ಕುಂಭಮೇಳ: ಎಲ್ಲಿ ನೋಡಿದ್ರಲ್ಲಿ ಅನಂತ್ ಅಂಬಾನಿ ಬ್ಯಾನರ್ ಹಾಕಿದ್ದೇಕೆ? ಅವರು ಕೊಟ್ಟಿದ್ದೇನು?

Published : Feb 06, 2025, 11:40 AM ISTUpdated : Feb 06, 2025, 11:46 AM IST
ಕುಂಭಮೇಳ: ಎಲ್ಲಿ ನೋಡಿದ್ರಲ್ಲಿ ಅನಂತ್ ಅಂಬಾನಿ ಬ್ಯಾನರ್ ಹಾಕಿದ್ದೇಕೆ? ಅವರು ಕೊಟ್ಟಿದ್ದೇನು?

ಸಾರಾಂಶ

ರಿಲಯನ್ಸ್ ಇಂಡಸ್ಟ್ರೀಸ್ 'ತೀರ್ಥ ಯಾತ್ರಿ ಸೇವೆ' ಯೋಜನೆಯ ಮೂಲಕ ಮಹಾಕುಂಭ ಮೇಳದ ಯಾತ್ರಿಕರಿಗೆ ಆಹಾರ, ವೈದ್ಯಕೀಯ ಸೌಲಭ್ಯ, ಸಾರಿಗೆ, ಸುರಕ್ಷತೆ, ಜಿಯೋ ನೆಟ್ವರ್ಕ್ ಸೇವೆ, ಕ್ಯಾಂಪಾ ಆಶ್ರಮ, ಪೊಲೀಸರಿಗೆ ನೀರು, ಬ್ಯಾರಿಕೇಡ್ ವ್ಯವಸ್ಥೆ ಒದಗಿಸುತ್ತಿದೆ. ಯಾತ್ರಿಕರ ಸೇವೆಯೇ ಪುಣ್ಯ ಎಂದು ಅನಂತ್ ಅಂಬಾನಿ ಹೇಳಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (Reliance Industries Limited)  ತೀರ್ಥ ಯಾತ್ರಿ ಸೇವಾ (Tirtha Yatri Seva) ಎಂಬ ವಿಶೇಷ ಯೋಜನೆಯನ್ನು ಶುರು ಮಾಡಿದೆ.  ಮಹಾಕುಂಭ ಮೇಳಕ್ಕೆ ಬರುವ ಭಕ್ತರ ಪ್ರಯಾಣವನ್ನು ಸುಗಮಗೊಳಿಸಲು ಹಾಗೂ ಅವರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಇದನ್ನು ಶುರು ಮಾಡಲಾಗಿದೆ.  ವಿ ಕೇರ್ ಎಂಬ ಮನೋಭಾವದೊಂದಿಗೆ ರಿಲಯನ್ಸ್, ಪ್ರಯಾಣದುದ್ದಕ್ಕೂ ಯಾತ್ರಾರ್ಥಿಗಳಿಗೆ ಪೌಷ್ಟಿಕ ಆಹಾರ, ಅಗತ್ಯ ಆರೋಗ್ಯ ಸೌಲಭ್ಯಗಳು ಸೇರಿದಂತೆ ಹಲವು ಸೇವೆಗಳನ್ನು ಒದಗಿಸುತ್ತಿದೆ.

ರಿಲಾಯನ್ಸ್ ನೀಡ್ತಿರುವ ಸೇವೆಗಳು ಯಾವುವು? : ರಿಲಯನ್ಸ್ ಫೌಂಡೇಶನ್, ಕುಂಭಮೇಳದಲ್ಲಿ ಯಾತ್ರಾರ್ಥಿಗಳಿಗೆ ಸಹಾಯ ಮಾಡಲು ಎಂಟು ಸೇವೆಗಳನ್ನು ನೀಡ್ತಿದೆ. 
• ಅನ್ನ ಸೇವೆ : ಅನ್ನ ಸೇವೆ ಅಡಿಯಲ್ಲಿ ಪ್ರತಿದಿನ ಸಾವಿರಾರು ಭಕ್ತರಿಗೆ ಬಿಸಿ ಮತ್ತು ಪೌಷ್ಟಿಕ ಆಹಾರವನ್ನು ನೀಡಲಾಗ್ತಿದೆ. ಅಲ್ಲದೆ  ಶುದ್ಧ ನೀರನ್ನು ಭಕ್ತರಿಗೆ ಒದಗಿಸಲಾಗುತ್ತಿದೆ. 

ಮಹಾಕುಂಭ ಮೇಳದಲ್ಲಿ ಪುಣ್ಯಸ್ನಾನ ಮಾಡಿದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್

• ಆರೋಗ್ಯ ಸೇವೆ : ಆರೋಗ್ಯ ಸೇವೆ ಅಡಿಯಲ್ಲಿ ಭಕ್ತಾದಿಗಳಿಗೆ  24x7 ವೈದ್ಯಕೀಯ ಸೌಲಭ್ಯ ಲಭ್ಯವಿದೆ. ಹೊರರೋಗಿ ವಿಭಾಗ, ದಂತ ಆರೈಕೆಯನ್ನು ಒದಗಿಸಲಾಗಿದೆ. ಮಹಿಳೆಯರಿಗೆ ಉಚಿತ ಸ್ಯಾನಿಟರಿ ನ್ಯಾಪ್ಕಿನ್‌ಗಳು ಸೇರಿದಂತೆ ಭಕ್ತಾಧಿಗಳ ಸಂಪೂರ್ಣ ಆರೋಗ್ಯದ ಹೊಣೆಯನ್ನು ರಿಲಾಯನ್ಸ್ ವಹಿಸಿಕೊಂಡಿದೆ.  
• ಸುಗಮ ಪ್ರಯಾಣಕ್ಕೆ ಸೇವೆ : ಕುಂಭ ಮೇಳದಲ್ಲಿ ಭಕ್ತರು, ಸಾಕಷ್ಟು ದೂರ ಕಾಲ್ನಡಿಗೆಯಲ್ಲಿ ಪ್ರಯಾಣ ಬೆಳೆಸಬೇಕು. ಇದು ಎಲ್ಲ ಭಕ್ತರಿಗೆ ಸಾಧ್ಯವಾಗದ ಕೆಲಸ. ಹಾಗಾಗಿ ಅವರಿಗಾಗಿ ರಿಲಾಯನ್ಸ್  ವಿದ್ಯುತ್ ವಾಹನಗಳು ಮತ್ತು ಗಾಲ್ಫ್ ಕಾರ್ಟ್‌ಗಳನ್ನು ಒದಗಿಸಿದೆ. ಪ್ರಯಾಗ್‌ರಾಜ್‌ನಿಂದ ಸಂಗಮ್‌ಗೆ ವಿಶೇಷ ಸಾರಿಗೆ ಸೇವೆ ಒದಗಿಸಲಾಗಿದೆ. 
• ಪ್ರಯಾಣಿಕರ ಸುರಕ್ಷತೆಗೆ ಈ ಸೇವೆ : ತ್ರಿವೇಣಿ ಸಂಗಮದಲ್ಲಿ ಮಿಂದೇಳುವ ಭಕ್ತರ ಸುರಕ್ಷತೆಗಾಗಿ ಲೈಫ್ ಜಾಕೆಟ್‌ ಮತ್ತು ದೋಣಿ ಸುರಕ್ಷತೆಯನ್ನು ಸುಧಾರಿಸಲಾಗಿದೆ. 
• ಕ್ಯಾಂಪಾ ಆಶ್ರಮ : ಇನ್ನು ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್, ಕ್ಯಾಂಪಾ ಆಶ್ರಮ ತೆರೆದಿದೆ. ಅಲ್ಲಿ ಭಕ್ತಾದಿಗಳು ವಿಶ್ರಾಂತಿ ಪಡೆಯಬಹುದು. ಸ್ವಲ್ಪ ಹೊತ್ತು ಶಾಂತಿಯಿಂದ ಕುಳಿತುಕೊಂಡು ದಣಿವು ಕಡಿಮೆ ಮಾಡಿಕೊಳ್ಳಬಹುದು. 
• ಜಿಯೋ 4G ಮತ್ತು 5G BTS : ಪ್ರಯಾಗರಾಜ್ ನಲ್ಲಿ ನೆಟ್ವರ್ಕ್ ಸಮಸ್ಯೆ ಆಗದಂತೆ ಜಿಯೋ ಹೊಸ 4G ಮತ್ತು 5G BTS ಅನ್ನು ಸ್ಥಾಪಿಸಿದೆ. ಆಯಕಟ್ಟಿನ ಸ್ಥಳಗಳಲ್ಲಿ ಸಾಗಿಸಬಹುದಾದ ಟವರ್‌ ಮತ್ತು ಸಣ್ಣ ಸೆಲ್ ಜೊತೆ ನೆಟ್‌ವರ್ಕನ್ನು ನವೀಕರಿಸಿದೆ. ಇದ್ರಿಂದ ಭಕ್ತರಿಗೆ ಸಂವಹನ ನಡೆಸೋದು ಸುಲಭವಾಗಿದೆ.  ಇದಲ್ಲದೆ  ಹೊಸ ಆಪ್ಟಿಕಲ್ ಫೈಬರ್‌ ಅಳವಡಿಸಲಾಗಿದೆ.  

ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿದ ಭೂತಾನ್ ರಾಜ: ಯುಪಿ ಸಿಎಂ ಯೋಗಿ ಸಾಥ್

• ಪೊಲೀಸರಿಗೆ ಸೇವೆ :  ಮಹಾಕುಂಭ ಮೇಳದಲ್ಲಿ ಪೊಲೀಸರ ಪಾತ್ರ ಅಪಾರ. ಅವರ ಸೇವೆಯನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ನೀರನ್ನು ಒದಗಿಸಲಾಗ್ತಿದೆ.  
• ಬ್ಯಾರಿಕೇಟ್ ವ್ಯವಸ್ಥೆ : ಮಹಾ ಕುಂಭ ಮೇಳಕ್ಕೆ ಬರ್ತಿರುವ ಭಕ್ತರ ಸುರಕ್ಷತೆಗಾಗಿ ರಿಲಾಯನ್ಸ್ ಬ್ಯಾರಿಕೇಡ್‌ ಅಳವಡಿಸಿದೆ. ಅಲ್ಲದೆ ವೀಕ್ಷಣಾ ಗೋಪುರಗಳನ್ನು ಸ್ಥಾಪಿಸಿದೆ.

ಅನಂತ್ ಅಂಬಾನಿ ಹೇಳಿದ್ದೇನು? :  ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ನಿರ್ದೇಶಕರಾಗಿರುವ ಅನಂತ್ ಅಂಬಾನಿ, ಯಾತ್ರಿಗಳ ಸೇವೆ ಮಾಡಿದ್ರೆ ನಮಗೂ ಪುಣ್ಯ ಸಿಗುತ್ತದೆ ಎನ್ನುವ ನಂಬಿಕೆ ಇದೆ. ಅನೇಕ ವರ್ಷಗಳ ನಂತ್ರ ಬರುವ ಈ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದ ಭಕ್ತರಿಗೆ ಸೇವೆ ಸಲ್ಲಿಸುವುದು ನಮ್ಮ ಗುರಿ. ಭಕ್ತರ ಆರೋಗ್ಯ, ಯೋಗಕ್ಷೇಮ ಮತ್ತು ಸುರಕ್ಷತೆ ಖಚಿತಪಡಿಸಿಕೊಳ್ಳಲು ನಮಗೆ ಒಂದು ಅವಕಾಶ ಸಿಕ್ಕಿದ್ದು, ಭಕ್ತರ ಪ್ರಯಾಣವನ್ನು ಸುಗಮ ಮಾಡುವುದು ನಮ್ಮ ಉದ್ದೇಶ ಎಂದಿದ್ದಾರೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Gold Silver Price Today: ಚಿನ್ನದ ದರದಲ್ಲಿ ಏರಿಕೆನಾ? ಇಳಿಕೆನಾ?
ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ