
ಬೆಂಗಳೂರು (ಫೆ.6): ನಿಮ್ಮ ಜೇಬಿನಲ್ಲಿ ಕೇವಲ ₹1,000 ಇದ್ದರೆ ಮತ್ತು ನೀವು ಒಂದು ಷರತ್ತಿಗೆ ಒಪ್ಪಿದರೆ, ಒಂದು ಐಷಾರಾಮಿ ಹೋಟೆಲ್ ನಿಮ್ಮದಾಗಬಹುದು. ಈ ಹೋಟೆಲ್ ವಿಶ್ವದ ಅತ್ಯಂತ ಪ್ರಬಲ ರಾಷ್ಟ್ರ ಅಮೆರಿಕದಲ್ಲಿದೆ. ಇದರಲ್ಲಿ ಒಂದು ಅಥವಾ ಎರಡಲ್ಲ, ಬದಲಾಗಿ 96 ರೂಮ್‌ಗಳಿವೆ. ಈ ಹೋಟೆಲ್ ತುಂಬಾ ಕಡಿಮೆ ಬೆಲೆಗೆ ಸಿಗುತ್ತಿದೆ. ಈ ಬೆಲೆ ಕೇಳಿದ್ರೆ ನಿಮಗೂ ಅಚ್ಚರಿಯಾಗಬಹುದು. ಹೌದು 96 ರೂಮ್‌ಗಳಿರುವ ಈ ಹೋಟೆಲ್‌ಅನ್ನು ಬರೀ 875 ರೂಪಾಯಿ ನೀವು ಖರೀದಿ ಮಾಡಬಹುದು. ಆದರೆ, ಷರತ್ತು ಕೇಳಿದರೆ ಬಹುಶಃ ನೀವು ನಿಮ್ಮ ಮನಸ್ಸು ಬದಲಾಯಿಸಬಹುದು. ಈ ಹೋಟೆಲ್ ಖರೀದಿಸುವ ಷರತ್ತು ಏನೆಂದು ತಿಳಿದುಕೊಳ್ಳೋಣ.
₹875ಕ್ಕೆ ಹೋಟೆಲ್, ಆದರೆ ಒಂದು ಷರತ್ತು: 96 ರೂಮ್‌ಗಳನ್ನು ಹೊಂದಿರುವ ಹೋಟೆಲ್ ಕೇವಲ ₹875ಕ್ಕೆ ಮಾರಾಟಕ್ಕೆ ಸಿದ್ಧವಾಗಿದೆ. ಆದರೆ ಇದನ್ನು ಖರೀದಿಸುವವರು ಒಂದು ಷರತ್ತನ್ನು ಒಪ್ಪಿಕೊಳ್ಳಬೇಕು. ಷರತ್ತು ಏನೆಂದರೆ, ಖರೀದಿದಾರರು ಇದರ ನವೀಕರಣದ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಮಾಧ್ಯಮ ವರದಿಗಳ ಪ್ರಕಾರ, ಇದು 99 ವರ್ಷಗಳ ಕಾಲ ಆದಾಯ-ನಿರ್ಬಂಧಿತ ವಸತಿ ಸೌಲಭ್ಯವಾಗಿರುತ್ತದೆ. ಅಂದರೆ ಯಾವುದೇ ದೊಡ್ಡ ವಾಣಿಜ್ಯ ಬಾಡಿಗೆ ಇರುವುದಿಲ್ಲ ಮತ್ತು ನಿರಾಶ್ರಿತರಿಗೆ ದೀರ್ಘಕಾಲ ವಾಸಿಸಲು ಇಲ್ಲಿ ಅವಕಾಶ ಇರುತ್ತದೆ.
ಯಾರು ಮಾರಾಟ ಮಾಡುತ್ತಿದ್ದಾರೆ?: ಈ ಆಸ್ತಿ ಸ್ಟೇ ಇನ್ ಆಗಿದೆ. ಇದಕ್ಕೆ ನವೀಕರಣದ ಅಗತ್ಯವಿದೆ. ಡೆನ್ವರ್ ಡಿಪಾರ್ಟ್‌ಮೆಂಟ್ ಆಫ್ ಹೌಸಿಂಗ್ ಸ್ಟೆಬಿಲಿಟಿಯ ವಕ್ತಾರ ಡೆರೆಕ್ ವುಡ್‌ಬರಿ FOX31ಗೆ ಕಳುಹಿಸಿದ ಇಮೇಲ್‌ನಲ್ಲಿ, 'ಈ ಮಾರಾಟವು ಸೈಟ್‌ನಲ್ಲಿ ಸಹಾಯಕ ವಸತಿ ಒದಗಿಸಲು ಸುಲಭ ಮಾರ್ಗವನ್ನು ಸೃಷ್ಟಿಸುತ್ತದೆ ಎಂದು ನಾವು ಭಾವಿಸುತ್ತೇವೆ. ನೀವು ಮೋಟೆಲ್‌ನಲ್ಲಿ ಆಸಕ್ತಿ ಹೊಂದಿದ್ದರೆ, ನೀವು ಈ ಆಸ್ತಿಯ ಬೆಲೆಯನ್ನು ನೋಡಬೇಕು. ಇದು ಖಂಡಿತವಾಗಿಯೂ ನಿಮ್ಮನ್ನು ಆಕರ್ಷಿಸುತ್ತದೆ, ಆದರೆ ನೀವು ದುರಸ್ತಿ ಮತ್ತು ನವೀಕರಣದ ವೆಚ್ಚವನ್ನು ಲೆಕ್ಕ ಹಾಕಬೇಕಾಗುತ್ತದೆ' ಎಂದು ಹೇಳಿದ್ದಾರೆ.
ಸೀರಿಯಲ್‌ನಲ್ಲಿ ಅತ್ತೆ-ಅಳಿಯ, ನಿಜ ಜೀವನದಲ್ಲಿ ಗಂಡ-ಹೆಂಡ್ತಿ, ಮಕ್ಕಳಿಲ್ಲ ಅನ್ನೋದೇ ಕೊರಗು!
ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, 2023 ರಲ್ಲಿ ಮೈಲ್ ಹೈ ಸಿಟಿ ಈ ಕಟ್ಟಡವನ್ನು ಖರೀದಿಸಿತು. ಇದರಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡಲಾಗಿದೆ. ಆದರೆ, ಇದಕ್ಕೆ ದೊಡ್ಡ ಪ್ರಮಾಣದ ನವೀಕರಣದ ಅಗತ್ಯವಿದೆ. ಹೋಟೆಲ್‌ನಲ್ಲಿ ವಾಕ್-ವೇ, ರೇಲಿಂಗ್ ಮತ್ತು ವಿದ್ಯುತ್ ವ್ಯವಸ್ಥೆಯನ್ನು ಸರಿಪಡಿಸಬೇಕಾಗಿದೆ. ಈ ಹೋಟೆಲ್‌ನ ಬೆಲೆ ಸಾಕಷ್ಟು ವೈರಲ್ ಆಗುತ್ತಿದೆ.
ಮಾಲಾಡಿ ಮನೆ ರಹಸ್ಯ: ಮೊಬೈಲ್‌ನಲ್ಲಿ ಸೆರೆಯಾದ ಪ್ರೇತಾತ್ಮದ ಫೋಟೋ ಕಂಡು ಬೆಚ್ಚಿಬಿದ್ದ ಕುಟುಂಬ!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.