ಎಸಿಗೆ ಬೇಸಿಗೆ ಮುನ್ನವೇ ದರ ಏರಿಕೆ ಬಿಸಿ!

By Suvarna NewsFirst Published Feb 24, 2020, 4:54 PM IST
Highlights

ಎಸಿಗೆ ಬೇಸಿಗೆ ಮುನ್ನವೇ ದರ ಏರಿಕೆ ಬಿಸಿ: ಶೇ.5 ದರ ಹೆಚ್ಚಳಕ್ಕೆ ಸಿದ್ಧತೆ|  ಕಂಪ್ರೆಸರ್‌ಗಳ ಆಮದಿಗೆ ಸುಂಕ ಹೆಚ್ಚಳ ಹಾಗೂ ಕೊರೋನಾ ವೈರಸ್‌ನಿಂದಾಗಿ ಸರಕು ಸಾಗಣೆ ವೆಚ್ಚ ಹೆಚ್ಚು

ನವದೆಹಲಿ[ಫೆ.24]: ಭೀಕರ ಕೊರೋನಾ ವೈರಸ್‌ನಿಂದ ವೈದ್ಯಕೀಯ ಪರಿಕರಗಳ ಬೆಲೆ ಹೆಚ್ಚಾದ ಬೆನ್ನಲ್ಲೇ, ಹವಾನಿಯಂತ್ರಕ (ಎಸಿ)ಗಳ ಬೆಲೆಯೂ ತುಟ್ಟಿಯಾಗುತ್ತಿದೆ. ಕಂಪ್ರೆಸರ್‌ಗಳ ಆಮದಿಗೆ ಸುಂಕ ಹೆಚ್ಚಳ ಹಾಗೂ ಕೊರೋನಾ ವೈರಸ್‌ನಿಂದಾಗಿ ಸರಕು ಸಾಗಣೆ ವೆಚ್ಚ ಹೆಚ್ಚಾಗಿರುವುದರಿಂದ ಎ.ಸಿ. ಬೆಲೆಯನ್ನು ಶೇ.5ರಷ್ಟುಏರಿಕೆ ಮಾಡಲು ಕಂಪನಿಗಳು ಮುಂದಾಗಿವೆ.

ಸಾಮಾನ್ಯವಾಗಿ ಬೇಸಿಗೆಯಲ್ಲಿ ಎ.ಸಿ.ಗೆ ಬೇಡಿಕೆ ಹೆಚ್ಚಾಗಿ ಬೆಲೆ ಏರುತ್ತದೆ. ಆದರೆ ಬೇಸಿಗೆ ಅಧಿಕೃತವಾಗಿ ಆರಂಭವಾಗುವ ಮುನ್ನವೇ ಈ ಬಾರಿ ಬೆಲೆ ಏರಿಕೆ ಕಾಣುವಂತಾಗಿದೆ.

ಚೀನಾದಿಂದ ಎಸಿ ನಿಯಂತ್ರಕ ಹಾಗೂ ಕಂಪ್ರೆಸರ್‌ಗಳನ್ನು ಅಧಿಕ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲಾಗುತ್ತಿದ್ದು, ಕರೋನಾ ವೈರಸ್‌ನಿಂದಾಗಿ ವಾಯು ಮಾರ್ಗ ಮೂಲಕ ತರಿಸಿಕೊಳ್ಳಲಾಗುತ್ತಿದೆ. ಇದಕ್ಕೆ ಹೆಚ್ಚಿನ ಸುಂಕ ಬೀಳುತ್ತಿದೆ ಎಂದು ಕಂಪನಿಗಳು ತಿಳಿಸಿವೆ.

click me!