8ನೇ ವೇತನ ಆಯೋಗ: 50 ಲಕ್ಷ ಸರ್ಕಾರಿ ನೌಕರರ ಮೂಲ ವೇತನದಲ್ಲಿ ಭಾರಿ ಏರಿಕೆ ಸಾಧ್ಯತೆ!

Published : Aug 24, 2026, 12:07 PM IST
8th Pay Commission

ಸಾರಾಂಶ

8ನೇ ಕೇಂದ್ರ ವೇತನ ಆಯೋಗದ ಜಾರಿಯ ನಿರೀಕ್ಷೆಯಲ್ಲಿರುವ ಕೋಟ್ಯಂತರ ನೌಕರರು ಮತ್ತು ಪಿಂಚಣಿದಾರರ ವೇತನ ಏರಿಕೆಯು 'ಫಿಟ್‌ಮೆಂಟ್ ಫ್ಯಾಕ್ಟರ್' ಮೇಲೆ ಅವಲಂಬಿತವಾಗಿದೆ.

ಬೆಂಗಳೂರು (ಆ.24): 8ನೇ ಕೇಂದ್ರ ವೇತನ ಆಯೋಗದ (8th Pay Commission) ಶಿಫಾರಸುಗಳ ಜಾರಿಗಾಗಿ ದೇಶದ ಕೋಟ್ಯಂತರ ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರು ಕಾತರದಿಂದ ಕಾಯುತ್ತಿದ್ದಾರೆ. ಆಯೋಗದ ಶಿಫಾರಸುಗಳು ಅನುಷ್ಠಾನಗೊಂಡ ನಂತರ ನೌಕರರ ವೇತನದಲ್ಲಾಗುವ ಒಟ್ಟು ಏರಿಕೆಯು 'ಫಿಟ್‌ಮೆಂಟ್ ಫ್ಯಾಕ್ಟರ್' (Fitment Factor) ಅನ್ನು ಸಂಪೂರ್ಣವಾಗಿ ಆಧರಿಸಿರಲಿದೆ. ವೇತನ ಆಯೋಗವು ಪ್ರಸ್ತಾಪಿಸುವ ಈ ಫಿಟ್‌ಮೆಂಟ್ ಫ್ಯಾಕ್ಟರ್‌ನಿಂದಾಗಿ ಸುಮಾರು 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 65 ಲಕ್ಷ ಪಿಂಚಣಿದಾರರು ಸೇರಿದಂತೆ ಒಟ್ಟು 1 ಕೋಟಿಗೂ ಅಧಿಕ ಮಂದಿಗೆ ನೇರ ಲಾಭ ಸಿಗುವ ನಿರೀಕ್ಷೆಯಿದೆ.

ಏನಿದು ಫಿಟ್‌ಮೆಂಟ್ ಫ್ಯಾಕ್ಟರ್?

ಫಿಟ್‌ಮೆಂಟ್ ಫ್ಯಾಕ್ಟರ್ ಎಂಬುದು ನೌಕರನ ಹಳೆಯ ಮೂಲ ವೇತನವನ್ನು (Basic Pay) ಹೊಸ ಮೂಲ ವೇತನಕ್ಕೆ ಪರಿವರ್ತಿಸಲು ವೇತನ ಆಯೋಗವು ಬಳಸುವ ಒಂದು ಲೆಕ್ಕಾಚಾರ.

ಲೆಕ್ಕಾಚಾರದ ಸೂತ್ರ

ಹಳೆಯ ಮೂಲ ವೇತನ × ಫಿಟ್‌ಮೆಂಟ್ ಫ್ಯಾಕ್ಟರ್ = ಹೊಸ ಮೂಲ ವೇತನ

ಉದಾಹರಣೆಗೆ, 7 ನೇ ವೇತನ ಆಯೋಗದಲ್ಲಿ 2.57 ಫಿಟ್‌ಮೆಂಟ್ ಫ್ಯಾಕ್ಟರ್ ಅನ್ವಯಿಸಿ ಕನಿಷ್ಠ ಮೂಲ ವೇತನವನ್ನು 7,000 ರೂ. ನಿಂದ 18,000 ರೂ. ಗೆ ಹೆಚ್ಚಿಸಲಾಗಿತ್ತು (7,000 × 2.57 = 18,000 ರೂ.).

ಆಯೋಗದ ಪ್ರಸ್ತುತ ಸ್ಥಿತಿ ಮತ್ತು ಚರ್ಚೆ

8 ನೇ ವೇತನ ಆಯೋಗದ ಜಾರಿಯ ಕುರಿತು ಪ್ರಸ್ತುತ ದೇಶಾದ್ಯಂತ ಚರ್ಚೆಗಳು ನಡೆಯುತ್ತಿವೆ. ಆಯೋಗವು ದೇಶದ ವಿವಿಧ ನೌಕರರ ಸಂಘಟನೆಗಳು, ಕೇಂದ್ರ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಮತ್ತು ಇತರ ಭಾಗಿದಾರರೊಂದಿಗೆ ಚರ್ಚಿಸಿ ವೇತನ ರಚನೆ, ಫಿಟ್‌ಮೆಂಟ್ ಫ್ಯಾಕ್ಟರ್, ಪೇ ಮ್ಯಾಟ್ರಿಕ್ಸ್, ಭತ್ಯೆಗಳು ಮತ್ತು ಇತರ ಸೌಲಭ್ಯಗಳಲ್ಲಿ ಅಗತ್ಯ ಬದಲಾವಣೆಗಳನ್ನು ತರಲು ಪರಿಶೀಲನೆ ನಡೆಸುತ್ತಿದೆ.

ವಿವಿಧ ಫಿಟ್‌ಮೆಂಟ್ ಫ್ಯಾಕ್ಟರ್‌ಗಳ ಆಧಾರದ ಮೇಲೆ ಅಂದಾಜು ವೇತನ (ಲೆವೆಲ್ 1 ರಿಂದ 18):

ವಿವಿಧ ವೇತನ ಶ್ರೇಣಿಯ (Levels) ಆಧಾರದಲ್ಲಿ ನೌಕರರ ಮೂಲ ವೇತನವು ಫಿಟ್‌ಮೆಂಟ್ ಫ್ಯಾಕ್ಟರ್‌ಗೆ ಅನುಗುಣವಾಗಿ ಹೇಗೆ ಹೆಚ್ಚಾಗಬಹುದು ಎಂಬ ಅಂದಾಜು ಪಟ್ಟಿ ಇಲ್ಲಿದೆ:

ಲೆವೆಲ್ 1 (7 ನೇ ವೇತನ ಆಯೋಗದ ಮೂಲ ವೇತನ: ₹18,000)

  • 1.83 ಫಿಟ್‌ಮೆಂಟ್ ಫ್ಯಾಕ್ಟರ್‌ಗೆ: ₹32,940
  • 2.0 ಫಿಟ್‌ಮೆಂಟ್ ಫ್ಯಾಕ್ಟರ್‌ಗೆ: ₹36,000
  • 2.57 ಫಿಟ್‌ಮೆಂಟ್ ಫ್ಯಾಕ್ಟರ್‌ಗೆ: ₹46,260
  • 3.83 ಫಿಟ್‌ಮೆಂಟ್ ಫ್ಯಾಕ್ಟರ್‌ಗೆ: ₹68,940

ಲೆವೆಲ್ 2 (ಮೂಲ ವೇತನ: ₹19,900)

1.83 ಗೆ: ₹36,417 | 2.0 ಗೆ: ₹39,800 | 2.57 ಗೆ: ₹51,143 | 3.83 ಗೆ: ₹76,217

ಲೆವೆಲ್ 3 (ಮೂಲ ವೇತನ: ₹21,700)

1.83 ಗೆ: ₹39,711 | 2.0 ಗೆ: ₹43,400 | 2.57 ಗೆ: ₹55,769 | 3.83 ಗೆ: ₹83,111

ಲೆವೆಲ್ 4 (ಮೂಲ ವೇತನ: ₹25,500)

1.83 ಗೆ: ₹46,665 | 2.0 ಗೆ: ₹51,000 | 2.57 ಗೆ: ₹65,535 | 3.83 ಗೆ: ₹97,665

ಲೆವೆಲ್ 5 (ಮೂಲ ವೇತನ: ₹29,200)

1.83 ಗೆ: ₹53,436 | 2.0 ಗೆ: ₹58,400 | 2.57 ಗೆ: ₹75,044 | 3.83 ಗೆ: ₹1,11,836

ಲೆವೆಲ್ 6 (ಮೂಲ ವೇತನ: ₹35,400)

1.83 ಗೆ: ₹64,782 | 2.0 ಗೆ: ₹70,800 | 2.57 ಗೆ: ₹90,978 | 3.83 ಗೆ: ₹1,35,582

ಲೆವೆಲ್ 7 (ಮೂಲ ವೇತನ: ₹44,900)

1.83 ಗೆ: ₹82,167 | 2.0 ಗೆ: ₹89,800 | 2.57 ಗೆ: ₹1,15,393 | 3.83 ಗೆ: ₹1,71,967

ಲೆವೆಲ್ 10 (ಮೂಲ ವೇತನ: ₹56,100)

1.83 ಗೆ: ₹1,02,663 | 2.0 ಗೆ: ₹1,12,200 | 2.57 ಗೆ: ₹1,44,177 | 3.83 ಗೆ: ₹2,14,863

ಲೆವೆಲ್ 13 (ಮೂಲ ವೇತನ: ₹1,23,100)

1.83 ಗೆ: ₹2,25,273 | 2.0 ಗೆ: ₹2,46,200 | 2.57 ಗೆ: ₹3,16,367 | 3.83 ಗೆ: ₹4,71,473

ಲೆವೆಲ್ 18 (ಮೂಲ ವೇತನ: ₹2,50,000)

1.83 ಗೆ: ₹4,57,500 | 2.0 ಗೆ: ₹5,00,000 | 2.57 ಗೆ: ₹6,42,500 | 3.83 ಗೆ: ₹9,57,500

ಎಷ್ಟಿರಬಹುದು ಫಿಟ್‌ಮೆಂಟ್ ಫ್ಯಾಕ್ಟರ್?

ವಿವಿಧ ನೌಕರರ ಸಂಘಟನೆಗಳು ಹಾಗೂ ನಿವೃತ್ತ ನೌಕರರ ಒಕ್ಕೂಟಗಳು ಗರಿಷ್ಠ ಫಿಟ್‌ಮೆಂಟ್ ಫ್ಯಾಕ್ಟರ್ ಜಾರಿಗೆ ತರಬೇಕೆಂದು ಒತ್ತಾಯಿಸಿವೆ. 'ಕ್ಲಿಯರ್‌ಟ್ಯಾಕ್ಸ್' (ClearTax) ವರದಿಯ ಪ್ರಕಾರ, ನೌಕರರ ಪ್ರತಿನಿಧಿಗಳು ಗರಿಷ್ಠ ಅಂದರೆ 3.83 ಫಿಟ್‌ಮೆಂಟ್ ಫ್ಯಾಕ್ಟರ್ ಜಾರಿಗೊಳಿಸುವಂತೆ ಪ್ರಸ್ತಾಪಿಸಿದ್ದಾರೆ. ಆದರೆ, ಆರ್ಥಿಕ ತಜ್ಞರ ಕನಿಷ್ಠ ಅಂದಾಜಿನ ಪ್ರಕಾರ ಫಿಟ್‌ಮೆಂಟ್ ಫ್ಯಾಕ್ಟರ್ 1.83 ರಿಂದ 2.0 ಇರಲಿದ್ದು, ಮಾರುಕಟ್ಟೆ ಶ್ರೇಣಿಯ ಸರಾಸರಿ ಅಂದಾಜಿನ ಪ್ರಕಾರ 2.0 ರಿಂದ 2.57 ರಷ್ಟಿರಬಹುದು ಎನ್ನಲಾಗಿದೆ. 8 ನೇ ವೇತನ ಆಯೋಗದಲ್ಲಿ ಫಿಟ್‌ಮೆಂಟ್ ಫ್ಯಾಕ್ಟರ್ ಇನ್ಮನೂ ಅಂತಿಮಗೊಂಡಿಲ್ಲ. ಆಯೋಗದ ಶಿಫಾರಸುಗಳನ್ನು ಸಲ್ಲಿಸಿದ ನಂತರ, ಕೇಂದ್ರ ಸರ್ಕಾರದ ಅಂತಿಮ ಒಪ್ಪಿಗೆಯ ಬಳಿಕವಷ್ಟೇ ನೂತನ ವೇತನ ಶ್ರೇಣಿ ಜಾರಿಗೆ ಬರಲಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಭಾರತದ ಮೊದಲ ಎಫ್‌1 ಡ್ರೈವರ್‌ ಕಾರ್ತಿಕೇಯನ್‌ ಈಗ ಬೆಂಗಳೂರಿನಲ್ಲಿ 100 ಕೋಟಿ ರೂ ಮೌಲ್ಯದ ಕಂಪನಿ ಮಾಲೀಕ!
HDFC ಬ್ಯಾಂಕ್‌ನಲ್ಲಿ ನಾಯಕತ್ವ ಬದಲಾವಣೆ, 35 ವರ್ಷಗಳ ಅನುಭವದ ಜಿಮ್ಮಿ ಟಾಟಾಗೆ ಪ್ರಮುಖ ಹೊಣೆ! ಯಾರಿದು?