
ಇಂದಿನಿಂದ, ಅಂದರೆ ನವೆಂಬರ್1ರಿಂದ ಆಧಾರ್ ಕಾರ್ಡ್ ಹೊಂದಿರುವವರಿಗೆ ಬಹು ದೊಡ್ಡ ಗುಡ್ನ್ಯೂಸ್ ಇದೆ. ಹಲವು ಮಹತ್ವದ ಬದಲಾವಣೆಗಳನ್ನು ಮಾಡಬಹುದಾಗಿದೆ. ಆಧಾರ್ ಕಾರ್ಡ್ನಲ್ಲಿ ಇಂದಿನಿಂದ ಹಲವು ಬದಲಾವಣೆಗಳಿಗೆ ಆಧಾರ್ ಕೇಂದ್ರಗಳ ಮುಂದೆ ಕ್ಯೂ ನಿಲ್ಲುವ ಅಗತ್ಯವಿಲ್ಲ. ಹಲವು ಸೇವೆಗಳನ್ನು ಕುಳಿತಲ್ಲಿಯೇ, ಮನೆಯಲ್ಲಿಯೇ ಮಾಡಬಹುದಾಗಿದೆ. ಇದರಲ್ಲಿ ಪ್ರಮುಖವಾದದ್ದು, ಕಾರ್ಡ್ ಹೊಂದಿರುವವರು ತಮ್ಮ ಆಧಾರ್ ಅನ್ನು ಸಕ್ರಿಯ ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಿದ್ದರೆ, myAadhaar ಪೋರ್ಟಲ್ ಮೂಲಕ ನೇರವಾಗಿ ಹೆಸರು, ವಿಳಾಸ, ಜನ್ಮ ದಿನಾಂಕ ಮತ್ತು ಮೊಬೈಲ್ ಸಂಖ್ಯೆಯನ್ನು ಅಪ್‌ಡೇಟ್ ಮಾಡಬಹುದಾಗಿದೆ. ಮೊಬೈಲ್ OTP ಪರಿಶೀಲನೆ ಸಕ್ರಿಯವಾಗಿದ್ದರೆ ಹೆಸರು, ವಿಳಾಸ, DOB ಅಥವಾ ಮೊಬೈಲ್ ಸಂಖ್ಯೆಯ ಬದಲಾವಣೆಗಳಿಗೆ ಆಧಾರ್ ಕೇಂದ್ರ ಭೇಟಿ ಅಗತ್ಯವಿಲ್ಲ.
ಒಂದು ವೇಳೆ ಫಿಂಗರ್‌ಪ್ರಿಂಟ್, ಐರಿಸ್ ಮತ್ತು ಛಾಯಾಚಿತ್ರ ಸೇರಿದಂತೆ ಕೆಲವೊಂದು ಅವಶ್ಯಕತೆಗಳು ಇದ್ದರೆ ಮಾತ್ರ ಕೇಂದ್ರಕ್ಕೆ ಹೋಗುವುದು ಅನಿವಾರ್ಯ. ಇದರ ಹೊರತಾಗಿಯೂ ಹಲವು ಅಪ್ಡೇಟ್ಗಳನ್ನು ಮನೆಯಲ್ಲಿಯೇ ಮಾಡಿಕೊಳ್ಳಲು ಸಾಧ್ಯವಾಗಿದೆ.
ಆಧಾರ್ಕಾರ್ಡ್ ಅಪ್ಡೇಟ್ಗೆ ಇದಾಗಲೇ ಕೇಂದ್ರ ಸರ್ಕಾರ ನೀಡಿರುವ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ, ಕೆಲವು ಬದಲಾವಣೆಗಳಿಗೆ 125 ರೂಪಾಯಿವರೆಗೆ ವಿಭಿನ್ನ ರೀತಿಯ ಶುಲ್ಕ ವಿಧಿಸಲಾಗಿದೆ. ಆದರೆ, 5 ರಿಂದ 17 ವರ್ಷ ವಯಸ್ಸಿನವರೆಗೆ ಈ ಶುಲ್ಕವನ್ನು ವಿನಾಯಿತಿಗೊಳಿಸಲಾಗಿದೆ.
ಆದರೆ, 18 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಾಗಿದ್ದರೆ ನೀವು ನಿಮ್ಮ ಹೆಸರು, ವಿಳಾಸ ಅಥವಾ ಮೊಬೈಲ್ ಸಂಖ್ಯೆ ಬದಲಾಯಿಸಬೇಕಿದ್ರೆ 75 ರೂ. ಬಯೋಮೆಟ್ರಿಕ್ ನವೀಕರಿಸಲು 125 ರೂ. ಶುಲ್ಕ ಕಟ್ಟಬೇಕು. ಯಾವುದೇ ದಾಖಲೆಗಳಿಲ್ಲದೆ ಸಹ ನೀವು ಆಧಾರ್ ಅಪ್‌ಡೇಟ್ ಮಾಡಿಸಬಹುದು. ಇದು ಪ್ರಕ್ರಿಯೆಯನ್ನು ನಿಜಕ್ಕೂ ಸುಲಭಗೊಳಿಸಿದೆ!
ನನ್ನ ಆಧಾರ್ ಪೋರ್ಟಲ್ ಮೂಲಕ ದಾಖಲೆಗಳನ್ನು ಅಪ್‌ಡೇಟ್ ಮಾಡಲು ಜೂನ್ 14ರವರೆಗೆ ಅವಧಿ ವಿಸ್ತರಣೆ ಮಾಡಲಾಗಿದೆ. ಇದು ಉಚಿತವಾಗಿರುತ್ತವೆ. ಒಂದು ವೇಳೆ ಆಧಾರ್ ಕೇಂದ್ರಗಳಿಗೆ ಹೋಗಿ ಇದನ್ನು ಮಾಡುವುದೇ ಆಗಿದ್ದಲ್ಲಿ 75 ರೂಪಾಯಿ ಶುಲ್ಕ ಕಟ್ಟಬೇಕಾಗುತ್ತದೆ.
ಇನ್ನು ಇದಾಗಲೇ ಕೇಂದ್ರ ಸರ್ಕಾರ ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡಲು ಹಲವು ಬಾರಿ ದಿನಾಂಕ ವಿಸ್ತರಣೆ ಮಾಡಿದೆ. ಇದೀಗ ಬರುವ ಡಿಸೆಂಬರ್ 31ರವರೆಗೆ ಗಡುವು ನೀಡಿದೆ. ಹಾಗೆ ಮಾಡಲು ವಿಫಲವಾದರೆ ಪ್ಯಾನ್ ನಿಷ್ಕ್ರಿಯಗೊಳಿಸಲಾಗುವುದು. ಸೇವಾ ನಿರ್ಬಂಧಗಳು ಮತ್ತು ಕೆವೈಸಿ ಅಥವಾ ತೆರಿಗೆ ಪ್ರಕ್ರಿಯೆಯಲ್ಲಿ ವಿಳಂಬವಾಗಬಹುದು ಎಂದು ಸರ್ಕಾರ ಎಚ್ಚರಿಸಿದೆ.
-ಆಧಾರ್‌ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆ ಪ್ರಸ್ತುತವಾಗಿದೆ ಮತ್ತು OTP-ಸಕ್ರಿಯಗೊಳಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.
-ಅಗತ್ಯವಿದ್ದರೆ ಯಾವುದೇ ಬಯೋಮೆಟ್ರಿಕ್ ನವೀಕರಣಗಳನ್ನು ಪೂರ್ಣಗೊಳಿಸಿ.
-ಗಡುವಿನ ಮೊದಲು ಪ್ಯಾನ್-ಆಧಾರ್ ಲಿಂಕ್ ಸ್ಥಿತಿಯನ್ನು ಪರಿಶೀಲಿಸಿ.
-URN (ಅಪ್‌ಡೇಟ್ ವಿನಂತಿ ಸಂಖ್ಯೆ) ಬಳಸಿಕೊಂಡು ನವೀಕರಣಗಳನ್ನು ಟ್ರ್ಯಾಕ್ ಮಾಡಲು myAadhaar ಪೋರ್ಟಲ್ ಬಳಸಿ.
ಅಧಿಕೃತ ವೆಬ್ಸೈಟ್: https://uidai.gov.in/en/my-aadhaar/update-aadhaar.html
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.