ಲಾಟರಿಗೆ ಮಾ.1ರಿಂದ ಶೇ.28ರಷ್ಟು ಜಿಎಸ್‌ಟಿ!

By Kannadaprabha NewsFirst Published Feb 24, 2020, 10:28 AM IST
Highlights

ಲಾಟರಿಗೆ ಮಾ.1ರಿಂದ ಶೇ.28ರಷ್ಟು ಜಿಎಸ್‌ಟಿ: ಕೇಂದ್ರ ಅಧಿಸೂಚನೆ| ದೇಶದ ಕೆಲವು ರಾಜ್ಯಗಳಲ್ಲಿ ಮಾತ್ರ ಲಾಟರಿ ಇದ್ದು, ಕರ್ನಾಟಕದಲ್ಲಿ ಇದಕ್ಕೆ ನಿಷೇಧ

ನವದೆಹಲಿ[ಫೆ.24]: ಲಾಟರಿ ಮೇಲೆ ದೇಶಾದ್ಯಂತ ಏಕರೂಪದ ಶೇ.28ರಷ್ಟುಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದು ಮಾ.1ರಿಂದ ಜಾರಿಗೆ ಬರಲಿದೆ ಎಂದು ಅಧಿಸೂಚನೆ ತಿಳಿಸಿದೆ.

ಕಳೆದ ಡಿಸೆಂಬರ್‌ನಲ್ಲಿ ನಡೆದ ಜಿಎಸ್‌ಟಿ ಮಂಡಳಿ ಸಭೆ ಸರ್ಕಾರಗಳು ನಡೆಸುತ್ತಿರುವ ಹಾಗೂ ಸರ್ಕಾರದಿಂದ ಅನುಮತಿ ಪಡೆದು ನಡೆಸಲಾಗುತ್ತಿರುವ ಲಾಟರಿ ಮೇಲೆ ಏಕರೂಪದ ಶೇ.28ರಷ್ಟುಜಿಎಸ್‌ಟಿ ವಿಧಿಸಲು ನಿರ್ಧರಿಸಿತ್ತು. ಸದ್ಯ ಸರ್ಕಾರಗಳು ನಡೆಸುವ ಲಾಟರಿಗೆ ಶೇ.12ರಷ್ಟುಜಿಎಸ್‌ಟಿ ವಿಧಿಸಲಾಗುತ್ತಿದೆ.

ಸರ್ಕಾರದ ಮಾನ್ಯತೆ ಪಡೆದು ನಡೆಸಲಾಗುತ್ತಿರುವ ಲಾಟರಿಗೆ ಶೇ.28ರಷ್ಟುಜಿಎಸ್‌ಟಿ ಹೇರಲಾಗುತ್ತಿದೆ. ದೇಶದ ಕೆಲವು ರಾಜ್ಯಗಳಲ್ಲಿ ಮಾತ್ರ ಲಾಟರಿ ಇದ್ದು, ಕರ್ನಾಟಕದಲ್ಲಿ ಇದಕ್ಕೆ ನಿಷೇಧವಿದೆ.

click me!