರುವವರು ಭವಿಷ್ಯ ನಿಧಿಗೆ ಸಂಬಂಧಿಸಿದ ನಿಯಮಗಳ ಬಗ್ಗೆ  ಸರಿಯಾಗಿ ತಿಳಿದಿರಬೇಕಾಗುತ್ತದೆ. ಪಿಎಫ್ (PF)ಖಾತೆ ಕುರಿತು ಜನರ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳಿವೆ. ಹಾಗೆ ಅವರು ತಮ್ಮ ಹಣವನ್ನು ಯಾವಾಗ ಹಿಂಪಡೆಯಬಹುದು. ಹಣವನ್ನು ಹಿಂತೆಗೆದುಕೊಳ್ಳುವ ಸಾಧಕ-ಬಾಧಕಗಳೇನು? ಇಪಿಎಫ್ಒ (EPFO) ಖಾತೆಯನ್ನು ವರ್ಗಾಯಿಸುವುದು ಹೇಗೆ? ಈ ಎಲ್ಲ ವಿಷ್ಯಗಳನ್ನು ಪಿಎಫ್ ಖಾತೆ ಹೊಂದಿರುವವರು ತಿಳಿದಿರಬೇಕಾಗುತ್ತದೆ. ಹಾಗೆ ಪಿಎಫ್ ಖಾತೆಯನ್ನು ಸ್ವಯಂಚಾಲಿತವಾಗಿ ಮುಚ್ಚಬಹುದು ಎಂಬುದೂ ಅನೇಕರಿಗೆ ತಿಳಿದಿಲ್ಲ. ಕೆಲವೊಂದು ತಪ್ಪುಗಳಿಂದ ಪಿಎಫ್ ಹಣ ಕೈಗೆ ಸಿಗುವುದಿಲ್ಲ. ಪಿಎಫ್ ಖಾತೆಯ ಬಗ್ಗೆ ಕೆಲವೊಂದು ಮಹತ್ವದ ವಿಷ್ಯಗಳು ಇಲ್ಲಿವೆ. 

ಮೊದಲನೇಯದಾಗಿ ಪಿಎಫ್ ಖಾತೆ ಯಾವಾಗ ನಿಷ್ಕ್ರಿಯವಾಗುತ್ತದೆ ಎಂಬುದನ್ನು ತಿಳಿಯೋಣ :

ಕೆಲವರು ಆಗಾಗ ಉದ್ಯೋಗ ಬದಲಿಸುತ್ತಿರುತ್ತಾರೆ. ಉದ್ಯೋಗ ಬದಲಿಸಿದ ನಂತರ ಕೆಲವರು ಪಿಎಫ್ ಖಾತೆ (Account)ಯ ಹಣವನ್ನು ಪಡೆಯುತ್ತಾರೆ. ಮತ್ತೆ ಕೆಲವರಿಗೆ ಅದರ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ. ಪಿಎಫ್ ಮೊತ್ತ ಹೆಚ್ಚು ಸಿಗಬೇಕೆಂದ್ರೆ ಉದ್ಯೋಗ ಬದಲಿಸಿದ ನಂತರ ಪಿಎಫ್ ಖಾತೆಯನ್ನು ವರ್ಗಾಯಿಸಿಕೊಳ್ಳುವುದು ಒಳ್ಳೆಯದು. ಹಳೆಯ ಪಿಎಫ್ ಖಾತೆಯನ್ನು  ಹೊಸ ಕಂಪನಿಗೆ ವರ್ಗಾಯಿಸಬೇಕು. ಒಂದು ವೇಳೆ ಕಂಪನಿಗೆ ಹಣ ವರ್ಗಾವಣೆ ಮಾಡದೆ,ಹಣವನ್ನು ಪಡೆಯದೆ ಹೋದಲ್ಲಿ ಖಾತೆ ನಿಷ್ಕ್ರಿಯಗೊಳ್ಳುತ್ತದೆ.

ಒಂದು ವೇಳೆ 36 ತಿಂಗಳವರೆಗೆ ನಿಮ್ಮ ಪಿಎಫ್ ಖಾತೆಯಿಂದ ಯಾವುದೇ ವಹಿವಾಟು ನಡೆಯದಿದ್ದರೆ ಖಾತೆಯನ್ನು ಮುಚ್ಚಲಾಗುತ್ತದೆ. ನಿಷ್ಕ್ರಿಯ ಖಾತೆ ಒಟ್ಟು 3 ವರ್ಷಗಳವರೆಗೆ ಸಕ್ರಿಯವಾಗಿರುತ್ತದೆ. 3 ವರ್ಷಗಳವರೆಗೆ ಯಾವುದೇ ವಹಿವಾಟುಗಳಿಲ್ಲದಿದ್ದರೆ, ನಿಮ್ಮ ಇಪಿಎಫ್ ಖಾತೆಯನ್ನು ನಿಷ್ಕ್ರಿಯ ವರ್ಗಕ್ಕೆ ಸೇರಿಸಲಾಗುತ್ತದೆ. ಇದರ ನಂತರ, ಖಾತೆಯಿಂದ ಹಣವನ್ನು ಹಿಂಪಡೆಯಲು ನೀವು ಕಷ್ಟಪಡಬೇಕಾಗಬಹುದು.  
ಪಿಎಫ್ ಖಾತೆದಾರರು ವಿದೇಶದಲ್ಲಿ ಶಾಶ್ವತವಾಗಿ ನೆಲೆಸಿದ್ದರೆ ಆಗ ಅವರ ಖಾತೆಯನ್ನು ಮುಚ್ಚಲಾಗುತ್ತದೆ.

ಪಿಎಫ್ ಖಾತೆದಾರರು ಮೃತ(Dead)ಪಟ್ಟರೆ ಖಾತೆ ನಿಷ್ಕ್ರಿಯವಾಗುತ್ತದೆ.ಇದರ ಹೊರತಾಗಿ, ಇಪಿಎಫ್‌ಒ ಸದಸ್ಯರು ಎಲ್ಲಾ ನಿವೃತ್ತಿ ಹಣವನ್ನು ಹಿಂಪಡೆದಿದ್ದರೂ ಸಹ, ಖಾತೆಯು ನಿಷ್ಕ್ರಿಯವಾಗುತ್ತದೆ. 

7 ವರ್ಷಗಳವರೆಗೆ ಯಾರೂ ಯಾವುದೇ ಪಿಎಫ್ ಖಾತೆಯನ್ನು ಕ್ಲೈಮ್ ಮಾಡದಿದ್ದರೆ, ಈ ನಿಧಿಯನ್ನು ಹಿರಿಯ ನಾಗರಿಕರ ಕಲ್ಯಾಣ ನಿಧಿಗೆ ಹಾಕಲಾಗುತ್ತದೆ.

2016ರಲ್ಲಿ ನಿಯಮಗಳಿಗೆ ತಿದ್ದುಪಡಿ!

ವಿಶೇಷವೆಂದ್ರೆ ಖಾತೆ ನಿಷ್ಕ್ರಿಯವಾಗಿದ್ದರೂ ಸಹ  ಖಾತೆಯಲ್ಲಿರುವ ಹಣದ ಮೇಲೆ ಬಡ್ಡಿ ನೀಡಲಾಗುತ್ತದೆ.  ಈ ಹಿಂದೆ ನಿಷ್ಕ್ರಿಯ ಪಿಎಫ್ ಖಾತೆಗೆ ಬಡ್ಡಿ ಲಭ್ಯವಿರಲಿಲ್ಲ. ಆದರೆ, 2016ರಲ್ಲಿ ನಿಯಮಗಳಿಗೆ ತಿದ್ದುಪಡಿ ತರಲಾಗಿದೆ. ಹಾಗಾಗಿ ಬಡ್ಡಿ ಆರಂಭವಾಗಿ. 58 ವರ್ಷ ವಯಸ್ಸಾಗುವವರೆಗೆ ನಿಮ್ಮ ಪಿಎಫ್ ಖಾತೆಯಲ್ಲಿ ಬಡ್ಡಿ ಸಂಗ್ರಹವಾಗುತ್ತಲೇ ಇರುತ್ತದೆ. 

ಪಿಎಫ್ ಖಾತೆಯಲ್ಲಿ ಸಿಕ್ಕಿಬಿದ್ದ ಹಣವನ್ನು ಸ್ವಲ್ಪ ಕಷ್ಟಪಟ್ಟು ಪಡೆಯಬೇಕಾಗುತ್ತದೆ. ಈಗಾಗಲೇ ನಿಮ್ಮ ಖಾತೆ ನಿಷ್ಕ್ರಿಯವಾಗಿದ್ದರೆ ನಿಷ್ಕ್ರಿಯ ಪಿಎಫ್ ಖಾತೆಯನ್ನು ಸಕ್ರಿಯಗೊಳಿಸಲು ಅಥವಾ ಹಣ ವಾಪಸ್ ಪಡೆಯಲು ಉದ್ಯೋಗಿ ಬಗ್ಗೆ ಕಂಪನಿ ಪ್ರಮಾಣೀಕರಿಸುವುದು ಅವಶ್ಯಕ.  ಕಂಪನಿ ಮುಚ್ಚಲ್ಪಟ್ಟಿದ್ದರೆ ಮತ್ತು ಕ್ಲೈಮ್ ಪ್ರಮಾಣೀಕರಿಸಲು ಯಾರೂ ಇಲ್ಲದಿರುವ ಉದ್ಯೋಗಿಗಳು, ಬ್ಯಾಂಕ್ ಕೆವೈಸಿ ದಾಖಲೆಗಳ ಆಧಾರದ ಮೇಲೆ ಪ್ರಮಾಣೀಕರಿಸಬಹುದು.

ಯಾವ ದಾಖಲೆಗಳು ಬೇಕಾಗುತ್ತವೆ?

ಕೆವೈಸಿ (KYC)ಗೆ ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್, ರೇಷನ್ ಕಾರ್ಡ್, ಇಎಸ್‌ಐ ಗುರುತಿನ ಚೀಟಿ, ಚಾಲನಾ ಪರವಾನಗಿ ದಾಖಲೆ ಬೇಕಾಗುತ್ತದೆ. ಇದಲ್ಲದೇ ಆಧಾರ್ ನಂತಹ ಸರ್ಕಾರ ನೀಡುವ ಇತರೆ ಯಾವುದೇ ಗುರುತಿನ ಚೀಟಿಯನ್ನು ಸಹ ನೀಡಬಹುದು. 

ಯಾರ ಅನುಮೋದನೆ ಬೇಕು ?:

 ಮೊತ್ತವು 50 ಸಾವಿರ ರೂಪಾಯಿ ಮೀರಿದರೆ, ಸಹಾಯಕ ಭವಿಷ್ಯ ನಿಧಿ ಆಯುಕ್ತರ ಒಪ್ಪಿಗೆ ಬೇಕಾಗುತ್ತದೆ. ಅವರ ಒಪ್ಪಿಗೆ ನಂತರ ಹಣವನ್ನು ಹಿಂಪಡೆಯಲಾಗುತ್ತದೆ ಅಥವಾ ವರ್ಗಾಯಿಸಲಾಗುತ್ತದೆ. 25 ಸಾವಿರ ರೂಪಾಯಿಗಿಂತ ಹೆಚ್ಚು ಮತ್ತು 50 ಸಾವಿರ ರೂಪಾಯಿಗಿಂತ ಕಡಿಮೆ ಇದ್ದರೆ, ಖಾತೆ ಅಧಿಕಾರಿಯು ನಿಧಿ ವರ್ಗಾವಣೆ ಅಥವಾ ಹಿಂಪಡೆಯುವಿಕೆ ಒಪ್ಪಿಗೆ ನೀಡಬೇಕು. ಮೊತ್ತವು 25 ಸಾವಿರ ರೂಪಾಯಿಗಿಂತ ಕಡಿಮೆಯಿದ್ದರೆ, ಡೀಲಿಂಗ್ ಸಹಾಯಕರ ಒಪ್ಪಿಗೆ ಬೇಕು. 

ಇದನ್ನೂ ಓದಿ:

1) Name Change In PAN Card: ವಿವಾಹದ ಬಳಿಕ ಮಹಿಳೆಯರು ಪ್ಯಾನ್ ಕಾರ್ಡ್ ನಲ್ಲಿ ಹೆಸರು, ವಿಳಾಸ ಬದಲಾಯಿಸಲು ಏನ್ ಮಾಡ್ಬೇಕು?

2) Money Stuck in ATM : ಎಟಿಎಂ ಯಂತ್ರದಿಂದ ನಗದು ಬರದೆ ಖಾತೆಯಲ್ಲಿ ಹಣ ಕಟ್ ಆದ್ರೆ ತಕ್ಷಣ ಹೀಗೆ ಮಾಡಿ!

3) New Labour Codes: ಮುಂದಿನ ವರ್ಷ ವಾರದಲ್ಲಿ ನಾಲ್ಕೇ ದಿನ ಕೆಲಸ? ಹೊಸ ಕಾರ್ಮಿಕ ನೀತಿ ಸಂಹಿತೆ ಜಾರಿಗೆ ಕೇಂದ್ರ ಚಿಂತನೆ

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!