ಆಧಾರ್ ಕಾರ್ಡ್ ನಲ್ಲಿ ಎಷ್ಟು ಬಾರಿ ವಿಳಾಸ ನವೀಕರಿಸಬಹುದು? ಹೇಗೆ? ಇಲ್ಲಿದೆ ಮಾಹಿತಿ

By Suvarna News  |  First Published Apr 15, 2023, 3:22 PM IST

ಆಧಾರ್ ಕಾರ್ಡ್ ಪ್ರಮುಖ ಗುರುತು ದೃಢೀಕರಣ ದಾಖಲೆಯಾಗಿದ್ದು, ಮೊಬೈಲ್ ಸಂಪರ್ಕದಿಂದ ಹಿಡಿದು ಸರ್ಕಾರಿ ಯೋಜನೆಗಳ ತನಕ ಎಲ್ಲದಕ್ಕೂ ಅಗತ್ಯ. ಹೀಗಿರುವಾಗ ಆಧಾರ್ ಕಾರ್ಡ್ ನಲ್ಲಿ ಎಷ್ಟು ಬಾರಿ ವಿಳಾಸ ನವೀಕರಿಸಬಹುದು? ಈ ಪ್ರಕ್ರಿಯೆ ಹೇಗೆ? ಇಲ್ಲಿದೆ ಮಾಹಿತಿ. 
 


Business Desk: ಆಧಾರ್ 12 ಅಂಕೆಗಳ ವಿಶಿಷ್ಟ ಗುರುತಿನ ಚೀಟಿಯಾಗಿದ್ದು, ಕೇಂದ್ರ ಸರ್ಕಾರ ಇದನ್ನು ದೇಶದ ನಾಗರಿಕರಿಗೆ ನೀಡುತ್ತದೆ. ಆಧಾರ್ ಅನ್ನು ದೇಶದಲ್ಲಿ ಪ್ರಮುಖ ದೃಢೀಕರಣ ದಾಖಲೆಯಾಗಿ ಬಳಸಲಾಗುತ್ತದೆ. ಬ್ಯಾಂಕ್ ಖಾತೆ ತೆರೆಯಲು, ಪಾಸ್ ಪೋರ್ಟ್ ಅಥವಾ ಡ್ರೈವಿಂಗ್ ಲೈಸೆನ್ಸ್, ಮೊಬೈಲ್ ಸಂಪರ್ಕಕ್ಕೆ, ಸರ್ಕಾರದ ಸಬ್ಸಿಡಿಗಳನ್ನು ಪಡೆಯಲು ಹಾಗೂ ಸಮಾಜ ಕಲ್ಯಾಣ ಯೋಜನೆಗಳ ಫಲಾನುಭವಿಯಾಗಲು ಆಧಾರ್ ಕಾರ್ಡ್ ಅತ್ಯಗತ್ಯ. ಒಟ್ಟಾರೆ ಇಂದು ಯಾವುದೇ ಒಂದು ಕೆಲಸಕ್ಕೆ ಹೋದ್ರೂ ಆಧಾರ್ ಕಾರ್ಡ್ ಅಗತ್ಯ. ಇನ್ನು ನೀವು ಆಧಾರ್ ಕಾರ್ಡ್ ನಲ್ಲಿ ವಿಳಾಸ ಬದಲಾವಣೆ ಮಾಡಬಹುದಾ? ಹಾಗಾದ್ರೆ ಒಬ್ಬ ವ್ಯಕ್ತಿ ತನ್ನ ಆಧಾರ್ ಕಾರ್ಡ್ ನಲ್ಲಿ ಎಷ್ಟು ಬಾರಿ ವಿಳಾಸ ಬದಲಾವಣೆ ಮಾಡಬಹುದು? ಈ ಪ್ರಕ್ರಿಯೆ ನಡೆಸೋದು ಹೇಗೆ? ಇಲ್ಲಿದೆ ಮಾಹಿತಿ.

ಆಧಾರ್ ಕಾರ್ಡ್ ನಲ್ಲಿ ಎಷ್ಟು ಬಾರಿ ವಿಳಾಸ ಬದಲಾಯಿಸಬಹುದು?
ಆಧಾರ್ ಕಾರ್ಡ್ ನಲ್ಲಿ ನೀವು ಎಷ್ಟು ಬಾರಿ ಬೇಕಾದರೂ ವಿಳಾಸ ಬದಲಾಯಿಸಬಹುದು. ಈ ತನಕ ವಿಳಾಸ ಬದಲಾವಣೆಗೆ ಸಂಬಂಧಿಸಿ ಯಾವುದೇ ಮಿತಿ ಹೇರಿಲ್ಲ. ಆದರೆ, ಆಧಾರ್ ಕಾರ್ಡ್ ನಲ್ಲಿ ವಿಳಾಸ ಬದಲಾವಣೆಗೆ ಅಗತ್ಯ ದಾಖಲೆಗಳನ್ನು ಸಲ್ಲಿಕೆ ಮಾಡಬೇಕು. ಹಾಗೆಯೇ ಆಧಾರ್ ಕಾರ್ಡ್ ನಲ್ಲಿ ವಿಳಾಸ ಬದಲಾವಣೆಗೆ ಸಮರ್ಪಕ ಕಾರಣ ನೀಡುವುದು ಅಗತ್ಯ ಎಂದು ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ತಿಳಿಸಿದೆ. 

Tap to resize

Latest Videos

ದೇಶದ ಸರಕು ರಫ್ತಿನಲ್ಲಿ ದಾಖಲೆಯ ಏರಿಕೆ: ಕಳೆದ ವರ್ಷಕ್ಕಿಂತ 14% ಭರ್ಜರಿ ಏರಿಕೆ

ಆಧಾರ್ ನಲ್ಲಿ ಯಾವೆಲ್ಲ ಮಾಹಿತಿ ಅಪ್ಡೇಟ್ ಮಾಡ್ಬಹುದು?
ಹೆಸರು, ವಿಳಾಸ, ಜನ್ಮದಿನಾಂಕ, ವಯಸ್ಸು, ಲಿಂಗ, ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸ, ಸಂಬಂಧದ ಸ್ಟೇಟಸ್ ಅನ್ನು ಅಪ್ಡೇಟ್ ಮಾಡಬಹುದು. ಹಾಗೆಯೇ ಕಣ್ರೆಪ್ಪೆ, ಬೆರಳಚ್ಚು ಹಾಗೂ ಮುಖದ ಫೋಟೋ ಕೂಡ ಅಪ್ಲೋಡ್ ಮಾಡಬಹುದು. 

ಆಧಾರ್ ನಲ್ಲಿ ಜನ್ಮದಿನಾಂಕ ಅಪ್ಡೇಟ್ ಮಾಡ್ಬಹುದಾ?
ಮಾಡಬಹುದು. ಆದರೆ, ಒಂದು ಬಾರಿ ಮಾತ್ರ ಜನ್ಮದಿನಾಂಕ ಅಪ್ಡೇಟ್ ಮಾಡಬಹುದು. ವಿಶೇಷ ಪ್ರಕರಣಗಳಲ್ಲಿ ಮಾತ್ರ ಒಂದಕ್ಕಿಂತ ಹೆಚ್ಚು ಬಾರಿ ಆಧಾರ್ ನಲ್ಲಿ ಜನ್ಮದಿನಾಂಕ ಅಪ್ಡೇಟ್ ಮಾಡಲು ಅವಕಾಶ ನೀಡಲಾಗುತ್ತದೆ. ಇದಕ್ಕಾಗಿ ನೀವು ಆಧಾರ್ ಕೇಂದ್ರದಲ್ಲಿ ಅಪ್ಡೇಟ್ ಮನವಿ ಸಲ್ಲಿಸಬೇಕು. ಆ ಬಳಿಕ ವಿನಾಯ್ತಿ ಅಡಿಯಲ್ಲಿ ಅನುಮೋದನೆ ಪಡೆಯಲು ಯುಐಡಿಎಐ ಪ್ರಾದೇಶಿಕ ಕಚೇರಿಯನ್ನು ಸಂಪರ್ಕಿಸಬೇಕು. ಆ ಬಳಿಕ ಸಂಬಂಧಪಟ್ಟ ಅಧಿಕಾರಿಗಳ ಪರಿಶೀಲನೆ ಬಳಿಕ ಮನವಿ ಅನುಮೋದನೆ ಅಥವಾ ನಿರಾಕರಣೆ ನಡೆಯುತ್ತದೆ. ನೀವು ನಿಮ್ಮ ಆಧಾರ್ ನಲ್ಲಿ ಅರ್ಹ ಜನ್ಮ ದಿನಾಂಕದ (ಡಿಒಬಿ) ದಾಖಲೆ ಮೂಲಕ ಆಧಾರ್ ನಲ್ಲಿ ಜನ್ಮ ದಿನಾಂಕವನ್ನು ನವೀಕರಿಸಬಹುದು. 

ಆಧಾರ್ ನಲ್ಲಿ ವಿಳಾಸ ಅಪ್ಡೇಟ್ ಮಾಡೋದು ಹೇಗೆ?
ಆಧಾರ್ ನಲ್ಲಿ ವಿಳಾಸ ಅಪ್ಡೇಟ್ ಮಾಡಲು ನೀವು ಯುಐಡಿಎಐ ಅಧಿಕೃತ ವೆಬ್ ಸೈಟ್ ಅಥವಾ ಆಧಾರ್ ಸೇವಾ ಕೇಂದ್ರ ಅಥವಾ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಬೇಕು. ಇನ್ನು ಆಧಾರ್ ನಲ್ಲಿ ವಿಳಾಸ ಅಪ್ಡೇಟ್ ಮಾಡಲು ವಿಳಾಸ ದೃಢೀಕರಣ ದಾಖಲೆ ನೀಡಬೇಕು. ಕೆಲವು ದಿನಗಳ ಬಳಿಕ ಆಧಾರ್ ನಲ್ಲಿ ಅಪ್ಡೇಟ್ ಮಾಡಿದ ದಾಖಲೆಗಳು ಕಾಣಿಸುತ್ತವೆ.

ಮೇ 1ರಿಂದ ಹೊಸ ಜಿಎಸ್ ಟಿ ನಿಯಮ ಜಾರಿ; ಈ ಉದ್ಯಮಗಳಿಗೆ ಮಾತ್ರ ಅನ್ವಯಮಾಹಿತಿ ಅಪ್ಡೇಟ್ ಮಾಡೋದು ಹೇಗೆ?

ಸಮೀಪದ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಅಪ್ಡೇಟ್ ಮಾಡಬಹುದು ಇಲ್ಲವೇ ಆನ್ ಲೈನ್ ಮೂಲಕ ಕೂಡ ಮಾಹಿತಿ ನವೀಕರಣ ಮಾಡಬಹುದು.ಹೆಸರು ಮತ್ತು ವಿಳಾಸದಂತಹ ಮಾಹಿತಿಗಳನ್ನು ಆಗಾಗ ಬದಲಾವಣೆ ಮಾಡಬೇಕಾಗುತ್ತದೆ. ಹೊಸ ಸ್ಥಳಗಳಿಗೆ ವಾಸ್ತವ್ಯ ಬದಲಾವಣೆ ಮಾಡಿದಾಗ, ಮದುವೆ ಬಳಿಕ, ಸಂಬಂಧಿಕರ ಮರಣದ ಬಳಿಕ ಮುಂತಾದ ಸಂದರ್ಭಗಳಲ್ಲಿ ವಿಳಾಸ ಬದಲಾಗುತ್ತದೆ. ಆಗ ಈ ಮಾಹಿತಿಯನ್ನು ಆಧಾರ್ ಕಾರ್ಡ್ ನಲ್ಲಿ ಅಪ್ಡೇಟ್ ಮಾಡೋದು ಅಗತ್ಯ.


 

click me!